ಪ್ರಧಾನ ಮಂತ್ರಿಯವರ ಕಛೇರಿ
ಬಾಲಿಯಲ್ಲಿ ಜಿ-20 ಶೃಂಗಸಭೆಯ ವೇಳೆ ಅಮೆರಿಕದ ಅಧ್ಯಕ್ಷರು ಮತ್ತು ಇಂಡೋನೇಷಿಯಾ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿಯವರ ಸಭೆ
Posted On:
15 NOV 2022 9:59PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಾಲಿಯಲ್ಲಿಂದು ಜಿ-20 ನಾಯಕರ ಶೃಂಗಸಭೆಯ ವೇಳೆ ಅಮೆರಿಕದ ಅಧ್ಯಕ್ಷ ಮಾನ್ಯ ಶ್ರೀ ಜೋಸೆಫ್ ಆರ್. ಬಿಡೆನ್ ಮತ್ತು ಇಂಡೋನೇಷಿಯಾ ಅಧ್ಯಕ್ಷ ಮಾನ್ಯ ಶ್ರೀ ಜೋಕೋ ವಿಡೋಡೋ ಅವರನ್ನು ಭೇಟಿ ಮಾಡಿದರು.
ಅಂತಾರಾಷ್ಟ್ರೀಯ ಆರ್ಥಿಕ ಸಹಕಾರಕ್ಕೆ ಜಿ-20 ಪ್ರಮುಖ ವೇದಿಕೆಯಾಗಿದೆ ಎಂದು ಪ್ರಧಾನಮಂತ್ರಿ ಮೋದಿ ಪ್ರತಿಪಾದಿಸಿ, ಜಾಗತಿಕ ಸವಾಲುಗಳನ್ನು ಎದುರಿಸಲು ಪ್ರಮುಖ ಆರ್ಥಿಕತೆಗಳನ್ನು ಒಗ್ಗೂಡಿಸುವ ಸಾಮರ್ಥ್ಯವನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಜಿ -20ರ ನಿರಂತರ ಮಹತ್ವವನ್ನು ಒತ್ತಿ ಹೇಳಿದರು.
ಜಿ-20 ನಮ್ಮ ಆರ್ಥಿಕತೆಗಳು ಮತ್ತು ಅದರಾಚೆಗೆ ಸುಸ್ಥಿರ ಮತ್ತು ಅಂತರ್ಗತ ಬೆಳವಣಿಗೆಯನ್ನು ಮರುಸ್ಥಾಪಿಸಲು, ಪ್ರಸ್ತುತ ಹವಾಮಾನ, ಇಂಧನ ಮತ್ತು ಆಹಾರ ಬಿಕ್ಕಟ್ಟನ್ನು ನಿಭಾಯಿಸಲು, ಜಾಗತಿಕ ಆರೋಗ್ಯ ವಾಸ್ತುಶಿಲ್ಪವನ್ನು ಬಲಪಡಿಸಲು ಮತ್ತು ತಾಂತ್ರಿಕ ಪರಿವರ್ತನೆಯನ್ನು ಉತ್ತೇಜಿಸಲು ಒಗ್ಗೂಡಿ ಕೆಲಸ ಮಾಡುತ್ತಿದೆ ಎಂದರು.
ಭಾರತವು ತನ್ನ ಅಧ್ಯಕ್ಷತೆಯ ಅವಧಿಯಲ್ಲಿ ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಧ್ವನಿಯಾಗುತ್ತದೆ ಎಂದು ದೃಢಪಡಿಸಿದ ಪ್ರಧಾನಮಂತ್ರಿಯವರು, ದುರ್ಬಲ ರಾಷ್ಟ್ರಗಳಿಗೆ ಸಹಾಯ ಮಾಡುವಲ್ಲಿ ಜಿ -20ರ ಪಾತ್ರವನ್ನು ಒತ್ತಿ ಹೇಳಿದರು. ಸಮಗ್ರ ಅಭಿವೃದ್ಧಿಯನ್ನು ಬೆಂಬಲಿಸುವುದು, ಆರ್ಥಿಕ ಭದ್ರತೆ ಮತ್ತು ಜಾಗತಿಕ ಪೂರೈಕೆ ಸರಪಳಿಗಳನ್ನು ಬಲಪಡಿಸುವುದು; ಬಹುಪಕ್ಷೀಯ ಹಣಕಾಸು ಸಂಸ್ಥೆಗಳಿಗೆ ಸುಧಾರಿತ ಮತ್ತು ನಾವೀನ್ಯಪೂರ್ಣ ಹಣಕಾಸು ಮಾದರಿಗಳನ್ನು ಅಭಿವೃದ್ಧಿಪಡಿಸುವುದು; ಹವಾಮಾನ ಬದಲಾವಣೆ, ಸಾಂಕ್ರಾಮಿಕ ರೋಗಗಳು, ಆರ್ಥಿಕ ದುರ್ಬಲತೆ, ಬಡತನವನ್ನು ತಗ್ಗಿಸಲು ಮತ್ತು ಎಸ್.ಡಿ.ಜಿ- ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸುವುದು ಮುಂತಾದ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸುವುದು; ಮತ್ತು ಮೂಲಸೌಕರ್ಯದ ಕಂದಕವನ್ನು ನಿವಾರಿಸಲು ಸಾರ್ವಜನಿಕ ಮತ್ತು ಖಾಸಗಿ ಹಣಕಾಸು ನೆರವು ಬಳಸಿಕೊಳ್ಳುವುದನ್ನು ಪ್ರತಿಪಾದಿಸಿದರು.
ಭಾರತದ ಅಧ್ಯಕ್ಷತೆಯ ಅವಧಿಯಲ್ಲಿ ಜಿ -20 ರ ಕಾರ್ಯವನ್ನು ಬೆಂಬಲಿಸುವ ಬದ್ಧತೆಗಾಗಿ ಅಧ್ಯಕ್ಷ ವಿಡೋಡೋ ಮತ್ತು ಅಧ್ಯಕ್ಷ ಬಿಡೆನ್ ಅವರಿಗೆ ಪ್ರಧಾನಮಂತ್ರಿ ಮೋದಿ ಧನ್ಯವಾದ ಅರ್ಪಿಸಿದರು.
*****
(Release ID: 1876346)
Visitor Counter : 127
Read this release in:
English
,
Urdu
,
Hindi
,
Marathi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam