ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ಎಲ್.ಕೆ.ಅಡ್ವಾಣಿಯವರನ್ನು ಭೇಟಿ ಮಾಡಿ ಜನ್ಮ ದಿನದ ಶುಭಾಶಯ ಕೋರಿದ ಪ್ರಧಾನಿ
Posted On:
08 NOV 2022 12:41PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ಎಲ್.ಕೆ. ಅಡ್ವಾಣಿ ಅವರನ್ನು ಭೇಟಿ ಮಾಡಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು.
ಟ್ವೀಟ್‌ನಲ್ಲಿ ಪ್ರಧಾನಮಂತ್ರಿ ಹೀಗೆ ಹೇಳಿದ್ದಾರೆ;
"ಆಡ್ವಾಣಿ ಜಿ ಅವರ ನಿವಾಸಕ್ಕೆ ತೆರಳಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದೆ. ಭಾರತದ ಬೆಳವಣಿಗೆಗೆ ಅವರ ಕೊಡುಗೆ ಸ್ಮರಣೀಯವಾದುದು. ಅವರ ದೂರದೃಷ್ಟಿ ಮತ್ತು ಬುದ್ಧಿಶಕ್ತಿಯಿಂದಾಗಿ ಅವರು ಭಾರತದಾದ್ಯಂತ ಗೌರವಿಸಲ್ಪಡುವವರಾಗಿದ್ದಾರೆ. ಬಿಜೆಪಿಯನ್ನು ಕಟ್ಟುವಲ್ಲಿ ಮತ್ತು ಬಲವರ್ಧನೆಯಲ್ಲಿ ಅವರ ಪಾತ್ರ ಅಪ್ರತಿಮವಾಗಿದೆ. ನಾನು ಅವರು ದೀರ್ಘಕಾಲ ಮತ್ತು ಆರೋಗ್ಯಕರ ಜೀವನ ನಡೆಸಲಿ ಎಂದು ಪ್ರಾರ್ಥಿಸುತ್ತೇನೆ”.
*****
(Release ID: 1874510)
Visitor Counter : 150
Read this release in:
Malayalam
,
English
,
Urdu
,
Marathi
,
Hindi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu