ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ನಕಲಿ ಎಸ್ಎಂಎಸ್ ಕುರಿತು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ) ವು ತ್ವರಿತ ತನಿಖೆ ನಡೆಸಿದೆ ಮತ್ತು ದೊಡ್ಡ ಹಣಕಾಸಿನ ವಂಚನೆಯನ್ನು ತಪ್ಪಿಸಿದೆ
ನಕಲಿ ಎಸ್ಎಂಎಸ್ ಗಳ ಬಗ್ಗೆ ಜಾಗರೂಕರಾಗಿರುವಂತೆ ಸಾರ್ವಜನಿಕರಿಗೆ ಎಚ್ಚರಿಕೆ
Posted On:
04 NOV 2022 9:16AM by PIB Bengaluru
ಉದ್ಯೋಗಗಳನ್ನು ನೀಡುವುದಾಗಿ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್ಐಸಿ) ದ ಹೆಸರಿನಲ್ಲಿ ಜನರಿಗೆ ನಕಲಿ ಎಸ್ಎಂಎಸ್ ಕಳುಹಿಸುತ್ತಿರುವ ಬಗ್ಗೆ ಎನ್ಐಸಿಗೆ ಮಾಹಿತಿ ಲಭ್ಯವಾಗಿದೆ. ನಕಲಿ ಎಸ್ಎಂಎಸ್ ಬಗ್ಗೆ ಮಾಹಿತಿ ಪಡೆದ ಎನ್ಐಸಿ ತಂಡವು ತಕ್ಷಣವೇ ಆಂತರಿಕ ತನಿಖೆಯನ್ನು ಪ್ರಾರಂಭಿಸಿತು. ತನಿಖೆ ನಡೆಸಿದಾಗ ಎನ್ಐಸಿಯಿಂದ ಈ ರೀತಿಯ ಯಾವುದೇ ಎಸ್ಎಂಎಸ್ ಕಳುಹಿಸಿಲ್ಲ ಹಾಗೂ ಇದು ನಕಲಿ ಎಂದು ತಿಳಿದುಬಂದಿದೆ. ನಕಲಿ ಎಸ್ಎಂಎಸ್ ಗಳಲ್ಲಿ ಎನ್ಐಸಿ ಹೆಸರು ದುರ್ಬಳಕೆಯಾಗುತ್ತಿರುವುದನ್ನು ಸೈಬರ್ ಅಪರಾಧ ಎಂದು ಪರಿಗಣಿಸಲಾಗಿದ್ದು, ಭಾರೀ ಆರ್ಥಿಕ ವಂಚನೆಯ ಸಾಧ್ಯತೆಯೂ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ, ಎನ್ಐಸಿಯು ತಕ್ಷಣವೇ CERT-In (ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ) ಕ್ಕೆ ವರದಿ ಮಾಡಿದೆ. ಈ ನಕಲಿ ಎಸ್ಎಂಎಸ್ ಕಳುಹಿಸುವವರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಎನ್ಐಸಿ ಕಾನೂನು ಜಾರಿ ಸಂಸ್ಥೆಗಳಿಗೆ ದೂರು ಸಲ್ಲಿಸಿದೆ. ಮುಂದಿನ ದುರುಪಯೋಗವನ್ನು ತಡೆಗಟ್ಟುವ ಸಲುವಾಗಿ, ಮೋಸದ ಯುಆರ್ ಎಲ್ ಗಳ ವಿರುದ್ಧ ತಕ್ಷಣದ ಕ್ರಮವನ್ನು ತೆಗೆದುಕೊಳ್ಳಲು CERT-In ಸಂಬಂಧಿತ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ.
ಸಾರ್ವಜನಿಕರು ಇಂತಹ ನಕಲಿ ಎಸ್ಎಂಎಸ್ಗಳ ಬಗ್ಗೆ ಎಚ್ಚರವಾಗಿರಬೇಕು ಮತ್ತು ಯಾವುದೇ ವಂಚನೆಯ ಎಸ್ಎಂಎಸ್ಗಳ ಕುರಿತುhttp://incident@cert-in.org.in and https://cybercrime.gov.in ಗೆ ವರದಿ ಮಾಡುವಂತೆ ಸೂಚಿಸಲಾಗಿದೆ.
*****
(Release ID: 1873846)
Visitor Counter : 140