ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಐಜ್ವಾಲ್ ನಲ್ಲಿ ಭಾರತೀಯ ಸಮೂಹ ಮಾಧ್ಯಮ ಸಂಸ್ಥೆ[ಐಐಎಂಸಿ]ಯ ಈಶಾನ್ಯ ರಾಜ್ಯಗಳ ಪ್ರಾದೇಶಿಕ ಕ್ಯಾಂಪಸ್ ಉದ್ಘಾಟಿಸಿದ ರಾಷ್ರಪತಿ

Posted On: 04 NOV 2022 1:39PM by PIB Bengaluru

ಮಿಜೋರಾಂಗೆ ಭೇಟಿ ನೀಡಿದ್ದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಐಜ್ವಾಲ್ ನಲ್ಲಿ ಭಾರತೀಯ ಸಮೂಹ ಮಾಧ್ಯಮ ಸಂಸ್ಥೆಯ ಈಶಾನ್ಯ ರಾಜ್ಯಗಳ ಶಾಶ್ವತ ಪ್ರಾದೇಶಿಕ ಕಚೇರಿಯನ್ನು ಉದ್ಘಾಟಿಸಿದರು. ಈ ಕ್ಯಾಂಪಸ್ ನಲ್ಲಿ ಅಲ್ಪಾವಧಿ ಮಾಧ್ಯಮ ಮತ್ತು ಸಂವಹನ ಕೋರ್ಸ್ ಗಳ ಜೊತೆಗೆ ಇಂಗ್ಲೀಷ್ ಪತ್ರಿಕೋದ್ಯಮ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಸ್ನಾತಕೋತ್ತರ ಕೋರ್ಸ್ ಗಳಿವೆ.

ಭಾರತೀಯ ಸಮೂಹ ಮಾಧ್ಯಮ ಸಂಸ್ಥೆ [ಐಐಎಂಸಿ], ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸ್ವಾಯತ್ತ ಅಂಗ ಸಂಸ್ಥೆಯಾಗಿದ್ದು, ಇದು ದೇಶದ ಪತ್ರಿಕೋದ್ಯಮ ವಲಯದ ಪ್ರಮುಖ ಸಂಸ್ಥೆ. ಮುಖ್ಯ ಕ್ಯಾಂಪಸ್ ನವದೆಹಲಿಯಲ್ಲಿದ್ದು, ಐಐಎಂಸಿಯು ಒಡಿಶಾದ ಧೆಂಕನಲ್, ಮಿಜೋರಾಂ ನ ಐಜ್ವಾಲ್, ಜೆ ಅಂಡ್ ಕೆಯ ಜಮ್ಮು, ಕೇರಳದ ಕೊಟ್ಟಾಯಂ ಮತ್ತು ಮಹಾರಾಷ್ಟ್ರದ ಅಮರಾವತಿಯಲ್ಲಿ ಐದು ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ.

ದೇಶಾದ್ಯಂತ ಮಾಧ್ಯಮ ಶಿಕ್ಷಣದ ಅಗತ್ಯವನ್ನು ನೀಗಿಸುವ ಉದ್ದೇಶವನ್ನು ಸಾಕಾರಗೊಳಿಸಲು ವಿವಿಧ ಪ್ರದೇಶಗಳಲ್ಲಿ ಪ್ರಾದೇಶಿಕ ಕ್ಯಾಂಪಸ್ ಗಳನ್ನು ಸ್ಥಾಪಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ಅವರು, ಇಡೀ ಈಶಾನ್ಯ ರಾಜ್ಯಗಳಲ್ಲಿ ಸಮೂಹ ಮಾಧ್ಯಮ ಅಧ್ಯಯನ ಮಾಡುವ ಸಲುವಾಗಿ ಐಜ್ವಾಲ್ ನಲ್ಲಿ ಭಾರತೀಯ ಸಮೂಹ ಮಾಧ್ಯಮ ಸಂಸ್ಥೆಯ ಶಾಶ್ವತ ಕ್ಯಾಂಪಸ್ ಅನ್ನು ಉದ್ಘಾಟಿಸಲು ತಮಗೆ ಸಂತಸವಾಗುತ್ತಿದೆ.  ಐಐಎಂಸಿಯು ಒಂದು ಗೌರವಾನ್ವಿತ ಸಂಸ್ಥೆಯಾಗಿದ್ದು, ಕ್ರಿಯಾತ್ಮಕ ಕಲಿಕೆಗೆ ಸಹಕಾರಿಯಾಗಿದೆ ಮತ್ತು ಹೊಸ ಆಲೋಚನೆಗಳು, ಕ್ರಿಯಾಶೀಲತೆ, ಸಂಶೋಧನೆ ಮತ್ತು ನಾಯಕತ್ವ ಅಭಿವೃದ್ಧಿ ಹಾಗೂ ಮಾಧ್ಯಮ ಹಾಗೂ ಸಮೂಹ ಮಾಧ್ಯಮ ವಲಯದಲ್ಲಿ ನಾವೀನ್ಯ ಸಾಧಿಸಲು ಉತ್ತಮ ಪರಿಸರವನ್ನು ಈ ಕ್ಯಾಂಪಸ್ ಒದಗಿಸುತ್ತದೆ” ಎಂದು ಹೇಳಿದರು.

ಈಶಾನ್ಯ ರಾಜ್ಯಗಳ ಐಐಎಂಸಿ ಕ್ಯಾಂಪಸ್ 2011 ರಿಂದ ಮಿಜೋರಾಂ ವಿಶ್ವವಿದ್ಯಾಲಯದ ತಾತ್ಕಾಲಿಕ ಕಟ್ಟಡದಲ್ಲಿ ಕಾರ್ಯಾರಂಭ ಮಾಡಿತು. 2015 ರಲ್ಲಿ ಕ್ಯಾಂಪಸ್ ಕಟ್ಟಡದ ನಿರ್ಮಾಣ ಕಾಮಗಾರಿ ಆರಂಭವಾಯಿತು ಮತ್ತು 2019 ರಲ್ಲಿ ಪೂರ್ಣಗೊಂಡಿತು. ಇದರ ಒಟ್ಟು ವೆಚ್ಚ 25 ಕೋಟಿ ರೂಪಾಯಿ. ಪ್ರತ್ಯೇಕ ಆಡಳಿತಾತ್ಮಕ ಕಟ್ಟಡ ನಿರ್ಮಾಣ ಮಾಡಲು ಮೀಜೋರಾಂ ವಿಶ್ವವಿದ್ಯಾಲಯ 8 ಎಕರೆ ಭೂಮಿಯನ್ನು ನೀಡಿದೆ ಮತ್ತು ವಸತಿ ನಿಲಯಗಳು ಮತ್ತು ಸಿಬ್ಬಂದಿ ವಸತಿ ಸಮುಚ್ಚಯಗಳ ಜೊತೆಗೆ ಶೈಕ್ಷಣಿಕ ಉದ್ದೇಶದ ಕಟ್ಟಡಗಳನ್ನು ಈ ಕ್ಯಾಂಪಸ್ ಒಳಗೊಂಡಿದೆ.

ಪ್ರಾರಂಭದಿಂದಲೂ ಈ ಕ್ಯಾಂಪಸ್ ನಲ್ಲಿ ಇಂಗ್ಲೀಷ್ ಪತ್ರಿಕೋದ್ಯಮದಲ್ಲಿ ಪಿಜಿ ಡಿಪ್ಲೊಮೋ ಕೋರ್ಸ್ ನಡೆಯುತ್ತಿದೆ ಈಶಾನ್ಯ ರಾಜ್ಯಗಳಷ್ಟೇ ಅಲ್ಲದೇ ಭಾರತದ ಇತರೆ ಭಾಗಗಳಿಂದಲೂ ಸಹ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಎಲ್ಲಾ ಐಐಎಂಸಿ ಕ್ಯಾಂಪಸ್ ಗಳಿಗೆ ಹೋಲಿಸಿದರೆ ಇಂಗ್ಲೀಷ್ ಪತ್ರಿಕೋದ್ಯಮಕ್ಕೆ ಅತಿ ಹೆಚ್ಚು ಮಂದಿ ಪ್ರವೇಶ ಪಡೆದವರ ಸಂಖ್ಯೆಯಲ್ಲಿ ಇದು ಎರಡನೇ ಸ್ಥಾನದಲ್ಲಿದೆ.

ಕ್ಯಾಂಪಸ್ ಪ್ಲೇಸ್ ಮೆಂಟ್ ಮೂಲಕ ದೇಶಾದ್ಯಂತ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಲ್ಲಿ ಈ ವಿದ್ಯಾರ್ಥಿಗಳು ಕ್ಯಾಂಪಸ್ ಹಾಗೂ ತನ್ನ ಸ್ವಂತ ಪ್ರಯತ್ನದಿಂದ ಉದ್ಯೋಗ ಪಡೆಯಲು ಸಹಕಾರಿಯಾಗಿದೆ. ಈ ವರ್ಷದಿಂದ ವರ್ಷಕ್ಕೆ ದೂರದರ್ಶನ, ಆಕಾಶವಾಣಿ, ಪಿಟಿಐ ಮತ್ತು ಇತರೆ ಪ್ರಮುಖ ಹಾಗೂ ಖಾಸಗಿ ಮಾಧ್ಯಮ ಸಂಸ್ಥೆಗಳಲ್ಲೂ ತಮ್ಮದೇ ಆದ ಸ್ಥಾನವನ್ನು ನಿರೂಪಿಸುತ್ತಿದ್ದಾರೆ.

ಭಾರತೀಯ ಸಮೂಹ ಮಾಧ್ಯಮ ಸಂಸ್ಥೆ [ಐಐಎಂಸಿ]ಯನ್ನು ನವದೆಹಲಿಯಲ್ಲಿ 1965 ರಲ್ಲಿ ಆರಂಭಿಸಿದ್ದು, ದೇಶದಲ್ಲಿ ಮಾಧ್ಯಮ ವೃತ್ತಿಪರರಿಗೆ ತರಬೇತಿ ನೀಡಲು ಇದನ್ನು ಸ್ಥಾಪಿಸಲಾಗಿದೆ. ಅಂದಿನಿಂದ ಇದು ಭಾರತೀಯ ಮಾಹಿತಿ ಸೇವೆಯ ತರಬೇತಿ ಸಂಸ್ಥೆಯಾಗಿಯೂ ಕಾರ್ಯನಿರ್ವಹಿಸುತ್ತಿದೆ.

******



(Release ID: 1873845) Visitor Counter : 114