ವಾರ್ತಾ ಮತ್ತು ಪ್ರಸಾರ ಸಚಿವಾಲಯ
ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಸ್ವಚ್ಛ ಭಾರತ ಅಭಿಯಾನ 2.0 ಅನುಷ್ಠಾನ ಯಶಸ್ವಿಯಾಗಿ ಪೂರ್ಣ
Posted On:
03 NOV 2022 11:36AM by PIB Bengaluru
ಐ ಅಂಡ್ ಬಿ ಯಿಂದ 4735 ಕ್ವಿಂಟಾಲ್ ಅನುಪಯುಕ್ತ ಮತ್ತು ಇತರೆ ವಸ್ತುಗಳ ವಿಲೇವಾರಿ, 3,71 ಕೋಟಿ ರೂಪಾಯಿ ಆದಾಯ ಸಂಗ್ರಹ ಮತ್ತು 1,75,447 ಚದರ ಅಡಿ ಜಾಗ ತೆರವು. 108298 ಕಡತಗಳನ್ನು ಭೌತಿಕವಾಗಿ ಪ್ರಗತಿ ಪರಿಶೀಲನೆ ಮಾಡಲಾಗಿದೆ ಮತ್ತು 66938 ವಿಲೇವಾರಿ ಹಾಗೂ 3766 ಸ್ಥಳಗಳ ತೆರವು
ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ಅದಕ್ಕೆ ಹೊಂದಿಕೊಂಡ ಹಾಗೂ ಅದರ ಅಧೀನ ಕಚೇರಿಗಳು, ಸ್ವಾಯತ್ತ ಸಂಘಟನೆಗಳು, ಸ್ವಾಯತ್ತ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ವಾಮ್ಯದ ವಾರ್ತಾ ಶಾಖೆ [ಪಿಐಬಿ]. ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಶನ್ [ಸಿಬಿಸಿ]; ಪ್ರಕಾಶನ ವಿಭಾಗ; ಭಾರತೀಯ ವೃತ್ತಪತ್ರಿಕೆಗಳ ನೋಂದಣಿ ಕಚೇರಿ [ಆರ್.ಎನ್.ಐ], ಕೇಂದ್ರ ಚಲನಚಿತ್ರ ಪ್ರಾಮಾಣಿಕರಣ ಮಂಡಳಿ [ಸಿ.ಬಿ.ಎಫ್.ಸಿ]; ವಿದ್ಯುನ್ಮಾನ ಮಾಧ್ಯಮ ನಿಗಾ ಕೇಂದ್ರ [ಇಎಂಎಂಸಿ]; ಹೊಸ ಮಾಧ್ಯಮ ವಿಭಾಗ [ಎನ್.ಎಂ.ಡಬ್ಲ್ಯೂ]; ಪ್ರಸಾರ ಭಾರತಿ [ಅ. ಆಕಾಶವಾಣಿ, ಬಿ. ದೂರದರ್ಶನ]; ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ; ಪುಣೆಯ ಸತ್ಯಜಿತ್ ರೇ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ [ಎಫ್.ಟಿ.ಐ.ಐ]; ಕೊಲ್ಕತ್ತಾ; ಭಾರತೀಯ ಸಮೂಹ ಮಾಧ್ಯಮ ಸಂಸ್ಥೆ [ಪಿ.ಎಸ್.ಐ]; ಪ್ರಸಾರ ತಾಂತ್ರಿಕ ಸಮಾಲೋಚಕರ [ಇಂಡಿಯಾ] ಲಿಮಿಟೆಡ್ [ಬಿಇಸಿಐಎಲ್] ಮತ್ತು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಲಿಮಿಟೆಡ್ [ಎನ್.ಎಫ್.ಡಿ.ಸಿ] [ಮಾಧ್ಯಮ ಘಟಕಗಳ ವಿಲೀನ ಒಳಗೊಂಡಂತೆ] ನಿಂದ 2022 ರ ಅಕ್ಟೋಬರ್ 2 ರಿಂದ 31 ರ ವರೆಗೆ ವಿಶೇಷ ಅಭಿಯಾನ 2.0 ಆಯೋಜಿಸಲಾಗಿತ್ತು. ಪ್ಯಾನ್ ಇಂಡಿಯಾ ಆಧಾರದ ಮೇಲೆ ಬಾಕಿ ಇರುವ ಪ್ರಕರಣಗಳ ಇತ್ಯರ್ಥ, ಹಳೆಯ/ಅನಗತ್ಯ ಕಡಗಳು ಮತ್ತು ಕಚೇರಿಗಳಲ್ಲಿ ಒಟ್ಟಾರೆ ಸ್ವಚ್ಛ ಮತ್ತು ಸ್ಥಳ ನಿರ್ವಹಣೆಯನ್ನು ಕೇಂದ್ರೀಕರಿಸಿ ಅಭಿಯಾನ ಕೈಗೊಳ್ಳಲಾಗಿತ್ತು.
ಅಭಿಯಾನದ ಸಾಧನೆಗಳ ವಿವಿಧ ಮಾನದಂಡಗಳು ಕೆಳಕಂಡಂತಿವೆ;-
- 14 ಸಂಸದರ ಉಲ್ಲೇಖಗಳು, 320 ಸಾರ್ವಜನಿಕ ಕುಂದುಕೊರತೆಗಳು, 181 ಪಿಜಿ ಮೇಲ್ಮನವಿಗಳು ಮತ್ತು 4 ಸಂಸದೀಯ ಭರವಸೆಗಳನ್ನು ಈಡೇರಿಸಲಾಗಿದೆ.
108298 ಭೌತಿಕ ಕಡಗಳನ್ನು ಪರಿಶೀಲಿಸಿದ್ದು, ಈ ಪೈಕಿ 66938 ಕಡತಗಳ ವಿಲೇವಾರಿ. 2217 ಇ-ಕಡತಗಳನ್ನು ಪರಿಶೀಲಿಸಿ 1868 ಮುಕ್ತಾಯಗೊಳಿಸಲಾಗಿದೆ. 1,75,447 ಚದರ ಅಡಿ ಪ್ರದೇಶವನ್ನು ತೆರವುಗೊಳಿಸಲಾಗಿದೆ ಮತ್ತು 3,71,66,846/- ರೂ ಆದಾಯ ಸಂಗ್ರಹಿಸಲಾಗಿದೆ.
ಹೊರ ಭಾಗದಲ್ಲಿ 336 ಸ್ವಚ್ಛತಾ ಅಭಿಯಾನಗಳನ್ನು ಕೈಗೊಳ್ಳಲಾಗಿದೆ ಮತ್ತು 3766 ಸ್ಥಳಗಳನ್ನು ತೆರವುಗೊಳಿಸಲಾಗಿದೆ.
2. ಸಿದ್ಧತಾ ಹಂತ
2022 ರ ಸೆಪ್ಟೆಂಬರ್ 14 ರಿಂದ 30 ರ ವರೆಗೆ ಸಿದ್ಧತಾ ಹಂತದಲ್ಲಿ ನೋಡೆಲ್ ಅಧಿಕಾರಿಗಳ ನೇಮಕ, ಸ್ವಚ್ಛತಾ ಅಭಿಯಾನದ ಆಯ್ಕೆ ಮತ್ತು ಗುರುತಿಸುವಿಕೆ, ಅನಗತ್ಯ ವಸ್ತುಗಳ ಗುರುತಿಸುವಿಕೆ, ಹಳೆಯ ಪತ್ರಿಕೆಗಳು/ನಿಯತಕಾಲಿಕೆಗಳ ವಿಲೇವಾರಿ ಮಾರಾಟಗಾರರನ್ನು ನೇಮಿಸಿಕೊಳ್ಳುವುದು, ಇತ್ಯಾದಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ನಮೂದಿಸಲಾದ ಮತ್ತು ಅಧೀನ ಕಚೇರಿಗಳು ಹಾಗೂ ಅವುಗಳ ಕ್ಷೇತ್ರ ಕಚೇರಿಗಳನ್ನು ಸಂವೇದನಾಶೀಲಗೊಳಿಸಲಾಯಿತು.
ವಾರ್ತಾ ಮತ್ತು ಪ್ರಸಾರ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಗೌರವಾನ್ವಿತ ಶ್ರೀ ಅನುರಾಗ್ ಠಾಕೂರ್ ಅವರು 2022 ರ ಸೆಪ್ಟೆಂಬರ್ 29 ರಂದು ಅಹ್ಮದಾಬಾದ್ ದೂರದರ್ಶನ ಕೇಂದ್ರಕ್ಕೆ ಭೇಟಿ ನೀಡಿ, ಅಭಿಯಾನವನ್ನು ಅತ್ಯಂತ ಯಶಸ್ವಿಗೊಳಿಸಲು ಅಭಿಯಾನದ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿ, ವಿವಿಧ ಕಚೇರಿಗಳಲ್ಲಿ ಅಪಾರ ಸ್ಫೂರ್ತಿ ಮೂಡಿಸಿದರು.
ಪ್ರಚಾರ ಪ್ರಾರಂಭಿಸುವ ಮೊದಲು ಸಿದ್ಧತೆಯನ್ನು ಪರಿಶೀಲಿಸಲು ಸಚಿವಾಲಯದ ಅಧಿಕಾರಿಗಳು ಪೂರ್ವ ಸಿದ್ಧತಾ ಹಂತದಲ್ಲಿ ವಿವಿಧ ಕ್ಷೇತ್ರ ಕಚೇರಿಗಳಿಗೆ ಭೇಟಿ ನೀಡಿದರು.
ಪ್ರಚಾರದ ಯಶಸ್ಸಿಗಾಗಿ ಐ ಅಂಡ್ ಬಿ ಸಚಿವಾಲಯ ಸೇರಿದಂತೆ ವಿವಿಧ ಸಚಿವಾಲಯಗಳ ಕಚೇರಿಗಳಲ್ಲಿ ಜಾಗೃತಿ ಮೂಡಿಸಲು ಡಿ.ಎ.ಆರ್.ಪಿ.ಜಿನೊಂದಿಗೆ ಸಮನ್ವಯ/ಸಹಭಾಗಿತ್ವದಲ್ಲಿ ಅನುಷ್ಟಾನಕ್ಕಾಗಿ ಮಾಧ್ಯಮ ಯೋಜನೆ ಮತ್ತು ಮಾರ್ಗ ಸೂಚಿಗಳನ್ನು ಸಚಿವಾಲಯದ ಎಲ್ಲಾ ಮಾಧ್ಯಮಗಳ ಘಟಕಗಳಿಗೆ ನೀಡಲಾಗಿದೆ.
3. ಅಭಿಯಾನದ ಹಂತ
2022 ರ ಅಕ್ಟೋಬರ್ 2 ರಂದು ಪ್ರಾರಂಭವಾದ ವಿಶೇಷ ಅಭಿಯಾನದಡಿ ಡಿ.ಎ.ಆರ್.ಪಿ.ಜಿ ಮಾರ್ಗಸೂಚಿ ಅನ್ವಯ ದೈನಂದಿನ ಆಧಾರದ ಮೇಲೆ ಪ್ರಗತಿಯ ಮೇಲೆ ನಿಗಾ ಇಡಲಾಗಿತ್ತು. ಮಾಧ್ಯಮ ಘಟಕಗಳಿಗೆ ಸಚಿವಾಲಯದ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು ಮತ್ತು ಅದರ ಕ್ಷೇತ್ರಾಧಿಕಾರಿಗಳು ಸ್ಥಳಗಳಲ್ಲಿ ಪರಿಶೀಲನೆ ಮತ್ತು ಮಾರ್ಗಸೂಚಿ ಪ್ರಕಾರ ಯಶಸ್ವಿ ಅನುಷ್ಠಾನ ಹಾಗೂ ಗುರಿಗಳ ಸಾಧನೆಯನ್ನು ಪರಿಶೀಲಿಸಿದರು.
ವಿಶೇಷ ಅಭಿಯಾನ 2.0 ಅನ್ನು ದೈನಂದಿನ ಆಧಾರದ ಮೇಲೆ ಇದಕ್ಕಾಗಿ ಮೀಸಲಾದ ಪೋರ್ಟಲ್ https://www.pgportal.gov.in/scdpm22 ನಿಗಾ ವಹಿಸಲಿದೆ. ಪ್ರತಿದಿನ ಸಾಧನೆಗಳ ಸಮಗ್ರ ದತ್ತಾಂಶಗಳನ್ನು ಪೋರ್ಟಲ್ ಗೆ ಅಪ್ ಲೋಡ್ ಮಾಡಲಾಗುತ್ತಿದೆ.
2022 ರ ಅಕ್ಟೋಬರ್ 2 ರಿಂದ 31 ರ ವರೆಗಿನ ವಿಶೇಷ ಅಭಿಯಾನ 2.0 ರ ವಿವಿಧ ಕಾರ್ಯಗಳ ಕುರಿತ ಸಂಕ್ಷಿಪ್ತ ಸಾಧನೆಗಳು ಈ ಕೆಳಗಿನಂತಿವೆ
Sl. No
|
ವಿಭಾಗಗಳು |
2022 ರ ಅಕ್ಟೋಬರ್ 31 ರ ವರೆಗೆ ಪ್ರಗತಿ |
1 |
ಸ್ವಚ್ಚತಾ ಅಭಿಯಾನದ ತಾಣ [ಹೊರಾಂಗಣ] |
336 |
2 |
ಹಲವಾರು ಸ್ಥಳಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ ಮತ್ತು ವಿಲೇವಾರಿ ಮಾಡಲಾಗಿದೆ [ಒಳಾಂಗಣ ಮತ್ತು ಹೊರಾಂಗಣ] |
3,766 |
3 |
ದಾಖಲೆ ನಿರ್ವಹಣೆ
ಕಡತಗಳನ್ನು ಪರಿಶೀಲಿಸಲಾಗಿದೆ [ಭೌತಿಕ + ಇ ಕಡತಗಳು]
|
1,10,515 |
4 |
ಸಾರ್ವಜನಿಕ ಕುಂದುಕೊರತೆಗಳು + ಮೇಲ್ಮನವಿಗಳನ್ನು ಪರಿಹರಿಸಲಾಗಿದೆ |
501 |
5 |
ಆದಾಯ ಗಳಿಕೆ |
3,71,66,846 |
6 |
ಸ್ಥಳವನ್ನು ತೆರವುಗೊಳಿಸಲಾಗಿದೆ [ಚದರ ಅಡಿಗಳಲ್ಲಿ] |
1,75,447 |
7 |
ಸಂಸದರ ಉಲ್ಲೇಖಗಳು |
14 |
8 |
ಸಂಸದೀಯ ಭರವಸೆ |
4 |
9 |
ವಿಲೇವಾರಿ ಮಾಡಿದ ಅನುಪಯುಕ್ತ/ಹಳೆಯ ವಸ್ತುಗಳು/ಪತ್ರಿಕೆಗಳು ಇತ್ಯಾದಿಗಳ ಪ್ರಮಾಣ [ಕ್ಟಿಂಟಾಲ್ ಗಳಲ್ಲಿ] |
4735 |
4. ನಿಗದಿತ ಗುರಿ ಮೀರಿದ ಸಾಧನೆಗಳ ಕೇಂದ್ರಗಳು
i) ಹೊರಾಂಗಣ ಅಭಿಯಾನ [ಆರಂಭಿಕ ಗುರಿ – 196, ಸಾಧನೆ -336]
ii) ವಿಲೇವಾರಿಗಾಗಿ ನಡೆಸಿದ ಭೌತಿಕ ಕಡತಗಳ ಪರಿಶೀಲನೆ [ಆರಂಭಿಕ ಗುರಿ – 48726, ಸಾಧನೆಗಳು -108298]
iii) ಇ – ಕಡತಗಳ ಪರಿಶೀಲನೆ [ಆರಂಭಿಕ ಗುರಿ – 86, ಸಾಧನೆಗಳು – 2217]
iv) ಯಾವುದೇ ಗುರಿ ನಿಗದಿಮಾಡದೇ ಸ್ಥಳಗಳನ್ನು ಸ್ವಚ್ಛಗೊಳಿಸಿ ಮಾಡಿದ ಸಾಧನೆಗಳು
- 3766
5. ಅತ್ಯುತ್ತಮ ಸಾಧನೆ ಪ್ರದರ್ಶಿಸಿದ ಪ್ರದೇಶಗಳ ಚಿತ್ರಣ
ಡಿ.ಎ.ಆರ್.ಪಿ ಮಾರ್ಗಸೂಚಿಯಡಿ ಅತ್ಯುತ್ತಮ ಸಾಧನೆ ಮಾಡಿ 4 ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಮತ್ತು ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಇದನ್ನು ಪ್ರದರ್ಶಿಸಲಾಗಿದೆ. ಅವುಗಳೆಂದರೆ:
i. ದೂರದರ್ಶನ ಕೇಂದ್ರ, ಜೈಪುರ, 2] ಆಕಾಶವಾಣಿ, ಜೈಪುರ, 3] ಆಕಾಶವಾಣಿ, ತ್ರಿವೇಂಡ್ರಮ್ ಮತ್ತು 4] ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಶನ್ [ಸಿಬಿಸಿ], ಸಂಗ್ರಹಣಾ ಕೊಠಡಿ
6. ಯಶೋಗಾಥೆ
a) ಡಿಡಿಕೆ ಅಹ್ಮದಾಬಾದ್
b) ಆಕಾಶವಾಣಿ ಸಾಧನೆ
c) ಸಿಬಿಸಿ [ಹತ್ತು ವರ್ಷಗಳಿಗೂ ಹೆಚ್ಚಿನ ಸಮಯದ ರಸೀದಿಗಳು ಮತ್ತು ಮಾದರಿ ವೃತ್ತಪತ್ರಿಕೆಗಳ ವಿಲೇವಾರಿ]
7. ವಿಶೇಷ ಅಭಿಯಾನ 2.0 ಸಂದರ್ಭದಲ್ಲಿ ವಿವಿಧ ಮಾಧ್ಯಮಗಳಲ್ಲಿನ ಪ್ರಚಾರದಲ್ಲಿ ಮಾಡಿದ ಸಾಧನೆ
a) Total Numb ಟ್ವೀಟ್ ಗಳ ಸಂಖ್ಯೆ |
1174 |
b)Total ವಿಡಿಯೋಗಳ ಸಂಖ್ಯೆ |
318 |
c)Total no o ಕಿರುಚಿತ್ರಗಳ ಪ್ರದರ್ಶನ |
17 |
d)Total Num ಇತರೆ ಸಾಮಾಜಿಕ ಮಾಧ್ಯಮಗಳ ಪೋಸ್ಟ್ ಗಳು |
834 |
e)PIB ನೀಡಿದ ಹೇಳಿಕೆಗಳು |
3 |
8. ವಿವಿಧ ಮಾಧ್ಯಮಗಳಲ್ಲಿ ಪ್ರಮುಖ ಪೋಸ್ಟ್ ಗಳ ಮೂಲಕ ಪ್ರಚಾರ
ವಿಶೇಷ ಅಭಿಯಾನ 2.0 ಅಡಿ ಎಚ್.ಎಂ.ಎಸ್.ಐ.ಬಿ ನಿಂದ ಅಹ್ಮದಾಬಾದ್ ಮತ್ತು ವಿಯಜವಾಡದ ಆಕಾಶವಾಣಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯ ಮಾಧ್ಯಮಗಳಲ್ಲಿನ ಪ್ರಚಾರ
a. ಮುದ್ರಣ ಮಾಧ್ಯಮ
b. ಕಿರು ಚಿತ್ರಗಳ ಪ್ರದರ್ಶನ
ಚಲನಚಿತ್ರ ವಿಭಾಗದಿಂದ ಅರಿವು ಹೆಚ್ಚಿಸಲು ಸ್ವಚ್ಛತೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವಿಶೇಷ ಅಭಿಯಾನ 2.0 ಎಂಬ ವಿಷಯಗಳ ಕುರಿತು 7 ಕಿರು ಚಿತ್ರಗಳ ಪ್ರದರ್ಶನ ಮಾಡಲಾಯಿತು; ಅವುಗಳು ಈ ಕೆಳಕಂಡಂತೆ ಇವೆ.
1. ಧಮ್ನೇರ್ [10 ನಿಮಿಷಗಳು]
ಸಾರಾಂಶ; ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ ಧಮ್ನೇರ್ ಜನ ತಮ್ಮ ಗ್ರಾಮವನ್ನು ಮಹಾರಾಷ್ಟ್ರದ ಮಾದರಿ ಗ್ರಾಮವನ್ನಾಗಿ ಮಾಡಿದ್ದಾರೆ.
2. ಚಿಮು [4 ನಿಮಿಷಗಳು]
ಸಾರಾಂಶ; ಕಸ ಸುರಿಯುವುದರಿಂದ ಉಂಟಾಗುವ ಹಾನಿ ಬಗ್ಗೆ ಅರಿತು ನಗರವನ್ನು ಹೇಗೆ ಸ್ವಚ್ಛವಾಗಿಡಬೇಕು ಎನ್ನುವ ಕುರಿತು ಇತರರಿಗೆ ಕಲಿಸಲು ಮುಂದಾಗುತ್ತಾನೆ
3. ಚರ್ಚ್ ಗೇಟ್ ಫಾಸ್ಟ್ [3ನಿಮಿಷಗಳು]
ಸಾರಾಂಶ; ಉಗುಳುವುದರಿಂದ ಸಮಾಜ, ಪರಿಸರ ಮತ್ತು ಆರೋಗ್ಯದ ಮೇಲೆ ಉಂಟಾಗುವ ಅತ್ಯಂತ ಹೆಚ್ಚಿನ ಪರಿಣಾಮಗಳನ್ನು ಚಿತ್ರ ತೋರಿಸುತ್ತದೆ. 4. ಮಿಸ್ಟರ್ ಕ್ಲೀನ್ ಕಮ್ಸ್ ಟು ಸಿಟಿ [3 ನಿಮಿಷಗಳು]
ಸಾರಾಂಶ; ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕುರಿತು ನಾಗರಿಕ ಪ್ರಜ್ಞೆಯನ್ನು ಚಿತ್ರ ಒಳಗೊಂಡಿದೆ.
5. ಪೈಡ್ ಪೈಪರ್ ಆಫ್ ಮುಂಬೈ [4 ನಿಮಿಷಗಳು]
ಸಾರಾಂಶ; ಇದು ಸ್ಚಚ್ಛತೆ ಕುರಿತಾದ ಅನಿಮೇಶನ್ ಚಿತ್ರ. ನಿಮ್ಮ ಶುಚಿತ್ವ, ಆರೋಗ್ಯ ಮತ್ತು ನೈರ್ಮಲ್ಯವು ನಿಮ್ಮ ಜವಾಬ್ದಾರಿ ಮತ್ತು ಬಾಧ್ಯತೆಯಾಗಿದೆ. ಅದನ್ನು ನಿರ್ಲಕ್ಷಿಸಿದರೆ ನೀವು ಗಂಡಾಂತರಕ್ಕೆ ಸಿಲುಕುತ್ತೀರಿ ಎಂಬ ಸಂದೇಶ ನೀಡುತ್ತದೆ.
6. ಹಿಸ್ಸಾ ಡೋ [3 ನಿಮಿಷಗಳು]
ಸಾರಾಂಶ; ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕುರಿತ ಚಿತ್ರ. ಆಸುಪಾಸಿನಲ್ಲಿ ಶುಚಿತ್ವ ಕಾಪಾಡಿಕೊಳ‍್ಳುವುದು ನಿಮ್ಮ ಸಾಮಾಜಿಕ ಜವಾಬ್ದಾರಿಯಾಗಿದೆ.
7. ಪ್ಲಾಸ್ಟಿಕ್ ವರ್ಡ್ಡ್ [7ನಿಮಿಷಗಳು]
ಸಾರಾಂಶ; ಇದು ಅನಿಮೇಷನ್ ಚಲನಚಿತ್ರವಾಗಿದ್ದು, ಭವಿಷ್ಯದ ವಿಶಾಲವಾದ ಮತ್ತು ಶುಷ್ಕ ಡಿಸ್ಟೋಪಿಯನ್ ಭೂ ಪ್ರದೇಶವನ್ನು ಚಿತ್ರಿಸುತ್ತದೆ. ಆವರಿಸಿದ ಪ್ಲ್ಯಾಸ್ಟಿಕ್ ತ್ಯಾಜ್ಯ, ಮಾನವ ಜೀವನ ಮತ್ತು ಪರಿಸರದ ಮೇಲೆ ಪ್ಲ್ಯಾಸ್ಟಿಕ್ ನ ಅಪಾಯಕಾರಿ ಪರಿಣಾಮಗಳ ವಿರುದ್ಧ ಎಚ್ಚರಿಕೆ ನೀಡುತ್ತದೆ.
9. 2022 ಅ ಅಕ್ಟೋಬರ್ 31 ರ ನಂತರವೂ ಪ್ರಗತಿಯಲ್ಲಿರುವ/ಬಾಕಿ ಕೆಲಸವನ್ನು ಮುಂದುವರೆಸುವ ಕುರಿತು
· ಹಳೆಯ/ಸುಸ್ಥಿತಿಯಲ್ಲಿಲ್ಲದ 194 ವಾಹನಗಳನ್ನು ವಿಲೇವಾರಿ ಮಾಡಬೇಕು
· ಸಿಬಿಸಿಯಲ್ಲಿ ಹತ್ತು ವರ್ಷಗಳಿಗೂ ಹೆಚ್ಚಿನ ರಸೀದಿಗಳು ಮತ್ತು ಮಾದರಿ ಸುದ್ದಿ ಪತ್ರಿಕೆಗಳನ್ನು ವಿಲೇವಾರಿ ಮಾಡಬೇಕು.
· ಆಕಾಶವಾಣಿ ನಿಲಯ ಮತ್ತು ಕಚೇರಿಗಳಲ್ಲಿ ಇಂಧನ ಲೆಕ್ಕಪರಿಶೋಧನೆ ಪ್ರಗತಿಯಲ್ಲಿ
· ರಾಷ್ಟ್ರೀಯ ಮಾಧ್ಯಮ ಕೇಂದ್ರ [ಪಿಐಬಿ] ನವದೆಹಲಿಯಲ್ಲಿ ತೋಟಗಾರಿಕೆ ಸುಧಾರಣೆ
· ಪ್ರಕಾಶನ ವಿಭಾಗದಲ್ಲಿ ಪುಸ್ತಕಗಳನ್ನು ದೇಣಿಗೆ ನೀಡುವುದು.
ಎಚ್.ಎಂ.ಐ.ಬಿ, ಡಿಡಿಕೆ ಅಹ್ಮದಾಬಾದ್ ನ ಡಿಡಿಕೆ ಕಚೇರಿಗೆ ಶ್ರೀ ಅನುರಾಗ್ ಸಿಂಗ್ ಠಾಕೂರ್ ಭೇಟಿ
ಸೂಚನಾ ಭವನದ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಶನ್ ಮುಖ್ಯ ಕಚೇರಿಗೆ ಕಾರ್ಯದರ್ಶಿ [ಐ ಅಂಡ್ ಬಿ] ಶ್ರೀ ಅಪೂರ್ವ ಚಂದ್ರ ಭೇಟಿ
******
(Release ID: 1873588)
Visitor Counter : 138