ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕತಾರ್ ದೇಶದ ಅಮೀರ್ ಘನತೆವೆತ್ತ ಅಮೀರ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಪ್ರಧಾನಿ ಮಾತುಕತೆ

प्रविष्टि तिथि: 29 OCT 2022 6:02PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕತಾರ್ ದೇಶದ ಅಮೀರ್ ಘನತೆವೆತ್ತ ಅಮೀರ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರೊಂದಿಗೆ ಮಾತುಕತೆ ನಡೆಸಿದರು ಮತ್ತು ದೀಪಾವಳಿಯ ಶುಭಾಶಯಗಳಿಗಾಗಿ ಅವರಿಗೆ ಧನ್ಯವಾದ ಅರ್ಪಿಸಿದರು. ಕತಾರ್ನಲ್ಲಿ ನಡೆಯಲಿರುವ ʻಫಿಫಾ ವಿಶ್ವಕಪ್ʼನ ಯಶಸ್ಸಿಗೆ ಶ್ರೀ ಮೋದಿ ಅವರು ಶುಭ ಹಾರೈಸಿದರು.  

ಈ ಕುರಿತು ಪ್ರಧಾನಿ ಹೀಗೆ ಟ್ವೀಟ್ ಮಾಡಿದ್ದಾರೆ:

"ಕತಾರ್ನ ಘನತೆವೆತ್ತ ಅಮೀರ್ ತಮೀಮ್ ಬಿನ್ ಹಮದ್ http://@TamimBinHamad ಅವರೊಂದಿಗೆ ಮಾತನಾಡಿದ್ದು ನನಗೆ ಸಂತೋಷ ತಂದಿದೆ. ದೀಪಾವಳಿಯ ಶುಭಾಶಯಗಳಿಗಾಗಿ ಅವರಿಗೆ ಧನ್ಯವಾದ ಅರ್ಪಿಸಲಾಯಿತು ಮತ್ತು ಕತಾರ್ನಲ್ಲಿ ನಡೆಯಲಿರುವ ʻಫಿಫಾ ವಿಶ್ವಕಪ್ʼಗಾಗಿhttp://@FIFAWorldCup ಶುಭ ಹಾರೈಸಲಾಯಿತು. 2023ರಲ್ಲಿ ಭಾರತ-ಕತಾರ್ ರಾಜತಾಂತ್ರಿಕ ಸಂಬಂಧಗಳ 50 ವರ್ಷಗಳನ್ನು ಜಂಟಿಯಾಗಿ ಆಚರಿಸಲು ನಾವು ಸಮ್ಮತಿಸಿದ್ದೇವೆ.

***

 


(रिलीज़ आईडी: 1871855) आगंतुक पटल : 185
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Punjabi , Gujarati , Odia , Tamil , Telugu , Malayalam