ಪ್ರಧಾನ ಮಂತ್ರಿಯವರ ಕಛೇರಿ
ಗುರು ಸಾಹೇಬರ ದೂರದೃಷ್ಟಿಯ ಚಿಂತನೆಯನ್ನು ಸಾಕಾರಗೊಳಿಸಲು ನಾವು ಸದಾ ಕಾರ್ಯನಿರತರಾಗಿರುತ್ತೇವೆ: ಪ್ರಧಾನಮಂತ್ರಿ
प्रविष्टि तिथि:
22 OCT 2022 5:37PM by PIB Bengaluru
ಹೇಮಕುಂಡ್ ಸಾಹಿಬ್ ರೋಪ್ ವೇ ಬಗ್ಗೆ ಸಂತೋಷದ ಮತ್ತು ದಯಾಪರ ಮಾತುಗಳನ್ನು ವ್ಯಕ್ತಪಡಿಸಿರುವ ಪ್ರಮುಖ ಆಧ್ಯಾತ್ಮಿಕ ವ್ಯಕ್ತಿಗಳು ಸೇರಿದಂತೆ ಸಿಖ್ ಸಮುದಾಯದ ಗೌರವಾನ್ವಿತ ಸದಸ್ಯರು, ಜಾತೇದಾರ್ ಶ್ರೀ ಅಕಾಲ್ ತಖ್ತ್ ಸಾಹಿಬ್ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಧನ್ಯವಾದ ಸಲ್ಲಿಸಿದ್ದಾರೆ. ಗುರು ಸಾಹೇಬರ ದೂರದೃಷ್ಟಿಯನ್ನು ಈಡೇರಿಸಲು ಸದಾ ಕೆಲಸ ಮಾಡುತ್ತಲೇ ಇರುವುದಾಗಿ ಅವರು ಸಿಖ್ ಸಮುದಾಯದ ಸಂಘವಾದ ಸಂಘತ್ ಗೆ ಭರವಸೆ ನೀಡಿದ್ದಾರೆ. ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ ಟ್ವೀಟ್ ನ್ನು ಲಗತ್ತಿಸಿ ಅದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನ ಮಂತ್ರಿ ಅವರು, "ಜಾತೇದಾರ್ ಶ್ರೀ ಅಕಾಲ್ ತಖ್ತ್ ಸಾಹಿಬ್, ಪ್ರಮುಖ ಆಧ್ಯಾತ್ಮಿಕ ವ್ಯಕ್ತಿಗಳು ಸೇರಿದಂತೆ ಸಿಖ್ ಸಮುದಾಯದ ಗೌರವಾನ್ವಿತ ಸದಸ್ಯರು ಹೇಮಕುಂಡ್ ಸಾಹಿಬ್ ರೋಪ್ ವೇ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಅವರ ದಯಾಪರ ಮಾತುಗಳಿಗಾಗಿ ನಾನು ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಮತ್ತು ಗುರು ಸಾಹೇಬರ ದೂರದೃಷ್ಟಿಯ ಚಿಂತನೆಯನ್ನು ಸಾಕಾರಗೊಳಿಸಲು ನಾವು ಸದಾ ಕೆಲಸ ಮಾಡುತ್ತಲೇ ಇರುತ್ತೇವೆ ಎಂದು ಸಂಘತ್ ಗೆ ಭರವಸೆ ನೀಡುತ್ತೇನೆ." ಎಂದು ಹೇಳಿದ್ದಾರೆ.
***
(रिलीज़ आईडी: 1870349)
आगंतुक पटल : 191
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam