ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
azadi ka amrit mahotsav

2023-24ರ ಮಾರುಕಟ್ಟೆ ಹಂಗಾಮಿನ ಎಲ್ಲಾ ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಸಭೆ ಅನುಮೋದನೆ


ಹೆರೆ ಬೀಜ(ರೇಪ್ ಸೀಡ್) ಮತ್ತು ಸಾಸಿವೆಗೆ 104% ಎಂಎಸ್ ಪಿ ಹೆಚ್ಚಳ

ಗೋಧಿಗೆ 100%, ಮಸೂರಕ್ಕೆ 85%, ಕಡಲೆಕಾಳಿಗೆ 66%, ಬಾರ್ಲಿ(ಜವೆಗೋಧಿ)ಗೆ 60% ಮತ್ತು ಕುಸುಬೆಗೆ 50% ಎಂಎಸ್ ಪಿ ಏರಿಕೆ

Posted On: 18 OCT 2022 1:34PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯು 2023-24ರ ಮಾರುಕಟ್ಟೆ ಹಂಗಾಮಿನ ಎಲ್ಲಾ ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು (ಎಂಎಸ್ಪಿ) ಹೆಚ್ಚಿಸುವ ಪ್ರಸ್ತಾವನೆಗೆ  ಅನುಮೋದನೆ ನೀಡಿದೆ.

ದೇಶದ ಕೃಷಿಕರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸಲು ಕೇಂದ್ರ ಸರ್ಕಾರ, 2023-24ರ ಮಾರುಕಟ್ಟೆ ಹಂಗಾಮಿನ ಎಲ್ಲಾ ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದೆ. ಮಸೂರ ಧಾನ್ಯಕ್ಕೆ ಗರಿಷ್ಠ ಬೆಲೆ ನೀಡಲಾಗಿದ್ದು, ಪ್ರತಿ ಕ್ವಿಂಟಾಲ್ ಮಸೂರಕ್ಕೆ 500 ರೂ. ಕನಿಷ್ಠ ಬೆಂಬಲ ನೀಡಲು ಅನುಮೋದನೆ ನೀಡಲಾಗಿದೆ. ನಂತರ ಪ್ರತಿ ಕ್ವಿಂಟಾಲ್ ಹೆರೆ ಬೀಜ(ರೇಪ್ ಸೀಡ್) ಮತ್ತು ಸಾಸಿವೆಗೆ ತಲಾ 400 ರೂ. ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. ಪ್ರತಿ ಕ್ವಿಂಟಾಲ್‌ ಕುಸುಬೆಗೆ 209 ರೂ. ಹೆಚ್ಚಳ, ಪ್ರತಿ ಕ್ವಿಂಟಾಲ್ ಗೋಧಿ, ಕಡಲೆಕಾಳು ಮತ್ತು ಬಾರ್ಲಿಗೆ ಕ್ರಮವಾಗಿ 110 ರೂ. ಎಂಸ್ ಪಿ ಹೆಚ್ಚಿಸಲು ಒಪ್ಪಿಗೆ ನೀಡಲಾಗಿದೆ. ಅನುಕ್ರಮವಾಗಿ ಪ್ರತಿ ಕ್ವಿಂಟಲ್‌ಗೆ 100 ರೂ.

2023-24ರ ಮಾರುಕಟ್ಟೆ ಹಂಗಾಮಿನ ಎಲ್ಲಾ ಹಿಂಗಾರು ಬೆಳೆಗಳಿಗೆ ಪ್ರಕಟಿಸಿರುವ ಕನಿಷ್ಠ ಬೆಂಬಲ ಬೆಲೆ ಇಂತಿದೆ.

2023-24    ಉತ್ಪಾದನಾ ವೆಚ್ಚ 2023-24    ಎಂಎಸ್ಪಿ ಹೆಚ್ಚಳ

  (ಪ್ರತಿ ಕ್ವಿಂಟಾಲ್ ಗೆ ರೂಪಾಯಿ)

ಕ್ರಮ ಸಂಖ್ಯೆ

ಬೆಳೆಗಳು

ಕನಿಷ್ಠ ಬೆಂಬಲ ಬೆಲೆ

2022-23

ಕನಿಷ್ಠ ಬೆಂಬಲ ಬೆಲೆ

2023-24

ಉತ್ಪಾದನಾ ವೆಚ್ಚ 2023-24

ಎಂಎಸ್ಪಿ ಹೆಚ್ಚಳ(ಸಂಪೂರ್ಣ)

ವೆಚ್ಚದ ಮೇಲೆ ಆದಾಯ(ಶೇಕಡಾವಾರು)

1

ಗೋಧಿ

2015

2125

1065

110

100

2

ಬಾರ್ಲಿ

1635

1735

1082

100

60

3

ಕಡಲೆಕಾಳು

5230

5335

3206

105

66

4

ಮಸೂರ

5500

6000

3239

500

85

5

ಹೆರೆಬೀಜ ಮತ್ತು ಸಾಸಿವೆ

5050

5450

2670

400

104

6

ಕುಸುಬೆ

5441

5650

3765

209

50

ಕೂಲಿ ಕಾರ್ಮಿಕರು, ಎತ್ತುಗಳನ್ನು ನಡೆಸುವ ಕಾರ್ಮಿಕರು, ಯಂತ್ರ ಕಾರ್ಮಿಕರು, ಗುತ್ತಿಗೆ ಭೂಮಿಗೆ ಪಾವತಿಸಿದ ಬಾಡಿಗೆ, ಬೀಜಗಳು, ರಸಗೊಬ್ಬರಗಳು, ಗೊಬ್ಬರಗಳು, ನೀರಾವರಿ ಶುಲ್ಕಗಳಂತಹ ಒಳಹರಿವಿನ ವೆಚ್ಚ, ಉಪಕರಣಗಳು ಮತ್ತು ಕೃಷಿ ಕಟ್ಟಡಗಳ ಮೇಲಿನ ಸವಕಳಿ, ದುಡಿಯುವ ಬಂಡವಾಳದ ಮೇಲಿನ ಬಡ್ಡಿ, ಪಂಪ್ ಸೆಟ್‌ಗಳ ಕಾರ್ಯಾಚರಣೆಗೆ ಡೀಸೆಲ್, ವಿದ್ಯುತ್ ಇತ್ಯಾದಿ. ವೆಚ್ಚಗಳು ಮತ್ತು ಕುಟುಂಬ ಸದಸ್ಯರ ಶ್ರಮದ ಮೌಲ್ಯಗಳನ್ನು ಸೇರಿಸಿ ಪಾವತಿಸಿದ ಎಲ್ಲಾ ಖರ್ಚುಗಳನ್ನು ಇಲ್ಲಿ ‘ವೆಚ್ಚ’ ಎಂದು ಪರಿಗಣಿಸಲಾಗಿದೆ ಅಥವಾ ಉಲ್ಲೇಖಿಸಲಾಗಿದೆ. 

2023-24ರ ಮಾರುಕಟ್ಟೆ ಹಂಗಾಮಿನ ಎಲ್ಲಾ ಹಿಂಗಾರು ಬೆಳೆಗಳಿಗೆ ಮಾಡಿರುವ ಎಂಎಸ್‌ಪಿ ಹೆಚ್ಚಳವು 2018-19ರ ಕೇಂದ್ರ ಬಜೆಟ್ ಘೋಷಣೆಗೆ ಅನುಗುಣವಾಗಿದೆ. ಅಖಿಲ ಭಾರತ ಮಟ್ಟದ ಸರಾಸರಿ ತೂಕದ ಉತ್ಪಾದನಾ ವೆಚ್ಚದ 1.5 ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಎಂಎಸ್‌ಪಿ ನಿಗದಿಪಡಿಸುವ ಬಜೆಟ್ ಘೋಷಣೆಗೆ ಅನುಗುಣವಾಗಿದೆ. ಇದು ರೈತರಿಗೆ ನ್ಯಾಯಯುತ ಸಂಭಾವನೆ ನೀಡುವ ಸಮಂಜಸ ಗುರಿ ಹೊಂದಿದೆ. ಹೆರೆ ಬೀಜ (ರೇಪ್ ಸೀಡ್) ಮತ್ತು ಸಾಸಿವೆಗೆ ಗರಿಷ್ಠ ಆದಾಯ ದರ 104%, ನಂತರ ಗೋಧಿಗೆ 100%, ಮಸೂರಕ್ಕೆ 85%, ಕಡಲೆಕಾಳಿಗೆ 66%, ಬಾರ್ಲಿಗೆ 60% ಮತ್ತು ಕುಸುಬೆಗೆ 50% ಎಂಎಸ್ ಪಿ ಏರಿಕೆ ಮಾಡಲಾಗಿದೆ.

2014-15ನೇ ಸಾಲಿನಿಂದ ದೇಶದಲ್ಲಿ ಎಣ್ಣೆಕಾಳು ಮತ್ತು ದ್ವಿದಳ ಧಾನ್ಯಗಳ ಉತ್ಪಾದನೆ ಹೆಚ್ಚಿಸುವತ್ತ ಗಮನ ಹರಿಸಲಾಗಿದೆ. ಸರ್ಕಾರದ ಪ್ರಯತ್ನಗಳು ಉತ್ತಮ ಫಲಿತಾಂಶ ನೀಡುತ್ತಿವೆ. ಎಣ್ಣೆಬೀಜಗಳ ಉತ್ಪಾದನೆಯು 2021-22ರಲ್ಲಿ ಇದ್ದ 27.51 ದಶಲಕ್ಷ ಟನ್‌ಗಳಿಂದ 2014-15ರಲ್ಲಿ 37.70 ದಶಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ (4ನೇ ಮುಂಗಡ ಅಂದಾಜುಗಳು). ಬೇಳೆಕಾಳುಗಳ ಉತ್ಪಾದನೆಯು ಇದೇ ರೀತಿ ಹೆಚ್ಚುತ್ತಿರುವ ಪ್ರವೃತ್ತಿ ತೋರಿಸಿದೆ. ಸೀಡ್ ಮಿನಿಕಿಟ್ಸ್ ಕಾರ್ಯಕ್ರಮವು ರೈತರ ಹೊಲಗಳಲ್ಲಿ ಹೊಸ ತಳಿಗಳ ಬೀಜಗಳನ್ನು ಪರಿಚಯಿಸುವ ಪ್ರಮುಖ ಸಾಧನವಾಗಿದೆ, ಬೀಜ ಬದಲಿ ದರವನ್ನು ಹೆಚ್ಚಿಸಲು ಇದು ಸಹಕಾರಿಯಾಗಿದೆ.

ದ್ವಿದಳ ಧಾನ್ಯಗಳು ಮತ್ತು ಎಣ್ಣೆಕಾಳುಗಳ ಉತ್ಪಾದಕತೆಯು 2014-15ರಿಂದ ಗಣನೀಯವಾಗಿ ಹೆಚ್ಚಳ ಕಂಡಿದೆ. ಬೇಳೆಕಾಳುಗಳ ಉತ್ಪಾದಕತೆಯನ್ನು 2021-22ರ 4ನೇ ಮುಂಗಡ ಅಂದಾಜುಗಳಂತೆ 728 ಕೆಜಿ/ಹೆಕ್ಟೇರ್ ನಿಂದ 2014-15ರಲ್ಲಿ 892 ಕೆಜಿ/ಹೆಕ್ಟೇರ್ ಗೆ ಹೆಚ್ಚಿಸಲಾಗಿದೆ. ಅಂದರೆ ಸರಾಸರಿ 22.53% ಹೆಚ್ಚಳವಾಗಿದೆ. ಅದೇ ರೀತಿ, ಎಣ್ಣೆಬೀಜ ಬೆಳೆಗಳ ಉತ್ಪಾದಕತೆಯನ್ನು 2021-22ರ 4ನೇ ಮುಂಗಡ ಅಂದಾಜುಗಳಂತೆ 1075 ಕೆಜಿ/ಹೆಕ್ಟೇರ್ ನಿಂದ 2014-15ರಲ್ಲಿ 1,292 ಕೆಜಿ/ಹೆಕ್ಟೇರ್ ಗೆ ಹೆಚ್ಚಿಸಲಾಗಿದೆ.

ಎಣ್ಣೆಕಾಳುಗಳು ಮತ್ತು ಬೇಳೆಕಾಳುಗಳ ಉತ್ಪಾದನೆ ಹೆಚ್ಚಿಸುವುದು ಮತ್ತು ಆ ಮೂಲಕ ಆತ್ಮನಿರ್ಭರ ಭಾರತ್‌ ನಿರ್ಮಿಸುವ ಉದ್ದೇಶವನ್ನು ಪೂರೈಸುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ. ಕೃಷಿ ಪ್ರದೇಶ ವಿಸ್ತರಣೆ, ಹೆಚ್ಚಿನ ಇಳುವರಿ ತಳಿಗಳ ಮೂಲಕ ಉತ್ಪಾದಕತೆ, ಎಂಎಸ್ ಪಿ ಬೆಂಬಲ ಮತ್ತು ಖರೀದಿ ಮೂಲಕ ಉತ್ಪಾದನೆ ಹೆಚ್ಚಿಸುವುದು ಸರ್ಕಾರದ ರೂಪಿತ ಕಾರ್ಯತಂತ್ರವಾಗಿದೆ.

ದೇಶದ ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆಯ ಬಳಕೆ ಮೂಲಕ ಸ್ಮಾರ್ಟ್ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವುದನ್ನು ಸರ್ಕಾರ ಉತ್ತೇಜಿಸುತ್ತಿದೆ. ಸರ್ಕಾರವು ಡಿಜಿಟಲ್ ಅಗ್ರಿಕಲ್ಚರ್ ಮಿಷನ್(ಡಿಎಎಂ) ಅನ್ನು ಅನುಷ್ಠಾನಗೊಳಿಸುತ್ತಿದೆ, ಇದರಲ್ಲಿ ಇಂಡಿಯಾ ಡಿಜಿಟಲ್ ಎಕೋಸಿಸ್ಟಮ್ ಆಫ್ ಅಗ್ರಿಕಲ್ಚರ್ (ಐಡಿಯಾ), ರೈತರ ಡೇಟಾಬೇಸ್, ಏಕೀಕೃತ ರೈತರ ಸೇವಾ ಇಂಟರ್ಫೇಸ್ (ಯುಎಫ್ಎಸ್ಐ), ಹೊಸ ತಂತ್ರಜ್ಞಾನ(ಎನ್ಇಜಿಪಿಎ)ದ ಮೇಲೆ ರಾಜ್ಯಗಳಿಗೆ ಧನಸಹಾಯ, ಮಹಲ್ನೋಬಿಸ್ ರಾಷ್ಟ್ರೀಯ ಬೆಳೆ ಮುನ್ಸೂಚನೆ ನವೀಕರಿಸುವುದು, ಮಣ್ಣಿನ ಆರೋಗ್ಯ, ಫಲವತ್ತತೆ ಮತ್ತು ಪ್ರೊಫೈಲ್ ಮ್ಯಾಪಿಂಗ್. ಎನ್ಇಜಿಪಿಎ  ತಂತ್ರಜ್ಞಾನ ಕಾರ್ಯಕ್ರಮದಡಿ, ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ, ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ), ಬ್ಲಾಕ್ ಚೈನ್ ಮುಂತಾದ ಉದಯೋನ್ಮುಖ ತಂತ್ರಜ್ಞಾನಗಳನ್ನು ಬಳಸಿಕೊಂಡು ಡಿಜಿಟಲ್ ಕೃಷಿ ಯೋಜನೆಗಳಿಗೆ ರಾಜ್ಯ ಸರ್ಕಾರಗಳಿಗೆ ಹಣ ನೀಡಲಾಗುತ್ತದೆ. ಡ್ರೋನ್ ತಂತ್ರಜ್ಞಾನಗಳ ಅಳವಡಿಕೆ ಮಾಡಲಾಗುತ್ತಿದೆ. ಸ್ಮಾರ್ಟ್ ಕೃಷಿ ಉತ್ತೇಜಿಸಲು ಕೇಂದ್ರ ಸರ್ಕಾರವು ಕೃಷಿ ವಲಯದ ಸ್ಟಾರ್ಟಪ್‌ಗಳನ್ನು ಉತ್ತೇಜಿಸುತ್ತದೆ ಮತ್ತು ಕೃಷಿ ಉದ್ಯಮಶೀಲರನ್ನು ಪೋಷಿಸುತ್ತಿದೆ.

*****


(Release ID: 1868882) Visitor Counter : 1108