ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

ಸಾರ್ವಜನಿಕ, ಖಾಸಗಿ ಸಹಭಾಗಿತ್ವದಡಿ ನಿರ್ಮಾಣ, ನಿರ್ವಹಣೆ ಮತ್ತು ವರ್ಗಾವಣೆ ಮಾದರಿಯಡಿ ಕಾಂಡ್ಲಾದ ಗಲ್ಫ್ ಆಫ್ ಕಚ್ ನಲ್ಲಿ ಬಹು ಉದ್ದೇಶದ ಸರಕುಗಳ [ಕಂಟೈನರ್/ಲಿಕ್ವಿಡ್ ಹೊರತುಪಡಿಸಿ] ಬರ್ತ್ ಆಫ್ ಟ್ಯೂನಾ ಟೆಕ್ರಾ ಅಭಿವೃದ್ಧಿಗೆ ಸಂಪುಟ ಅನುಮೋದನೆ

Posted On: 12 OCT 2022 4:17PM by PIB Bengaluru

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಸಭೆ ಕಾಂಡ್ಲಾದ ಗಲ್ಫ್ ಆಫ್ ಕಚ್ ನಲ್ಲಿ ಸಾರ್ವಜನಿಕ, ಖಾಸಗಿ ಸಹಭಾಗಿತ್ವ[ಪಿಪಿಪಿ]ದಡಿ ನಿರ್ಮಾಣ, ನಿರ್ವಹಣೆ ಮತ್ತು ವರ್ಗಾವಣೆ [ಬಿಒಟಿ] ಮಾದರಿಯಡಿ ಬಹು ಉದ್ದೇಶದ ಸರಕುಗಳ [ಕಂಟೈನರ್/ಲಿಕ್ವಿಡ್ ಹೊರತುಪಡಿಸಿ] ಬರ್ತ್ ಆಫ್ ಟ್ಯೂನಾ ಟೆಕ್ರಾ ಅಭಿವೃದ್ಧಿಗೆ ಅನುಮೋದನೆ ನೀಡಿದೆ.   

ಇದರ ಒಟ್ಟು ಅಂದಾಜು ವೆಚ್ಚ 2,250.64 ಕೋಟಿ ರೂ [ಒಟ್ಟು ವೆಚ್ಚ 1719.22 ಕೋಟಿ ರೂ ವೆಚ್ಚವನ್ನು ಬಹು ಉದ್ದೇಶದ ಸರಕು ಸಾಗಾಣೆ ಬರ್ತ್ ಅಭಿವೃದ್ಧಿಗಾಗಿ ಕನ್ಸೇಷನರ್ ಗಳಿಂದ ಭರಿಸಲಾಗುವುದು [ಬರ್ತ್, ತಿರುವು ವೃತ್ತಗಳು, ತಲುಪುವ ಮಾರ್ಗಗಳ ಜೊತೆಗೆ ಡ್ರೆಜ್ಜಿಂಗ್ ಕೆಲಸಗಳು ಮತ್ತು ಸಾಮಾನ್ಯ ಬಳಕೆದಾರರ ಪ್ರವೇಶ ಮಾರ್ಗ, ಹೂಳೆತ್ತುವಿಕೆ ಮತ್ತು ಸಾಮಾನ್ಯ ಬಳಕೆದಾರರಿಗೆ ರಸ್ತೆ ನಿರ್ಮಿಸಲು 531.42 ಕೋಟಿ ರೂ ಮೊತ್ತವನ್ನು ಕನ್ಷೇಷನಿಂಗ್ ಪ್ರಾಧಿಕಾರ [ದೀನ್ ದಯಾಳ್ ಬಂದರು ಪ್ರಾಧಿಕಾರ] ಭರಿಸುತ್ತದೆ].

ಇದು ವಿವಿಧ ಉದ್ದೇಶದ ಸರಕುಗಳ [ಕಂಟೈನರ್/ಲಿಕ್ವಿಡ್ ಹೊರತುಪಡಿಸಿ] ಯೋಜನೆಯ ಕಾರ್ಯಾರಂಭದ ಮೇಲೆ ಭವಿಷ್ಯದ ದಟ್ಟಣೆಯ ಬೆಳವಣಿಗೆಯನ್ನು  ಪೂರೈಸುತ್ತದೆ. 2026 ರ ವೇಳೆಗೆ ಯೋಜನೆಯ ದಟ್ಟಣೆಯನ್ನು 2.85 ಎಂಎಂಟಿಪಿಎ ನಷ್ಟು ತಗ್ಗಿಸುವ ಮತ್ತು 2030 ರ ವೇಳೆಗೆ 27.49 ಎಂಎಂಟಿಪಿಎ ನಷ್ಟು ಗುರಿ ಸಾಧಿಸುವ ಯೋಜನೆ ಇದಾಗಿದೆ.   

ಬಹು ಉದ್ದೇಶದ ಸರಕುಗಳ ಅಭಿವೃದ್ದಿ [ಕಂಟೈನರ್/ಲಿಕ್ವಿಡ್ ಹೊರತುಪಡಿಸಿ] ಬರ್ತ್ ಆಫ್ ಟ್ಯೂನ್ ಟೆಕ್ರಾ ನಿರ್ಮಾಣದಿಂದ ಕಾಂಡ್ಲಾದ ಗಲ್ಫ್ ಆಫ್ ಕಚ್ ನಲ್ಲಿ ಇದು ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ಉತ್ತರ ಭಾರತದ [ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು] ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ ರಾಜ್ಯಗಳ ವಿಶಾಲ ಒಳನಾಡಿನಲ್ಲಿ ಸೇವೆ ಸಲ್ಲಿಸುವ ಪ್ರದೇಶಗಳ ಸಮೀಪದಲ್ಲಿ ಕಂಟೇನರ್ ನಿಲುಗಡೆ ಸೌಲಭ್ಯ ಕಲ್ಪಿಸುತ್ತದೆ. ಕಾಂಡ್ಲಾದಲ್ಲಿ ವ್ಯವಹಾರದ ಸಾಧ್ಯತೆಯನ್ನು ಹೆಚ್ಚಿಸುವ ಉದ್ದೇಶವನ್ನು ಇದು ಹೊಂದಿದ್ದು, ಇದರಿಂದ ಉದ್ಯೋಗ ಸೃಜನೆ ಮತ್ತು ಆರ್ಥಿಕ ಬೆಳವಣಿಗೆಗೆ ಪುಷ್ಟಿ ನೀಡಲು ಸಹಕಾರಿಯಾಗಲಿದೆ.  

ನಿರ್ಮಾಣ, ನಿರ್ವಹಣೆ ಮತ್ತು ಹಸ್ತಾಂತರ – ಬಿಒಟಿ ಆಧಾರದ ಮೇಲೆ ಆಯ್ದ ಸಂಸ್ಥೆಗಳು ಈ ಯೋಜನೆಯನ್ನು ಅಭಿವೃದ್ಧಿಪಡಿಸಲಿವೆ. ಆದಾಗ್ಯೂ ದೀನ್ ದಯಾಳ್ ಬಂದರು ಪ್ರಾಧಿಕಾರ ಸಾಮಾನ್ಯ ಬಳಕೆದಾರರ ಸೌಲಭ್ಯಗಳನ್ನು ನಿರ್ಮಾಣ ಮಾಡಲಿದೆ

ವಿವರಗಳು:  

     i.         ಖಾಸಗಿ ಅಭಿವೃದ್ಧಿದಾರರು ಬಿಒಟಿ ಆಧಾರದ ಮೇಲೆ ಯೋಜನೆಯನ್ನು ಅಭಿವೃದ್ಧಿಪಡಿಸಲಿದ್ದಾರೆ/ನಿರ್ಮಾಣ, ಕಾರ್ಯಾಚರಣೆ ಮತ್ತು ಹಸ್ತಾಂತರ [ಬಿಒಟಿ] ವಿಧಾನದಡಿ ಅಂತರರಾಷ್ಟ್ರೀಯ ಸ್ಪರ್ಧಾತ್ಮಕ ಬಿಡ್ ದಾರರನ್ನು ಸ್ಪರ್ಧಾತ್ಮಕ ಪ್ರಕ್ರಿಯೆಯಡಿ ಆಯ್ಕೆ ಮಾಡಲಾಗುತ್ತದೆ. ವಿನ್ಯಾಸ, ತಾಂತ್ರಿಕತೆ, ಹಣಕಾಸು, ಸಂಗ್ರಹಣೆ, ಅನುಷ್ಠಾನಕ್ಕೆ ಸಿದ್ಧಪಡಿಸುವ, ಕಾರ್ಯಾಚರಣೆ, ನಿರ್ವಹಣೆ ಮತ್ತು ಆಡಳಿತದ ಜವಾಬ್ದಾರಿ ವಲಯಗಳು ಸಂಬಂಧಪಟ್ಟ ಸಂಸ್ಥೆಗಳಿಗೆ ಸೇರಿರುತ್ತದೆ. ರಿಯಾಯಿತಿ ಒಪ್ಪಂದದಡಿ [ಖಾಸಗಿ ಅಭಿವೃದ್ಧಿದಾರರು/ಬಿಒಟಿ ಆಪರೇಟರ್] ಮತ್ತು ಕನ್ಷೇಷನಿಂಗ್ ಪ್ರಾಧಿಕಾರ [ದೀನ್ ದಯಾಳ್ ಬಂದರು ಪ್ರಾಧಿಕಾರ] 30 ವರ್ಷಗಳ ಅವಧಿಗೆ ನಿಗದಿಪಡಿಸಿದ ಅವಧಿಯಲ್ಲಿ ಸರಕುಗಳನ್ನು ನಿರ್ವಹಿಸಲಿದೆ. ಕನ್ಸೇಷನಿಂಗ್ ಪ್ರಾಧಿಕಾರ ಸಾಮಾನ್ಯ ಬೆಂಬಲಿತ ಮೂಲ ಸೌಕರ್ಯಗಳನ್ನು ನಿರ್ಮಿಸುವ ಜವಾಬ್ದಾರಿ ಹೊಂದಿರಲಿದ್ದು, ಅವುಗಳೆಂದರೆ ಸಾಮಾನ್ಯ ಪ್ರವೇಶ ಮಾರ್ಗ ಮತ್ತು ಸಾಮಾನ್ಯ ಬಳಕೆದಾರರ ರಸ್ತೆಗಳು ಸಹ ಸೇರಿವೆ.    

    ii.         ಯೋಜನೆಯು 1,719.22 ಕೋಟಿ ರೂ ವೆಚ್ಚದಲ್ಲಿ ನಾಲ್ಕು ಹಡಗುಗಳನ್ನು ಏಕಕಾಲದಲ್ಲಿ ನಿರ್ವಹಿಸಲು ಅಗತ್ಯವಾಗುವ ಆಫ್ ಶೋರ್ ಬರ್ತಿಂಗ್ ರಚನೆಯ ನಿರ್ಮಾಣವನ್ನು ಇದು ಒಳಗೊಂಡಿದೆ ಮತ್ತು ವಾರ್ಷಿಕ 18.33 ದಶಲಕ್ಷ ಟನ್ ಗಳ ನಿರ್ವಹಣೆ ಸಾಮರ್ಥ್ಯ ವೃದ್ಧಿಸಲಿದೆ.

  iii.         ಆರಂಭದಲ್ಲಿ ಯೋಜನೆ 1,00,000 ಡೆಡ್ ವೇಟ್ ಟನ್ ಗಳ [ಡಿಡಬ್ಲ್ಯೂಟಿ] 15 ಎಂ ಡ್ರಾಫ್ಟ್ ಹಡಗುಗಳನ್ನು ಪೂರೈಸುತ್ತದೆ ಮತ್ತು ಅದರ ಪ್ರಕಾರ 15 ಎಂ ಡ್ರಾಫ್ಟ್ ನೊಂದಿಗೆ ಕನ್ಸೇಷನಿಂಗ್ ಪ್ರಾಧಿಕಾರದಿಂದ ಮಾರ್ಗವನ್ನು ಡ್ರೆಡ್ಜ್ ಮತ್ತು ನಿರ್ವಹಣೆ ಮಾಡಲಾಗುತ್ತದೆ. ರಿಯಾಯಿತಿ ಅವಧಿಯಲ್ಲಿ ಕನ್ಸೇಷನಿಂಗ್ ಬರ್ತ್ ಪ್ರದೇಶಗಳು ಮತ್ತು ತಿರುವು ವೃತ್ತಗಳಲ್ಲಿ ಆಳ ಮತ್ತು ಅಗಲಗೊಳಿಸುವ ಮೂಲಕ 18 ಮೀಟರ್ ಡ್ರಾಪ್ಟ್ ವರೆಗಿನ ಹಡಗುಗಳನ್ನು ನಿರ್ವಹಿಸಲು ಸ್ವಾತಂತ್ರ್ಯ ಹೊಂದಿವೆ ಮತ್ತು ಅದರ ಪ್ರಕಾರ ವೆಚ್ಚ, ಹಂಚಿಕೆಯ ಮೇಲಿನ ಕನ್ಸೇಷನಿಂಗ್ ಪ್ರಾಧಿಕಾರ ಮತ್ತು ಕನ್ಸೇಷನರ್ ನಡುವೆ ಪರಸ್ಪರ ಕರಡು ಒಪ್ಪಂದದ ಆಧಾರದ ಮೇಲೆ ಪ್ರವೇಶ ಮಾರ್ಗವನ್ನು ಹೆಚ್ಚಿಸಬಹುದು ಹಾಗೂ ಇದು ವೆಚ್ಚ ಹಂಚಿಕೆ ಕಾರ್ಯವಿಧಾನಗಳಿಗೆ ಒಳಪಟ್ಟಿರುತ್ತವೆ. ಹೆಚ್ಚಿನ ಏರಿಳಿತದ ಸರಾಸರಿಗೆ ಅನುಗುಣವಾಗಿ ಕನ್ಸೇಷನಿಂಗ್ ವಲಯಕ್ಕೆ ಲಭ್ಯವಾಗುವಂತೆ ಹೆಚ್ಚಳ ಮಾಡಲು ಕರಡು ಪ್ರತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಹಿನ್ನೆಲೆ

ದೀನ್ ದಯಾಳ್ ಬಂದರು ಭಾರತದ ಪ್ರಮುಖ 12 ಬಂದರುಗಳಲ್ಲಿ ಒಂದಾಗಿದೆ ಹಾಗೂ ಇದು ಗುಜರಾತ್ ನ ಕಚ್ ವಲಯದ ಪಶ್ಚಿಮ ಕರಾವಳಿಯಲ್ಲಿದೆ. ಇದು ಪ್ರಾಥಮಿಕವಾಗಿ ಜಮ್ಮು – ಕಾಶ್ಮೀರ, ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳನ್ನು ಒಳಗೊಂಡಂತೆ ಉತ್ತರ ಭಾರತಕ್ಕೆ ಸೇವೆ ಸಲ್ಲಿಸುತ್ತದೆ.  

******
 



(Release ID: 1867294) Visitor Counter : 112