ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ [ಎಂ.ಡಬ್ಲ್ಯೂ.ಸಿ.ಡಿ] ದಿಂದ ಸಾಂಪ್ರದಾಯಿಕವಲ್ಲದ ವಲಯದಲ್ಲಿ ಹೆಣ್ಣು ಮಕ್ಕಳಿಗೆ ಜೀವನೋಪಾಯದಲ್ಲಿ ಕೌಶಲ್ಯ ಕುರಿತ “ಭೇಟಿಯಾ ಬನೆ ಕೌಶಲ್” ಎಂಬ ರಾಷ್ಟ್ರೀಯ ಸಮ್ಮೇಳನ ಆಯೋಜನೆ


ಕೌಶಲ್ಯಕ್ಕೆ ಒತ್ತು ನೀಡುವ ಸಮ್ಮೇಳನಗಳು, ನವ ಯುಗದ ಕೌಶಲ್ಯಗಳು ಮತ್ತು ಹೆಣ್ಣು ಮಕ್ಕಳಿಗೆ ಸಾಂಪ್ರದಾಯಿವಲ್ಲದ ವಲಯದಲ್ಲಿ ಜೀವನೋಪಾಯಕ್ಕೆ ಇದು ಒತ್ತು ನೀಡಲಿದೆ

ಕೆಲಸದಲ್ಲಿ ತೊಡಗಿಕೊಳ್ಳಲು ಮತ್ತು ಯುವತಿಯರಿಗೆ ಕೌಶಲ್ಯದ ಮೂಲಕ ತರಬೇತಿ ನೀಡಿ ಸಬಲೀಕರಣಗೊಳಿಸುವ ಸಂಬಂಧ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದಿಂದ ಎಂಒಯುಗೆ ಸಹಿ  

“ಭೇಟಿಯಾ ಬನೆ ಕೌಶಲ್” ಕಾರ್ಯಕ್ರಮ ರಾಷ್ಟ್ರವ್ಯಾಪಿ ವೀಕ್ಷಣೆಗಾಗಿ ಲೈವ್ ಸ್ಟ್ರೀಮ್ ಮಾಡಲಾಗುತ್ತಿದೆ

ಕೇಂದ್ರ ಡಬ್ಲ್ಯೂಸಿಡಿ ಸಚಿವರು ಮತ್ತು ಭಾರತದಾದ್ಯಂತ ಎನ್.ಟಿ.ಎಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹದಿಹರೆಯದ ಬಾಲಕಿಯರ ಗುಂಪಿನ ನಡುವೆ ಸಂವಾದ

ಪ್ರಾರಂಭವಾಗಲಿರುವ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ/ಜಿಲ್ಲೆಗಳಲ್ಲಿ ಮಾರ್ಗದರ್ಶನಕ್ಕಾಗಿ ಬಿಬಿಬಿಪಿ ಕಾರ್ಯಾಚರಣೆ ಕೈಪಿಡಿ ಹೊರ ತರಲು ಕ್ರಮ

Posted On: 10 OCT 2022 10:54AM by PIB Bengaluru

2022 ರ ಅಕ್ಟೋಬರ್ 11 ರ ಅಂತರರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ‘ಬೇಟಿ ಬಚಾವೋ ಬೇಟಿ ಪಢಾವೋ’ ಕಾರ್ಯಕ್ರಮದಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ [ಎಂ.ಡಬ್ಲ್ಯೂ.ಸಿ.ಡಿ] ದಿಂದ ಸಾಂಪ್ರದಾಯಿಕವಲ್ಲದ ವಲಯದಲ್ಲಿ ಹೆಣ್ಣು ಮಕ್ಕಳಿಗೆ ಜೀವನೋಪಾಯದಲ್ಲಿ ಕೌಶಲ್ಯ ಕುರಿತ “ಭೇಟಿಯಾ ಬನೆ ಕೌಶಲ್” ಎಂಬ ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ. ಚಾರಿತ್ರಿಕವಾಗಿ ಬಾಲಕಿಯರು ಕಡಿಮೆ ಪ್ರಾತಿನಿಧ್ಯ ಹೊಂದಿರುವ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ [ಎಸ್.ಟಿ.ಇ.ಎಂ] ವಲಯಗಳು ಸೇರಿದಂತೆ ವಿವಿಧ ವೃತ್ತಿಗಳಲ್ಲಿ ಕೌಶಲ್ಯ ಹೊಂದಲು, ಉದ್ಯೋಗ ಕ್ಷೇತ್ರವನ್ನು ಪ್ರವೇಶಿಸಲು ಸಚಿವಾಲಯಗಳು ಮತ್ತು ಇಲಾಖೆಗಳ ನಡುವೆ  ಬಾಂಧವ್ಯ ಮೂಡಿಸುವುದು ಸಮ್ಮೇಳನದ ಉದ್ದೇಶವಾಗಿದೆ.

ಕೆಲಸದಲ್ಲಿ ತೊಡಗಿಕೊಳ್ಳಲು ಮತ್ತು ಯುವತಿಯರಿಗೆ ಕೌಶಲ್ಯದ ಮೂಲಕ ತರಬೇತಿ ನೀಡಿ ಸಬಲೀಕರಣಗೊಳಿಸುವ ಸಂಬಂಧ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯ ಹಾಗೂ ಅಲ್ಪ ಸಂಖ್ಯಾತರ ವ್ಯವಹಾರಗಳ ಸಚಿವಾಲಯದಿಂದ ಎಂಒಯುಗೆ ಸಮ್ಮೇಳನದಲ್ಲಿ ಸಹಿ ಹಾಕಲಾಗುತ್ತದೆ. ಮಿಷನ್ ಶಕ್ತಿ ಮಾರ್ಗಸೂಚಿ ಪ್ರಕಾರ ಮಾಡಿದ ಬದಲಾವಣೆಗಳ ಅನುಷ್ಠಾನಗೊಳಿಸಲು ಪ್ರಾರಂಭವಾಗಲಿರುವ ಯೋಜನೆಯ ಅನುಷ್ಠಾನಕ್ಕಾಗಿ ರಾಜ್ಯ/ಜಿಲ್ಲೆಗಳಲ್ಲಿ ಮಾರ್ಗದರ್ಶನಕ್ಕಾಗಿ ಬಿಬಿಬಿಪಿ ಕಾರ್ಯಾಚರಣೆ ಕೈಪಿಡಿಯನ್ನು ಇದೇ ಸಂದರ್ಭದಲ್ಲಿ ಹೊರತರಲಾಗುತ್ತಿದೆ.

“ಭೇಟಿಯಾ ಬನೆ ಕೌಶಲ್” ಕಾರ್ಯಕ್ರಮ ರಾಷ್ಟ್ರವ್ಯಾಪಿ ವೀಕ್ಷಿಸಲು ಲೈವ್ ಸ್ಟ್ರೀಮ್ ಮಾಡಲಾಗುತ್ತದೆ http://(www.youtube.com/c/MinistryofWomenChildDevelopmentGovtofIndia) ಈ ಕಾರ್ಯಕ್ರಮದಲ್ಲಿ ಎಂಡಬ್ಲ್ಯೂಸಿಡಿ, ಎಂ.ಎಸ್.ಡಿ.ಇ, ಕ್ರೀಡಾ ಇಲಾಖೆ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ, ಶಿಕ್ಷಣ ಸಚಿವಾಲಯ, ಮಕ್ಕಳ ಹಕ್ಕುಗಳ ರಾಷ್ಟ್ರೀಯ ರಕ್ಷಣಾ ಮಂಡಳಿಯಂತಹ ಶಾಸನಾತ್ಮಕ ಸಂಸ್ಥೆಗಳು ಮತ್ತು ಭಾರತದಾದ್ಯಂತ ಯುವತಿಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. 

ಈ ಕಾರ್ಯಕ್ರಮದ ಇತರ ಪ್ರಮುಖ ಅಂಶಗಳು ಸೇರಿವೆ:
· ಕೇಂದ್ರ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ ಮತ್ತು ಭಾರತದಾದ್ಯಂತ ಎನ್.ಟಿ.ಎಲ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹದಿಹರೆಯದ ಬಾಲಕಿಯರ ಗುಂಪಿನ ನಡುವೆ ಸಂವಾದ ನಡೆಯಲಿದೆ.
·   ಬಿಬಿಬಿಪಿ ಕಾರ್ಯಾಚರಣೆ ಕುರಿತ ಮಾರ್ಗಸೂಚಿ ಕೈಪಿಡಿ ಮತ್ತು ಇತರೆ ವಿವರಗಳ ಬಿಡುಗಡೆ
·   ಜೀವನ ಮತ್ತು ಉದ್ಯೋಗ ಕೌಶಲ್ಯಗಳು, ಉದ್ಯಮಶೀಲತೆ ಕೌಶಲ್ಯಗಳು, ಡಿಜಿಟಲ್ ಸಾಕ್ಷರತೆ ಮತ್ತು ಆರ್ಥಿಕ ಸಾಕ್ಷರತೆ ಕೌಶಲ್ಯಗಳ ಮೇಲೆ ಕೇಂದ್ರೀಕರಿಸಿರುವ 21 ನೇ ಶತಮಾನದ ಕೌಶಲ್ಯಗಳ ಮೇಲೆ ಎಂ.ಒ.ಎಸ್.ಡಿ.ಇ ಮತ್ತು ಎಂ.ಒ.ಎಂ.ಎ ಜೊತೆಗಿನ ಬದ್ಧತೆಯನ್ನು ಸಮ್ಮೇಳನ ಅನಾವರಣಗೊಳಿಸಲಿದೆ.
·    ಆಯ್ದ ಜಿಲ್ಲೆಗಳಲ್ಲಿ ತಳಮಟ್ಟದ ಕೌಶಲ್ಯದ ಉತ್ತಮ ಅಭ್ಯಾಸಗಳ ಪ್ರದರ್ಶನ
·   ಉದ್ಯಮ, ಎನ್.ಜಿ.ಒಗಳು ಮತ್ತು ಸಿಎಸ್ಒಗಳಿಂದ ಎನ್.ಟಿ.ಎಲ್ ನಲ್ಲಿ ಯುವತಿಯರು ಮತ್ತು ಮಹಿಳೆಯರ ಸುಸ್ಥಿರ ಸೇರ್ಪಡೆ ಕುರಿತು ಉದಾಹರಣೆಗಳೊಂದಿಗೆ ಪ್ರಕರಣಗಳ ಅಧ್ಯಯನ

******



(Release ID: 1866505) Visitor Counter : 199