ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹಿಮಕುಸಿತದಿಂದ ನಿಮ್ ಉತ್ತರಕಾಶಿಯಲ್ಲಿ ಪರ್ವತಾರೋಹಣ ಯಾತ್ರೆ ಸಂದರ್ಭದಲ್ಲಿ ಆದ ಜೀವಹಾನಿಗೆ ಪ್ರಧಾನಿ ಸಂತಾಪ 

प्रविष्टि तिथि: 04 OCT 2022 9:54PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹಿಮಕುಸಿತದಿಂದ ನಿಮ್ ಉತ್ತರಕಾಶಿಯಲ್ಲಿ ಪರ್ವತಾರೋಹಣ ಯಾತ್ರೆ ಸಂದರ್ಭದಲ್ಲಿ ಆದ ಜೀವಹಾನಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ರಕ್ಷಣಾ ಕಾರ್ಯಗಳು ಪ್ರಗತಿಯಲ್ಲಿವೆ ಮತ್ತು ಅಧಿಕಾರಿಗಳು ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಿಸಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ಪ್ರಧಾನಮಂತ್ರಿಗಳ ಕಾರ್ಯಾಲಯದ ಟ್ವೀಟ್ ನಲ್ಲಿ ಹೀಗೆ ತಿಳಿಸಿದೆ.

“ನಿಮ್ ಉತ್ತರಕಾಶಿ ಪರ್ವತಾರೋಹಣ ಯಾತ್ರೆಗೆ ಸಂಬಂಧಿಸಿದವರ ಅಮೂಲ್ಯ ಜೀವಹಾನಿ ಆಗಿರುವುದಕ್ಕೆ ದುಃಖವಾಗುತ್ತಿದೆ. ಮೃತರ ಕುಟುಂಬಗಳಿಗೆ ಸಾಂತ್ವನಗಳು. ರಕ್ಷಣಾ ಕಾರ್ಯ ಪ್ರಗತಿಯಲ್ಲಿವೆ ಮತ್ತು ಪರಿಸ್ಥಿತಿಯ ಮೇಲೆ ಅಧಿಕಾರಿಗಳು ತೀವ್ರ ನಿಗಾ ಇರಿಸಿದ್ದಾರೆ’’ 

 

*******


(रिलीज़ आईडी: 1865386) आगंतुक पटल : 243
इस विज्ञप्ति को इन भाषाओं में पढ़ें: Assamese , English , Urdu , Marathi , हिन्दी , Manipuri , Bengali , Punjabi , Gujarati , Odia , Tamil , Telugu , Malayalam