ಪ್ರಧಾನ ಮಂತ್ರಿಯವರ ಕಛೇರಿ
ಮಹಾ ಅಷ್ಟಮಿಯಂದು ಜನತೆಗೆ ಶುಭ ಕೋರಿದ ಪ್ರಧಾನಿ
ಪ್ರಕಟಣಾ ದಿನಾಂಕ:
03 OCT 2022 8:52AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾ ಅಷ್ಟಮಿಯ ಶುಭ ಸಂದರ್ಭದಲ್ಲಿ ಎಲ್ಲರಿಗೂ ಶುಭಾಶಯ ಕೋರಿದ್ದಾರೆ. ತಾಯಿ ಮಹಾಗೌರಿಯ ಆಶೀರ್ವಾದವು ಪ್ರತಿಯೊಬ್ಬರ ಜೀವನದಲ್ಲಿ ಅದೃಷ್ಟ, ಸಮೃದ್ಧಿ ಮತ್ತು ಯಶಸ್ಸನ್ನು ತರಲಿ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ಶ್ರೀ ಮೋದಿ ಅವರು ಮಹಾಗೌರಿಯ ಪ್ರಾರ್ಥನೆಯ ಸ್ತೋತ್ರವನ್ನು ಹಂಚಿಕೊಂಡಿದ್ದಾರೆ.
"ವಂದೇ ವಾಂಚಿತ್ಕಾಮರ್ಥಂ ಚಂದ್ರಾಕೃತಶೇಖರಮ್।
ಸಿಂಹಾರೂಢ ಚತುರ್ಭುಜ ಮಹಾಗೌರೀ ಯಶಸ್ವಿನೀಮ್॥“
ಎಲ್ಲರಿಗೂ ಮಹಾ ಅಷ್ಟಮಿಯ ಶುಭಾಶಯಗಳು. ತಾಯಿ ಮಹಾಗೌರಿಯು ಪ್ರತಿಯೊಬ್ಬರ ಜೀವನದಲ್ಲಿ ಅದೃಷ್ಟ, ಸಮೃದ್ಧಿ ಮತ್ತು ಯಶಸ್ಸನ್ನು ತರಲಿ. ತಾಯಿಯ ಭಕ್ತರಿಗೆ ಅವರ ಈ ಸ್ತುತಿ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
****
(ಪ್ರಕಟಣೆ ಐ.ಡಿ.: 1864741)
ವಿಸಿಟರ್ ಕೌಂಟರ್ : 204
ಪ್ರಕಟಣೆಯನ್ನು ಇದರಲ್ಲಿ ಓದಿ:
Tamil
,
English
,
Urdu
,
Marathi
,
हिन्दी
,
Manipuri
,
Assamese
,
Bengali
,
Punjabi
,
Gujarati
,
Odia
,
Telugu
,
Malayalam