ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

‘ಪ್ರಧಾನಮಂತ್ರಿಯವರ ಸ್ಮರಣಿಕೆಗಳ ಹರಾಜಿʼಗೆ ದೊರತ ಉತ್ಸಾಹಕ್ಕೆ ಪ್ರಧಾನಮಂತ್ರಿಯವರ ಮೆಚ್ಚುಗೆ

प्रविष्टि तिथि: 28 SEP 2022 5:40PM by PIB Bengaluru

ಪ್ರಧಾನಮಂತ್ರಿ ಸ್ಮರಣಿಕೆಗಳ ಹರಾಜಿನಲ್ಲಿ ಭಾಗವಹಿಸುವವರ  ಉತ್ಸಾಹಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಹರಾಜಾಗುತ್ತಿರುವ ಉಡುಗೊರೆಗಳನ್ನು ವೀಕ್ಷಿಸಲು ಮತ್ತು ಕುಟುಂಬ ಮತ್ತು ಸ್ನೇಹಿತರಿಗೆ  ಉಡುಗೊರೆಯಾಗಿ ನೀಡುವಂತೆ ಅವರು ಎಲ್ಲರಿಗೂ, ವಿಶೇಷವಾಗಿ ಯುವಕರಿಗೆ ಒತ್ತಾಯಿಸಿದರು.

ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:

"ಕಳೆದ ಕೆಲವು ದಿನಗಳಿಂದ ಪ್ರಧಾನಮಂತ್ರಿ ಸ್ಮರಣಿಕೆಗಳ ಹರಾಜಿನ ಬಗ್ಗೆ ಇರುವ ಉತ್ಸಾಹದಿಂದ ನಾನು ಸಂತೋಷಗೊಂಡಿದ್ದೇನೆ. ಪುಸ್ತಕಗಳಿಂದ ಹಿಡಿದು ಕಲಾಕೃತಿಗಳು, ಕಪ್‌ಗಳು ಮತ್ತು ಪಿಂಗಾಣಿಗಳಿಂದ ಹಿತ್ತಾಳೆಯ ಉತ್ಪನ್ನಗಳವರೆಗೆ ಹರಾಜಿನಲ್ಲಿವೆ.  ಇವುಗಳು  ನಾನು ವರ್ಷಗಳಲ್ಲಿ ಸ್ವೀಕರಿಸಿದ ಉಡುಗೊರೆಗಳ ಸಂಪೂರ್ಣ ಶ್ರೇಣಿಯಾಗಿದೆ. https://pmmementos.gov.in/#/ 

“ಪ್ರಧಾನಿ ಸ್ಮರಣಿಕೆಗಳ ಹರಾಜಿನಿಂದ ಬರುವ ಆದಾಯವು ನಮಾಮಿ ಗಂಗೆ ಉಪಕ್ರಮಕ್ಕೆ ಹೋಗುತ್ತದೆ. ಹರಾಜಾಗುತ್ತಿರುವ ಉಡುಗೊರೆಗಳನ್ನು ನೋಡಲು ಮತ್ತು ನಿಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಉಡುಗೊರೆಯಾಗಿ ನೀಡುವಂತೆ ನಾನು ನಿಮ್ಮೆಲ್ಲರನ್ನು, ವಿಶೇಷವಾಗಿ ಯುವಕರನ್ನು ಒತ್ತಾಯಿಸುತ್ತೇನೆ!

***

 

 


(रिलीज़ आईडी: 1863726) आगंतुक पटल : 175
इस विज्ञप्ति को इन भाषाओं में पढ़ें: Manipuri , Odia , Telugu , English , Urdu , Marathi , हिन्दी , Bengali , Assamese , Punjabi , Gujarati , Tamil , Malayalam