ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಪಾನ್ ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಅಂತ್ಯಕ್ರಿಯೆಯ ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ

Posted On: 27 SEP 2022 4:34PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟೋಕಿಯೋದ ನಿಪ್ಪಾನ್ ಬುಡೋಕನ್ ನಲ್ಲಿ ಜಪಾನಿನ ಮಾಜಿ ಪ್ರಧಾನಮಂತ್ರಿ ಶಿಂಜೊ ಅಬೆ ಅವರ ಅಂತ್ಯಕ್ರಿಯೆಯ ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. 20 ಕ್ಕೂ ಹೆಚ್ಚು ಸರ್ಕಾರಗಳ  ಮುಖ್ಯಸ್ಥರು ಸೇರಿದಂತೆ 100 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಈ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

ಭಾರತ-ಜಪಾನ್ ಪಾಲುದಾರಿಕೆಯ ಬಹಳ ದೊಡ್ಡ  ಪ್ರತಿಪಾದಕರಾಗಿದ್ದ  ಮತ್ತು ಆತ್ಮೀಯ ಸ್ನೇಹಿತ ಎಂದು ಪರಿಗಣಿಸಿದ್ದ ಮಾಜಿ ಪ್ರಧಾನಿ ಅಬೆ ಅವರನ್ನು  ಪ್ರಧಾನಮಂತ್ರಿಯವರು ಸ್ಮರಿಸಿಕೊಂಡು ಗೌರವ ಸಲ್ಲಿಸಿದರು.

ಅಂತ್ಯಸಂಸ್ಕಾರದ ಸರಕಾರೀ ಕಾರ್ಯಕ್ರಮದ  ನಂತರ, ಪ್ರಧಾನಮಂತ್ರಿಯವರು ದಿವಂಗತ ಪ್ರಧಾನ ಮಂತ್ರಿ  ಅಬೆ ಅವರ ಪತ್ನಿ ಶ್ರೀಮತಿ ಅಕಿ ಅಬೆ ಅವರೊಂದಿಗೆ ಆಕಾಶಕಾ ಅರಮನೆಯಲ್ಲಿ ಖಾಸಗಿ ಸಭೆ ನಡೆಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀಮತಿ ಅಬೆ ಅವರಿಗೆ ತಮ್ಮ ಹೃದಯಸ್ಪರ್ಶೀ ಸಂತಾಪವನ್ನು ವ್ಯಕ್ತಪಡಿಸಿದರು. ತಮ್ಮ ನಡುವಿನ ಪ್ರೀತಿಯ ಸ್ನೇಹವನ್ನು  ಮತ್ತು ಭಾರತ-ಜಪಾನ್ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಮಾಜಿ ಪ್ರಧಾನಿ ಅಬೆ ಅವರು ನೀಡಿದ ಗಮನಾರ್ಹ ಕೊಡುಗೆಯನ್ನು ಅವರು ಸ್ಮರಿಸಿದರು. ನಂತರ ಪ್ರಧಾನಮಂತ್ರಿ ಅವರು ಪ್ರಧಾನಮಂತ್ರಿ ಕಿಶಿಡಾ ಅವರೊಂದಿಗೆ ಸಂಕ್ಷಿಪ್ತ ಸಂವಾದ ನಡೆಸಿ ಸಂತಾಪವನ್ನು ಪುನರುಚ್ಚರಿಸಿದರು.  

*******


(Release ID: 1862710) Visitor Counter : 139