ಪ್ರಧಾನ ಮಂತ್ರಿಯವರ ಕಛೇರಿ
ನವರಾತ್ರಿಯ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ
ಶೈಲಪುತ್ರಿ ದೇವಿಗೆ ಪ್ರಾರ್ಥನೆ ಸಲ್ಲಿಕೆ
ಪ್ರಕಟಣಾ ದಿನಾಂಕ:
26 SEP 2022 10:09AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರಾತ್ರಿಯ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ನವರಾತ್ರಿಯ ಆರಂಭದಲ್ಲಿ ಶ್ರೀ ಮೋದಿ ಅವರು ಶೈಲಪುತ್ರಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ ಮತ್ತು ದೇವಿಯ ಕೃಪೆಯಿಂದ ಸಂತೋಷ, ಆರೋಗ್ಯ ಮತ್ತು ಸಮೃದ್ಧಿ ದೊರೆಯಲಿ ಎಂದು ಹಾರೈಸಿದ್ದಾರೆ.
ಈ ಕುರಿತು ಪ್ರಧಾನಿಯವರು ಸರಣಿ ಟ್ವೀಟ್ ಮಾಡಿದ್ದಾರೆ;
"ನಿಮ್ಮೆಲ್ಲರಿಗೂ ಶಕ್ತಿಯ ಆರಾಧನೆಯ ಮಹಾನ್ ಹಬ್ಬ ನವರಾತ್ರಿಯ ಶುಭಾಶಯಗಳು. ಶ್ರದ್ಧೆ ಮತ್ತು ನಂಬಿಕೆಯ ಈ ಮಂಗಳಕರ ಸಂದರ್ಭವು ಪ್ರತಿಯೊಬ್ಬರ ಜೀವನದಲ್ಲಿ ಹೊಸ ಶಕ್ತಿ ಮತ್ತು ಹೊಸ ಉತ್ಸಾಹವನ್ನು ತುಂಬಲಿ. ಜೈ ಮಾತಾ ದಿ!"
"ವಂದೇ ವಾಂಛಿತ ಲಾಭಾಯ
ಚಂದ್ರಾರ್ಧ ಕೃತ ಶೇಖರಾಮ್
ವೃಷಾರೂಡಾಂ ಶೂಲಧರಾಂ
ಶೈಲಪುತ್ರೀಂ ಯಶಸ್ವಿನೀಮ್
ಇಂದಿನಿಂದ ಶೈಲಪುತ್ರಿ ದೇವಿಯ ಆರಾಧನೆಯೊಂದಿಗೆ ನವರಾತ್ರಿ ಆರಂಭವಾಗುತ್ತಿದೆ. ದೇವಿಯ ಅನುಗ್ರಹದಿಂದ ಪ್ರತಿಯೊಬ್ಬರ ಜೀವನವು ಸಂತೋಷ, ಸಮೃದ್ಧಿ ಮತ್ತು ಆರೋಗ್ಯದಿಂದ ತುಂಬಿರಲಿ ಎಂದು ನಾನು ಹಾರೈಸುತ್ತೇನೆ.”
ಎಂದು ಪ್ರಧಾನಿಯವರು ಟ್ವೀಟ್ ಮಾಡಿದ್ದಾರೆ.
*******
(ಪ್ರಕಟಣೆ ಐ.ಡಿ.: 1862250)
ವಿಸಿಟರ್ ಕೌಂಟರ್ : 199
ಪ್ರಕಟಣೆಯನ್ನು ಇದರಲ್ಲಿ ಓದಿ:
Bengali
,
English
,
Urdu
,
Marathi
,
हिन्दी
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam