ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ದೇಶಾದ್ಯಂತ ಹಣ್ಣುಗಳು, ತರಕಾರಿಗಳು, ವೈದ್ಯಕೀಯ ಸಸ್ಯ ಮತ್ತು ಮೂಲಿಕೆಗಳು ಕೈಗೆಟಕುವಂತೆ ಮಾಡಲು ಪೋಷಣ್ ತೋಟಗಳು ಅಥವಾ ಪೌಷ್ಟಿಕ ಉದ್ಯಾನವನಗಳ ನಿರ್ಮಾಣ
2022 ರ ಪೋಷಣ್ ಮಾಸಾಚರಣೆ ಅಂಗವಾಗಿ ಪೌಷ್ಟಿಕ ಉದ್ಯಾನವನಗಳು ಅಥವಾ ರೆಟ್ರೋ ಫಿಟ್ಟಿಂಗ್ ಪೋಷಣ್ ತೋಟಗಳನ್ನು ಕೋಳಿ ಸಾಕಾಣಿಕೆ/ಮೀನುಗಾರಿಕೆ ಘಟಕಗಳ ಹಿಂಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಸ್ಥಾಪಿಸಲು ಕ್ರಮ
4.7 ಲಕ್ಷ ಅಂಗನಾಡಿಗಳಲ್ಲಿ ಪೋಷಣ್ ತೋಟಗಳ ಸ್ಥಾಪನೆ
6 ರಾಜ್ಯಗಳ ಆಯ್ದ ಜಿಲ್ಲೆಗಳಲ್ಲಿ 1.10 ಲಕ್ಷ ಔಷಧ ಸಸ್ಯಗಳನ್ನು ನೆಡಲು ಕ್ರಮ
Posted On:
23 SEP 2022 12:31PM by PIB Bengaluru
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಆಯುಷ್ ಸಚಿವಾಲಯದ ವಿವಿಧ ಕ್ರಮಗಳಡಿ 4.37 ಲಕ್ಷ ಅಂಗನವಾಡಿ ಕೇಂದ್ರಗಳಲ್ಲಿ ಪೋಷಣ್ ತೋಟಗಳ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹೆಚ್ಚುವರಿಯಾಗಿ 6 ರಾಜ್ಯಗಳ ಆಯ್ದ ಜಿಲ್ಲೆಗಳಲ್ಲಿ 1.10 ಲಕ್ಷ ಔಷಧ ಸಸ್ಯಗಳನ್ನು ನೆಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ.
2022 ರ ಪೋಷಣ್ ಮಾಸಾಚರಣೆ ಅಂಗವಾಗಿ ಪೌಷ್ಟಿಕ ಉದ್ಯಾನವನಗಳು ಅಥವಾ ರೆಟ್ರೋ ಫಿಟ್ಟಿಂಗ್ ಪೋಷಣ್ ತೋಟಗಳನ್ನು ಕೋಳಿ ಸಾಕಾಣಿಕೆ/ಮೀನುಗಾರಿಕೆ ಘಟಕಗಳ ಹಿಂಭಾಗದಲ್ಲಿ ದೊಡ್ಡ ಮಟ್ಟದಲ್ಲಿ ಸ್ಥಾಪಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಈ ವರೆಗೆ ಸುಮಾರು 1.5 ಲಕ್ಷ ರೆಟ್ರೋಫಿಟ್ಟಿಂಗ್ ಪೋಷಣ್ ತೋಟಗಳನ್ನು ಕೋಳಿ ಸಾಕಾಣಿಕೆ ಮತ್ತು ಮೀನುಗಾರಿಕೆ ಘಟಕಗಳ ಹಿಂಭಾಗ ಸ್ಥಾಪಿಸಿರುವುದಾಗಿ ವರದಿಯಾಗಿದೆ. ಅಲ್ಲದೇ ಹಿತ್ತಲಿನಲ್ಲಿ ಅಡುಗೆ ತೋಟಗಳು ಮತ್ತು ಸಿರಿಧಾನ್ಯಗಳನ್ನು ಬೆಳೆಯುವುದನ್ನು ಉತ್ತೇಜಿಸಲು 75 ಸಾವಿರಕ್ಕೂ ಹೆಚ್ಚು ಸಂವೇದನಾಶೀಲತಾ ಶಿಬಿರಗಳನ್ನು ಸಹ ಆಯೋಜಿಸಲಾಗಿದೆ. ಆಸಕ್ತಿದಾಯಕ ಸಂಗತಿ ಎಂದರೆ ಪೋಷಣ್ ಮಾಸಾಚರಣೆ ಅಂಗವಾಗಿ ಪೌಷ್ಟಿಕ ಉದ್ಯಾನವನಗಳು/ಪೋಷಣ್ ತೋಟಗಳನ್ನು ನಿರ್ಮಿಸಲು ಸುಮಾರು 40 ಸಾವಿರ ಕಡೆಗಳಲ್ಲಿ ಭೂಮಿ ಗುರುತಿಸಲು ಅಭಿಯಾನ ಆರಂಭಿಸಿದ್ದು, ಪೋಷಣ್ ತೋಟಗಳ ಮಾದರಿಯನ್ನು ಹೊಸ ಅಂಗನವಾಡಿ ಕೇಂದ್ರಗಳಲ್ಲಿ/ ಅದರ ಆಸುಪಾಸಿನಲ್ಲೂ ಸಹ ನಿರ್ಮಾಣ ಮಾಡಲಾಗುತ್ತಿದೆ.
ಗೌರವಾನ್ವಿತ ಪ್ರಧಾನಮಂತ್ರಿ ಅವರು 2018 ರ ಮಾರ್ಚ್ 8 ರಂದು ಪೋಷಣ್ ಅಭಿಯಾನವನ್ನು ಆರಂಭಿಸಿದ್ದು, ಮಕ್ಕಳು, ಹದಿಹರೆಯದವರು, ಗರ್ಭೀಣಿಯರು ಮತ್ತು ಹಾಲುಣಿಸುವ ತಾಯಂದಿರಲ್ಲಿ ಪೌಷ್ಟಿಕತೆ ಸುಧಾರಿಸುವುದು ಇದರ ಉದ್ದೇಶವಾಗಿದೆ. ಪೋಷಣ್ ಅಭಿಯಾನ 2.0 ರ ಪ್ರಮುಖ ಅಂಗವೆಂದರೆ ಮಕ್ಕಳು, ಹದಿಯಹರೆಯದ ಹುಡುಗಿಯರು, ಗರ್ಭೀಣಿಯರು, ಹಾಲುಣಿಸುವ ತಾಯಂದಿರಲ್ಲಿ ಅಪೌಷ್ಟಿಕತೆಯ ಸವಾಲುಗಳನ್ನು ನಿವಾರಿಸಿ, ಪೌಷ್ಟಿಕಾಂಶ ಒದಗಿಸುವ ಮತ್ತು ಹೆರಿಗೆ ಕಾರ್ಯತಂತ್ರದಲ್ಲಿ ಬದಲಾವಣೆ ತರುವ, ಆರೋಗ್ಯ, ಯೋಗ ಕ್ಷೇಮ, ರೋಗ ನಿರೋಧಕ ಶಕ್ತಿಯನ್ನು ಪೋಷಿಸುವ ಅಭ್ಯಾಸಗಳನ್ನು ಅಭಿವೃದ್ಧಿಪಡಿಸಲು, ಉತ್ತೇಜಿಸಲು ಏಕೀಕೃತ ಪರಿಸರ ವ್ಯವಸ್ಥೆಯನ್ನು ರೂಪಿಸುವುದು ಸಹ ಇದರ ಪ್ರಮುಖ ಅಂಶವಾಗಿದೆ.
ಕೈಗೆಟುಕುವ ರೀತಿಯಲ್ಲಿ ಹಣ್ಣುಗಳು, ತರಕಾರಿಗಳು, ಔಷಧ ಸಸ್ಯಗಳು ಮತ್ತು ಮೂಲಿಕೆಗಳು ದೊರೆಯುವಂತೆ ಮಾಡಲು, ಸರಿಯಾದ ರೀತಿಯಲ್ಲಿ ಪೋಷಣೆಯನ್ನು ಸಕ್ರಿಯಗೊಳಿಸಲು ದೇಶಾದ್ಯಂತ ಪೋಷಣ್ ತೋಟಗಳು ಮತ್ತು ಪೌಷ್ಟಿಕ ಉದ್ಯಾನವನಗಳನ್ನು ಸ್ಥಾಪಿಸಲಾಗುತ್ತಿದೆ. ಇದರ ಉದ್ದೇಶ ಸರಳವಾಗಿದೆ: ತಾಜಾ ಮತ್ತು ನಿಯಮಿತವಾಗಿ ಸ್ಥಳೀಯವಾಗಿ ಉತ್ಪಾದನೆಯಾಗುವ ಹಣ್ಣುಗಳು, ತರಕಾರಿಗಳು ಮತ್ತು ಔಷಧ ಸಸ್ಯಗಳನ್ನು ಮಕ್ಕಳು ಮತ್ತು ಮಹಿಳೆಯರಿಗೆ ಪೌಷ್ಟಿಕ ತೋಟಗಳು ಅಥವಾ ಸಮೀಪದ ಅಂಗನವಾಡಿ ಕೇಂದ್ರಗಳಿಂದ ನೇರವಾಗಿ ದೊರಕಿಸಿಕೊಡಲಾಗುತ್ತಿದೆ.
ಸ್ಥಳೀಯ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಸೂಕ್ಷ್ಮ ಪೋಷಕಾಂಶಗಳಿದ್ದು, ಆಹಾರ ವೈವಿದ್ಯವನ್ನು ಹೆಚ್ಚಿಸಲು ಪೋಷಣ್ ತೋಟಗಳು ಪ್ರಮುಖ ಪಾತ್ರ ವಹಿಸಲಿವೆ. ಭೂಮಿಯ ಮೇಲಿನ ಕೇಂದ್ರೀಕೃತ ಚಟುವಟಿಕೆಗಳಿಗೆ ಪೋಷಣ್ ತೋಟಗಳು ಉತ್ತಮ ಉದಾಹರಣೆಯಾಗಿವೆ. ಇದರಿಂದ ಬಾಹ್ಯ ಅವಲಂಬನೆ ಕಡಿಮೆಯಾಗಲಿದ್ದು, ಸ್ಥಳೀಯವಾಗಿ ಲಭ್ಯವಿರುವ ಆರೋಗ್ಯಕರ ಉತ್ಪನ್ನಗಳ ಪ್ರತಿಫಲವನ್ನು ದೊರಕಿಸಿಕೊಡುತ್ತದೆ ಮತ್ತು ಪೌಷ್ಟಿಕಾಂಶ ಭದ್ರತೆಯಲ್ಲಿ ಸ್ವಾವಲಂಬನೆ ಸಾಧಿಸಲು ನೆರವಾಗುತ್ತದೆ.
ಗುಜರಾತ್ ಪೋಷಣ್ ಮಾಸಾಚರಣೆ 2022
ಚತ್ತೀಸ್ ಘರ್, ಪೋಷಣ್ ಮಾಸಾಚರಣೆ 2022
ಗೋವಾ ಪೋಷಣ್ ಮಾಸಾಚರಣೆ 2022
*****
(Release ID: 1861724)
Visitor Counter : 294
Read this release in:
Tamil
,
English
,
Urdu
,
Hindi
,
Marathi
,
Manipuri
,
Bengali
,
Punjabi
,
Gujarati
,
Telugu
,
Malayalam