ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಖಾದಿ ಉತೃಷ್ಟತಾ ಕೇಂದ್ರ – ಸಿಒಇಕೆ ನಿಂದ 2022 ರ ಸೆಪ್ಟೆಂಬರ್ 16 ಮತ್ತು 17 ರಂದು ಎರಡು ದಿನಗಳ ಆವರ್ತನ್ ಕಾರ್ಯಕ್ರಮ
Posted On:
15 SEP 2022 10:52AM by PIB Bengaluru
“ಮೊದಲು ಹೃದಯಕ್ಕೆ ಮತ್ತು ನಂತರ ಕಣ್ಣನ್ನು ಖಾದಿ ಕಲೆ ಆಕರ್ಷಿಸುತ್ತದೆ” – ಎಂ.ಕೆ. ಗಾಂಧಿ
ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದ [ಬಿಐಸಿ]ಲ್ಲಿ ಖಾದಿ ಉತೃಷ್ಟತಾ ಕೇಂದ್ರದಿಂದ 2022 ರ ಸೆಪ್ಟೆಂಬರ್ 16 ಮತ್ತು 17 ರಂದು ಎರಡು ದಿನಗಳ ಕಾಲ ಜನರೊಂದಿಗೆ ಸಂಪರ್ಕ ಸಾಧಿಸುವ ಭಾಗವಾಗಿ ಆವರ್ತನ್ ಕಾರ್ಯಕ್ರಮ ಆಯೋಜಿಸಲಾಗಿದೆ.
ಯುವ ಸಮೂಹ ಮತ್ತು ಜಾಗತಿಕ ಮಾರುಕಟ್ಟೆಯನ್ನು ತಲುಪುವ ಉದ್ದೇಶದಿಂದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಸಹಯೋಗದೊಂದಿಗೆ ಖಾದಿ ಮತ್ತು ಗ್ರಾಮ ಕೈಗಾರಿಕೆಗಳ ಆಯೋಗ[ಕೆವಿಐಸಿ]ಕ್ಕೆ ಬೆಂಬಲ ನೀಡಲು ಖಾದಿ ಉತೃಷ್ಟತಾ ಕೇಂದ್ರ [ಸಿಒಇಕೆ]ವನ್ನು ಆರಂಭಿಸಲಾಗಿದೆ. ಇದನ್ನು ಸ್ಪೋಕ್ಸ್ ಮಾದರಿಯಲ್ಲಿ ದೆಹಲಿಯಲ್ಲಿ ಪ್ರಮುಖ ಕೇಂದ್ರವನ್ನಾಗಿ ಸ್ಥಾಪಿಸಲಾಗಿದೆ. ಬೆಂಗಳೂರು, ಗಾಂಧಿನಗರ, ಕೊಲ್ಕತ್ತಾ ಮತ್ತು ಶಿಲ್ಲಾಂಗ್ ನಲ್ಲೂ ಇಂತಹ ಸ್ಪೋಕ್ಸ್ ಮಾದರಿಗಳಿವೆ.
ಖಾದಿ ಉತೃಷ್ಟತಾ ಕೇಂದ್ರ –ಸಿಒಇಕೆಯ ಒಳಾಂಗಣ ವಿನ್ಯಾಸಕಾರರು ವಿನ್ಯಾಸಗೊಳಿಸಿರುವ ಮನೆ ಅಲಂಕಾರಿಕ ಮತ್ತು ಉಡುಪು ಸಂಗ್ರಹಗಳ ಪ್ರದರ್ಶನವನ್ನು ಸಹ ಈ ಕಾರ್ಯಕ್ರಮ ಒಳಗೊಂಡಿದೆ. ತಮ್ಮ ಬಟ್ಟೆಗಳು ಮತ್ತು ಸೀರೆಗಳನ್ನು ಮಾರಾಟ ಮಾಡುವಂತೆ ಖಾದಿ ಸಂಸ್ಥೆಗಳನ್ನು ಆಹ್ವಾನಿಸಲಾಗಿದೆ. ಸೆಪ್ಟೆಂಬರ್ 16 ರಂದು ಬೆಂಗಳೂರಿನ ವಿನ್ಯಾಸ ಕಾಲೇಜು ವಿದ್ಯಾರ್ಥಿಗಳನ್ನು ಸಿಒಇಕೆ ತಂಡ ಖಾದಿ ಮತ್ತು ಅದರ ಸೂಕ್ಷ್ಮಾತಿ ಸೂಕ್ಷ್ಮಗಳ ಬಗ್ಗೆ ನಡೆಯುವ ಸಂವಾದ ಗೋಷ್ಠಿಗೆ ಆಹ್ವಾನಿಸಿದೆ. ಮೂರು ಗೋಷ್ಠಿಗಳು: ಖಾದಿಯನ್ನು ಮರು ಸಂಪರ್ಕಿಸುವುದು, ನವ ಪೀಳಿಗೆಗೆ ಖಾದಿ ಹಾಗೂ ಖಾದಿಯ ಡಿಎನ್ಎ, ಎಂಬ ಗೋಷ್ಠಿಗಳಲ್ಲಿ ಖಾದಿ ಪರಂಪರೆ ಮತ್ತು ಸುಸ್ಥಿರತೆ ಕುರಿತ ಸಂವಾದವನ್ನು ಉತ್ತೇಜಿಸಲಾಗುತ್ತಿದೆ.
ಸಿಒಇಕೆಯಿಂದ “ಖಾದಿ ಮತ್ತು ಕಲೆ” ಎಂಬ ಮತ್ತೊಂದು ಉಪಕ್ರಮ ಕೈಗೊಂಡಿದ್ದು, ವಿವಿಧ ಕಲಾಪ್ರಕಾರಗಳ ಬೆಂಬಲಿಗರನ್ನು ತಲುಪಲು ಖಾದಿಯೊಂದಿಗೆ ಕಲೆ ಹೇಗೆ ಬೆಸೆದುಕೊಂಡಿದೆ ಎಂಬುದನ್ನು ಅರಿತುಕೊಳ್ಳುವ ಮಾಧ್ಯಮವಾಗಿಯೂ ನೋಡಲಾಗುತ್ತಿದೆ.
ಬೆಂಗಳೂರು ಮೂಲದ ಸಮಕಾಲೀನ ನೃತ್ಯಗಾರ್ತಿ ಹಾಗೂ ನೃತ್ಯ ಸಂಯೋಜಕಿ ಕಲ್ಯಾಣಿ ಶಾರದ ಅವರೊಂದಿಗೆ ಸಿಒಇಕೆ ಸಹಯೋಗ ಹೊಂದಿದೆ. ಬಿಐಸಿಯಲ್ಲಿ 2022 ರ ಸೆಪ್ಟೆಂಬರ್ 17 ರಂದು ಸಂಜೆ 6 ಗಂಟೆಗೆ ವಿಶೇಷವಾಗಿ ನೃತ್ಯ ಸಂಯೋಜನೆ ಮಾಡಿರುವ ತುಣುಕು ‘ಆವರ್ತನ್’ ಅನ್ನು ಅವರು ಪ್ರಸ್ತುತಪಡಿಸಲಿದ್ದಾರೆ. ಅವರ ಪ್ರದರ್ಶನ ಖಾದಿಯ ವಿಶಿಷ್ಟತೆಯನ್ನು ಚಿತ್ರಿಸುವ ದ್ಯೇಯವನ್ನು ಹೊಂದಿದೆ. ಸಿಒಇಕೆ ತಂಡ ವಿಶೇಷವಾಗಿ ವಿನ್ಯಾಸಗೊಳಿಸಿದ ಖಾದಿಯನ್ನು ಪ್ರದರ್ಶನಕಾರರು ತೊಟ್ಟು ಪ್ರದರ್ಶನ ನೀಡಲಿದ್ದಾರೆ.
ಈ ಕಾರ್ಯಕ್ರಮ ಖಾದಿಯೊಂದಿಗೆ ಇತರ ಕಲಾ ಪ್ರಕಾರಗಳನ್ನು ಸಮನ್ವಯಗೊಳಿಸುವ ಉದ್ದೇಶ ಹೊಂದಿದ್ದು, ವಿಸ್ತೃತವಾದ ಜನ ಸಮೂಹ ಹಾಗೂ ಹೊಸ ಅರ್ಥಗಳೊಂದಿಗೆ ಖಾದಿಯನ್ನು ವ್ಯಾಖ್ಯಾನಿಸುವ ಗುರಿ ಹೊಂದಲಾಗಿದೆ. ಪ್ರದರ್ಶನ ಹಾಗೂ ಗೋಷ್ಠಿಗಳ ಮೂಲಕ ಖಾದಿಯನ್ನು ಯುವ ಜನಾಂಗದೊಂದಿಗೆ ಜೋಡಿಸುವುದನ್ನು ಕೇಂದ್ರೀಕರಿಸಲಾಗಿದೆ ಮತ್ತು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಖಾದಿ ಸಂಸ್ಥೆಗಳಿಗೆ ವೇದಿಕೆಯನ್ನು ಒದಗಿಸಲಾಗಿದೆ.
*****
(Release ID: 1859698)
Visitor Counter : 162