ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೆಪ್ಟೆಂಬರ್ 17 ರಂದು ಮಧ್ಯಪ್ರದೇಶಕ್ಕೆ ಪ್ರಧಾನಮಂತ್ರಿಯವರ ಭೇಟಿ 


ಪ್ರಧಾನಮಂತ್ರಿಯವರು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಭಾರತದಲ್ಲಿ ಅಳಿವಿನಂಚಿನಲ್ಲಿರುವ ಕಾಡು ಪ್ರಭೇದದ ಚಿರತೆಗಳನ್ನು ಬಿಡುಗಡೆ ಮಾಡಲಿದ್ದಾರೆ 

ನಮೀಬಿಯಾದಿಂದ ತರಲಾದ ಚೀತಾಗಳನ್ನು  ಪ್ರಾಜೆಕ್ಟ್ ಚೀತಾ ಅಡಿಯಲ್ಲಿ ಭಾರತದಲ್ಲಿ ಪರಿಚಯಿಸಲಾಗುತ್ತಿದೆ, ಇದು ಕಾಡು ಮಾಂಸಾಹಾರಿ ಪ್ರಾಣಿಗಳ ಪ್ರಪಂಚದ ಮೊದಲ ಪ್ರಮುಖ ಖಂಡಾಂತರ ಸ್ಥಳಾಂತರ ಯೋಜನೆಯಾಗಿದೆ.

ಚಿರತೆಗಳನ್ನು ಭಾರತಕ್ಕೆ ಮರುಪರಿಚಯಿಸುವುದು ತೆರೆದ ಅರಣ್ಯ ಮತ್ತು ಹುಲ್ಲುಗಾವಲುಗಳ ವ್ಯವಸ್ಥೆಗಳ ಮರುಸ್ಥಾಪನೆಗೆ ಮತ್ತು ಸ್ಥಳೀಯರಿಗೆ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಪ್ರಧಾನಮಂತ್ರಿಯವರು ಘೋಷಿಸಿದ ಬದ್ಧತೆಗಳಿಗೆ ಅನುಗುಣವಾಗಿ ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ಈ ಯೋಜನೆಗಳು

ಪ್ರಧಾನಮಂತ್ರಿಯವರು ಶೆಯೋಪುರದ ಕರಹಾಲ್‌ನಲ್ಲಿ ಸ್ವಸಹಾಯ ಗುಂಪುಗಳ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ

ಸಮ್ಮೇಳನದಲ್ಲಿ ಸಾವಿರಾರು ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರು/ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಳ್ಳುವರು

ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆ ಅಡಿಯಲ್ಲಿ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ ನಾಲ್ಕು ಕೌಶಲ್ಯ ಕೇಂದ್ರಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ

Posted On: 15 SEP 2022 1:12PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸೆಪ್ಟೆಂಬರ್ 17 ರಂದು ಮಧ್ಯಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10:45ರ ಸುಮಾರಿಗೆ ಪ್ರಧಾನಮಂತ್ರಿಯವರು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳನ್ನು ಅರಣ್ಯಕ್ಕೆ ಬಿಡುಗಡೆ ಮಾಡುವ ಕಾರ್ಯಕ್ರಮ ನಡೆಸಿಕೊಡುವರು. ಅದರ ನಂತರ, ಮಧ್ಯಾಹ್ನ 12 ಗಂಟೆಯ ಸುಮಾರಿಗೆ, ಅವರು ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು/ಸಮುದಾಯ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಕರಹಾಲ್, ಶಿಯೋಪುರದಲ್ಲಿ ಸ್ವಸಹಾಯ ಸಂಘ ಸಮ್ಮೇಳನದಲ್ಲಿ ಭಾಗವಹಿಸುವರು.

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನ ಮಂತ್ರಿ

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನ ಮಂತ್ರಿಯವರು ಕಾಡು ಚಿರತೆಗಳನ್ನು ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಭಾರತದ ವನ್ಯಜೀವಿಗಳು ಮತ್ತು ಅದರ ಆವಾಸಸ್ಥಾನವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳ ಭಾಗವಾಗಿದೆ. 1952 ರಲ್ಲಿ ಭಾರತದಿಂದ ಚಿರತೆಗಳ ಸಂತತಿ ನಿರ್ನಾಮವಾಗಿದೆ ಎಂದು ಘೋಷಿಸಲಾಯಿತು. ಬಿಡುಗಡೆ ಮಾಡಲಾಗುತ್ತಿರುವ ಚಿರತೆಗಳನ್ನು ನಮೀಬಿಯಾದಿಂದ ತರಲಾಗಿದ್ದು, ಈ ವರ್ಷದ ಆರಂಭದಲ್ಲಿ ಸಹಿ ಮಾಡಿದ ತಿಳುವಳಿಕೆ ಒಪ್ಪಂದದ ಅಡಿಯಲ್ಲಿ ತರಲಾಗಿದೆ. ಭಾರತದಲ್ಲಿ ಈ ಚಿರತೆಗಳನ್ನು ಪ್ರಾಜೆಕ್ಟ್ ಚೀತಾ ಅಡಿಯಲ್ಲಿ ತರಲಾಗಿದೆ. ಇದು ಕಾಡು ಮಾಂಸಾಹಾರಿ ಪ್ರಾಣಿಗಳ ಪ್ರಪಂಚದ ಮೊದಲ ಪ್ರಮುಖ ಖಂಡಾಂತರ ಸ್ಥಳಾಂತರ ಯೋಜನೆಯಾಗಿದೆ.

ಭಾರತದಲ್ಲಿ ತೆರೆದ ಅರಣ್ಯ ಮತ್ತು ಹುಲ್ಲುಗಾವಲು ಪರಿಸರ ವ್ಯವಸ್ಥೆಗಳ ಮರುಸ್ಥಾಪನೆಯಲ್ಲಿ ಚಿರತೆಗಳು ಸಹಾಯ ಮಾಡುತ್ತವೆ. ಇದು ಜೀವವೈವಿಧ್ಯವನ್ನು ಸಂರಕ್ಷಿಸಲು ಮತ್ತು ನೀರಿನ ಭದ್ರತೆ, ಇಂಗಾಲದ ಪ್ರತ್ಯೇಕತೆ ಮತ್ತು ಮಣ್ಣಿನ ತೇವಾಂಶ ಸಂರಕ್ಷಣೆಯಂತಹ ಪರಿಸರ ವ್ಯವಸ್ಥೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಸಮಾಜಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರಯೋಜನವನ್ನು ನೀಡುತ್ತದೆ. ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಗೆ ಪ್ರಧಾನ ಮಂತ್ರಿಯವರ ಬದ್ಧತೆಗೆ ಅನುಗುಣವಾಗಿ ಈ ಪ್ರಯತ್ನವು ಪರಿಸರ-ಅಭಿವೃದ್ಧಿ ಮತ್ತು ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳ ಮೂಲಕ ಸ್ಥಳೀಯ ಸಮುದಾಯಕ್ಕೆ ಜೀವನೋಪಾಯದ ಅವಕಾಶ ಹೆಚ್ಚಲು ಕಾರಣವಾಗುತ್ತದೆ.

ಸ್ವಸಹಾಯ ಗುಂಪಿನ ಸಮ್ಮೇಳನದಲ್ಲಿ ಪ್ರಧಾನ ಮಂತ್ರಿ

ಪ್ರಧಾನಮಂತ್ರಿಯವರು ಶಿಯೋಪುರದ ಕರಹಾಲ್‌ನಲ್ಲಿ ಆಯೋಜಿಸಲಾಗುತ್ತಿರುವ ಸ್ವಸಹಾಯ ಗುಂಪುಗಳ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿಎವೈ-ಎನ್‌ಆರ್‌ಎಲ್‌ಎಮ್) ಅಡಿಯಲ್ಲಿ ಪ್ರಚಾರ ಮಾಡಲಾಗುತ್ತಿರುವ ಸಾವಿರಾರು ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರು/ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಭಾಗವಹಿಸುವಿಕೆಗೆ ಸಮ್ಮೇಳನವು ಸಾಕ್ಷಿಯಾಗಲಿದೆ.

ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆ ಅಡಿಯಲ್ಲಿ ನಾಲ್ಕು ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪುಗಳ (ಪಿವಿಟಿಜಿ) ಕೌಶಲ್ಯ ಕೇಂದ್ರಗಳನ್ನು ಉದ್ಘಾಟಿಸಲಿದ್ದಾರೆ.

ಡಿಎವೈ-ಎನ್‌ಆರ್‌ಎಲ್‌ಎಮ್ ಮಿಷನ್‌ ಗ್ರಾಮೀಣ ಬಡ ಕುಟುಂಬಗಳನ್ನು ಹಂತ ಹಂತವಾಗಿ ಸ್ವಸಹಾಯ ಗುಂಪುಗಳಾಗಿ ಸಜ್ಜುಗೊಳಿಸುವುದು ಮತ್ತು ಅವರ ಜೀವನ ಮಟ್ಟವನ್ನು ಉನ್ನತೀಕರಿಸುವುದು, ಅವರ ಆದಾಯ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ದೀರ್ಘಾವಧಿಯ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಕೌಟುಂಬಿಕ ಹಿಂಸೆ, ಮಹಿಳಾ ಶಿಕ್ಷಣ ಮತ್ತು ಇತರ ಲಿಂಗ ತಾರತಮ್ಯ, ಪೋಷಣೆ, ನೈರ್ಮಲ್ಯ, ಆರೋಗ್ಯ ಇತ್ಯಾದಿಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಜಾಗೃತಿ ಮೂಡಿಸುವ ಮತ್ತು ನಡವಳಿಕೆ ಬದಲಾವಣೆಯ ಸಂವಹನದ ಮೂಲಕ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಮಿಷನ್ ಕಾರ್ಯನಿರ್ವಹಿಸುತ್ತಿದೆ.

*****


(Release ID: 1859562) Visitor Counter : 246