ಪ್ರಧಾನ ಮಂತ್ರಿಯವರ ಕಛೇರಿ
ಘನತೆವೆತ್ತ ರಾಣಿ ಎರಡನೇ ಎಲಿಜಬೆತ್ ಅವರ ನಿಧನದಕ್ಕೆ ಸಂತಾಪ ಸೂಚಿಸಿದ ಪ್ರಧಾನಿ
Posted On:
08 SEP 2022 11:30PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಘನತೆವೆತ್ತ ರಾಣಿ ಎರಡನೇ ಎಲಿಜಬೆತ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ಪ್ರಧಾನಿ ಹೀಗೆ ಟ್ವೀಟ್ ಮಾಡಿದ್ದಾರೆ:
"ಘನತೆವೆತ್ತ ರಾಣಿ ಎರಡನೇ ಎಲಿಜಬೆತ್ ಅವರನ್ನು ನಮ್ಮ ಕಾಲದ ಧೀಮಂತ ವ್ಯಕ್ತಿಯಾಗಿ ಸ್ಮರಿಸಲಾಗುವುದು. ಅವರು ತಮ್ಮ ರಾಷ್ಟ್ರ ಮತ್ತು ಜನರಿಗೆ ಸ್ಫೂರ್ತಿದಾಯಕ ನಾಯಕತ್ವವನ್ನು ನೀಡಿದರು. ಅವರು ಸಾರ್ವಜನಿಕ ಜೀವನದಲ್ಲಿ ಘನತೆ ಮತ್ತು ಸಭ್ಯತೆಯ ಪ್ರತಿನಿಧಿಯಾಗಿದ್ದರು. ಅವರ ನಿಧನದಿಂದ ದುಃಖಿತನಾಗಿದ್ದೇನೆ. ಈ ನೋವಿನ ಸಮಯದಲ್ಲಿ ರಾಣಿ ಅವರ ಕುಟುಂಬ ಮತ್ತು ಬ್ರಿಟನ್ ಜನರಿಗೆ ನನ್ನ ಸಂತಾಪಗಳು.”
"2015 ಮತ್ತು 2018ರಲ್ಲಿ ನನ್ನ ಬ್ರಿಟನ್ ಭೇಟಿ ಸಮಯದಲ್ಲಿ ನಾನು ರಾಣಿ ಎರಡನೇ ಎಲಿಜಬೆತ್ ಅವರೊಂದಿಗೆ ಸ್ಮರಣೀಯ ಕ್ಷಣಗಳನ್ನು ಕಳೆದಿದ್ದೇನೆ. ಅವರ ಆತ್ಮೀಯತೆ ಮತ್ತು ದಯೆಯನ್ನು ನಾನು ಎಂದಿಗೂ ಮರೆಯಲಾರೆ. ಸಭೆಯೊಂದರಲ್ಲಿ ಮಹಾತ್ಮಾ ಗಾಂಧಿಯವರು ತಮ್ಮ ಮದುವೆಗೆ ಉಡುಗೊರೆಯಾಗಿ ನೀಡಿದ್ದ ಕರವಸ್ತ್ರವನ್ನು ನನಗೆ ತೋರಿಸಿದರು. ನಾನು ಅವರ ಸದ್ವರ್ತನೆಯನ್ನು ಸದಾ ಸಂತಸದಿಂದ ಸ್ಮರಿಸುತ್ತೇನೆ."
*********
(Release ID: 1858296)
Visitor Counter : 124
Read this release in:
Punjabi
,
English
,
Urdu
,
Marathi
,
Hindi
,
Assamese
,
Bengali
,
Manipuri
,
Gujarati
,
Odia
,
Tamil
,
Telugu
,
Malayalam