ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಪ್ರಧಾನಿ ಅವರಿಂದ ಸೆಪ್ಟಂಬರ್ 10ರಂದು ‘ಕೇಂದ್ರ- ರಾಜ್ಯ ವಿಜ್ಞಾನ ಸಮಾವೇಶ’ ಉದ್ಘಾಟನೆ 


ಒಕ್ಕೂಟ ಸಹಕಾರಿ ಸ್ಪೂರ್ತಿಯಡಿ ಸಮಾವೇಶಕ್ಕೆ ಸಾಕ್ಷಿಯಾಗಲಿರುವ ದೇಶಾದ್ಯಂತ ಎಲ್ಲ ರಾಜ್ಯಗಳ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಮತ್ತು ಕಾರ್ಯದರ್ಶಿಗಳು

ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಪೂರಕ ಉತ್ಕೃಷ್ಟ ವಾತಾವರಣ ನಿರ್ಮಾಣ ನಿಟ್ಟಿನಲ್ಲಿ ಗುರಿಯಾಗಿರಿಸಿಕೊಂಡಿರುವ ಮೊದಲ ಸಮಾವೇಶ 

Posted On: 09 SEP 2022 12:25PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಸೆಪ್ಟೆಂಬರ್ 10 ರಂದು ಬೆಳಿಗ್ಗೆ 10:30 ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ‘ಕೇಂದ್ರ-ರಾಜ್ಯ ವಿಜ್ಞಾನ ಸಮಾವೇಶ’ವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ದೇಶದಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಗೆ ಅನುಕೂಲವಾಗುವಂತೆ ಪ್ರಧಾನಿ ಅವರ ನಿರಂತರ ಪ್ರಯತ್ನಗಳಿಗೆ ಅನುಗುಣವಾಗಿ, ಇದೇ ಮೊದಲ ಬಾರಿಗೆ ಆಯೋಜಿಸಿರುವ ಕೇಂದ್ರ-ರಾಜ್ಯಗಳ ನಡುವೆ ಸಮನ್ವಯ ಮತ್ತು ಸಹಯೋಗದ ಕಾರ್ಯವಿಧಾನಗಳನ್ನು ಬಲಪಡಿಸುತ್ತದೆ, ಸಹಕಾರಿ ಒಕ್ಕೂಟದ ಉತ್ಸಾಹದಲ್ಲಿ ದೇಶಾದ್ಯಂತ  ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯ ಪೂರಕ ಶ್ರೇಷ್ಠ ವಾತಾವರಣವನ್ನು (ಎಸ್ಐಟಿ) ನಿರ್ಮಿಸುವ ಉದ್ದೇಶ ಹೊಂದಲಾಗಿದೆ. 

ಅಹಮದಾಬಾದ್‌ನ ವಿಜ್ಞಾನ ನಗರಿಯಲ್ಲಿ ಸೆಪ್ಟಂಬರ್ 10-11ರಂದು ಎರಡು ದಿನಗಳ ಶೃಂಗಸಭೆಯನ್ನು ಆಯೋಜಿಸಲಾಗಿದೆ. ಇದು ಎಸ್ ಟಿಐ ಮುನ್ನೋಟ 2047 ಸೇರಿದಂತೆ ವಿವಿಧ ವಿಷಯಾಧಾರಿತ ಕ್ಷೇತ್ರಗಳ ಕುರಿತು ಗೋಷ್ಠಿಗಳನ್ನು ಒಳಗೊಂಡಿರುತ್ತದೆ; ರಾಜ್ಯಗಳಲ್ಲಿ ಎಸ್ ಟಿಐ ಗಾಗಿ ಭವಿಷ್ಯದ ಬೆಳವಣಿಗೆಯ ಮಾರ್ಗಗಳು ಮತ್ತು ದೂರದೃಷ್ಟಿ; ಆರೋಗ್ಯ - ಸರ್ವರಿಗೂ ಡಿಜಿಟಲ್ ಆರೋಗ್ಯ ರಕ್ಷಣೆ; 2030 ರ ವೇಳೆಗೆ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಖಾಸಗಿ ವಲಯದ ಹೂಡಿಕೆ ದುಪಟ್ಟುಗೊಳಿಸುವುದು; ಕೃಷಿ - ರೈತರ ಆದಾಯ ಸುಧಾರಿಸಲು ತಾಂತ್ರಿಕ ಮಧ್ಯಪ್ರವೇಶ; ನೀರು - ಕುಡಿಯುವ ನೀರಿನ ಉತ್ಪಾದನೆಯಲ್ಲಿ ನಾವೀನ್ಯತೆ; ಇಂಧನ- ಹೈಡ್ರೋಜನ್ ಮಿಷನ್‌ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಸೇರಿದಂತೆ ಎಲ್ಲರಿಗೂ ಶುದ್ಧ ಇಂಧನ ಲಭ್ಯತೆ; ದೇಶದ ಭವಿಷ್ಯದ ಆರ್ಥಿಕತೆಗಾಗಿ ಆಳವಾದ ಸಾಗರ ಮಿಷನ್ ಮತ್ತು ಕರಾವಳಿ ರಾಜ್ಯಗಳು/ಕೇಂದ್ರಾಡಳಿತ ಪ್ರದೆಶಗಳಿಗೆ ಅದರ ಪ್ರಸ್ತುತತೆ ಕುರಿತಂತೆ ಚರ್ಚೆಗಳು ನಡೆಯಲಿದೆ. 

ಈ ಬಗೆಯ ಮೊದಲ ಶೃಂಗಸಭೆ ಗುಜರಾತ್ ಮುಖ್ಯಮಂತ್ರಿ, ಕೇಂದ್ರ  ವಿಜ್ಞಾನ ಮತ್ತು ತಂತ್ರಜ್ಞಾನ (ಎಸ್ &ಟಿ)ಖಾತೆ ಸಹಾಯಕರ ಸಚಿವರು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು, ಕಾರ್ಯದರ್ಶಿಗಳು, ಉದ್ಯಮದ ನಾಯಕರು, ಉದ್ಯಮಿಗಳು, ಸರ್ಕಾರೇತರ ಸಂಸ್ಥೆಗಳು, ಯುವ ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಲಿದೆ.

*****



(Release ID: 1858194) Visitor Counter : 162