ಸಂಪುಟ

ಜೆಎಲ್ಎನ್ ಕ್ರೀಡಾಂಗಣದಿಂದ ಕಾಕ್ಕನಾಡ್ ಮೂಲಕ ಇನ್ಫೋಪಾರ್ಕ್ ಮಾರ್ಗದವರೆಗೆ ಕೊಚ್ಚಿ ಮೆಟ್ರೋ ರೈಲ್ ಯೋಜನೆ ಹಂತ -11 ಕ್ಕೆ ಸಂಪುಟ ಅನುಮೋದನೆ


ಈ ಹಂತದಲ್ಲಿ 11.17 ಕಿಲೋಮೀಟರ್ ಉದ್ದ ಮತ್ತು 11 ನಿಲ್ದಾಣಗಳನ್ನು 1,957.05 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ

Posted On: 07 SEP 2022 4:00PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮೆಟ್ರೋ ರೈಲು ಯೋಜನೆಯಡಿ ಕೊಚ್ಚಿ ಮೆಟ್ರೋ ರೈಲು - 11 ಹಂತದಲ್ಲಿ ಜೆಎಲ್ಎನ್ ಕ್ರೀಡಾಂಗಣದಿಂದ ಕಾಕ್ಕನಾಡ್ ಮೂಲಕ ಇನ್ಪೋಪಾರ್ಕ್ ವರೆಗೆ 1,957.05 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದ್ದು, 11.17 ಕಿಲೋಮೀಟರ್ ಉದ್ದ ಮತ್ತು 11 ನಿಲ್ದಾಣಗಳು ಬರಲಿವೆ. ಬಂದರು ವಿಮಾನ ನಿಲ್ದಾಣ ಮಾರ್ಗದ ರಸ್ತೆ ಅಗಲೀಕರಣ ಸೇರಿದಂತೆ ಹಂತ 11 ರ ಪೂರ್ವ ಸಿದ್ಧತಾ ಕಾರ್ಯಗಳು ಉತ್ತಮವಾಗಿ ನಡೆಯುತ್ತಿವೆ.

ಕೊಚ್ಚಿಯಿಂದ ಅಲುವಾ ಮೂಲಕ ಪೆಟ್ಟಾ ಮಾರ್ಗದ ಹಂತ 1 ಯೋಜನೆಯಡಿ 25.6 ಕಿಲೋಮೀಟರ್ ಉದ್ದದೊಂದಿಗೆ 22 ನಿಲ್ದಾಣಗಳನ್ನು 5181.79 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಕೊಚ್ಚಿ ಮೊಟ್ರೋ ಹಂತ 1 ರಡಿ 1.80 ಕಿಲೋಮೀಟರ್ ಪೆಟ್ಟಾದಿಂದ ಎಸ್ಎನ್ ಜಂಕ್ಷನ್ ವರೆಗಿನ 710.93 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಅಂಗೀಕಾರ ನೀಡಲಾಗಿದೆ. ರಾಜ್ಯ ವಲಯದಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ನಿರ್ಮಾಣ ಚಟುವಟಿಕೆ ಪೂರ್ಣಗೊಂಡಿದೆ ಮತ್ತು ಈ ಯೋಜನೆ ಉದ್ಘಾಟನೆಗೆ ಸನ್ನದ್ಧವಾಗಿದೆ.

ಕೊಚ್ಚಿ ಮೆಟ್ರೋ ಹಂತ 1 ಬಿ ಯೋಜನೆಯಡಿ 1.20 ಕಿಲೋಮೀಟರ್ ಎಸ್ಎನ್ ಜಂಕ್ಷನ್ ನಿಂದ ತ್ರಿಪುನಿಥುರಾ ಟರ್ಮಿನಲ್ ವರೆಗೆ ರಾಜ್ಯ ವಲಯದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಧನಸಹಾಯದ ಮಾದರಿ;

 

ಕ್ರಮ ಸಂಖ್ಯೆ

ಮೂಲ

ಮೊತ್ತ (ಕೋಟಿಗಳಲ್ಲಿ)            ಶೇಕಡವಾರು ನಿರ್ಮಾಣ

ಶೇಕಡವಾರು ನಿರ್ಮಾಣ

1.

ಕೇಂದ್ರ ಸರ್ಕಾರದ ಇಕ್ವಿಟಿ

274.90

16.23%

2.

ಕೇರಳ ಸರ್ಕಾರದ ಇಕ್ವಿಟಿ

274.90

16.23%

3.

ಕೇಂದ್ರ ತೆರಿಗೆಯ ಶೇ 50 ರಷ್ಟು ಭಾರತ ಸರ್ಕಾರದ ಅಧೀನ ಸಾಲ

63.85

3.77%

4.

ಕೇಂದ್ರ ತೆರಿಗೆಯ ಶೇ 50 ರಷ್ಟು ಕೇರಳ ಸರ್ಕಾರದ ಅಧೀನ ಸಾಲ

63.85

3.77%

5.

ದ್ವಿಪಕ್ಷೀಯ/ಬಹುಪಕ್ಷೀಯ ಸಂಸ್ಥೆಗಳಿಂದ ಸಾಲ

1016.24

60.00%

6.

ಭೂಮಿ, ಆರ್ ಅಂಡ್ ಆರ್ ಮತ್ತು ಪಿಪಿಪಿ ಘಟಕಗಳನ್ನು ಹೊರತುಪಡಿಸಿ ಒಟ್ಟು ವೆಚ್ಚ

1693.74

100.00%

7.

ಆರ್ ಅಂಡ್ ಆರ್ ವೆಚ್ಚ ಸೇರಿದಂತೆ ಭೂಮಿಗಾಗಿ ಕೇರಳ ಸರ್ಕಾರದಿಂದ ಅಧೀನ ಸಾಲ

82.68

 

8.

ರಾಜ್ಯ ತೆರಿಗೆಗಳನ್ನು ಕೇರಳ ಸರ್ಕಾರ ಭರಿಸಬೇಕು

94.19

 

9.

ನಿರ್ಮಾಣ ವಲಯದಲ್ಲಿ [ಐಡಿಸಿ] ಸಾಲ ಮತ್ತು ಫ್ರೆಂಟ್ ಎಂಡ್ ಶುಲ್ಕಗಳಿಗೆ ಬಡ್ಡಿಯನ್ನು ಕೇರಳ ಸರ್ಕಾರ ಭರಿಸಬೇಕು

39.56

 

10.

ಪಿಪಿಪಿ ಕಾಂಪೋನೆಂಟ್ಸ್ [ಎ.ಎಫ್.ಸಿ]

46.88

 

11.

ಪೂರ್ಣಗೊಳ್ಳುವಾಗ ಒಟ್ಟು ವೆಚ್ಚ

1957.05

 

 

ಹಿನ್ನೆಲೆ:

ಕೊಚ್ಚಿ ಕೇರಳ ರಾಜ್ಯದ ಅತಿ ಹೆಚ್ಚು ಜನದಟ್ಟಣೆಯ ನಗರ ಮತ್ತು ಇದು ಮೆಟ್ರೋಪಾಲಿಟಿನ್ ವಲಯದ ಭಾಗವಾಗಿದ್ದು, ಕೇರಳದ ಅತಿದೊಡ್ಡ ನಗರ ಸಮೂಹವಾಗಿದೆ. ಕೊಚ್ಚಿ ಮೆಟ್ರೋಪಾಲಿಟಿನ್ ಪ್ರದೇಶದಲ್ಲಿ 2013 ರಲ್ಲಿ ಸುಮಾರು 20.8 ಲಕ್ಷ, 2021 ರಲ್ಲಿ 25.8 ಲಕ್ಷ ಜನ ಸಂಖ್ಯೆ ಇದ್ದು, 2031 ರಲ್ಲಿ ಜನ ಸಂಖ್ಯೆ 33.12 ಲಕ್ಷಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.

*****

 

 



(Release ID: 1857652) Visitor Counter : 166