ಪ್ರಧಾನ ಮಂತ್ರಿಯವರ ಕಛೇರಿ
ಬಾಂಗ್ಲಾದೇಶ ಪ್ರಧಾನಿಯವರ ಭಾರತ ಭೇಟಿ: ಫಲಿಶೃತಿಯ ಪಟ್ಟಿ
Posted On:
06 SEP 2022 2:46PM by PIB Bengaluru
ಅ. ಒಡಂಬಡಿಕೆ ಪಟ್ಟಿ/ ತಿಳಿವಳಿಕೆ ಪತ್ರಗಳ ವಿನಿಮಯ
ಕ್ರಮ ಸಂಖ್ಯೆ
|
ತಿಳಿವಳಿಕೆ ಪತ್ರ/ಒಡಂಬಡಿಕೆಗಳ ಹೆಸರು
|
ಭಾರತದ ಕಡೆಯಿಂದ ವಿನಿಮಯ
|
ಬಾಂಗ್ಲಾದೇಶ ಕಡೆಯಿಂದ ವಿನಿಯಮ
|
1
|
ಭಾರತ ಮತ್ತು ಬಾಂಗ್ಲಾದೇಶದ ಸಾಮಾನ್ಯ ಗಡಿ ಭಾಗದ ಕುಶಿಯಾರ ನದಿಯಿಂದ ನೀರನ್ನು ಹಿಂಪಡೆಯುವ ಕುರಿತು ಭಾರತ ಸರ್ಕಾರದ ಜಲ ಶಕ್ತಿ ಸಚಿವಾಲಯ ಮತ್ತು ಬಾಂಗ್ಲಾದೇಶದ ಜಲ ಸಂಪನ್ಮೂಲ ಸಚಿವಾಲಯದ ನಡುವೆ ತಿಳಿವಳಿಕೆ ಪತ್ರದ ವಿನಿಮಯ
|
ಶ್ರೀ ಪಂಕಜ್ ಕುಮಾರ್, ಕಾರ್ಯದರ್ಶಿ, ಜಲ ಶಕ್ತಿ ಸಚಿವಾಲಯ
|
ಶ್ರೀ ಕಬೀರ್ ಬಿನ್ ಅನ್ವರ್, ಹಿರಿಯ ಕಾರ್ಯದರ್ಶಿ, ಜಲ ಸಂಪನ್ಮೂಲ ಸಚಿವಾಲಯ
|
2
|
ಬಾಂಗ್ಲಾದೇಶದ ರೈಲ್ವೆ ಸಿಬ್ಬಂದಿಗೆ ಭಾರತದಲ್ಲಿ ತರಬೇತಿ ನೀಡುವ ಕುರಿತು ರೈಲ್ವೆ ಸಚಿವಾಲಯ [ರೈಲ್ವೆ ಮಂಡಳಿ] ಭಾರತ ಸರ್ಕಾರ ಮತ್ತು ಬಾಂಗ್ಲಾದೇಶದ ರೈಲ್ವೆ ಸಚಿವಾಲಯ ನಡುವೆ ತಿಳಿವಳಿಕೆ ಪತ್ರದ ವಿನಿಯಮ
|
ಶ್ರೀ ವಿನಯ್ ಕುಮಾರ್ ತ್ರಿಪಾಠಿ, ಅಧ್ಯಕ್ಷರು, ರೈಲ್ವೆ ಮಂಡಳಿ
|
ಶ್ರೀ. ಮುಹಮ್ಮದ್ ಇಮ್ರಾನ್, ಭಾರತದಲ್ಲಿ ಬಾಂಗ್ಲಾದೇಶದ ರಾಯಭಾರಿ
|
3
|
ಬಾಂಗ್ಲಾದೇಶದ ರೈಲ್ವೆಗಾಗಿ ಎಫ್.ಒ.ಐ.ಎಸ್ ನಂತಹ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ಮತ್ತು ಇತರೆ ಮಾಹಿತಿ ತಂತ್ರಜ್ಞಾನ ಅಪ್ಲಿಕೇಶನ್ ಒದಗಿಸಲು ಭಾರತ ಸರ್ಕಾರದ ರೈಲ್ವೆ ಸಚಿವಾಲಯ [ರೈಲ್ವೆ ಮಂಡಳಿ] ಹಾಗೂ ಬಾಂಗ್ಲಾದೇಶ ಸರ್ಕಾರದ ರೈಲ್ವೆ ಸಚಿವಾಲಯ ನಡುವೆ ತಿಳಿವಳಿಕೆ ಪತ್ರದ ವಿನಿಯಮ
|
ಶ್ರೀ ವಿನಯ್ ಕುಮಾರ್ ತ್ರಿಪಾಠಿ, ಅಧ್ಯಕ್ಷರು, ರೈಲ್ವೆ ಮಂಡಳಿ
|
ಶ್ರೀ. ಮುಹಮ್ಮದ್ ಇಮ್ರಾನ್, ಭಾರತದಲ್ಲಿ ಬಾಂಗ್ಲಾದೇಶದ ರಾಯಭಾರಿ
|
4
|
ಬಾಂಗ್ಲಾದೇಶದ ನ್ಯಾಯಾಂಗ ಅಧಿಕಾರಿಗಳಿಗೆ ಭಾರತದಲ್ಲಿ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ ಕುರಿತು ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿ ಮತ್ತು ಬಾಂಗ್ಲಾದೇಶದ ಸವೋಚ್ಛ ನ್ಯಾಯಾಲಯದ ನಡುವೆ ತಿಳಿವಳಿಕೆ ಪತ್ರದ ವಿನಿಯಮ
|
ಶ್ರೀ ವಿಕ್ರಮ್ ಕೆ. ದೊರೈಸ್ವಾಮಿ, ಬಾಂಗ್ಲಾದೇಶದಲ್ಲಿನ ಭಾರತದ ರಾಯಭಾರಿ
|
ಶ್ರೀ ಮೊಹಮ್ಮದ್ ಗೋಲಮ್ ರಬ್ಬಾನಿ, ರಿಜಿಸ್ಟ್ರಾರ್ ಜನರಲ್, ಬಾಂಗ್ಲಾದೇಶ ಸುಪ್ರೀಂ ಕೋರ್ಟ್
|
5
|
ಭಾರತದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ ಮಂಡಳಿ [ಸಿ.ಎಸ್.ಐ.ಆರ್] ಮತ್ತು ಬಾಂಗ್ಲಾದೇಶದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ನಡುವೆ ವೈಜ್ಞಾನಿಕ ಮತ್ತು ತಂತ್ರಜ್ಞಾನ ಸಹಕಾರ ಕುರಿತ ತಿಳಿವಳಿಕೆ ಪತ್ರದ ವಿನಿಯಮ
|
ಡಾ. ಎನ್. ಕಲೈಸೆಲ್ವಿ, ಮಹಾನಿರ್ದೇಶಕರು, ಸಿ.ಎಸ್.ಐ.ಆರ್
|
ಡಾ. ಮೊಹಮ್ಮದ್ ಅಪ್ತಾಬ್ ಅಲಿ ಶೇಖ್, ಅಧ್ಯಕ್ಷರು, ಬಿಸಿಎಸ್ಐಆರ್
|
6
|
ಬಾಹ್ಯಾಕಾಶ ತಂತ್ರಜ್ಞಾನ ವಲಯದಲ್ಲಿ ಸಹಕಾರ ಕುರಿತ ತಿಳಿವಳಿಕೆ ಪತ್ರದ ವಿನಿಮಯ
|
ಶ್ರೀ ಡಿ. ರಾಧಾಕೃಷ್ಣನ್, ಎನ್.ಎಸ್.ಐ.ಎಲ್ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು,
|
ಡಾ. ಶಹಜಹನ್ ಮೊಹಮೂದ್, ಬಿ.ಎಸ್.ಸಿ.ಎಲ್ ಅಧ್ಯಕ್ಷರು ಮತ್ತು ಸಿಇಒ
|
7
|
ಪ್ರಸಾರ ವಲಯದಲ್ಲಿ ಸಹಕಾರ ಕುರಿತು ಪ್ರಸಾರ ಭಾರತಿ ಮತ್ತು ಬಾಂಗ್ಲಾದೇಶ ಟೆಲಿವಿಷಯನ್ [ಬಿಟಿವಿ] ನಡುವೆ ತಿಳಿವಳಿಕೆ ಪತ್ರದ ವಿನಿಯಮ
|
ಶ್ರೀ ಮಾಯಾಂಕ್ ಕುಮಾರ್ ಅಗರ್ವಾಲ್, ಸಿಇಒ, ಪ್ರಸಾರ ಭಾರತಿ
|
ಶ್ರೀ ಶೋರ್ಹಬ್ ಹೊಸೈನಿ, ನಿರ್ದೇಶಕರು, ಬಿಟಿವಿ
|
ಬ. ಉದ್ಘಾಟನೆಗೊಂಡ/ಘೋಷಿಸಿದ/ಅನಾವರಣಗೊಂಡ ಯೋಜನೆಗಳ ಪಟ್ಟಿ
1. ಅನಾವರಣಗೊಂಡ ಮೈಟ್ರೀ ವಿದ್ಯುತ್ ಘಟಕ – ಖುಲ್ನಾದ ರಾಂಫಲ್ ನಲ್ಲಿ 1320 [660x2] ಮೆಗವ್ಯಾಟ್ ಸೂಪರ್ ಕ್ರಿಟಿಕಲ್ ಕಲ್ಲಿದ್ದಲು –ಚಾಲಿತ ಶಾಖೋತ್ಪನ್ನ ವಿದ್ಯುತ್ ಸ್ಥಾವರವನ್ನು ಅಂದಾಜು 2 ಶತಕೋಟಿ ಡಾಲರ್ ಮೊತ್ತದಲ್ಲಿ ಸ್ಥಾಪಿಸಲಾಗುತ್ತಿದ್ದು, ಭಾರತದ ರಿಯಾಯಿತಿ ಹಣಕಾಸು ಯೋಜನೆಯಡಿ 1.6 ಶತಕೋಟಿ ರೂಪಾಯಿ ಭಾರತೀಯ ಅಭಿವೃದ್ಧಿ ನೆರವನ್ನು ಈ ಯೋಜನೆಗೆ ನೀಡಲಾಗುತ್ತಿದೆ.
2. ರುಪ್ಸಾ ಸೇತುವೆ ಉದ್ಘಾಟನೆ – 5.13 ಕಿಲೋಮೀಟರ್ ಉದ್ಧದ ರುಪ್ಸಾ ಸೇತುವೆ 64.7 ಕಿಲೋಮೀಟರ್ ಖುಲ್ನಾ – ಮಂಗ್ಲಾ ಬಂದರಿನ ಸಿಂಗಲ್ ಟ್ರ್ಯಾಕ್ ಬ್ರಾಡ್ ಗೇಜ್ ರೈಲು ಈ ಯೋಜನೆಯ ಪ್ರಮುಖ ಭಾಗವಾಗಿದ್ದು, ಮೊದಲ ಬಾರಿಗೆ ಮೊಂಗ್ಲಾ ಬಂದರನ್ನು ಖುಲ್ನಾದೊಂದಿಗೆ ಸಂಪರ್ಕಿಸುತ್ತದೆ. ಆದ್ದರಿಂದ ಕೇಂದ್ರ ಮತ್ತು ಉತ್ತರ ಬಾಂಗ್ಲಾದೇಶ ಮತ್ತು ಭಾರತದ ಗಡಿ ಪತ್ರಪೊಲೆ ಹಾಗೂ ಪಶ್ವಿಮ ಬಂಗಾಳದ ಗೆಡೆಯನ್ನು ಈ ಮಾರ್ಗ ಸಂಪರ್ಕಿಸುತ್ತದೆ.
3. ರಸ್ತೆ ನಿರ್ಮಾಣ ಪರಿಕರ ಮತ್ತು ಯಂತ್ರೋಪಕರಣಗಳ ಪೂರೈಕೆ – ಬಾಂಗ್ಲಾದೇಶದ ಹೆದ್ದಾರಿ ಮತ್ತು ರಸ್ತೆ ಇಲಾಖೆಗೆ 25 ಪ್ಯಾಕೇಜ್ ಗಳಡಿ ರಸ್ತೆ ಮತ್ತು ನಿರ್ವಹಣೆ ಪರಿಕರಗಳು ಹಾಗೂ ಯಂತ್ರೋಪಕರಣಗಳನ್ನು ಪೂರೈಸುವುದನ್ನು ಇದು ಒಳಗೊಂಡಿದೆ.
4. ಖುಲ್ನಾ ದರ್ಶನ್ ರೈಲ್ವೆ ಮಾರ್ಗದ ಸಂಪರ್ಕ ಯೋಜನೆ – ಇದು ಗಡೆ ದರ್ಶನಾದಿಂದ ಖುಲ್ನಾಗೆ ಪ್ರಸ್ತುತ ಗಡಿಯಾಚೆಗಿನ ಮಾರ್ಗವನ್ನು ಸಂಪರ್ಕಿಸುವ, ಅಸ್ಥಿತ್ವದಲ್ಲಿರುವ [ಬ್ರಾಡ್ ಗೇಜ್ ಮಾರ್ಗದ ದ್ವಿಪಥ] ಮೂಲ ಸೌಕರ್ಯವನ್ನು ಮೇಲ್ದರ್ಜೆಗೇರಿಸುತ್ತದೆ. ಆ ಮೂಲಕ ಎರಡೂ ದೇಶಗಳ ನಡುವೆ ವಿಶೇಷವಾಗಿ ಢಾಕಾಗಿ ಮಾತ್ರವಲ್ಲದೇ ಭವಿಷ್ಯದಲ್ಲಿ ಮೊಂಗ್ಲಾದ ಬಂದರಿಗೆ ರೈಲು ಸಂಪರ್ಕವನ್ನು ಹೆಚ್ಚಿಸುತ್ತದೆ. ಈ ಯೋಜನೆಯ ಅಂದಾಜು ವೆಚ್ಚ 312.48 ದಶಲಕ್ಷ ಡಾಲರ್.
5. ಪರ್ಬತಿಪುರ್ – ಕೌನಿಯಾ ರೈಲ್ವೆ ಮಾರ್ಗ – ಹಾಲಿ ಇರುವ ಮೀಟರ್ ಗೇಜ್ ಮಾರ್ಗವನ್ನು ದ್ವಿಪಥ ಮಾರ್ಗವಾಗಿ ಪರಿವರ್ತಿಸುವ 120.41 ದಶಲಕ್ಷ ಡಾಲರ್ ಅಂದಾಜು ವೆಚ್ಚದ ಯೋಜನೆಯಾಗಿದೆ. ಈ ಯೋಜನೆಯು ಹಾಲಿ ಗಡಿಯಾಚೆಯ ಬಿರೋಲ್ [ಬಾಂಗ್ಲಾದೇಶ] – ರಾಧಿಕಾಪುರ್ [ಪಶ್ಚಿಮ ಬಂಗಾಳ] ನಡುವೆ ಸಂಪರ್ಕಿಸುತ್ತದೆ ಮತ್ತು ದ್ವಿಪಕ್ಷೀಯ ರೈಲ್ವೆ ಸಂಪರ್ಕವನ್ನು ವೃದ್ಧಿಸುತ್ತದೆ.
*****
(Release ID: 1857263)
Visitor Counter : 230
Read this release in:
English
,
Urdu
,
Hindi
,
Marathi
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam