ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಜಗತ್ತಿನೆಲ್ಲೆಡೆ ಇರುವ ಚಾರ್ಟೆಡ್ ಅಕೌಂಟೆಂಟ್ ಗಳು ಭಾರತದ ಬ್ರ್ಯಾಂಡ್ ರಾಯಭಾರಿಗಳಾಗುವಂತೆ ಶ್ರೀ ಪಿಯೂಷ್ ಗೋಯಲ್ ಕರೆ  


ಭಾರತದಲ್ಲಿನ ಚಾರ್ಟೆಡ್ ಅಕೌಂಟೆನ್ಸಿ ಸಂಸ್ಥೆಗಳು ಜಾಗತಿಕ ಪಾಲುದಾರಿಕೆಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳಾಗುವಂತೆ ಕರೆ

ಚಾರ್ಟೆಡ್ ಅಕೌಂಟೆಂಟ್ ಗಳು ತಮ್ಮ ಉತ್ತಾರಾಧಿಕಾರಿಗಳು ಬಿಟ್ಟು ಹೋದ ಅಪಾರವಾದ ವಿಶ್ವಾಸ, ಪ್ರಾಮಾಣಿಕತೆ ಮತ್ತು ಉನ್ನತ ಗುಣಮಟ್ಟಕ್ಕೆ ಸದಾ ನ್ಯಾಯ ಕೇಳುತ್ತಾರೆ 

ಜಗತ್ತಿನಾದ್ಯಂತ 100 ಕಚೇರಿಗಳನ್ನು ಆರಂಭಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವಂತೆ ಐಸಿಎಐಗೆ ಕರೆ 

Posted On: 06 SEP 2022 9:36AM by PIB Bengaluru

ವಿಶ್ವದಾದ್ಯಂತ ಇರುವ ಚಾರ್ಟರ್ಡ್ ಅಕೌಂಟೆಂಟ್‌ಗಳನ್ನು ಬ್ರಾಂಡ್ ಇಂಡಿಯಾದ ರಾಯಭಾರಿಗಳಾಗುವಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ, ಗ್ರಾಹಕ ವ್ಯವಹಾರ, ಆಹಾರ ಮತ್ತು ಪಡಿತರ ವಿತರಣೆ ಮತ್ತು ಜವಳಿ ಖಾತೆ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಇಂದು ಕರೆ ನೀಡಿದರು. ಅವರು ಅಮೆರಿಕಾದ 6 ಪ್ರಾಂತ್ಯಗಳಲ್ಲಿ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಇನ್ಸ್ಟಿಟ್ಯೂಟ್ (ಐಸಿಎಐ) ಕಚೇರಿಗಳನ್ನು ಆರಂಭಿಸಿದ ನಂತರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 


ವೃತ್ತಿಯನ್ನು ಮತ್ತಷ್ಟು ಮುಂದೆ ಕೊಂಡೊಯ್ಯಲು ಐಸಿಎಐನ ಪದಾಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿರುವುದಕ್ಕೆ  ಸಚಿವರು ಅವರನ್ನು ಅಭಿನಂದಿಸಿದರು.

 
ಆಜಾದಿ ಕಾ ಅಮೃತ ಮಹೋತ್ಸವದ ಶುಭಾಶಯಗಳನ್ನು ತಿಳಿಸಿದ ಶ್ರೀ ಪಿಯೂಷ್ ಗೋಯಲ್,  ಭಾರತವು ಮತ್ತಷ್ಟು ಶಕ್ತಿಯುತವಾಗಿ ಬೆಳೆದು ಬಲವರ್ಧನೆ ಮಾಡಿಕೊಳ್ಳಲು ಮತ್ತು ಭೌಗೋಳಿಕ ರಾಜಕೀಯ ಕ್ಷೇತ್ರಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದುಕೊಳ್ಳಲು ಮುಂದಿನ 25 ವರ್ಷ ತುಂಬಾ ನಿರ್ಣಾಯಕ ಕಾಲ ಎಂದು ಅವರು ಹೇಳಿದರು. ಭಾರತದ ಈ ಪಯಣದಲ್ಲಿ ಐಸಿಎಐ ಕೂಡ ನಿರ್ಣಾಯಕ ಪಾತ್ರವನ್ನು ಹೊಂದಿದೆ ಎಂದು ಅವರು ಐಸಿಎಐ ನೂರನೇ ಅಂತಾರಾಷ್ಟ್ರೀಯ ಕಚೇರಿಯನ್ನು ಹೊಂದಲಿರುವ ಸಮಯವನ್ನು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು. 


ವಿಶ್ವದಾದ್ಯಂತ ಚಾರ್ಟರ್ಡ್ ಅಕೌಂಟೆಂಟ್‌ಗಳು ಆರ್ಥಿಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ ಎಂದು ಬಲವಾಗಿ ಪ್ರಸ್ತಾಪಿಸಿದ ಸಚಿವರು, ಚಾರ್ಟರ್ಡ್ ಅಕೌಂಟೆಂಟ್ ವೃತ್ತಿಪರರು ಪ್ರಾಮಾಣಿಕತೆಯ ಪಾಲಕರು ಎಂದು ಬಣ್ಣಿಸಿದರು. ಸಿಎ ಸಹಿಯ ಮಹತ್ವವನ್ನು ಉಲ್ಲೇಖಿಸಿದ ಶ್ರೀ ಪಿಯೂಷ್ ಗೋಯಲ್ ಅವರು ಪ್ರಾಮಾಣಿಕತೆ ಮತ್ತು ದಕ್ಷತೆಯ ಸಂಕೇತವಾಗಿದೆ, ಈ ಸಹಿಯ ಮೌಲ್ಯವು ಸಿಎಗಳ ಕಾರ್ಯವನ್ನು ಇನ್ನಷ್ಟು ಗಂಭೀರ ಮತ್ತು ನಿರ್ಣಾಯಕಗೊಳಿಸಿದೆ ಎಂದರು. 


118 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 2022ರ ನವೆಂಬರ್ ನಲ್ಲಿ ಮುಂಬೈನಲ್ಲಿ ನಡೆಯಲಿರುವ 21 ನೇ ವಿಶ್ವ ಲೆಕ್ಕಪರಿಶೋಧಕರ ಸಮಾವೇಶವನ್ನು ಉಲ್ಲೇಖಿಸಿದ ಶ್ರೀ ಪಿಯೂಷ್ ಗೋಯಲ್,  ಭಾರತವು ಜಿ-20 ಅಧ್ಯಕ್ಷತೆಯ ಉತ್ತುಂಗದಲ್ಲಿದ್ದಾಗ ಈ ಸಮಾವೇಶ ನಡೆಯಲಿದೆ ಎಂದು ಹೇಳಿದರು. ಹಲವು ರಾಷ್ಟ್ರಗಳ ಒಡನಾಟದಲ್ಲಿ ಭಾರತದ ಮನ್ನಣೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಿದರು. 


ತಲ್ಲಣಗೊಂಡಿರುವ ಜಗತ್ತಿನಲ್ಲಿ ಭಾರತವು ಸ್ಥಿರತೆಯ ದ್ವೀಪವಾಗಿದೆ ಎಂದು ಉಲ್ಲೇಖಿಸಿದ ಸಚಿವರು,  ಭಾರತವು ಇಂದು ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದರು. ಹಣದುಬ್ಬರದ ಮೇಲೆ ಭಾರತದ ನಿರಂತರ ನಿಗಾವಹಿಸುತ್ತಿದೆ ಎಂದು ಬಲವಾಗಿ ಪ್ರತಿಪಾದಿಸಿದ ಶ್ರೀ ಪಿಯೂಷ್ ಗೋಯಲ್ ಅವರು 2014ರಿಂದ ಹಣದುಬ್ಬರವು ಆರ್ ಬಿಐನ  ಪ್ರಾಥಮಿಕ ಆದ್ಯತೆಯಾಗಿದೆ ಎಂಬುದನ್ನು ಸರ್ಕಾರ ಖಾತ್ರಿಪಡಿಸಿದೆ ಮತ್ತು 2014 ರಿಂದ ಭಾರತವು ಸರಾಸರಿ ಶೇ 4.5ರಷ್ಟು ಹಣದುಬ್ಬರವನ್ನು ಕಂಡಿದೆ, ಇದು ಸ್ವಾತಂತ್ರ್ಯದ ನಂತರ ಕಳೆದ 8 ವರ್ಷಗಳಲ್ಲಿ ನಾವು ಕಂಡ ಅತ್ಯಂತ ಕಡಿಮೆ ಪ್ರಮಾಣವಾಗಿದೆ ಎಂದರು.  


ವಿಶ್ವದಲ್ಲಿನ ಸದ್ಯದ ಅನಿಶ್ಚಿತತೆಯಿಂದ ಕೂಡಿರುವ ಹಣದುಬ್ಬರದ ಸನ್ನಿವೇಶದ ಕುರಿತು ಪ್ರಸ್ತಾಪಿಸಿದ ಅವರು, ಭಾರತವು ಇಂದು ವಿಶ್ವದ ಅತಿ ಹೆಚ್ಚಿನ ಒಲವು ಹೊಂದಿರುವ ಹೂಡಿಕೆ ತಾಣಗಳಲ್ಲಿ ಒಂದಾಗಿದೆ ಮತ್ತು ಆದ್ಯತೆಯ ಪಾಲುದಾರ ರಾಷ್ಟ್ರವಾಗಿದೆ ಎಂದು ಹೇಳಿದರು. ಜಾಗತಿಕ ನಾಯಕರು ದ್ವಿಪಕ್ಷೀಯ ಒಪ್ಪಂದಗಳ ಮೂಲಕ ಭಾರತದೊಂದಿಗೆ ತಮ್ಮ ಪಾಲುದಾರಿಕೆ ಮತ್ತು ವ್ಯಾಪಾರವನ್ನು ವಿಸ್ತರಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ನಾವು ಆಸ್ಟ್ರೇಲಿಯಾ ಮತ್ತು ಸಂಯುಕ್ತ ಅರಬ್ ಎಮಿರೇಟ್ಸ್ ನೊಂದಿಗೆ ಎರಡು ಯಶಸ್ವಿ ಎಫ್‌ಟಿಎಗಳನ್ನು ಹೊಂದಿದ್ದೇವೆ ಮತ್ತು ನಾವು ಯುನೈಟೆಡ್ ಕಿಂಗ್ ಡಂ ಜೊತೆಗಿನ ಮಾತುಕತೆಯ ಮುಂದುವರಿದಿದೆ ಮತ್ತು ಬಹುಶಃ ದೀಪಾವಳಿಯ ವೇಳೆಗೆ ಆ ಮಾತುಕತೆ ಸಮಾಪನಗೊಳ್ಳುವ ಸಾಧ್ಯತೆ ಎಂದು ಅವರು ಹೇಳಿದರು. 


ಭಾರತದಲ್ಲಿ ಆರ್ಥಿಕ ಸುಧಾರಣೆಗಳಾದ ಜಿಎಸ್‌ಟಿ, ಐಬಿಸಿ, ಡಿಕ್ರಿಮಿನಲೈಜೇಷನ್ ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಪಾಲನೆ ಅಂಶಗಳ ಕಡಿತ, ಭಾರತಕ್ಕೆ ಬರುವ ಹೊಸ ಹೂಡಿಕೆದಾರರಿಗೆ ಕಡಿಮೆ ಕಾರ್ಪೊರೇಟ್ ತೆರಿಗೆ, ಲಾಭಾಂಶ ವಿತರಣಾ ತೆರಿಗೆಗಳನ್ನು ತೆಗೆದುಹಾಕುವುದು ಮತ್ತು ರಾಷ್ಟ್ರೀಯ ಏಕ ಗವಾಕ್ಷಿ  ಯೋಜನೆ ಮೊದಲಾದವುಗಳ ಮೂಲಕ ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸಲು ಭಾರತದಲ್ಲಿ ಎಲ್ಲ ರೀತಿಯ ಹೊಸ ಉತ್ಸಾಹದ ವಾತಾವರಣವನ್ನು ಸೃಷ್ಟಿಸಲಾಗಿದೆ ಎಂದು ಸಚಿವರು ಮಾತನಾಡಿದರು. 


ಜಗತ್ತಿನಾದ್ಯಂತ ಇರುವ ಐಸಿಎಐ ಮತ್ತು ಅದರ ಸದಸ್ಯರಿಗೆ ನಾಲ್ಕು ಕ್ರಮಗಳನ್ನು ಕೈಗೊಳ್ಳಬೇಕೆಂದು ಶ್ರೀ ಪಿಯೂಷ್ ಗೋಯಲ್ ಅವರು ಕರೆ ನೀಡಿದರು. ಅವುಗಳೆಂದರೆ,


•    ಭಾರತದಲ್ಲಿ ಲಭ್ಯವಿರುವ ವಿಪುಲ ಹೂಡಿಕೆ ಅವಕಾಶಗಳ ಕುರಿತು ಅವರು ತಮ್ಮ ಅಂತಾರಾಷ್ಟ್ರೀಯ ಗ್ರಾಹಕರಿಗೆ ತಿಳಿಸಿಕೊಡಬೇಕು ಎಂದು ಆಗ್ರಹಿಸಿದರು. 
•    ಐಸಿಎಐನ ಪ್ರತಿಯೊಬ್ಬ ಸದಸ್ಯರು ಬ್ರ್ಯಾಂಡ್ ಇಂಡಿಯಾದ ರಾಯಭಾರಿಗಳಾಗಬೇಕು ಮತ್ತು ಭಾರತವು ಸ್ಪರ್ಧಾತ್ಮಕ ಬೆಲೆಗಳಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನೀಡುತ್ತಿರುವ ಸಂದೇಶವನ್ನು ಹರಡಲು ಸಹಾಯ ಮಾಡಬೇಕು ಎಂದು ಅವರು ಕರೆ ನೀಡಿದರು. ಭಾರತದ ರಫ್ತು ಪ್ರಮಾಣ ಗಣನೀಯವಾಗಿ ವಿಸ್ತರಣೆಗೊಂಡಿದೆ. ನಾವು ಒಂದು ಕ್ರಿಯಾಶೀಲ ಜಿಲ್ಲೆ, ಒಂದು ಉತ್ಪನ್ನ (ಒಡಿಒಪಿ) ಉಪಕ್ರಮವನ್ನು ಹೊಂದಿದ್ದೇವೆ ಮತ್ತು ಆತ್ಮನಿರ್ಭರ ಭಾರತವು ನಮ್ಮ ಪ್ರಗತಿಯ ಮೂಲ ತತ್ವವಾಗಿದೆ ಎಂದು ಅವರು ಹೇಳಿದರು. 
•    ಪ್ರಪಂಚದಾದ್ಯಂತ ಇರುವ ಐಸಿಎಐ ಸದಸ್ಯರು ಸಾಧ್ಯವಾದ ಕಡೆಗಳಲೆಲ್ಲಾ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ವಿಶೇಷವಾಗಿ ಉಡುಗೊರೆಗಾಗಿ ಬಳಕೆ ಮಾಡಬೇಕೆಂದು ಸಚಿವರು ಕೋರಿದರು. ಸಬ್ ಕಾ ಪ್ರಯಾಸ್ ಘೋಷವಾಕ್ಯವು ಪ್ರಪಂಚದ ಪ್ರತಿಯೊಬ್ಬ ಭಾರತೀಯರಿಗೂ ಅನ್ವಯಿಸುತ್ತದೆ ಎಂದು ಅವರು ಒತ್ತಿ ಹೇಳಿದರು. 
•    ಭಾರತದ ಚಾರ್ಟರ್ಡ್ ಅಕೌಂಟೆನ್ಸಿ ಸಂಸ್ಥೆಗಳು, ಜಾಗತಿಕ ಪಾಲುದಾರಿಕೆ ಅಭಿವೃದ್ಧಿಪಡಿಸಿಕೊಳ್ಳಬೇಕು ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳಾಗಲು ಪ್ರಯತ್ನಿಸಬೇಕು ಎಂದು ಶ್ರೀ ಪಿಯೂಷ್ ಗೋಯಲ್ ಕರೆ ನೀಡಿದರು. ನಮ್ಮ ಪೂರ್ವಜರು ಬಿಟ್ಟು ಹೋಗಿರುವ ನಂಬಿಕೆ, ಪ್ರಾಮಾಣಿಕತೆ ಮತ್ತು ಉನ್ನತ ಗುಣಮಟ್ಟಗಳ ಪರಂಪರೆಯು ಜಗತ್ತು ನಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ನ್ಯಾಯ ಸಲ್ಲಿಸಲು ನಮಗೆ ಸದಾ ಸ್ಫೂರ್ತಿ ನೀಡಬೇಕು ಎಂದು ಸಚಿವರು ಕರೆ ನೀಡಿದರು.

 

*****


(Release ID: 1857115) Visitor Counter : 161