ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ ಅನಾವರಣ, ವಿವಿಧ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮುಕ್ತ

Posted On: 05 SEP 2022 1:06PM by PIB Bengaluru

ಭಾರತ ಸರ್ಕಾರದ ವಿವಿಧ ಸಚಿವಾಲಯಗಳು, ಇಲಾಖೆಗಳು, ಏಜೆನ್ಸಿಗಳ ಎಲ್ಲಾ ಪ್ರಶಸ್ತಿಗಳನ್ನು ಒಂದೇ ವೇದಿಕೆಯಡಿ ತರಲು ಕೇಂದ್ರ ಸರ್ಕಾರ, ಸಾಮಾನ್ಯ ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ (https://awards.gov.in) ಅನ್ನು ಅಭಿವೃದ್ಧಿಪಡಿಸಿದೆ. ಪ್ರಶಸ್ತಿ ನೀಡಿಕೆಯಲ್ಲಿ ಪಾರದರ್ಶಕತೆ ಕಾಪಾಡಲು ಮತ್ತು ಸಾರ್ವಜನಿಕ ಪಾಲುದಾರಿಕೆ ಖಚಿತಪಡಿಸುವುದು ಇದರ ಉದ್ದೇಶವಾಗಿದೆ. ಭಾರತ ಸರ್ಕಾರವು ಸ್ಥಾಪಿಸಿರುವ ವಿವಿಧ ಪ್ರಶಸ್ತಿಗಳಿಗೆ ವ್ಯಕ್ತಿಗಳು, ಸಂಘ ಸಂಸ್ಥೆಗಳನ್ನು ನಾಮನಿರ್ದೇಶನ ಮಾಡಲು ಪ್ರತಿಯೊಬ್ಬ ನಾಗರಿಕರು ಅಥವಾ ಸಂಘ ಸಂಸ್ಥೆಗಳನ್ನು ಈ ಪೋರ್ಟಲ್ ಸುಗಮಗೊಳಿಸುತ್ತದೆ.


ಪ್ರಸ್ತುತ, ಕೆಳಕಂಡ ಪ್ರಶಸ್ತಿಗಳಿಗೆ ನಾಮನಿರ್ದೇಶ ಅಥವಾ ಶಿಫಾರಸುಗಳನ್ನು ಮುಕ್ತಗೊಳಿಸಲಾಗಿದೆ ಅಥವಾ ತೆರೆಯಲಾಗಿದೆ: 


1.    ಪದ್ಮ ಪ್ರಶಸ್ತಿಗಳು – ಕೊನೆಯ ದಿನಾಂಕ 15.09.2022
2.    ಡಿಜಿಟಲ್ ಇಂಡಿಯಾ ಪ್ರಶಸ್ತಿಗಳು – ಕೊನೆಯ ದಿನಾಂಕ 15.09.2022
3.    ಅರಣ್ಯ ಕ್ಷೇತ್ರದಲ್ಲಿ ಶ್ರೇಷ್ಠತೆಯ ರಾಷ್ಟ್ರೀಯ ಪ್ರಶಸ್ತಿ 2022 – ಕೊನೆಯ ದಿನಾಂಕ 30.09.2022 
4.    ರಾಷ್ಟ್ರೀಯ ಗೋಪಾಲ್ ರತ್ನ ಪ್ರಶಸ್ತಿ 2022 - ಕೊನೆ ದಿನಾಂಕ 30.09.2022
5.    ರಾಷ್ಟ್ರೀಯ ಜಲ ಸಂರಕ್ಷಣೆ ಪ್ರಶಸ್ತಿಗಳು 2022 – ಕಡೆ ದಿನಾಂಕ 15.09.2022
6.    ನಾರಿಶಕ್ತಿ ಪುರಸ್ಕಾರ 2023 – ಕೊನೆಯ ದಿನಾಂಕ 31.10.2022
7.    ಸುಭಾಷ್ ಚಂದ್ರ ಭೋಸ್ ಆಪದಾ ಪ್ರಬಂಧನ್ ಪುರಸ್ಕಾರ 2023 – ಕೊನೆಯ ದಿನಾಂಕ 30.09.2022
8.    ಜೀವನ್ ರಕ್ಷಾ ಪದಕ – ಕೊನೆಯ ದಿನಾಂಕ 30.09.2022

ಹೆಚ್ಚಿನ ಮಾಹಿತಿ ಪಡೆಯಲು ಮತ್ತು ನಾಮನಿರ್ದೇಶನ ಮಾಡಲು, ರಾಷ್ಟ್ರೀಯ ಪುರಸ್ಕಾರ್ ಪೋರ್ಟಲ್ ಭೇಟಿ ನೀಡಿ ಅಥವಾ ಪ್ರವೇಶಿಸಿ (https://awards.gov.in).


(Release ID: 1856956) Visitor Counter : 239