ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಗರ್ಭಕಂಠದ ಕ್ಯಾನ್ಸರ್ ನಿಯಂತ್ರಿಸಲು ಭಾರತ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಮೊದಲ ಲಸಿಕೆ ‘ಸೆರ್ವವಾಕ್’ CERVAVAC ಕುರಿತು ಪ್ರಕಟಿಸಿದ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್
ಗರ್ಭಕಂಠ ಕ್ಯಾನ್ಸರ್ ಭಾರತದಲ್ಲಿ ಕಂಡುಬರುತ್ತಿರುವ ಎರಡನೇ ಅತಿ ಹೆಚ್ಚು ಕ್ಯಾನ್ಸರ್ ಆಗಿದೆ ಮತ್ತು ಬಹುತೇಕ ತಡೆಗಟ್ಟಬಹುದಾದ ಕ್ಯಾನ್ಸರ್ ಅಗಿರುವುದರ ಹೊರತಾಗಿಯೂ ವಿಶ್ವದಲ್ಲಿ ಸುಮಾರು ನಾಲ್ಕನೇ ಒಂದು ಭಾಗ ಗರ್ಭಕಂಠದ ಕ್ಯಾನ್ಸರ್ ನಿಂದಾಗಿ ಸಾವು
ಡಿಬಿಟಿ ಮತ್ತು ಬಿರಾಕ್ ಗೆ ಇಂದು ಕೈಗೆಟುವ ಮತ್ತು ಪರಿಣಾಮಕಾರಿ ಲಸಿಕೆಯ ಮಹತ್ವದ ದಿನ; ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಕನಸು ಸಾಕಾರಕ್ಕೆ ಸನಿಹ : ಡಾ.ಜಿತೇಂದ್ರ ಸಿಂಗ್
ಭಾರತದಲ್ಲಿ ಲಸಿಕೆ ಮತ್ತು ಔಷಧಗಳ ಉತ್ಪಾದನೆಗಾಗಿ ಖಾಸಗಿ ಮತ್ತು ಸರ್ಕಾರಿ ವಲಯದ ನಡುವೆ ಸಹಭಾಗಿತ್ವಕ್ಕೆ ಸೆರಂ ಇನ್ಸಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಸಿ.ಪೂನವಾಲ
ಕರೆ
ಅಂಡಾಶಯ ಕ್ಯಾನ್ಸರ್ ವಿರುದ್ಧ ದಿಟ್ಟತನದಿಂದ ಹೋರಾಡಿ ಯಶಸ್ವಿಯಾದ ಖ್ಯಾತ ಚಿತ್ರ ನಟಿ ಮನಿಷಾ ಕೊರಿಯಾಲ; ವರ್ಚುವಲ್ ಮೂಲಕ ಭಾಗಿ - ಈ ಮಹತ್ವದ ಮೈಲಿಗಲ್ಲು ಸಾಧನೆಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ವಿಶೇಷವಾಗಿ ಡಿಬಿಟಿಗೆ ಕೃತಜ್ಞತೆ ಸಲ್ಲಿಕೆ
Posted On:
01 SEP 2022 3:49PM by PIB Bengaluru
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ (ಸ್ವತಂತ್ರ ಹೊಣೆಗಾರಿಕೆ); ಭೂ ವಿಜ್ಞಾನ ಖಾತೆ ರಾಜ್ಯ ಸಚಿವರು(ಸ್ವತಂತ್ರ ಹೊಣೆಗಾರಿಕೆ); ಪಿಎಂಒ, ಸಿಬ್ಬಂದಿ, ಸಾರ್ವಜನಿಕ ಕುಂದು ಕೊರತೆ, ಪಿಂಚಣಿ, ಪರಮಾಣು ಶಕ್ತಿ ಮತ್ತು ಬಾಹ್ಯಾಕಾಶ ಖಾತೆ ರಾಜ್ಯ ಸಚಿವರಾದ ಡಾ.ಜಿತೇಂದ್ರ ಸಿಂಗ್ ಅವರು ಗರ್ಭಕಂಠದ ಕ್ಯಾನ್ಸರ್ ನಿಯಂತ್ರಣಕ್ಕಾಗಿ ಭಾರತದ ದೇಶೀಯವಾಗಿ ಅಭಿವೃದ್ಧಿಪಡಿಸಿದ ಮೊದಲ ಲಸಿಕೆ “ಸೆರ್ವವಾಕ್ ‘CERVAVAC’ ಅನ್ನು ಘೋಷಿಸಿದರು.
ಪುಣೆಯ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಶ್ರೀ ಅದಾರ್ ಸಿ ಪೂನವಾಲ ಮತ್ತು ಇತರ ಪ್ರಮುಖ ವಿಜ್ಞಾನಿಗಳು ಮತ್ತು ಗಣ್ಯರ ಉಪಸ್ಥಿತಿಯಲ್ಲಿ ಕ್ವಾಡ್ರಿವೇಲೆಂಟ್ ಹ್ಯೂಮನ್ ಪ್ಯಾಪಿಲೋಮಾ ವೈರಸ್ (ಕ್ಯೂಎಚ್ ಪಿವಿ) ಲಸಿಕೆ ವೈಜ್ಞಾನಿಕವಾಗಿ ಪೂರ್ಣಗೊಂಡಿದೆ ಎಂದು ಡಾ. ಜಿತೇಂದ್ರ ಸಿಂಗ್ ಘೋಷಿಸಿದರು. ಇದು ಕೈಗೆಟುಕುವ ಮತ್ತು ಕಡಿಮೆ ವೆಚ್ಚದ್ದಾಗಿದೆ, ಲಸಿಕೆಯ ಅಭಿವೃದ್ಧಿ ಡಿಬಿಟಿ ಮತ್ತು ಬಿರಾಕ್ ಗೆ ಮಹತ್ವದ ದಿನವಾಗಿದೆ, ಏಕೆಂದರೆ ಇದು ಭಾರತವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತದ ಕನಸು ಸಾಕಾರದ ಸನಿಹಕ್ಕೆ ಕೊಂಡೊಯುತ್ತದೆ ಎಂದರು.
ಗರ್ಭಕಂಠದ ಕ್ಯಾನ್ಸರ್ ಭಾರತದಲ್ಲಿ 2ನೇ ಅತಿ ಹೆಚ್ಚು ಕಂಡುಬರುತ್ತಿರುವ ಕ್ಯಾನ್ಸರ್‌ಗಳ ಸ್ಥಾನದಲ್ಲಿದೆ ಮತ್ತು ಇದನ್ನು ಹೆಚ್ಚಾಗಿ ತಡೆಗಟ್ಟಬಹುದಾದರೂ ವಿಶ್ವದ ಗರ್ಭಕಂಠದ ಕ್ಯಾನ್ಸರ್ ಸಾವುಗಳಲ್ಲಿ ಇವು ಸುಮಾರು ನಾಲ್ಕನೇ ಒಂದು ಭಾಗದಷ್ಟಿವೆ ಎಂದು ಡಾ.ಜಿತೇಂದ್ರ ಸಿಂಗ್ ಗಮನ ಸೆಳೆದರು. ಸದ್ಯದ ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ಸರಿಸುಮಾರು 1.25 ಲಕ್ಷ ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಮತ್ತು 75 ಸಾವಿರಕ್ಕೂ ಹೆಚ್ಚು ಜನರು ಈ ಕಾಯಿಲೆಯಿಂದ ಸಾಯುತ್ತಾರೆ ಮತ್ತು ಶೇ.83ರಷ್ಟು ಗರ್ಭಕಂಠದ ಕ್ಯಾನ್ಸರ್‌ಗಳು ಭಾರತದಲ್ಲಿ 16 ಅಥವಾ 18ರಷ್ಟು ಮತ್ತು ಜಗತ್ತಿನಾದ್ಯಂತ ಪ್ರಕರಣಗಳಿಗೆ ಶೇ70 ರಷ್ಟು ಎಚ್ ಪಿವಿಗಳೇ ಕಾರಣ ಎಂದು ಅವರು ಹೇಳಿದರು. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಅತ್ಯಂತ ಭರವಸೆಯ ಲಸಿಕೆ ಹ್ಯೂಮನ್ ಪ್ಯಾಪಿಲೋಮವೈರಸ್ (ಎಚ್ ಪಿವಿ) ಆಗಿದೆ ಎಂದು ಸಚಿವರು ಹೇಳಿದರು. ಎಚ್ ಪಿವಿ ವಿಧಗಳು 16 ಮತ್ತು 18 (ಎಚ್ ಪಿವಿ-16 ಮತ್ತು ಎಚ್ ಪಿವಿ-18) ಒಟ್ಟಾಗಿ ವಿಶ್ವಾದ್ಯಂತ ಎಲ್ಲಾ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳಲ್ಲಿ ಸರಿಸುಮಾರು ಶೇ.70ರಷ್ಟು ಪಾಲು ಇವೆ ಎಂದು ಅಂದಾಜಿಸಲಾಗಿದೆ.
ನಾನಾ ಸಾಮಾಜಿಕ-ಆರ್ಥಿಕ ಅಂಶಗಳಿಂದಾಗಿ ವೈದ್ಯಕೀಯ ರಕ್ಷಣೆಯ ಮುನ್ನೆಚ್ಚರಿಕೆ ಅರಿವು ಕಡಿಮೆ ಹೊಂದಿರುವ ಭಾರತದಂತಹ ಸಮಾಜದಲ್ಲಿ, ಕೋವಿಡ್ ಸೋಂಕು ಆರೋಗ್ಯ ರಕ್ಷಣೆಯ ಕ್ರಮಗಳ ಕುರಿತು ನಮ್ಮನ್ನು ಜಾಗೃತಗೊಳಿಸಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಆಯುಷ್ಮಾನ್ ಭಾರತ್ ನಂತಹ ಯೋಜನೆಗಳಿಗೆ ಧನ್ಯವಾದಗಳು, ಏಕೆಂದರೆ ಅದು ಬಡವರು, ಸಮಾಜದ ಕೆಳ ವರ್ಗ ಮತ್ತು ದುರ್ಬಲ ವರ್ಗದವರಿಗೆ 5 ಲಕ್ಷ ರೂಪಾಯಿಗಳವರೆಗೆ ವಿಮಾ ರಕ್ಷಣೆಯನ್ನು ಒದಗಿಸುವ ಮೂಲಕ ಆರೋಗ್ಯ ರಕ್ಷಣಾ ಮುನ್ನೆಚ್ಚರಿಕೆ ಮತ್ತು ತಡೆಗಟ್ಟುವ ಆರೋಗ್ಯ ಪದ್ದತಿಗಳ ಮೂಲಕ ನೆರವು ಒದಗಿಸುತ್ತಿದೆ ಎಂದು ಹೇಳಿದರು.
2022ರ ನವೆಂಬರ್‌ನಲ್ಲಿ ಅಹಮದಾಬಾದ್‌ನ ಝೈಡಸ್ ಬಯೋಟೆಕ್ ಪಾರ್ಕ್, ಹೈದರಾಬಾದ್‌ನ ಭಾರತ್ ಬಯೋಟೆಕ್ ಮತ್ತು ಪುಣೆಯ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್‌ಗೆ ಲಸಿಕೆ ಅಭಿವೃದ್ಧಿ ಮತ್ತು ಉತ್ಪಾದನಾ ಪ್ರಕ್ರಿಯೆಯನ್ನು ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದನ್ನು ಡಾ.ಜಿತೇಂದ್ರ ಸಿಂಗ್ ಉಲ್ಲೇಖಿಸಿದರು. ಆಗ ಪ್ರಧಾನಮಂತ್ರಿ ಅವರು “ಭಾರತವು ಲಸಿಕೆಗಳನ್ನು ಉತ್ತಮ ಆರೋಗ್ಯಕ್ಕೆ ಮಾತ್ರವಲ್ಲದೆ ಜಾಗತಿಕ ಒಳಿತಿಗಾಗಿಯೂ ಉತ್ತಮ ಎಂದು ಪರಿಗಣಿಸುತ್ತದೆ ಮತ್ತು ಸೋಂಕಿನ ವಿರುದ್ಧದ ಸಾಮೂಹಿಕ ಹೋರಾಟದಲ್ಲಿ ನಮ್ಮ ನೆರೆಹೊರೆಯ ರಾಷ್ಟ್ರಗಳು ಸೇರಿದಂತೆ ಇತರ ದೇಶಗಳಿಗೆ ಸಹಾಯ ಮಾಡುವುದು ಭಾರತದ ಆದ್ಯ ಕರ್ತವ್ಯವಾಗಿದೆ’’ ಎಂದು ಬಲವಾಗಿ ಪ್ರತಿಪಾದಿಸಿದ್ದರು ಎಂದು ಡಾ.ಜಿತೇಂದ್ರ ಸಿಂಗ್ ಹೇಳಿದರು.
ಮಿಷನ್ ಕೋವಿಡ್ ಸುರಕ್ಷಾ ಅನುಷ್ಠಾನದ ಒಂದು ವರ್ಷದೊಳಗೆ ಪ್ರಮುಖ ಸಾಧನೆಗಳನ್ನು ಮಾಡಲಾಗಿದೆ ಎಂದು ಡಾ ಜಿತೇಂದ್ರ ಸಿಂಗ್ ಉಲ್ಲೇಖಿಸಿದರು, ಅವುಗಳೆಂದರೆ (i) 2021ರ ಆಗಸ್ಟ್ 20ರಂದು ಕ್ಯಾಡಿಲಾ ಹೆಲ್ತ್‌ಕೇರ್‌ನಿಂದ ಕೋವಿಡ್-19 ಗಾಗಿ ಅಭಿವೃದ್ಧಿಪಡಿಸಿದ ವಿಶ್ವದ ಮೊದಲ ಡಿಎನ್ ಎ ಲಸಿಕೆಗೆ ತುರ್ತು ಬಳಕೆಯ ಅಧಿಕಾರ ಮತ್ತು ( ii) ಕೋವಿಡ್-19 ವಿರುದ್ಧ ರಾಷ್ಟ್ರದ ಮೊದಲ ಎಂಆರ್ ಎನ್ ಎನ್ ಲಸಿಕೆ ಮತ್ತು ಇಂಟ್ರಾನೇಸಲ್ ಲಸಿಕೆ ಅಭಿವೃದ್ಧಿಗೆ ಬೆಂಬಲ ನೀಡಲಾಗಿದೆ ಎಂದರು. ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್ ಸಹಯೋಗದೊಂದಿಗೆ ಡಿಬಿಟಿ ಮತ್ತು ಬಿರಾಕ್ ನ ಪಾಲುದಾರಿಕೆಯ ಫಲಿತಾಂಶ “ಸೆರ್ವಾವಾಕ್ 'CERVAVAC' ಲಸಿಕೆಯಾಗಿದೆ. ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ತನ್ನ ಪಾಲುದಾರಿಕೆ ಕಾರ್ಯಕ್ರಮವಾದ 'ಗ್ರ್ಯಾಂಡ್ ಚಾಲೆಂಜಸ್ ಇಂಡಿಯಾ' ಮೂಲಕ ಕ್ವಾಡ್ರಿವಲೆಂಟ್ ಲಸಿಕೆಯ ದೇಶೀಯ ಅಭಿವೃದ್ಧಿಗೆ ಬೆಂಬಲಿಸಿದೆ. ಫಲಿತಾಂಶ ಆಧಾರಿತ ಉತ್ಪನ್ನಗಳಿಗೆ ಶೈಕ್ಷಣಿಕ ವಲಯ, ಕೈಗಾರಿಕೆಗಳು ಮತ್ತು ಸಂಶೋಧಕರು ಸಮಗ್ರ ವಿಧಾನದ ನಿಜವಾದ ಸ್ಫೂರ್ತಿಯಲ್ಲಿ ಸಮಾನ ಪಾಲುದಾರರಾಗಬೇಕು ಎಂದು ಅವರು ಹೇಳಿದರು.
ಕಳೆದ ಮೂರು ದಶಕಗಳಲ್ಲಿ ಭಾರತೀಯ ಲಸಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಬಲವರ್ಧನೆಗೆ ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ಕಠಿಣ ಪ್ರಯತ್ನಗಳನ್ನು ಮಾಡಿದೆ ಎಂದು ಸಚಿವರು ಹೇಳಿದರು. (i) ಭಾರತ-ಅಮೆರಿಕಾ ಲಸಿಕೆ ಕ್ರಿಯಾ ಕಾರ್ಯಕ್ರಮ (ii) ರಾಷ್ಟ್ರೀಯ ಬಯೋಫಾರ್ಮಾ ಮಿಷನ್, (iii) ಭಾರತ-ಸಿಇಪಿಐ ಮಿಷನ್ ಮತ್ತು (iv) ಕಿಷನ್ ಕೋವಿಡ್ ಸುರಕ್ಷಾ ಸೇರಿದಂತೆ ಮೂಲಭೂತ ಮತ್ತು ಟ್ರಾನ್ಸಲೇಷನಲ್ ಲಸಿಕೆ ಸಂಶೋಧನೆಯನ್ನು ಉತ್ತೇಜಿಸಲು ಪ್ರಸ್ತುತ ಹಲವಾರು ಪ್ರಮುಖ ಉಪಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು. ಇವುಗಳನ್ನು ಆತ್ಮನಿರ್ಭರ ಭಾರತ್ 3.0 ರ ಭಾಗವಾಗಿ, ಸುರಕ್ಷಿತ, ಪರಿಣಾಮಕಾರಿ, ಕೈಗೆಟುಕುವ ಮತ್ತು ಸುಲಭವಾಗಿ ಲಭ್ಯವಾಗಹುದಾದ ಸ್ಥಳೀಯ ಕೋವಿಡ್ 19 ಲಸಿಕೆಗಳನ್ನು ದೇಶದ ನಾಗರಿಕರಿಗೆ ಶೀಘ್ರವಾಗಿ ಒದಗಿಸುವ ಗುರಿಯೊಂದಿಗೆ ಪ್ರಾರಂಭಿಸಲಾಯಿತು ಎಂದರು.
ಡಿಬಿಟಿಯ ಕಾರ್ಯದರ್ಶಿ ಡಾ ರಾಜೇಶ್ ಗೋಖಲೆ, ಇದು ಎಲ್ಲಾ ಬಾಧ್ಯಸ್ಥರ ಸಾಮೂಹಿಕ ಪ್ರಯತ್ನಗಳ ಫಲವಾಗಿದೆ ಹಾಗು ಸಂಶೋಧನೆ ಮತ್ತು ಅಭಿವೃದ್ಧಿ ಕೈಗೊಳ್ಳಲು ಕೈಗಾರಿಕೆಗಳ ಸಹಭಾಗಿತ್ವವು ಮಹತ್ವದ್ದಾಗಿದೆ, ಇದಕ್ಕೆ ಹೆಚ್ಚಿನ ಹಣದ ಅಗತ್ಯವಿರುತ್ತದೆ. ಮನುಕುಲದ ಸುಧಾರಣೆಗಾಗಿ ಎಲ್ಲ ಅಡೆತಡೆಗಳನ್ನು ಮೀರುವ ಮೂಲಕ ಭಾರತವು ಲಸಿಕೆ ಅಭಿವೃದ್ಧಿ ಮತ್ತು ಔಷಧದಲ್ಲಿ ಮುನ್ನಡೆ ಸಾಧಿಸಿ ಮುಂಚೂಣಿಯತ್ತ ಸಾಗಲಿದೆ ಎಂದು ಅವರು ಹೇಳಿದರು.
ಸಿಎಸ್ಐಆರ್ ಡಿಜಿ ಡಾ.ಎನ್.ಕಲೈಸೆಲ್ವಿ, ತಮ್ಮ ಭಾಷಣದಲ್ಲಿ ಕ್ಯಾನ್ಸರ್ ಲಸಿಕೆಯು ಭಾರತೀಯ ಮಹಿಳೆಯರು ಮಾತ್ರವಲ್ಲದೆ ಜಗತ್ತಿನಾದ್ಯಂತ ಎಲ್ಲ ಮಹಿಳೆಯರಿಗೆ ಪ್ರಮುಖ ರೀತಿಯಲ್ಲಿ ಸಹಾಯ ಮಾಡುತ್ತದೆ ಮತ್ತು ಈ ತಂತ್ರಜ್ಞಾನಗಳು ಅಲ್ಪಾವಧಿಯಾಗಿರುವುದರಿಂದ ಭವಿಷ್ಯದಲ್ಲಿ ನಾವು “ಸರ್ವವಾಕ್” ನ ಆವೃತ್ತಿ 1, 2 ಮತ್ತು 3 ತಂತ್ರಜ್ಞಾನ ಅಭಿವೃದ್ಧಿ ಮಾಡಬಹುದು ಎಂದು ಹೇಳಿದರು. ಮತ್ತು ಆತ್ಮನಿರ್ಭರ ಭಾರತದ ನಿಜವಾದ ಸ್ಫೂರ್ತಿಯಲ್ಲಿ ಭಾರತೀಯ ಸಮಸ್ಯೆಗಳಿಗೆ ಭಾರತೀಯ ಪರಿಹಾರಗಳನ್ನು ನಾವು ಕಂಡುಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಪುಣೆಯ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಶ್ರೀ ಅದಾರ್ ಸಿ.ಪೂನಾವಾಲ ಅವರು ತಮ್ಮ ಸಂಕ್ಷಿಪ್ತ ಭಾಷಣದಲ್ಲಿ, ತಾಯಿ ಮತ್ತು ಮಗುವಿನ ಯೋಗಕ್ಷೇಮ ಮತ್ತು ರಕ್ಷಣೆಯು ಸೆರಂ ಸಂಸ್ಥೆಯ ಮೂಲ ತತ್ವವಾಗಿದೆ, ಏಕೆಂದರೆ ಆರೋಗ್ಯಕರ ಭಾರತ ಮಾತ್ರ ಉತ್ಪಾದಕ ರಾಷ್ಟ್ರವಾಗಬಹುದು. ಭಾರತದಲ್ಲಿ ಲಸಿಕೆಗಳು ಮತ್ತು ಔಷಧಿಗಳ ತಯಾರಿಕೆಗಾಗಿ ಖಾಸಗಿ ಮತ್ತು ಸರ್ಕಾರಿ ವಲಯಗಳ ನಡುವೆ ಇನ್ನೂ ಹೆಚ್ಚಿನ ಸಹಯೋಗ ಅಗತ್ಯವಿದೆ ಎಂದ ಅವರು ಅದಕ್ಕಾಗಿ ಅವರು ಡಿಬಿಟಿಯ ದೂರದೃಷ್ಟಿಯನ್ನು ಬೆಂಬಲಿಸಿದ್ದಾಗಿ ತಿಳಿಸಿದರು.
ಅಂಡಾಶಯ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ದಿಟ್ಟತನದಿಂದ ಹೋರಾಡಿ ಗೆದ್ದ ಖ್ಯಾತ ಚಲನಚಿತ್ರ ನಟಿ ಮನಿಶಾ ಕೊಯಿರಾಲಾ ಅವರು ಈ ಮೈಲಿಗಲ್ಲನ್ನು ತಲುಪಿದ್ದಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ಮತ್ತು ವಿಶೇಷವಾಗಿ ಡಿಬಿಟಿಗೆ ಗೆ ಧನ್ಯವಾದ ಅರ್ಪಿಸಲು ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಭಾರತದಲ್ಲಿ ಮಹಿಳೆಯರಿಗೆ ಮತ್ತು ಪ್ರಪಂಚದಾದ್ಯಂತ ಮಹಿಳೆಯರಿಗೆ ಇಂದು ಮಹತ್ವದ ದಿನವಾಗಿದೆ, ಏಕೆಂದರೆ ಕ್ಯಾನ್ಸರ್ ಮೀರಿದ ಜೀವನವಿದೆ ಎಂದು ಅವರು ಹೇಳಿದರು. ಕಡಿಮೆ ವೆಚ್ಚದ ಪರಿಣಾಮಕಾರಿ ನಿಯಂತ್ರಿಸಬಹುದಾದ ಚಿಕಿತ್ಸೆಯು ಅಂತಹ ಲಕ್ಷಾಂತರ ರೋಗಿಗಳಿಗೆ "ಜೀವನಕ್ಕೆ ಹೌದು" (ಯೆಸ್ ಟು ಲೈಫ್) ಎಂದು ಹೇಳಲು ಪ್ರೇರೇಪಿಸುತ್ತದೆ ಎಂದು ಅವರು ಹೇಳಿದರು.
ಡಿಬಿಟಿಯ ಹಿರಿಯ ಸಲಹೆಗಾರರು ಮತ್ತು ಬಿರಾಕ್ ನ ಎಂ.ಡಿ. ಡಾ. ಅಲ್ಕಾ ಶರ್ಮಾ ಸ್ವಾಗತ ಭಾಷಣ ಮಾಡಿದರು, ಗ್ರ್ಯಾಂಡ್ ಚಾಲೆಂಜಸ್ ಇಂಡಿಯಾದ ಮಿಷನ್ ನಿರ್ದೇಶಕ ಮತ್ತು ಮಿಷನ್ ಕೋವಿಡ್ ಸುರಕ್ಷಾ ಉಸ್ತುವಾರಿ ಡಾ. ಶಿರ್ಷೇಂದು ಮುಖರ್ಜಿ ವಂದನಾರ್ಪಣೆ ಸಲ್ಲಿಸಿದರು.
ನವದೆಹಲಿ, ಏಮ್ಸ್ ನ ಸ್ತ್ರೀರೋಗ ಶಾಸ್ತ್ರ ಮತ್ತು ಪ್ರಸೂತಿ ತಜ್ಞೆ ಡಾ.ನೀರಜಾ ಭಟ್ಲ, ನವದೆಹಲಿಯ ಐಎನ್ ಸಿಎಲ್ ಇಎನ್ ಟ್ರಸ್ಟ್ ನ ಡಾ. ಎನ್. ಕೆ. ಅರೋರಾ, ಪುಣೆಯ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಡಾ. ಉಮೇಶ್ ಶಾಲಿಗ್ರಾಮ್, THSTI, ಫರಿದಾಬಾದ್ ನ ಟಿಎಚ್ ಎಸ್ ಟಿಐನ ಸಹಾಯಕ ಪ್ರೊ. ಡಾ. ಗುರುಪ್ರಸಾದ್ ಆರ್. ಮೆಡಿಗೇಶಿ, ತಿರುವನಂತರಪುರಂನ ಆರ್ ಜಿಸಿಬಿಯ ವಿಜ್ಞಾನಿ ಡಾ.ದೇವಸೇನಾ ಅನಂತರಾಮನ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
*****
(Release ID: 1856170)
Visitor Counter : 301