ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

ಬೆಂಬಲ ಬೆಲೆ ಯೋಜನೆ ಮತ್ತು ಬೆಲೆ ಸ್ಥಿರೀಕರಣ ನಿಧಿಯಡಿ ಸಂಗ್ರಹಿಸಿದ ಕಡಲೆಯನ್ನು ವಿಲೇವಾರಿ ಮಾಡಲು ಮತ್ತು ತೊಗರಿ, ಉದ್ದು ಮತ್ತು ಬೆಳೆಕಾಳುಗಳಿಗೆ ಸಂಬಂಧಿಸಿದಂತೆ ಪಿಎಸ್ ಎಸ್ ಅಡಿಯಲ್ಲಿ ಸಂಗ್ರಹ ಮಿತಿಯನ್ನು ಈಗಿರುವ ಶೇ.25ರಿಂದ ಶೇ.40ಕ್ಕೆ ಹೆಚ್ಚಿಸಲು ಸಂಪುಟದ ಅನುಮೋದನೆ


ಈ ಯೋಜನೆಯ ಅನುಷ್ಠಾನಕ್ಕಾಗಿ 1200 ಕೋಟಿ ರೂ. ವೆಚ್ಚ

15 ಲಕ್ಷ ಮೆಟ್ರಿಕ್ ಟನ್ ಕಡಲೆಯನ್ನು ಪ್ರತಿ ಕೆ.ಜಿ.ಗೆ 8 ರೂ.ಗಳ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.

ಕಲ್ಯಾಣ ಯೋಜನೆಗಳು/ ಕಾರ್ಯಕ್ರಮಗಳಲ್ಲಿ ಈ ಬೇಳೆಕಾಳುಗಳನ್ನು ಬಳಸಲು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಅವಕಾಶ

Posted On: 31 AUG 2022 12:18PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ಬೆಂಬಲ ಬೆಲೆ ಯೋಜನೆ (ಪಿಎಸ್ಎಸ್) ಮತ್ತು ಬೆಲೆ ಸ್ಥಿರೀಕರಣ ನಿಧಿ (ಪಿಎಸ್ಎಫ್) ಅಡಿಯಲ್ಲಿ ಸಂಗ್ರಹಿಸಲಾದ ಬೇಳೆಕಾಳುಗಳ ದಾಸ್ತಾನಿನಿಂದ ವಿವಿಧ ಕಲ್ಯಾಣ ಯೋಜನೆಗಳಿಗೆ ಬಳಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಡಲೆ (ದ್ವಿದಳ ಧಾನ್ಯಗಳು) ರಿಯಾಯಿತಿ ದರದಲ್ಲಿ ವಿಲೇವಾರಿ ಮಾಡಲು ಮತ್ತು ತೊಗರಿ, ಉದ್ದು ಮತ್ತು ಬೆಳೆಕಾಳುಗಳಿಗೆ ಸಂಬಂಧಿಸಿದಂತೆ ಪಿಎಸ್ಎಸ್ ಅಡಿಯಲ್ಲಿ ಖರೀದಿಯ ಮಿತಿಯ ಮಿತಿಯನ್ನು ಅಸ್ತಿತ್ವದಲ್ಲಿರುವ ಶೇಕಡ 25 ರಿಂದ ಶೇ. 40 ಕ್ಕೆ ಹೆಚ್ಚಿಸಲು ತನ್ನ ಅನುಮೋದನೆ ನೀಡಿದೆ.

 

ಈ ಅನುಮೋದಿತ ಯೋಜನೆಯಡಿಯಲ್ಲಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರವು 15 ಲಕ್ಷ ಮೆಟ್ರಿಕ್ ಟನ್ ಕಡಲೆಯನ್ನು ಪ್ರತಿ ಕೆ.ಜಿ.ಗೆ 8 ರೂ.ಗಳ ರಿಯಾಯಿತಿಯಲ್ಲಿ ಸಂಗ್ರಹಿಸಲು ಮುಂದಾಗಿದೆ. ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಈ ಬೇಳೆಕಾಳುಗಳನ್ನು ತಮ್ಮ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಸಾರ್ವಜನಿಕ ವಿತರಣಾ ವ್ಯವಸ್ಥೆ, ಸಮಗ್ರ ಶಿಶು ಅಭಿವೃದ್ಧಿ ಕಾರ್ಯಕ್ರಮಗಳು (ಐಸಿಡಿಪಿ) ಇತ್ಯಾದಿಗಳಂತಹ ತಮ್ಮ ವಿವಿಧ ಕಲ್ಯಾಣ ಯೋಜನೆಗಳು / ಕಾರ್ಯಕ್ರಮಗಳಲ್ಲಿ ಬಳಸಬೇಕು. ಇದು 12 ತಿಂಗಳ ಅವಧಿಗೆ ಅಥವಾ 15 ಲಕ್ಷ ಮೆಟ್ರಿಕ್ ಟನ್ ಕಡಲೆ ದಾಸ್ತಾನಿನ ಸಂಪೂರ್ಣ ವಿಲೇವಾರಿಯವರೆಗೆ ಇವುಗಳಲ್ಲಿ ಯಾವುದು ಮೊದಲೋ ಅದನ್ನು ಸಂಪೂರ್ಣವಾಗಿ ವಿಲೇವಾರಿ ಮಾಡುವವರೆಗೆ ಒಂದು ಬಾರಿ ವಿತರಿಸಲಾಗುತ್ತದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಸರ್ಕಾರ 1200 ಕೋಟಿ ರೂ.ಗಳನ್ನು ವ್ಯಯಿಸಲಿದೆ.

 

ಈ ನಿರ್ಧಾರಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪಿಡಿಎಸ್, ಮಧ್ಯಾಹ್ನದ ಬಿಸಿಯೂಟ ಯೋಜನೆಗಳು ಇತ್ಯಾದಿಗಳಂತಹ ವಿವಿಧ ಕಲ್ಯಾಣ ಯೋಜನೆಗಳಲ್ಲಿ ಕಡಲೆಯನ್ನು ಬಳಸಲು ಅನುವು ಮಾಡಿಕೊಡುತ್ತದೆ, ಜೊತೆಗೆ ಗೋದಾಮುಗಳ ಸ್ಥಳಾವಕಾಶವನ್ನು ಒದಗಿಸುತ್ತದೆ, ಇದು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಹೊಸ ದಾಸ್ತಾನುಗಳನ್ನು ಹೊಂದಿಸಲು ಮುಂಬರುವ ಹಿಂಗಾರು ಋತುವಿನಲ್ಲಿ ಅಗತ್ಯವಾಗಬಹುದು, ಇದು ರೈತರಿಗೆ ಬೇಳೆಕಾಳುಗಳ ಲಾಭದಾಯಕ ಬೆಲೆಯನ್ನು ಪಡೆಯಲು ಸಹಾಯ ಮಾಡುತ್ತದೆ, ಇದಲ್ಲದೆ, ಹೆಚ್ಚಿನ ಹೂಡಿಕೆ ಮಾಡುವ ಮೂಲಕ ಅಂತಹ ದ್ವಿದಳ ಧಾನ್ಯಗಳನ್ನು ಬೆಳೆಯಲು ಹೆಚ್ಚಿನ ರೈತರನ್ನು ಪ್ರೋತ್ಸಾಹಿಸುವುದು ಮತ್ತು ಅವರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ಪಡೆಯಲು ಅವರಿಗೆ ಸಹಾಯ ಮಾಡುವುದು. ಇದಲ್ಲದೆ, ಇದು ನಮ್ಮ ದೇಶದಲ್ಲಿ ಅಂತಹ ಬೇಳೆಕಾಳುಗಳ ಸ್ವಾವಲಂಬನೆಯನ್ನು ಸಾಧಿಸಲು ಸಹಾಯ ಮಾಡುತ್ತದೆ.

 

ಇತ್ತೀಚಿನ ದಿನಗಳಲ್ಲಿ ದೇಶವು ವಿಶೇಷವಾಗಿ ಕಳೆದ ಮೂರು ವರ್ಷಗಳಲ್ಲಿ ಕಡಲೆ (ದ್ವಿದಳ ಧಾನ್ಯಗಳು) ಸಾರ್ವಕಾಲಿಕ ಹೆಚ್ಚಿನ ಉತ್ಪಾದನೆಗೆ ಸಾಕ್ಷಿಯಾಗಿದೆ. ಬೆಂಬಲ ಬೆಲೆ ಯೋಜನೆಯಡಿ ಭಾರತ ಸರ್ಕಾರವು 2019-20, 2020-21 ಮತ್ತು 2021-22 ರ ಹಿಂಗಾರು ಹಂಗಾಮಿನಲ್ಲಿ ಕಡಲೆಯನ್ನು ದಾಖಲೆಯ ಪ್ರಮಾಣದಲ್ಲಿ ಖರೀದಿಸಿದೆ. ಈ ಕಾರಣದಿಂದಾಗಿ, ಮುಂಬರುವ ಹಿಂಗಾರು ಋತುವಿನಲ್ಲಿ ಪಿಎಸ್ಎಸ್ ಮತ್ತು ಪಿಎಸ್ಎಫ್ ಅಡಿಯಲ್ಲಿ 30.55 ಲಕ್ಷ ಮೆಟ್ರಿಕ್ ಟನ್ ಕಡಲೆ ಸರ್ಕಾರದ ಬಳಿ ಲಭ್ಯವಿದೆ, ಹಾಗೆಯೇ ಕಡಲೆ ಉತ್ಪಾದನೆ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. 22-23ರ ಅವಧಿಯಲ್ಲಿ ಕಡಲೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವುದರೊಂದಿಗೆ ಬೆಂಬಲ ಬೆಲೆ ಯೋಜನೆಯಡಿ ಹೆಚ್ಚುವರಿ ಖರೀದಿಯನ್ನು ಇದು ಒಳಗೊಂಡಿರುತ್ತದೆ.

 

*********



(Release ID: 1855882) Visitor Counter : 161