ಗಣಿ ಸಚಿವಾಲಯ
2022 ರ ಜೂನ್ ನಲ್ಲಿ ಖನಿಜಗಳ ಉತ್ಪಾದನೆಯಲ್ಲಿ ಶೇ 7.5 ರಷ್ಟು ಬೆಳವಣಿಗೆ ದಾಖಲು
2022-23 ರ ಏಪ್ರಿಲ್–ಜೂನ್ ಅವಧಿಯಲ್ಲಿ ಶೇ 9ಕ್ಕೆ ತಲುಪಿದ ಒಟ್ಟಾರೆ ಬೆಳವಣಿಗೆ
ಪ್ರಮುಖ ಖನಿಜಗಳ ವಲಯದ ಉತ್ಪಾದನೆಯಲ್ಲಿ ಗಣನೀಯ ಪ್ರಮಾಣದ ಬೆಳವಣಿಗೆ ದಾಖಲು
Posted On:
20 AUG 2022 3:27PM by PIB Bengaluru
2022 ಜೂನ್ ತಿಂಗಳಿಗೆ ಅನ್ವಯವಾಗುವಂತೆ ಗಣಿಗಾರಿಕೆ ಮತ್ತು ಕಲ್ಲು ಗಣಿಗಾರಿಕೆ ವಲಯದಲ್ಲಿ [ಮೂಲ: 2011-12=100] 113.4 ರಷ್ಟು ಖನಿಜ ಉತ್ಪಾದನೆಯಾಗಿದ್ದು, 2021 ರ ಜೂನ್ ಗೆ ಹೋಲಿಸಿದರೆ 7.5% ರಷ್ಟು ಏರಿಕೆಯಾಗಿದೆ. ಇಂಡಿಯನ್ ಬ್ಯೂರೋ ಆಫ್ ಮೈನ್ಸ್ [ಐಬಿಎಂ]ನ ತಾತ್ಕಾಲಿಕ ಅಂಕಿಅಂಶಗಳ ಪ್ರಕಾರ 2022-23 ರ ಏಪ್ರಿಲ್ – ಜೂನ್ ಅವಧಿಯಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಬೆಳವಣಿಗೆ ದರ ಹೆಚ್ಚಾಗಿದ್ದು, ಈ ಬಾರಿ ಶೇ 9.0 ಕ್ಕೆ ತಲುಪಿದೆ.
2022, ಜೂನ್ ನಲ್ಲಿ ಪ್ರಮುಖ ಖನಿಜಗಳ ಉತ್ಪಾದನಾ ಪ್ರಮಾಣ: ಕಲ್ಲಿದ್ದಲು 669 ಲಕ್ಷ ಟನ್ ಗಳು, ಲಿಗ್ನೇಟ್ 46 ಲಕ್ಷ ಟನ್ ಗಳು, ನೈಸರ್ಗಿಕ ಅನಿಲ (ಬಳಕೆಯಾಗದ) 2747 ದಶಲಕ್ಷ ಕ್ಯೂಬಿಕ್ ಮೀಟರ್, ಪೆಟ್ರೋಲಿಯಂ (ಕಚ್ಚಾ) 24 ಲಕ್ಷ ಟನ್ ಗಳು, ಬಾಕ್ಸೈಟ್ 1950 ಸಾವಿರ ಟನ್ ಗಳು, ಕ್ರೋಮೈಟ್ 343 ಸಾವಿರ ಟನ್ ಗಳು, ತಾಮ್ರದ ಕಾನ್ 10 ಸಾವಿರ ಟನ್ ಗಳು, ಚಿನ್ನ 85 ಕೆ.ಜಿ. ಕಬ್ಬಿಣದ ಅದಿರು 201 ಲಕ್ಷ ಟನ್ ಗಳು, ಸೀಸದ ಕಾನ್ 30 ಸಾವಿರ ಟನ್ ಗಳು, ಮ್ಯಾಂಗನೀಸ್ ಅದಿರು 238 ಸಾವಿರ ಟನ್ ಗಳು, ಝಿಂಕ್ ಕಾನ್ 142 ಸಾವಿರ ಟನ್ ಗಳು, ಸುಣ್ಣದ ಕಲ್ಲು 335 ಲಕ್ಷ ಟನ್ ಗಳು, ಫಾಸ್ಪೋರೈಟ್ 189 ಸಾವಿರ ಟನ್ ಗಳು, ಮ್ಯಾಗ್ನಸೈಟ್ 8 ಸಾವಿರ ಟನ್ ಗಳು ಮತ್ತು ವಜ್ರ 44 ಕ್ಯಾರೆಟ್.
2021 ರ ಜೂನ್ ಗೆ ಹೋಲಿಸಿದರೆ 2022 ಜೂನ್ ನಲ್ಲಿ ಪ್ರಮುಖ ಖನಿಜಗಳ ಉತ್ಪಾದನೆಯಲ್ಲಿ ಸಾಕಾರಾತ್ಮಕ ಪ್ರಗತಿಯಾಗಿದೆ. ವಜ್ರ (340%), ಚಿನ್ನ (107.3%), ಫಾಸ್ಪೋರೈಟ್ (41.0%), ಕಲ್ಲಿದ್ದಲು (31.1%), ಲಿಗ್ನೇಟ್ (28.8%), ಝಿಂಕ್ ಕಾನ್ (20.0%), ಮ್ಯಾಂಗನೀಸ್ ಅದಿರು 19.3%), ಮ್ಯಾಗ್ನಸೈಟ್ (16.6%), ಬಾಕ್ಸೈಟ್ (8.9%), ಕ್ರೋಮೈಟ್ (6.5%), ಸಿಸದ ಕಾನ್ (4.2%), ಸುಣ್ಣದ ಕಲ್ಲು 1.6%), ಮತ್ತು ನೈಸರ್ಗಿಕ ಅನಿಲ [ಯು] (1.3%). ಇತರೆ ಖನಿಜಗಳ ಉತ್ಪಾದನೆಯಲ್ಲಿ ನಕಾರಾತ್ಮಕ ಬೆಳವಣಿಗೆಯಾಗಿದೆ. ಪೆಟ್ರೋಲಿಯಂ (ಕಚ್ಚಾ) (-1.7%), ತಾಮ್ರದ ಕಾನ್ (-7.2%), ಮತ್ತು ಕಬ್ಬಿಣದ ಅದಿರು (-9.7%).
******
(Release ID: 1853390)
Visitor Counter : 165