ಪ್ರಧಾನ ಮಂತ್ರಿಯವರ ಕಛೇರಿ

ಹರ್ ಘರ್ ತಿರಂಗಾ ಅಭಿಯಾನದಲ್ಲಿ ಜನರು ಅತ್ಯುತ್ಸಾಹವನ್ನು ಶ್ಲಾಘಿಸಿದ ಪ್ರಧಾನಿ

Posted On: 11 AUG 2022 7:31PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹರ್ ಘರ್ ತಿರಂಗಾ ಅಭಿಯಾನದಲ್ಲಿ ಜನರು ಉತ್ಸಾಹದಿಂದ ಭಾಗಿಯಾಗಿತ್ತಿರುವುದನ್ನು ಶ್ಲಾಘಿಸಿದ್ದಾರೆ. ಅವರು ಈ ಸ್ಪೂರ್ತಿ, ದೇಶದ ಏಕತೆ ಮತ್ತು ಸಮಗ್ರತೆಯ ಸಂಕೇತವಾಗಿದೆ ಎಂದು ಹೇಳಿದ್ದಾರೆ.

ಅಲ್ಲದೆ, ಪ್ರಧಾನಿ ಅವರು ರಕ್ಷಾಬಂಧನದ ವೇಳೆ ಮಕ್ಕಳೊಂದಿಗೆ ಸಂವಾದ ನಡೆಸಿದ ಮತ್ತು ತಾವು ಅವರಿಗೆ ತ್ರಿವರ್ಣ ಧ್ವಜ ನೀಡಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿ ಟ್ವೀಟ್ ನಲ್ಲಿ ಹೀಗೆ ತಿಳಿಸಿದ್ದಾರೆ.

“ಹರ್ ಘರ್ ತಿರಂಗಾ ಅಭಿಯಾನದ ಬಗ್ಗೆ ದೇಶವಾಸಿಗಳಲ್ಲಿ ಇರುವ ಉತ್ಸಾಹ ಮತ್ತು ಉಲ್ಲಾಸವು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯ ಅಚಲ ಭಾವನೆಯ ಸಂಕೇತವಾಗಿದೆ. ಈ ಮನೋಭಾವವು ಅಮೃತ ಕಾಲದಲ್ಲಿ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ..! #HarGharTiranga"

ಪ್ರತಿಯೊಬ್ಬ ಭಾರತೀಯರೂ ತಿರಂಗದೊಂದಿಗೆ ವಿಶೇಷ ಬಾಂಧವ್ಯವನ್ನು ಹೊಂದಿದ್ದಾರೆ. ಇಂದು ಮುಂಜಾನೆ ನನ್ನ ಯುವ ಮಿತ್ರರಿಗೆ ತಿರಂಗವನ್ನು ನೀಡಿದ್ದೇನೆ. ಅವರ ಮುಖದಲ್ಲಿನ ನಗು ಎಲ್ಲವನ್ನೂ ಹೇಳುತ್ತದೆ!

 

********

 



(Release ID: 1851610) Visitor Counter : 101