ಸಂಪುಟ
ಸಾರ್ವತ್ರಿಕ ಅಂಚೆ ಒಕ್ಕೂಟದ ಸಂವಿಧಾನಕ್ಕೆ ಹನ್ನೊಂದನೇ ಹೆಚ್ಚುವರಿ ಶಿಷ್ಟಾಚಾರದ ದೃಢೀಕರಣಕ್ಕೆ ಸಂಪುಟದ ಅನುಮೋದನೆ
Posted On:
10 AUG 2022 6:05PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, 2021ರ ಆಗಸ್ಟ್ 9ರಿಂದ 27ರವರೆಗೆ ಅಬಿದ್ಜಾನ್‌ನಲ್ಲಿ(ಕೋಟ್ ಡಿ'ಐವೋರ್) ನಡೆದ ʻಸಾರ್ವತ್ರಿಕ ಅಂಚೆ ಒಕ್ಕೂಟದ 27ನೇ ಮಹಾ ಅಧಿವೇಶನʼದಲ್ಲಿ ಅಂಕಿತ ಹಾಕಲಾದ ʻಸಾರ್ವತ್ರಿಕ ಅಂಚೆ ಒಕ್ಕೂಟದ (ಯುಪಿಯು) ಸಂವಿಧಾನʼಕ್ಕೆ ಹನ್ನೊಂದನೇ ಹೆಚ್ಚುವರಿ ಶಿಷ್ಟಾಚಾರದಲ್ಲಿ ಅಡಕವಾಗಿರುವಂತೆ ತಿದ್ದುಪಡಿಗಳನ್ನು ದೃಢೀಕರಿಸಲು ತನ್ನ ಅನುಮೋದನೆ ನೀಡಿದೆ.
ಈ ಅನುಮೋದನೆಯು ಭಾರತ ಸರಕಾರದ ಅಂಚೆ ಇಲಾಖೆಗೆ ಗೌರವಾನ್ವಿತ ರಾಷ್ಟ್ರಪತಿಗಳು ಸಹಿ ಮಾಡಿದ "ದೃಢೀಕರಣದ ಪತ್ರ"ವನ್ನು ಹೊಂದಲು ಅನುವು ಮಾಡಿಕೊಡುತ್ತದೆ ಮತ್ತು ಅದನ್ನು ಸಾರ್ವತ್ರಿಕ ಅಂಚೆ ಒಕ್ಕೂಟದ ಅಂತರರಾಷ್ಟ್ರೀಯ ಬ್ಯೂರೋದ ಮಹಾನಿರ್ದೇಶಕರ ಬಳಿ ಇರಿಸಲು ಅನುವು ಮಾಡಿಕೊಡುತ್ತದೆ.
ಇದು ʻಯು.ಪಿ.ಯು.ʼ ಸಂವಿಧಾನದ ಅನುಚ್ಛೇದ 25 ಮತ್ತು 30ರಿಂದ ಉದ್ಭವಿಸುವ ಬಾಧ್ಯತೆಗಳನ್ನು ಪೂರೈಸುತ್ತದೆ. ಅಲ್ಲದೆ, ಸದಸ್ಯ ರಾಷ್ಟ್ರಗಳು ಮಹಾ ಅಧಿವೇಶನವು ಅಂಗೀಕರಿಸಿದ ಸಂವಿಧಾನದ ತಿದ್ದುಪಡಿಗಳನ್ನು ಸಾಧ್ಯವಾದಷ್ಟು ಬೇಗ ದೃಢೀಕರಿಸಲು ಅವಕಾಶ ನೀಡುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, 27ನೇ ʻಯು.ಪಿ.ಯುʼ ಮಹಾ ಅಧಿವೇಶನ ಅಂಗೀಕರಿಸಿದ ʻಯು.ಪಿ.ಯು. ಸಂವಿಧಾನದ ತಿದ್ದುಪಡಿಗಳು ಒಕ್ಕೂಟದ ಕಾಯಿದೆಗಳಿಗೆ ಮತ್ತಷ್ಟು ಕಾನೂನು ಸ್ಪಷ್ಟತೆ ಮತ್ತು ಸ್ಥಿರತೆಯನ್ನು ಖಾತರಿಪಡಿಸುತ್ತವೆ. ಅಲ್ಲದೆ, ಪಾರಿಭಾಷಿಕ ಸ್ಥಿರತೆಯನ್ನು ತರುತ್ತವೆ. ಪಠ್ಯದಲ್ಲಿನ ಅನೇಕ ದೀರ್ಘಕಾಲೀನ ವ್ಯತ್ಯಾಸಗಳನ್ನು ಪರಿಹರಿಸುತ್ತವೆ ಮತ್ತು ʻ1969ರ ಒಪ್ಪಂದಗಳ ಕಾನೂನಿನ ಕುರಿತಾದ ವಿಯೆನ್ನಾ ಒಡಂಬಡಿಕೆʼಗೆ ಅನುಗುಣವಾಗಿ ಕಾಯ್ದೆಗಳನ್ನು 'ಸ್ವೀಕಾರ ಅಥವಾ ಅನುಮೋದನೆ' ಮಾಡಲು ಅವಕಾಶ ಕಲ್ಪಿಸುತ್ತವೆ.
*********
(Release ID: 1850758)
Visitor Counter : 185
Read this release in:
Telugu
,
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Malayalam