ಪ್ರಧಾನ ಮಂತ್ರಿಯವರ ಕಛೇರಿ
ಸಿ.ಡಬ್ಲ್ಯೂ.ಜಿ 2022 ರಲ್ಲಿ ಬೆಳ್ಳಿ ಪದಕ ಗೆದ್ದ ಮಹಿಳಾ ಕ್ರಿಕೆಟ್ ತಂಡದ ಸದಸ್ಯರಿಗೆ ಶುಭ ಹಾರೈಸಿದ ಪ್ರಧಾನಮಂತ್ರಿ
प्रविष्टि तिथि:
08 AUG 2022 8:20AM by PIB Bengaluru
ಬರ್ಮಿಂಗ್ಹ್ಯಾಮ್ ನಲ್ಲಿ ನಡೆಯುತ್ತಿರುವ ಸಿ.ಡಬ್ಲ್ಯೂ.ಜಿ. ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಭಾರತ ಮಹಿಳಾ ಕ್ರಿಕೆಟ್ ತಂಡದ ಸದಸ್ಯರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ತಮ್ಮ ಟ್ವೀಟ್ ನಲ್ಲಿ ಪ್ರಧಾನಮಂತ್ರಿ ಅವರು
“ಭಾರತ ಮತ್ತು ಕ್ರಿಕೆಟ್ ನಡುವೆ ಅವಿನಾಭಾವ ಬಾಂಧವ್ಯವಿದೆ. ನಮ್ಮ ಮಹಿಳಾ ಕ್ರಿಕೆಟ್ ತಂಡ ಸಿ.ಡಬ್ಲ್ಯೂ.ಜಿಯಲ್ಲಿ ಅತ್ಯುತ್ತಮ ಕ್ರಿಕೆಟ್ ಆಟ ಆಡಿದೆ ಮತ್ತು ತಾಯ್ನಾಡಿಗೆ ಪ್ರತಿಷ್ಠಿತ ಬೆಳ್ಳಿ ಪದಕ ತಂದುಕೊಟ್ಟಿದೆ. ಸಿ.ಡಬ್ಲ್ಯೂ.ಜಿ ನಲ್ಲಿ ಮೊದಲ ಪದಕ ಇದಾಗಿದ್ದು, ಇದು ಸದಾ ಕಾಲ ವಿಶೇಷತೆಯಿಂದ ಕೂಡಿರುತ್ತದೆ. ಉಜ್ವಲ ಭವಿಷ್ಯಕ್ಕಾಗಿ ತಂಡದ ಸದಸ್ಯರಿಗೆ ಶುಭ ಹಾರೈಕೆಗಳು” ಎಂದು ಹೇಳಿದ್ದಾರೆ.
***********
(रिलीज़ आईडी: 1850478)
आगंतुक पटल : 142
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam