ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಕಾಮನ್ ವೆಲ್ತ್ ಕ್ರೀಡಾಕೂಟ 2022ಯ ವೇಟ್ ಲಿಫ್ಟಿಂಗ್ ನಲ್ಲಿ ಭಾರತಕ್ಕೆ ಮೂರನೇ ಚಿನ್ನದ ಪದಕ ಗೆದ್ದ ಅಚಿಂತ ಶೆಯುಲಿ 

Posted On: 01 AUG 2022 11:51AM by PIB Bengaluru

ಮುಖ್ಯಾಂಶಗಳು;
•    ಆದ್ಭುತ ಸಾಧನೆಗಾಗಿ ಅಂಚಿತ ಶೆಯುಲಿ ಅವರನ್ನು ಅಭಿನಂದಿಸಿದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ 
•    ಪದಕ ಗೆಲ್ಲುವುದಲ್ಲದೆ ಆಟದಲ್ಲಿ ದಾಖಲೆ ಮಾಡಿದ ಮತ್ತು ಭಾರತಕ್ಕೆ ಪದಕ ತಂದುಕೊಟ್ಟಿದ್ದಕ್ಕಾಗಿ ಅಚಿಂತ ಅವರಿಗೆ ಅಭಿನಂದನೆಗಳು: ಶ್ರೀ ಅನುರಾಗ್ ಠಾಕೂರ್ 

ವೇಟ್‌ ಲಿಫ್ಟರ್ ಅಚಿಂತ ಶೆಯುಲಿ ಅವರು ಭಾನುವಾರ ರಾತ್ರಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟ 2022ದ ಪುರುಷರ ವಿಭಾಗದ 73 ಕೆಜಿ ಫೈನಲ್‌ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.  ಅಚಿಂತ ಕ್ರೀಡಾಕೂಟದಲ್ಲಿ ಒಟ್ಟು 313 ಕೆಜಿ (ಸ್ನ್ಯಾಚ್ 143 ಕೆಜಿ + ಕ್ಲೀನ್ ಮತ್ತು ಜರ್ಕ್ 170 ಕೆಜಿ) ಭಾರವನ್ನು ಎತ್ತಿದರು. ಕ್ರೀಡಾಕೂಟದಲ್ಲಿ ಭಾರತಕ್ಕೆ ಇದು ಆರನೇ ಪದಕ ಮತ್ತು ಮೂರನೇ ಚಿನ್ನದ ಪದಕವಾಗಿದೆ. ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಕೇಂದ್ರ ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಮತ್ತು ದೇಶದ ಎಲ್ಲ ಭಾಗಗಳ ಭಾರತೀಯರು ಅಚಿಂತ ಅವರ ಈ ಸಾಧನೆಗಾಗಿ ಅವರನ್ನು ಅಭಿನಂದಿಸಿದ್ದಾರೆ. 
ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಚಿನ್ನದ ಪದಕ ಗೆದ್ದ ಅಚಿಂತ ಶೆಯುಲಿ ಅವರನ್ನು ಅಭಿನಂದಿಸಿದ್ದಾರೆ. ರಾಷ್ಟ್ರಪತಿ ತಮ್ಮ ಟ್ವೀಟ್ ನಲ್ಲಿ  “ಅಚಿಂತ ಶೆಯುಲಿ ಕಾಮನ್‌ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ ಮತ್ತು ತ್ರಿವರ್ಣ ಧ್ವಜ ಎತ್ತರದಲ್ಲಿ ಹಾರುವಂತೆ ಮಾಡಿದ್ದಾರೆ. ನೀವು ಒಂದು ಪ್ರಯತ್ನದಲ್ಲಿನ ಸಣ್ಣ ವೈಫಲ್ಯ ತಕ್ಷಣ ಸರಿಪಡಿಸಿಕೊಂಡಿರಿ ಮತ್ತು ತಂಡದಲ್ಲಿ ಅಗ್ರಸ್ಥಾನ ಪಡೆದಿದ್ದೀರಿ. ನೀವು ಇತಿಹಾಸ ಸೃಷ್ಟಿಸಿದ ಚಾಂಪಿಯನ್. ನಿಮಗೆ ಹೃದಯಪೂರ್ವಕ ಅಭಿನಂದನೆಗಳು..!’’ 

 


 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೂ ಸಹ ಚಿನ್ನದ ಪದಕ ಗೆದ್ದಿರುವ ಅಚಿಂತ ಶೆಯುಲಿ  ಅವರನ್ನು ಅಭಿನಂದಿಸಿದ್ದಾರೆ. ಪ್ರಧಾನಿ ಅವರು ಟ್ವೀಟ್ನಲ್ಲಿ  “ಪ್ರತಿಭಾವಂತ ಅಚಿಂತ ಶೆಯುಲಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿರುವುದು ಸಂತೋಷವಾಗಿದೆ. ಅವರು ಶಾಂತ ಸ್ವಭಾವ ಮತ್ತು ದೃಢತೆಗೆ ಹೆಸರುವಾಸಿಯಾಗಿದ್ದಾರೆ ಮತ್ತು ಈ ವಿಶೇಷ ಸಾಧನೆಗಾಗಿ ಅವರು ಸಾಕಷ್ಟು ಪರಿಶ್ರಮಪಟ್ಟಿದ್ದಾರೆ. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು’’ ಎಂದು ಹೇಳಿದ್ದಾರೆ. 

 ಅಲ್ಲದೆ, ಪ್ರಧಾನಿ ಅವರು ವಿಡಿಯೋ ಕ್ಲಿಪ್ ಹಂಚುಕೊಂಡಿದ್ದಾರೆ. ಪ್ರಧಾನಮಂತ್ರಿ ಅವರು ಟ್ವೀಟ್ ನಲ್ಲಿ “ನಮ್ಮ ತಂಡ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ತೆರಳುವ ಮುನ್ನ,ನಾನು ಅಚಿಂತ ಶೆಯುಲಿ ಅವರೊಂದಿಗೆ ಸಂವಾದ ನಡೆಸಿದ್ದೆ. ಅವರ ತಾಯಿ ಮತ್ತು ಸಹೋದರನಿಂದ ಅವರು ಪಡೆದ ಬೆಂಬಲದ ಬಗ್ಗೆ ನಾವು ಚರ್ಚಿಸಿದ್ದೇವೆ. ಪದಕ ಗೆದ್ದಿರುವ ಅವರು ಇದೀಗ ಸಿನಿಮಾ ವೀಕ್ಷಿಸಲು ಸಮಯ ಪಡೆಯುತ್ತಾರೆಂಬ ಭರವಸೆ ನನಗಿದೆ’’ ಎಂದು ತಿಳಿಸಿದ್ದಾರೆ.  

 


 


ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಚಿನ್ನದ ಪದಕ ಗೆದ್ದ ಅಚಿಂತ ಶೆಯುಲಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಶ್ರೀ ಠಾಕೂರ್ ಅವರು ಟ್ವೀಟ್ ನಲ್ಲಿ “ಪಟಿಯಾಲದ ಎನ್ ಎಸ್ ಎನ್ ಐಎಸ್ನ ತಮ್ಮ ತರಬೇತಿ ಶಿಬಿರದಲ್ಲಿ ಮಿಸ್ಟರ್ ಕಾಮ್, (ಸಂಯಮ ಸ್ವಭಾವದ ವ್ಯಕ್ತಿ) ಎಂದು ಕರೆಯಿಸಿಕೊಳ್ಳುತ್ತಿದ್ದ ಅಚಿಂತ ಶೆಯುಲಿ ಅವರು ಕಾಮನ್ ವೆಲ್ತ್ ಕ್ರೀಡಾಕೂಟ 2022ಯಲ್ಲಿ ಭಾರತಕ್ಕೆ 3ನೇ ಚಿನ್ನವನ್ನು ಗೆದ್ದು ಕೊಟ್ಟಿದ್ದಾರೆ. ಭಾರತಕ್ಕೆ ಪದಕ ತಂದುಕೊಟ್ಟಿದ್ದಕ್ಕೆ ಮತ್ತು ಕ್ರೀಡಾಕೂಟದಲ್ಲಿ ದಾಖಲೆಯನ್ನು ಮಾಡಿದ್ದಕ್ಕಾಗಿ ಅಚಿಂತ ಅವರಿಗೆ ಅಭಿನಂದನೆಗಳು. ಒಟ್ಟಾರೆ 313 ಕೆಜಿ ಭಾರ ಎತ್ತಿದ್ದು ಶ್ಲಾಘನೀಯ ಕಾರ್ಯ !! #ಚೀರ್ ಇಂಡಿಯಾ #Cheer4India.

 


ಅಂಚಿತ ಶೆಯುಲಿ ಅವರ ಸಾಧನೆಗಾಗಿ ಇಲ್ಲಿ ಕ್ಲಿಕ್ ಮಾಡಿ, Click here for achievements of Achinta Sheuli
 

*******(Release ID: 1846966) Visitor Counter : 103