ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ರಾಷ್ಟಪತಿ ಅಧಿಕಾರಾವಧಿ ಫಲಪ್ರದವಾಗಿರಲಿ ಎಂದು ಶುಭ ಕೋರಿದ ಪ್ರಧಾನಮಂತ್ರಿ 

Posted On: 25 JUL 2022 1:34PM by PIB Bengaluru

ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ರಾಷ್ಟಪತಿ ಅಧಿಕಾರಾವಧಿ ಫಲಪ್ರದವಾಗಿರಲಿ ಎಂದು ಪ್ರಧಾನಮಂತ್ರಿ ಶುಭ ಕೋರಿದ್ದಾರೆ.  ಅವರು ಅಧಿಕಾರವಹಿಸಿಕೊಂಡಿರುವುದು ಭಾರತಕ್ಕೆ ವಿಶೇಷವಾಗಿ ಬಡವರು, ಶೋಷಿತರು ಮತ್ತು ದುರ್ಬಲರಿಗೆ ಆನಂದ ಭಾಷ್ಪದ ಕ್ಷಣಗಳಾಗಿವೆ. ರಾಷ್ಟ್ರಪತಿ ಅವರು ತಮ್ಮ ಅಧಿಕಾರ ಸ್ವೀಕಾರ ಭಾಷಣದಲ್ಲಿ ಭಾರತದ ಸಾಧನೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ ಮತ್ತು ಭಾರತ ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಮಯದಲ್ಲಿ ಮುಂದಿನ ಹಾದಿಯ ಭವಿಷ್ಯದ ಮುನ್ನೋಟವನ್ನು ಪ್ರಸ್ತುತಪಡಿಸಿದ್ದಾರೆ. 
ಪ್ರಧಾನಮಂತ್ರಿ ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.
“ದ್ರೌಪದಿ ಮುರ್ಮು ಜಿ ಅವರು ಭಾರತದ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಇಡೀ ರಾಷ್ಟ್ರವು ಹೆಮ್ಮೆಯಿಂದ ವೀಕ್ಷಿಸಿದೆ.ಅವರು ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದ್ದು, ಭಾರತಕ್ಕೆ ವಿಶೇಷವಾಗಿ ಬಡವರು, ಶೋಷಿತರು ಮತ್ತು ದುರ್ಬಲರಿಗೆ ಅತೀವ ಸಂತಸದ ಕ್ಷಣವಾಗಿದೆ. ಅವರ ರಾಷ್ಟ್ರಪತಿ ಅಧಿಕಾರಾವಧಿ ಫಲಪ್ರದವಾಗಿರಲಿ ನಾನು ಅವರಿಗೆ ಶುಭ ಕೋರುತ್ತೇನೆ’’ 

“ಪ್ರಮಾಣವಚನ ಸ್ವೀಕರಿಸಿದ ನಂತರ ಮಾಡಿದ ಭಾಷಣದಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಜಿ ಭರವಸೆ ಮತ್ತು ಸಹಾನುಭೂತಿಯ ಸಂದೇಶವನ್ನು ನೀಡಿದರು. ಅವರು ಭಾರತದ ಸಾಧನೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು ಮತ್ತು ಭಾರತವು ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಮಯದಲ್ಲಿ ಮುಂದಿನ ಹಾದಿಯ ಭವಿಷ್ಯದ ಮುನ್ನೋಟವನ್ನು ಪ್ರಸ್ತುತಪಡಿಸಿದರು’’

***********


(Release ID: 1844606) Visitor Counter : 270