ಪ್ರಧಾನ ಮಂತ್ರಿಯವರ ಕಛೇರಿ
ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಪ್ರಕಟಿಸಿದ ನಂತರ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಪ್ರಧಾನಮಂತ್ರಿ
ತಮ್ಮ ಆಂತರಿಕ ಕರೆಯನ್ನು ಅನುಸರಿಸುವಂತೆ ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿ ಆಗ್ರಹ
ತಮ್ಮ ಫಲಿತಾಂಶಗಳಿಂದ ಸಂತುಷ್ಟರಾಗಿಲ್ಲದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದ ಪ್ರಧಾನಮಂತ್ರಿ
प्रविष्टि तिथि:
22 JUL 2022 2:05PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 12ನೇ ತರಗತಿ ಫಲಿತಾಂಶಗಳನ್ನು ಸಿಬಿಎಸ್ಇ ಪ್ರಕಟಿಸಿದ ನಂತರ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು,:
"ಸಿಬಿಎಸ್ಇ ಹನ್ನೆರಡನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನನ್ನ ಎಲ್ಲಾ ಯುವ ಸ್ನೇಹಿತರಿಗೆ ಅಭಿನಂದನೆಗಳು. ಈ ಯುವಕರ ಧೈರ್ಯ ಮತ್ತು ಸಮರ್ಪಣೆ ಶ್ಲಾಘನೀಯ. ಮಾನವಕುಲವು ಒಂದು ದೊಡ್ಡ ಸವಾಲನ್ನು ಎದುರಿಸಿದ ಕಾಲದಲ್ಲಿ ಸಾಗಿ ಅವರು ಈ ಪರೀಕ್ಷೆಗಳಿಗೆ ಸಿದ್ಧರಾಗಿ ಈ ಯಶಸ್ಸು ಸಾಧಿಸಿದ್ದಾರೆ."
"ಸಿಬಿಎಸ್ಇ ಹನ್ನೆರಡನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ನಮ್ಮ ಯುವ ಪರೀಕ್ಷಾ ಯೋಧರಿಗೆ ಅಸಂಖ್ಯಾತ ಅವಕಾಶಗಳಿವೆ. ಅವರ ಆಂತರಿಕ ಕರೆಗೆ ಓಗೊಡಲು ಮತ್ತು ಅವರು ಆಸಕ್ತರಾಗಿರುವ ವಿಷಯಗಳಲ್ಲಿ ಮುಂದುವರಿಯಲು ನಾನು ಅವರನ್ನು ಒತ್ತಾಯಿಸುತ್ತೇನೆ. ಅವರ ಭವಿಷ್ಯದ ಪ್ರಯತ್ನಗಳಿಗೆ ನನ್ನ ಶುಭ ಹಾರೈಕೆಗಳು" ಎಂದು ಬರೆದಿದ್ದಾರೆ.
"ಕೆಲವು ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳಿಂದ ಸಂತುಷ್ಟರಾಗದೇ ಇರಬಹುದು ಆದರೆ ಒಂದು ಪರೀಕ್ಷೆಯು ಅವರು ಯಾರೆಂದು ಎಂದಿಗೂ ವ್ಯಾಖ್ಯಾನಿಸುವುದಿಲ್ಲ ಎಂದು ಅವರು ತಿಳಿದಿರಬೇಕು. ಅವರು ಮುಂದಿನ ದಿನಗಳಲ್ಲಿ ಹೆಚ್ಚಿನ ಯಶಸ್ಸನ್ನು ಕಂಡುಕೊಳ್ಳುತ್ತಾರೆ ಎಂಬ ಖಾತ್ರಿ ನನಗಿದೆ. ಅಲ್ಲದೆ ಈ ವರ್ಷದ ಪಿಪಿಸಿಯನ್ನು ಸಹ ಹಂಚಿಕೊಂಡಿದ್ದು, ಅಲ್ಲಿ ನಾವು ಪರೀಕ್ಷೆಗಳಿಗೆ ಸಂಬಂಧಿಸಿದ ಅಂಶಗಳನ್ನು ಚರ್ಚಿಸಿದ್ದೇವೆ" ಎಂದು ಅವರು ತಿಳಿಸಿದ್ದಾರೆ.
*********
(रिलीज़ आईडी: 1844157)
आगंतुक पटल : 155
इस विज्ञप्ति को इन भाषाओं में पढ़ें:
Bengali
,
Tamil
,
Telugu
,
English
,
Urdu
,
Marathi
,
हिन्दी
,
Assamese
,
Manipuri
,
Punjabi
,
Gujarati
,
Odia
,
Malayalam