ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

200 ಕೋಟಿ ಡೋಸ್ ಲಸಿಕೆ ಡೋಸ್‌ ದಾಖಲೆ ಸಾಧನೆಗಾಗಿ ಬಿಲ್ ಗೇಟ್ಸ್ ಅವರು ಪ್ರಧಾನಮಂತ್ರಿಯವರನ್ನು ಅಭಿನಂದಿಸಿದರು.


ವಿಜ್ಞಾನಿಗಳು, ವೈದ್ಯರು ಮತ್ತು ದಾದಿಯರ ಸಾಮೂಹಿಕ ಪ್ರಯತ್ನಗಳನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು.

Posted On: 20 JUL 2022 3:13PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತದ ಲಸಿಕಾ ಅಭಿಯಾನಕ್ಕೆ ಶಕ್ತಿ ತುಂಬುವಲ್ಲಿ ವಿಜ್ಞಾನಿಗಳು, ವೈದ್ಯರು ಮತ್ತು ದಾದಿಯರ ಸಾಮೂಹಿಕ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.

ಬಿಲ್ ಗೇಟ್ಸ್ ಅವರ ಅಭಿನಂದನಾ ಟ್ವೀಟ್‌ಗೆ ಪ್ರತಿಕ್ರಿಯೆಯಾಗಿ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿರುವ ಅವರು,

"ಭಾರತದ ಲಸಿಕಾ ಅಭಿಯಾನವು ವೇಗ ಮತ್ತು ವ್ಯಾಪ್ತಿಯಲ್ಲಿ ಅಗಾಧವಾಗಿದೆ. ಇದು ವಿಜ್ಞಾನಿಗಳು, ವೈದ್ಯರು ಮತ್ತು ದಾದಿಯರು ಸೇರಿದಂತೆ ಅನೇಕರ ಸಾಮೂಹಿಕ ಪ್ರಯತ್ನಗಳಿಂದ ಶಕ್ತಿಯುತವಾಗಿದೆ. ಇದೇ ವೇಳೆ, ಭಾರತದ ಜನರು ವಿಜ್ಞಾನದಲ್ಲಿ ಗಮನಾರ್ಹ ನಂಬಿಕೆಯನ್ನು ತೋರಿಸಿದ್ದಾರೆ ಮತ್ತು ಸಮಯೋಚಿತ ರೀತಿಯಲ್ಲಿ ತಮ್ಮ ಡೋಸ್‌ಗಳನ್ನು ಪಡೆದಿದ್ದಾರೆ,ʼʼ ಎಂದಿದ್ದಾರೆ.

 

***********


(Release ID: 1843268)