ಪ್ರಧಾನ ಮಂತ್ರಿಯವರ ಕಛೇರಿ
ಮಧ್ಯಪ್ರದೇಶದ ಧಾರ್‌ನಲ್ಲಿ ಸಂಭವಿಸಿದ ಬಸ್ ಅವಘಡದಲ್ಲಿ ಬಲಿಯಾದವರಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್) ಪ್ರಧಾನ ಮಂತ್ರಿಯವರು ಪರಿಹಾರವನ್ನು ಘೋಷಿಸಿದರು
Posted On:
18 JUL 2022 2:20PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮಧ್ಯಪ್ರದೇಶದ ಧಾರ್‌ನಲ್ಲಿ ಸಂಭವಿಸಿದ ಬಸ್ ಅವಘಡದಲ್ಲಿ ಪ್ರಾಣ ಕಳೆದುಕೊಂಡ ವರ ಕುಟುಂಬದವರಿಗೆ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್‌ಆರ್‌ಎಫ್) ರೂ.2 ಲಕ್ಷ ಪರಿಹಾರವನ್ನು ಮತ್ತು ಗಾಯಾಳುಗಳಿಗೆ ರೂ.50,000 ಘೋಷಿಸಿದ್ದಾರೆ.
ಪ್ರಧಾನಮಂತ್ರಿಯವರ ಕಾರ್ಯಾಲಯದ ಟ್ವೀಟ್ ಹೀಗಿದೆ:
“ಮಧ್ಯಪ್ರದೇಶದ ಧಾರ್‌ನಲ್ಲಿ ಬಸ್ ಅವಘಡದಲ್ಲಿ ಪ್ರಾಣ ಕಳೆದುಕೊಂಡ ವರ ಕುಟುಂಬದವರಿಗೆ ಪಿಎಂಎನ್‌ಆರ್‌ಎಫ್ ನಿಂದ ರೂ.2 ಲಕ್ಷ ಪರಿಹಾರವನ್ನು ಮತ್ತು ಗಾಯಾಳುಗಳಿಗೆ ರೂ.50,000 ನೀಡಲಾಗುವುದು”.
***********
(Release ID: 1842494)
Read this release in:
Bengali
,
English
,
Urdu
,
Hindi
,
Marathi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam