ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

200 ಕೋಟಿ ಲಸಿಕೆ ಡೋಸ್ ಗುರಿ ದಾಟಿದ್ದಕ್ಕಾಗಿ ನಾಗರಿಕರಿಗೆ ಪ್ರಧಾನಮಂತ್ರಿ ಅಭಿನಂದನೆ

Posted On: 17 JUL 2022 1:21PM by PIB Bengaluru

 

   ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಿಜ್ಞಾನದ ಮೇಲೆ ಅಸಾಧಾರಣ ನಂಬಿಕೆಯನ್ನು ತೋರಿಸಿದ್ದಕ್ಕಾಗಿ ಮತ್ತು 200 ಕೋಟಿ ಕೋವಿಡ್-19 ಲಸಿಕೆ ಡೋಸ್ ಗಳ ಗುರಿ ಸಂಖ್ಯೆಯನ್ನು ದಾಟಿದ್ದಕ್ಕಾಗಿ ಭಾರತದ ಜನತೆಯನ್ನು ಶ್ಲಾಘಿಸಿದ್ದಾರೆ. ಈ ಅಭಿಯಾನದಲ್ಲಿ ವೈದ್ಯರು, ದಾದಿಯರು, ಮುಂಚೂಣಿ ಕಾರ್ಯಕರ್ತರು, ವಿಜ್ಞಾನಿಗಳು, ಅನ್ವೇಷಕರು ಮತ್ತು ಉದ್ಯಮಿಗಳು ತೋರಿದ ಉತ್ಸಾಹ ಮತ್ತು ದೃಢ ನಿಶ್ಚಯವನ್ನು ಅವರು ಶ್ಲಾಘಿಸಿದರು.

ಕೇಂದ್ರ ಆರೋಗ್ಯ ಸಚಿವ ಶ್ರೀ ಮನ್ಸುಖ್ ಮಾಂಡವೀಯ ಅವರ ಘೋಷಣೆಗೆ ಪ್ರತಿಕ್ರಿಯೆಯಾಗಿ ಈ ಬಗ್ಗೆ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ:


"ಭಾರತ ಮತ್ತೊಮ್ಮೆ ಇತಿಹಾಸ ನಿರ್ಮಿಸಿದೆ!. 200 ಕೋಟಿ ಲಸಿಕೆ ಡೋಸ್ ಗಳ ವಿಶೇಷ ಸಂಖ್ಯೆಯಗುರಿಯನ್ನು ದಾಟಿದ್ದಕ್ಕಾಗಿ ಎಲ್ಲಾ ಭಾರತೀಯರಿಗೆ ಅಭಿನಂದನೆಗಳು. ಭಾರತದ ಲಸಿಕಾಕರಣ ಆಂದೋಲನವನ್ನು ಬೃಹತ್ ಪ್ರಮಾಣದಲ್ಲಿ ಮತ್ತು ಸಾಟಿಯಿಲ್ಲದ ವೇಗದಲ್ಲಿ ನಡೆಯಲು ಕೊಡುಗೆ ನೀಡಿದವರ ಬಗ್ಗೆ ಹೆಮ್ಮೆಪಡುತ್ತೇನೆ. ಇದು ಕೋವಿಡ್-19 ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸಿದೆ.

ಲಸಿಕೆಯ ಬಿಡುಗಡೆಯುದ್ದಕ್ಕೂ, ಭಾರತದ ಜನರು ವಿಜ್ಞಾನದಲ್ಲಿ ಗಮನಾರ್ಹ ನಂಬಿಕೆಯನ್ನು ತೋರಿಸಿದ್ದಾರೆ. ನಮ್ಮ ವೈದ್ಯರು, ದಾದಿಯರು, ಮುಂಚೂಣಿ ಕಾರ್ಯಕರ್ತರು, ವಿಜ್ಞಾನಿಗಳು, ಅನ್ವೇಷಕರುಮತ್ತು ಉದ್ಯಮಿಗಳು ಸುರಕ್ಷಿತ ಭೂಗ್ರಹವನ್ನು ಖಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಉತ್ಸಾಹ ಮತ್ತು ದೃಢ ನಿಶ್ಚಯವನ್ನು ನಾನು ಶ್ಲಾಘಿಸುತ್ತೇನೆ".
ಎಂದು ಪ್ರಧಾನ ಮಂತ್ರಿ ಅವರು ಹೇಳಿದ್ದಾರೆ.

 


 

*************


(Release ID: 1842383) Visitor Counter : 144