ಪ್ರಧಾನ ಮಂತ್ರಿಯವರ ಕಛೇರಿ
ಆಷಾಢ ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಭಗವಾನ್ ಬುದ್ಧನ ಉದಾತ್ತ ಬೋಧನೆಗಳನ್ನು ಸ್ಮರಿಸಿದ ಪ್ರಧಾನಿ
Posted On:
13 JUL 2022 9:34AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಷಾಢ ಪೂರ್ಣಿಮೆಯ ಪವಿತ್ರ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
ಶ್ರೀ ಮೋದಿ ಅವರು ಭಗವಾನ್ ಬುದ್ಧನ ಉದಾತ್ತ ಬೋಧನೆಗಳನ್ನು ಸ್ಮರಿಸಿದರು.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು;
"ಆಷಾಢ ಪೂರ್ಣಿಮೆಯ ಪವಿತ್ರ ಸಂದರ್ಭದಲ್ಲಿ ದೇಶವಾಸಿಗಳಿಗೆ ಶುಭಾಶಯಗಳು. ನಾವು ಭಗವಾನ್ ಬುದ್ಧನ ಉದಾತ್ತ ಬೋಧನೆಗಳನ್ನು ನೆನಪಿಸಿಕೊಳ್ಳುತ್ತೇವೆ. ನ್ಯಾಯಯುತ ಮತ್ತು ಸಹಾನುಭೂತಿಯ ಸಮಾಜ ನಿರ್ಮಾಣದ ಅವರ ಪ್ರಬುದ್ಧ ಮತ್ತು ಉದಾತ್ತ ದೃಷ್ಟಿಕೋನವನ್ನು ಸಾಕಾರಗೊಳಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತಿದ್ದೇವೆ" ಎಂದು ಪ್ರಧಾನಿ ತಿಳಿಸಿದ್ದಾರೆ.
***********
(Release ID: 1841144)
Visitor Counter : 146
Read this release in:
English
,
Urdu
,
Marathi
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam