ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
azadi ka amrit mahotsav g20-india-2023

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಮಿಷನ್ ವಾತ್ಸಲ್ಯ ಯೋಜನೆಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ

Posted On: 07 JUL 2022 2:23PM by PIB Bengaluru

ಮಕ್ಕಳ ಕಲ್ಯಾಣ ಮತ್ತು ಪುನರ್ವಸತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು 2009-10 ರಿಂದ ಕೇಂದ್ರ ಪ್ರಾಯೋಜಿತ ಯೋಜನೆ "ಮಿಷನ್ ವಾತ್ಸಲ್ಯ" ಹಿಂದಿನ ಮಕ್ಕಳ ರಕ್ಷಣಾ ಸೇವೆಗಳ (ಸಿಪಿಎಸ್) ಯೋಜನೆಯನ್ನು ಜಾರಿಗೆ ತರುತ್ತಿದೆ.

 

ಮಿಷನ್ ವಾತ್ಸಲ್ಯದ ಉದ್ದೇಶವು, ಭಾರತದ ಪ್ರತಿಯೊಂದು ಮಗುವಿಗೆ ಆರೋಗ್ಯಕರ ಮತ್ತು ಸಂತೋಷದ ಬಾಲ್ಯವನ್ನು ಖಾತ್ರಿಪಡಿಸುವುದಾಗಿದೆ. ಜತೆಗೆ ಅವರ ಸಂಪೂರ್ಣ ಸಾಮರ್ಥ್ಯವನ್ನು ಗುರುತಿಸಲು ಅವರಿಗೆ ಅನುವು ಮಾಡಿಕೊಡಲು ಅವಕಾಶಗಳನ್ನು ಖಚಿತಪಡಿಸಿಕೊಳ್ಳುವುದು ಮತ್ತು ಎಲ್ಲಾ ರೀತಿಯಲ್ಲೂ, ಸುಸ್ಥಿರ ರೀತಿಯಲ್ಲಿ, ಮಕ್ಕಳ ಅಭಿವೃದ್ಧಿಗಾಗಿ ಸೂಕ್ಷ್ಮ, ಬೆಂಬಲಿತ ಮತ್ತು ಸಿಂಕ್ರೊನೈಸ್ಡ್ (ಒಡಂಬಡಿಸುವ) ಪರಿಸರ ವ್ಯವಸ್ಥೆಯನ್ನು ಬೆಳೆಸುವುದು, ಬಾಲನ್ಯಾಯ ಕಾಯ್ದೆ 2015 ರ ಆದೇಶವನ್ನು ಪೂರೈಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸಹಾಯ ಮಾಡುವುದು ಮತ್ತು ಎಸ್ ಡಿಜಿ ಗುರಿಗಳನ್ನು ಸಾಧಿಸುವುದಾಗಿದೆ.

 

 ಮಿಷನ್ ವಾತ್ಸಲ್ಯವು ಮಕ್ಕಳ ಸಾಂಸ್ಥಿಕೀಕರಣದ ತತ್ವದ ಆಧಾರದ ಮೇಲೆ ಕಠಿಣ ಸಂದರ್ಭಗಳಲ್ಲಿ ಮಕ್ಕಳ ಕುಟುಂಬ ಆಧಾರಿತ ಸಾಂಸ್ಥಿಕವಲ್ಲದ ಆರೈಕೆಯನ್ನು ಉತ್ತೇಜಿಸುತ್ತದೆ.

 

ಮಿಷನ್ ವಾತ್ಸಲ್ಯದ ಅಡಿಯಲ್ಲಿನ ಘಟಕಗಳಲ್ಲಿ ಇವು ಸೇರ್ಪಡೆಯಾಗಿವೆ- ಶಾಸನಬದ್ಧ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಸುಧಾರಿಸುವುದು; ಸೇವಾ ವಿತರಣಾ ರಚನೆಗಳನ್ನು ಬಲಪಡಿಸುವುದು; ಉನ್ನತ ಮಟ್ಟದ ಸಾಂಸ್ಥಿಕ ಆರೈಕೆ /ಸೇವೆಗಳು; ಸಾಂಸ್ಥಿಕವಲ್ಲದ ಸಮುದಾಯ ಆಧಾರಿತ ಆರೈಕೆಯನ್ನು ಪ್ರೋತ್ಸಾಹಿಸುವುದು; ತುರ್ತು ಔಟ್ರೀಚ್ ಸೇವೆಗಳು; ತರಬೇತಿ ಮತ್ತು ಸಾಮರ್ಥ್ಯ ವರ್ಧನೆ ಆಗಿವೆ.

 

ಯೋಜನೆಯ ಅನುಷ್ಠಾನಕ್ಕಾಗಿ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಸಚಿವಾಲಯದೊಂದಿಗೆ ಒಡಂಬಡಿಕೆಗೆ (ಎಂ.ಓ.ಯು.) ಸಹಿ ಹಾಕಿವೆ. ಮಿಷನ್ ವಾತ್ಸಲ್ಯವನ್ನು ಕೇಂದ್ರ ಮತ್ತು ರಾಜ್ಯ / ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ನಡುವಿನ ನಿಗದಿತ ವೆಚ್ಚ ಹಂಚಿಕೆ ಅನುಪಾತದ ಪ್ರಕಾರ ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಜಾರಿಗೆ ತರಲಾಗುವುದು.

 

ಮಿಷನ್ ವಾತ್ಸಲ್ಯ ಯೋಜನೆಯ ವಿವರವಾದ ಮಾರ್ಗಸೂಚಿಗಳನ್ನು ಸಚಿವಾಲಯವು ಬಿಡುಗಡೆ ಮಾಡಿದೆ ಮತ್ತು ಮಾರ್ಗಸೂಚಿಗಳ ಹಣಕಾಸು ಮಾನದಂಡಗಳ ಆಧಾರದ ಮೇಲೆ ಮಿಷನ್ ವಾತ್ಸಲ್ಯ ಯೋಜನೆಯಡಿ 2022-23 ನೇ ಸಾಲಿನ ಹಣಕಾಸು ಪ್ರಸ್ತಾಪ ಮತ್ತು ಯೋಜನೆಗಳನ್ನು ಸಿದ್ಧಪಡಿಸಲು ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ಸೂಚಿಸಲಾಗಿದೆ. ಮಿಷನ್ ವಾತ್ಸಲ್ಯ ಯೋಜನೆಯ ಮಾನದಂಡಗಳು 2022ರ ಏಪ್ರಿಲ್ 01 ರಿಂದ ಅನ್ವಯವಾಗುತ್ತವೆ.

 

ಮಿಷನ್ ವಾತ್ಸಲ್ಯ ಯೋಜನೆಯ ವಿವರವಾದ ಮಾರ್ಗಸೂಚಿಗಳು ಇಲ್ಲಿ ಲಭ್ಯವಿವೆ:

https://wcd.nic.in/acts/guidelines-mission-vatsalya

 

******(Release ID: 1839858) Visitor Counter : 178