ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿಯವರು ಜುಲೈ 8 ರಂದು ಮೊದಲ "ಅರುಣ್ ಜೇಟ್ಲಿ ಸ್ಮಾರಕ ಉಪನ್ಯಾಸ" ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ


ಕೌಟಿಲ್ಯ ಆರ್ಥಿಕ ಸಮಾವೇಶದಲ್ಲಿ ಭಾಗವಹಿಸುವ ಪ್ರತಿನಿಧಿಗಳೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಲಿದ್ದಾರೆ

Posted On: 07 JUL 2022 11:43AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 8 ಜುಲೈ, 2022 ರಂದು ಸಂಜೆ 6:30 ಕ್ಕೆ ನವದೆಹಲಿಯ ವಿಜ್ಞಾನ ಭವನದಲ್ಲಿ ಮೊದಲ ‘ಅರುಣ್ ಜೇಟ್ಲಿ ಸ್ಮಾರಕ ಉಪನ್ಯಾಸ’ (ಎಜೆಎಮ್‌ಎಲ್‌) ಕಾಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮೊದಲ ಎಜೆಎಮ್‌ಎಲ್‌ ನಲ್ಲಿ ಮುಖ್ಯ ಭಾಷಣವನ್ನು ಸಿಂಗಾಪುರ ಸರ್ಕಾರದ ಹಿರಿಯ ಸಚಿವರಾದ ಶ್ರೀ ಥರ್ಮನ್ ಷಣ್ಮುಗರತ್ನಂ ಅವರು "ಒಳಗೊಳ್ಳುವಿಕೆಯ ಮೂಲಕ ಬೆಳವಣಿಗೆ, ಬೆಳವಣಿಗೆಯ ಮೂಲಕ ಒಳಗೊಳ್ಳುವಿಕೆ" ಕುರಿತು ಭಾಷಣ ಮಾಡಲಿದ್ದಾರೆ. ಉಪನ್ಯಾಸದ ನಂತರ ಶ್ರೀ ಮಥಿಯಾಸ್ ಕಾರ್ಮನ್ (ಒಇಸಿಡಿ ಪ್ರಧಾನ ಕಾರ್ಯದರ್ಶಿ) ಮತ್ತು ಶ್ರೀ ಅರವಿಂದ್ ಪನಗಾರಿಯಾ (ಪ್ರೊಫೆಸರ್, ಕೊಲಂಬಿಯಾ ವಿಶ್ವವಿದ್ಯಾಲಯ) ರವರಿಂದ ಚರ್ಚೆ ನಡೆಯಲಿದೆ.

ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯು, ದೇಶಕ್ಕೆ ಶ್ರೀ ಅರುಣ್ ಜೇಟ್ಲಿಯವರ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಮೊದಲ 'ಅರುಣ್ ಜೇಟ್ಲಿ ಸ್ಮಾರಕ ಉಪನ್ಯಾಸ'ವನ್ನು ಆಯೋಜಿಸಿದೆ.

ಜುಲೈ 8 ರಿಂದ 10 ರವರೆಗೆ ಆಯೋಜಿಸಲಾಗಿರುವ ಮೂರು ದಿನಗಳ ಕಾರ್ಯಕ್ರಮವಾದ ಕೌಟಿಲ್ಯ ಆರ್ಥಿಕ ಸಮಾವೇಶದಲ್ಲಿ (ಕೌಟಿಲ್ಯ ಎಕನಾಮಿಕ್ ಕಾನ್ಕ್ಲೇವ್ -ಕೆಇಸಿ) ಭಾಗವಹಿಸುವ ಪ್ರತಿನಿಧಿಗಳೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಲಿದ್ದಾರೆ. ಪ್ರಧಾನ ಮಂತ್ರಿ ಭೇಟಿಯಾಗಲಿರುವ ಪ್ರಖ್ಯಾತ ಅರ್ಥಶಾಸ್ತ್ರಜ್ಞರು : ಅನ್ನಿ ಕ್ರೂಗರ್, ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ; ಶ್ರೀ ನಿಕೋಲಸ್ ಸ್ಟರ್ನ್, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್; ಶ್ರೀ ರಾಬರ್ಟ್ ಲಾರೆನ್ಸ್, ಹಾರ್ವರ್ಡ್ ಕೆನಡಿ ಶಾಲೆ; ಶ್ರೀ. ಜಾನ್ ಲಿಪ್ಸ್ಕಿ, ಮಾಜಿ ಕಾರ್ಯನಿರ್ವಾಹಕ ವ್ಯವಸ್ಥಾಪಕ ನಿರ್ದೇಶಕ, ಐಎಮ್‌ಎಫ್‌; ಶ್ರೀ ಜುನೈದ್ ಅಹ್ಮದ್, ಭಾರತಕ್ಕಾಗಿ ವಿಶ್ವಬ್ಯಾಂಕ್ ದೇಶದ ನಿರ್ದೇಶಕ ಹಾಗು ಇತರರು. ಕೆಇಸಿ ಸಮಾವೇಶವನ್ನು ಆರ್ಥಿಕ ಅಭಿವೃದ್ಧಿ ಸಂಸ್ಥೆಯು ಹಣಕಾಸು ಸಚಿವಾಲಯದ ಬೆಂಬಲದೊಂದಿಗೆ ಆಯೋಜಿಸುತ್ತಿದೆ.

********

 

 

 (Release ID: 1839846) Visitor Counter : 128