ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
18ನೇ ಮೈ ಗೌವ್ ರಾಜ್ಯ ಪ್ರದರ್ಶನ- ಮೈ ಗೌ ಗುಜರಾತ್ ಇಂದು ಆರಂಭ
6.67 ಕೋಟಿ ಗುಜರಾತಿಯರನ್ನು ರಾಷ್ಟ್ರ ನಿರ್ಮಾಣಕ್ಕೆ ಇನ್ನೂ ಹೆಚ್ಚಿನ ಕೊಡುಗೆ ನೀಡಲು ಸಬಲೀಕರಣಗೊಳಿಸಲಿರುವ ವೇದಿಕೆ
Posted On:
06 JUL 2022 11:29AM by PIB Bengaluru
ಗುಜರಾತ್ ಮೈ ಗೌ- 18ನೇ ಮೈ ಗೌ ರಾಜ್ಯ ಪ್ರದರ್ಶನ ಇಂದು ಆರಂಭವಾಯಿತು. ನಾಗರಿಕ ಕೇಂದ್ರೀತ ಈ ವೇದಿಕೆಯನ್ನು ನಾಲ್ಕು ಪ್ರಮುಖ ಉದ್ದೇಶಗಳೊಂದಿಗೆ ಆರಂಭಿಸಲಾಗಿದೆ, ಅವುಗಳೆಂದರೆ,
1. ಮಳೆ ನೀರು ಸಂರಕ್ಷಣೆ ಮತ್ತು ನೀರು ಉಳಿತಾಯ ತಂತ್ರಗಳನ್ನು ಹಂಚಿಕೊಳ್ಳುವ ಬಗ್ಗೆ ಸಂವಾದ ನಡೆಸುವ ವೇದಿಕೆ
2. ಇ-ಆಡಳಿತದ ಮೂಲಕ ಜೀವನ ಸುಲಭಗೊಳಿಸುವ ಕುರಿತು ಚರ್ಚೆ ನಡೆಸುವ ವೇದಿಕೆ
3. ಸ್ವಚ್ಛ ಭಾರತ ಅಭಿಯಾನದ ಸಮೀಕ್ಷೆ
4. ಡಿಜಿಟಲ್ ಸೇವಾ ಸೇತು ಕುರಿತಾದ ಬ್ಲಾಗ್ ಗಳು
ಮೈ ಗೌ ಗುಜರಾತ್ ವೇದಿಕೆಯು ರಾಷ್ಟ್ರ ನಿರ್ಮಾಣಕ್ಕೆ ಇನ್ನೂ ಹೆಚ್ಚಿನ ಕೊಡುಗೆ ನೀಡಲು 6.67 ಕೋಟಿ ಗುಜರಾತಿಗಳನ್ನು ಸಬಲೀಕರಣಗೊಳಿಸುತ್ತದೆ.
ಮೈ ಗೌ ನಾಗರಿಕರು ತೊಡಗಿರುವ ವಿಶ್ವದ ಅತಿದೊಡ್ಡ ವೇದಿಕೆಯಾಗಿದ್ದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2014ರ ಜುಲೈ 26 ರಂದು ಇದಕ್ಕೆ ಚಾಲನೆ ನೀಡಿದ್ದರು. ಇದು ಸರ್ಕಾರವನ್ನು ಸಾಮಾನ್ಯ ಜನರಿಗೆ ಹತ್ತಿರ ತರುವ ಉದ್ದೇಶದದೊಂದಿಗೆ ಆರಂಭವಾಗಿದೆ. ಮೈಗೌ ನಾಗರಿಕರಿಗೆ ಆಲೋಚನೆಗಳು ಮತ್ತು ಸಲಹೆಗಳನ್ನು ನೀಡಲು ಮತ್ತು ಭಾಗಿದಾರಿಕೆ ಆಡಳಿತವನ್ನು ವಾಸ್ತವವಾಗಿ ಕಾರ್ಯರೂಪಕ್ಕೆ ಇಳಿಸುವಂತೆ ಮಾಡಲು ಅನುವುಮಾಡಿಕೊಡುವ ವೇದಿಕೆಯಾಗಿ ವಿಕಸನಗೊಂಡಿದೆ.
ಇಂದು ಮೈ ಗೌ ವೇದಿಕೆಯಲ್ಲಿ 2.5 ಕೋಟಿಗೂ ಅಧಿಕ ನೋಂದಾಯಿತ ಬಳಕೆದಾರರಿದ್ದು, ಮೈ ಗೌ ಸಾಥಿಗಳೆಂದು ಕರೆಯುವ ಅವರು ನಾನಾ ನೀತಿಗಳಿಗೆ ಸಂಬಂಧಿಸಿದಂತೆ ತಮ್ಮ ಚಿಂನತೆನ ಮತ್ತು ಸಲಹೆಗಳನ್ನು ಹಂಚಿಕೊಳ್ಳುವಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಸರ್ಕಾರಿ ಯೋಜನೆಗಳು ಮತ್ತು ಕಾರ್ಯಕ್ರಮಗಳಿಗೆ ಸಂಬಂಧಿಸಿದ ಕ್ವಿಜ್ ಸ್ಪರ್ಧೆಗಳು, ಹ್ಯಾಕಥಾನ್ ಮತ್ತು ಇನ್ನಿತರ ಸ್ಪರ್ಧೆಗಳಲ್ಲಿ ಹಾಗೂ ಬಹುವಿಧದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.
ಮೈ ಗೌ ಭಾರತೀಯ ಯುವಜನತೆಯಲ್ಲಿ ವಿಶೇಷವಾಗಿ ನಮ್ಮ ಶ್ರೇಷ್ಠ ದೇಶದ ದೂರದ ಗುಡ್ಡಗಾಡು ಪ್ರದೇಶಗಳಲ್ಲೂ ಇಂದು ಅತ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮವಾಗಿದೆ; ಅವರು ಕೋವಿಡ್ ಸಮಯದಲಕ್ಲಿ ಸಕಾಲಿಕ ಮತ್ತು ಖಚಿತ ಮಾಹಿತಿಯನ್ನು ಪಸರಿಸುವ ಮೂಲಕ ಮೈ ಗೌ ಬೆಂಬಲಿಸಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ.
ನಮ್ಮ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಮೈ ಗೌ ಚಾಟ್ ಬಾಟ್ ಸಹಾಯವಾಣಿ, ಯುವಜನತೆ ಮತ್ತು ವಯಸ್ಸಾದವರಲ್ಲಿ ಹೆಚ್ಚು ಜನಪ್ರಿಯವಾಗಿದೆ ಮತ್ತು ಕೋವಿನ್ ಸೇರಿದಂತೆ ಹಲವು ಸರ್ಕಾರಿ ಸೇವೆಗಳ ಜೊತೆ ಸಂಯೋಜಿಸಲಾಗಿದೆ ಮತ್ತು ಇತ್ತೀಚೆಗೆ ಡಿಜಿಲಾಕರ್ ಆ್ಯಪ್ ಜೊತೆ ಸಂಯೋಜಿಸಲಾಗಿದೆ.
ಕೆಲವು ದಿನಗಳ ಹಿಂದೆ ಪ್ರಧಾನಿ ಅವರು “ಡಿಜಿಟಲ್ ಇಂಡಿಯಾ ತಂತ್ರಜ್ಞಾನವನ್ನು ಹೆಚ್ಚು ಸುಲಭವಾಗಿ ಲಭ್ಯವಾಗಿಸುವ ಮೂಲಕ ಜನರನ್ನು ಸಶಕ್ತಗೊಳಿಸಿದೆ’’ ಎಂಬ ಮಾತು ಪ್ರತಿಫಲನಗೊಂಡಿದೆ.
******
(Release ID: 1839612)
Visitor Counter : 142