ಸಹಕಾರ ಸಚಿವಾಲಯ
ನವದೆಹಲಿಯಲ್ಲಿಂದು 100 ನೇ ಅಂತರರಾಷ್ಟ್ರೀಯ ಸಹಕಾರ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಭಾಗಿ
ಸಹಕಾರ ಆಂದೋಲನಕ್ಕೆ ಬಲಿಷ್ಠ ಅಡಿಪಾಯ ಹಾಕಲಾಗಿದೆ ಮತ್ತು ಇದು ನಮ್ಮ ಜವಾಬ್ದಾರಿ ಹಾಗೂ ಈ ಅಡಿಪಾಯದ ಮೇಲೆ ಮುಂದಿನ ಪೀಳಿಗೆಗಳು ಬಲವಾದ ಕಟ್ಟಡ ನಿರ್ಮಿಸಲು ನೆರವಾಗಲಿದೆ
ಸಹಕಾರಿ ಸಂಸ್ಥೆಗಳು ತಂತ್ರಜ್ಞಾನ ಮತ್ತು ವೃತ್ತಿಪರತೆಯನ್ನು ಸಂಯೋಜಿಸುವ ಮೂಲಕ ಆಧುನಿಕ ಕಾಲಕ್ಕೆ ಅನುಗುಣವಾಗಿ ಹೊಂದಿಕೊಳ್ಳಬೇಕು: ಇದರಿಂದ ಸಹಕಾರಿ ಸಂಸ್ಥೆಗಳು ಭವಿಷ್ಯದಲ್ಲಿ ಪ್ರಗತಿ ಹೊಂದಬಹುದು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರತ್ಯೇಕವಾಗಿ ಕೇಂದ್ರ ಸಹಕಾರ ಸಚಿವಾಲಯ ರಚಿಸುವ ಮೂಲಕ ಸಹಕಾರ ಚಳವಳಿಗೆ ಜೀವ ತುಂಬಿದ್ದಾರೆ
ನಾವು ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ ಮತ್ತು 2047 ರಲ್ಲಿ ದೇಶದಲ್ಲಿ ಸಹಕಾರ ಚಳವಳಿ ಉತ್ತುಂಗಕ್ಕೇರುವ ವರ್ಷವಾಗಲಿದೆ ಎಂದು ಪ್ರತಿಜ್ಞೆ ಮಾಡಬೇಕಾಗಿದೆ.
Posted On:
04 JUL 2022 6:39PM by PIB Bengaluru
ಜಗತ್ತು ಬಂಡವಾಳ ಶಾಹಿಗಳು ಮತ್ತು ಕಮ್ಯುನಿಸ್ಟ್ ಮಾದರಿಗಳನ್ನು ಅಳವಡಿಸಿಕೊಂಡಿದೆ, ಆದರೆ ಇವರೆಡೂ ವಿಪರೀತ ಮಾದರಿಗಳು. ಸಹಕಾರಿ ಮಾದರಿ ಮಧ್ಯಮ ಮಾರ್ಗ ಹಾಗೂ ಭಾರತಕ್ಕೆ ಸೂಕ್ತವಾಗಿದೆ
ಪ್ರಸ್ತುತ ಆರ್ಥಿಕ ಮಾದರಿಯಿಂದಾಗಿ ಅಭಿವೃದ್ಧಿಯಲ್ಲಿ ಅಸಮತೋಲನವಾಗಿದೆ, ಆದರೆ ಸಹಕಾರಿ ಮಾದರಿಯನ್ನು ಸಾರ್ವತ್ರಿಕವಾಗಿ ಮತ್ತು ಎಲ್ಲರನ್ನೂ ಒಳಗೊಳ್ಳಲು ಜನಪ್ರಿಯಗೊಳಿಸಬೇಕು ಮತ್ತು ಇದು ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ನೆರವಾಗಲಿದೆ
ಜಗತ್ತಿನ 30 ಲಕ್ಷ ಸಹಕಾರಿ ಸಂಸ್ಥೆಗಳ ಪೈಕಿ 8.55 ಲಕ್ಷ ಸಂಸ್ಥೆಗಳು ಭಾರತದಲ್ಲಿವೆ ಮತ್ತು 13 ಕೋಟಿ ಜನ ನೇರವಾಗಿ ಸಹಭಾಗಿತ್ವ ಹೊಂದಿದ್ದು, ಭಾರತದಲ್ಲಿ ಶೇ 91 ರಷ್ಟು ಹಳ್ಳಿಗಳಲ್ಲಿ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ
ಸಹಕಾರಿ ಸಂಸ್ಥೆಗಳು ವಿಫಲವಾಗಿವೆ ಎಂದು ಅನೇಕ ಜನ ಭಾವಿಸುತ್ತಾರೆ, ಆದರೆ ಅಂತಹ ಜನ ಜಾಗತಿಕ ದತ್ತಾಂಶ ನೋಡಿದರೆ ಸಹಕಾರಿ ಸಂಸ್ಥೆಗಳು ಅನೇಕ ರಾಷ್ಟ್ರಗಳ ಜಿಡಿಪಿಗೆ ಪ್ರಮುಖ ಕೊಡುಗೆ ನೀಡುತ್ತಿರುವುದನ್ನು ತಿಳಿಯಬಹುದು
ನಾವು ದೇಶದಲ್ಲಿ ಸಹಕಾರಿ ಸಂಘಗಳನ್ನು ಉಳಿಸಿದ್ದೇವೆ ಮತ್ತು ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಮುಲ್, ಇಪ್ಕೋ ಮತ್ತು ಕ್ರಿಬ್ಕೋಗಳ ಲಾಭವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವ ಕೆಲಸ ಮಾಡುತ್ತಿದೆ
ಮೊದಲಿನಿಂದಲೂ ಸಹಕಾರ ವ್ಯವಸ್ಥೆ ಭಾರತದ ಜೀವಾಳವಾಗಿದೆ ಮತ್ತು ಸಹಕಾರ ವಲಯದ ಕಲ್ಪನೆಯನ್ನು ಭಾರತ ಜಗತ್ತಿಗೆ ನೀಡಿದೆ
ಸಹಕಾರ ಸಂಘಗಳ ತತ್ವಗಳು ಮಾತ್ರ ಸಹಕಾರ ಚಳವಳಿಗೆ ದೀರ್ಘಾಯುಷ್ಯವನ್ನು ನೀಡಬಲ್ಲವು, ಸಹಕಾರ ತತ್ವಗಳನ್ನು ತ್ಯಜಿಸಿರುವ ಕಾರಣ ಕೆಲವು ಪ್ರಾಥಮಿಕ ಕೃಷಿ ಪತ್ತಿನ ಸಂಘಗಳು [ಪಿಎಸಿಎಸ್] ನಿಷ್ಕ್ರೀಯವಾಗಲು ಮೂಲ ಕಾರಣವಾಗಿವೆ
70 ಕೋಟಿ ದೀನದಲಿತರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಸಹಕಾರಕ್ಕಿಂತ ಉತ್ತಮವಾದ ಮಾರ್ಗ ಮತ್ತೊಂದಿಲ್ಲ, ಹಿಂದಿನ ಸರ್ಕಾರ ಗರೀಬಿ ಹಠವೋ ಘೋಷಣೆ ಬಳಸಿತ್ತು, ಇದರಿಂದಾಗಿ ಜನತೆ ಕಳೆದ 60 ವರ್ಷಗಳಲ್ಲಿ ಅಭಿವೃದ್ಧಿಯ ಕನಸು ಕಾಣುವ ಸ್ಥಿತಿಯಲ್ಲಿರಲಿಲ್ಲ
ಜನರ ಜೀವನಮಟ್ಟ ಸುಧಾರಿಸುವವರೆಗೆ ಜನತೆಯನ್ನು ಅಭಿವೃದ್ಧಿಯ ಫಲದೊಂದಿಗೆ ಸಂಪರ್ಕಿಸಲು ಸಾಧ್ಯವಿಲ್ಲ, ಆದರೆ 2014 ರಲ್ಲಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ನಂತರ ಜನರ ಬದುಕಿನಲ್ಲಿ ಗಣನೀಯ ಬದಲಾವಣೆಯಾಯಿತು ಮತ್ತು ಜನರ ಆಕಾಂಕ್ಷೆಗಳನ್ನು ಸಹಕಾರ ವಲಯ ಮಾತ್ರ ಸಾಕಾರಗೊಳಿಸಬಲ್ಲದು ಎಂಬುದು ಸಾಬೀತಾಯಿತು
ಸ್ವಾವಲಂಬಿ ಎಂದರೆ ತಂತ್ರಜ್ಞಾನ, ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದಷ್ಟೇ ಅಲ್ಲದೇ, ಪ್ರತಿಯೊಬ್ಬರೂ ಆರ್ಥಿಕವಾಗಿ ಸ್ವಾವಲಂಬನೆಯಾಗಬೇಕು ಮತ್ತು ಇದು ಸಾಧ್ಯವಾದರೆ ದೇಶ ಸ್ವಯಂಚಾಲಿತವಾಗಿ ಸ್ವಾವಲಂಬನೆಯತ್ತ ಸಾಗಲಿದೆ
ಶ್ರೀ ನರೇಂದ್ರ ಮೋದಿ ಸರ್ಕಾರ 65,000 ಪಿಎಸಿಎಸ್ ಗಳನ್ನು ಗಣಕೀಕರಣಗೊಳಿಸಲು ನಿರ್ಧರಿಸಿದೆ, ಇದರಿಂದ ಪಿಎಸಿಎಸ್, ಜಿಲ್ಲಾ ಸಹಕಾರ ಬ್ಯಾಂಕ್ ಗಳು, ರಾಜ್ಯ ಸಹಕಾರ ಬ್ಯಾಂಕ್ ಗಳು ಮತ್ತು ನಬಾರ್ಡ್ ಕೂಡ ಆನ್ ಲೈನ್ ವ್ಯಾಪ್ತಿಗೆ ಒಳಪಡಲು ಸಾಧ್ಯವಾಗಲಿದೆ
ಪಿಎಸಿಎಸ್ ಗಳ ಸುಧಾರಣೆಗಾಗಿ ಕೇಂದ್ರ ಸರ್ಕಾರ ಕಾನೂನು ಮಾದರಿಗಳನ್ನು ರಾಜ್ಯಗಳಿಗೆ ಕಳುಹಿಸಿದೆ, ಇದರಿಂದ ಪಿಎಸಿಎಸ್ ಗಳನ್ನು ಬಹು ಉದ್ದೇಶ ಮತ್ತು ಬಹು ವಿಧದ ಕಾರ್ಯನಿರ್ವಹಣೆ ಸಂಸ್ಥೆಗಳನ್ನಾಗಿ ಮಾಡಬಹುದಾಗಿದೆ
ಸಹಕಾರ ಸಂಘಗಳನ್ನು ಅಭಿವೃದ್ಧಿಶೀಲ, ಸಮೃದ್ಧ ಮತ್ತು ಪ್ರಸ್ತುತವಾಗಿಸಲು ಸಾಧ್ಯವಿರುವ ಎಲ್ಲಾ ಸುಧಾರಣೆಗಳನ್ನು ತರಲು ಸಹಕಾರ ಸಚಿವಾಲಯ ಕಾರ್ಯನಿರ್ವಹಿಸಲಿದೆ
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ ಆಯೋಜಿಸಿದ್ದ 100 ನೇ ಅಂತರರಾಷ್ಟ್ರೀಯ ಸಹಕಾರ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಸಹಕಾರ ಸಚಿವಾಲಯ ಮತ್ತು ಭಾರತೀಯ ರಾಷ್ಟ್ರೀಯ ಸಹಕಾರ ಒಕ್ಕೂಟ[ಎನ್.ಸಿ.ಯು.ಐ] ಈ ಸಂಭ್ರಮಾಚರಣೆಯನ್ನು ಆಯೋಜಿಸಿತ್ತು, “ಸಹಕಾರಿ ಸಂಸ್ಥೆಗಳ ಮೂಲಕ ಸ್ವಾವಲಂಬಿ ಭಾರತ ಮತ್ತು ಉತ್ತಮ ಜಗತ್ತು ನಿರ್ಮಿಸುವುದು” ಈ ಕಾರ್ಯಕ್ರಮದ ದ್ಯೇಯವಾಕ್ಯವಾಗಿದೆ. ಕೇಂದ್ರ ಪಶುಸಂಗೋಪನೆ ಮತ್ತು ಮೀನುಗಾರಿಕಾ ಸಚಿವ ಶ್ರೀ ಪುರುಷೋತ್ತಮ್ ರೂಪಾಲ, ಸಹಕಾರ ಖಾತೆ ರಾಜ್ಯ ಸಚಿವ ಶ್ರೀ ಬಿ.ಎಸ್. ವರ್ಮಾ, ಕೇಂದ್ರದ ಮಾಜಿ ಸಚಿವ ಶ್ರೀ ಸುರೇಶ್ ಪ್ರಭು, ಸಹಕಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಜ್ಞಾನೇಶ್ ಕುಮಾರ್, ಐಸಿಎ-ಎಪಿ ಅಧ್ಯಕ್ಷ ಡಾ. ಚಂದ್ರ ಪಾಲ್ ಸಿಂಗ್ ಮತ್ತು ಎನ್.ಸಿ.ಯು.ಐ ಅಧ್ಯಕ್ಷ ಶ್ರೀ ದಿಲೀಪ್ ಸಂಘಾನಿ ಮತ್ತು ದೇಶದ ವಿವಿಧ ಸಹಕಾರ ಸಂಸ್ಥೆಗಳ ಪಾಲುದಾರರು ಒಳಗೊಂಡಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಅಮಿತ್ ಶಾ, ಸಹಕಾರ ವಲಯದ 100 ನೇ ವರ್ಷಾಚರಣೆ ಮಾಡುತ್ತಿದ್ದು, ನಾವು ಉತ್ತಮ ಕೆಲಸ ಮಾಡಿರುವುದನ್ನು ಈಗ ನೆನಪಿಸಿಕೊಳ್ಳಬೇಕು. ಹಲವಾರು ನ್ಯೂನತೆಗಳ ನಡುವೆಯೂ ಇಂದು ಸಹಕಾರಿ ಕ್ಷೇತ್ರ ಸಾಧನೆ ಮಾಡಿರುವ ಬಗ್ಗೆ ಹೆಮ್ಮೆಯಿದೆ ಎಂದರು.
ಸಹಕಾರಿ ಆಂದೋಲನದ ಮೂಲಕ ಬಲಿಷ್ಠ ಅಡಿಪಾಯ ಹಾಕಲಾಗಿದೆ ಮತ್ತು ಇದು ನಮ್ಮ ಜವಾಬ್ದಾರಿ ಹಾಗೂ ಈ ಅಡಿಪಾದಯ ಮೇಲೆ ಮುಂದಿನ ಪೀಳಿಗೆಗಳು ಬಲವಾದ ಕಟ್ಟಡ ನಿರ್ಮಿಸಬೇಕು. ಸಹಕಾರಿ ಸಂಸ್ಥೆಗಳು ತಂತ್ರಜ್ಞಾನ ಮತ್ತು ವೃತ್ತಿಪರತೆಯನ್ನು ಸಂಯೋಜಿಸುವ ಮೂಲಕ ಆಧುನಿಕ ಕಾಲಕ್ಕೆ ಅನುಗುಣವಾಗಿ ಹೊಂದಿಕೊಳ್ಳಬೇಕು. ಇದರಿಂದ ಸಹಕಾರಿ ಸಂಸ್ಥೆಗಳು ಭವಿಷ್ಯದಲ್ಲಿ ಪ್ರಗತಿ ಹೊಂದಬಹುದು. ಸಹಕಾರಿ ಕ್ಷೇತ್ರದಲ್ಲಿ ದುಡಿಯುವ ಜನರನ್ನು ಜಾಗೃತಗೊಳಿಸುವ ಸುದಿನ ಇದಾಗಿದೆ ಎಂದರು. ಈ ದಿನ ಸಹಕಾರ ವಲಯವನ್ನು ಆಧುನೀಕರಣಗೊಳಿಸುವ, ಸಹಕಾರ ವಲಯದ ಸ್ಪೂರ್ತಿ ಮತ್ತು ಜನರ ಕೊಡುಗೆಯನ್ನು ಸ್ಮರಿಸುವ, ಸಮುದಾಯದಲ್ಲಿ ಸಮಾನತೆ ತರುವ ಹಾಗೂ ಸಮೃದ್ಧತೆಯ ಹಾದಿ ತೋರುವ ದಿನವಾಗಿದೆ ಎಂದು ಶ್ಲಾಘಿಸಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರತ್ಯೇಕವಾಗಿ ಕೇಂದ್ರ ಸಹಕಾರ ಸಚಿವಾಲಯವನ್ನು ರಚಿಸುವ ಮೂಲಕ ಸಹಕಾರ ಚಳವಳಿಗೆ ಜೀವ ತುಂಬಿದ್ದಾರೆ. ನಾವು ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ ಮತ್ತು 2047 ರಲ್ಲಿ ದೇಶದಲ್ಲಿ ಸಹಕಾರಿ ಚಳವಳಿ ಉತ್ತುಂಗಕ್ಕೇರುವ ವರ್ಷ ಎಂದು ಪ್ರತಿಜ್ಞೆ ಮಾಡಬೇಕಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಸ್ವಾವಲಂಬಿ ಭಾರತ ಎಂಬ ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಹಕಾರಿ ವಲಯ ಮುನ್ನಡೆಯುತ್ತಿದೆ. ಕಳೆದ 100 ವರ್ಷಗಳಲ್ಲಿ ಜಗತ್ತು ಬಂಡವಾಳ ಶಾಹಿಗಳು ಮತ್ತು ಕಮ್ಯುನಿಸ್ಟ್ ಮಾದರಿಗಳನ್ನು ಅಳವಡಿಸಿಕೊಂಡಿವೆ, ಆದರೆ ಇವರೆಡೂ ವಿಪರೀತ ಮಾದರಿಗಳು. ಸಹಕಾರಿ ಮಾದರಿ ಮಧ್ಯಮ ಮಾರ್ಗ ಹಾಗೂ ಭಾರತಕ್ಕೆ ಸೂಕ್ತವಾಗಿದೆ ಮತ್ತು ಜಗತ್ತಿಗೆ ಸುಸ್ಥಿರ ಆರ್ಥಿಕ ಮಾದರಿಯನ್ನು ಒದಗಿಸುತ್ತದೆ. ಪ್ರಸ್ತುತ ಆರ್ಥಿಕ ಮಾದರಿಯಿಂದಾಗಿ ಅಭಿವೃದ್ಧಿಯಲ್ಲಿ ಅಸಮತೋಲನ ಉಂಟಾಗಿದೆ. ಆದರೆ ಸಹಕಾರಿ ಮಾದರಿಯನ್ನು ಸಾರ್ವತ್ರಿಕವಾಗಿ ಮತ್ತು ಎಲ್ಲರನ್ನೂ ಒಳಗೊಳ್ಳಲು ಜನಪ್ರಿಯಗೊಳಿಸಬೇಕಾಗಿದೆ ಮತ್ತು ಇದು ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಭಾರತದಲ್ಲಿ 100 – 125 ವರ್ಷಗಳ ಆಂದೋಲನದ ಸಮಯದಲ್ಲಿ ಸಹಕಾರಿ ಸಂಸ್ಥೆಗಳು ತಮಗಾಗಿ ಒಂದು ಗೂಡು ನಿರ್ಮಿಸಿಕೊಂಡಿವೆ. ಜಗತ್ತಿನ 30 ಲಕ್ಷ ಸಹಕಾರ ಸಂಸ್ಥೆಗಳ ಪೈಕಿ ಶೇ 12 ಜನ ಈ ವಲಯದಲ್ಲಿದ್ದಾರೆ. ವಿಶ್ವದ ಜಂಟಿ ಸಹಕಾರಿ ಆರ್ಥಿಕತೆಯು ಐದನೇ ಅತಿ ದೊಡ್ಡ ಆರ್ಥಿಕ ಘಟಕವಾಗಿದೆ ಮತ್ತು ಇದು ಒಂದು ದೊಡ್ಡ ಸಾಧನೆಯಾಗಿದೆ. ಸಹಕಾರಿ ಸಂಸ್ಥೆಗಳು ವಿಫಲವಾಗಿವೆ ಎಂದು ಅನೇಕ ಜನ ಭಾವಿಸುತ್ತಾರೆ, ಆದರೆ ಅಂತಹ ಜನ ಜಾಗತಿಕ ದತ್ತಾಂಶ ನೋಡಿದರೆ ಸಹಕಾರಿ ಸಂಸ್ಥೆಗಳು ಅನೇಕ ರಾಷ್ಟ್ರಗಳ ಜಿಡಿಪಿಗೆ ಪ್ರಮುಖ ಕೊಡುಗೆ ನೀಡುತ್ತಿವೆ ಎಂಬುದನ್ನು ಕಾಣಬಹುದಾಗಿದೆ. ಜಗತ್ತಿನ 300 ಅತಿ ದೊಡ್ಡ ಸಹಕಾರಿ ಸಂಸ್ಥೆಗಳ ಸಾಲಿನಲ್ಲಿ ಭಾರತದ ಅಮುಲ್, ಇಪ್ಕೋ ಮತ್ತು ಕ್ರಿಬ್ಕೋ ಸಂಸ್ಥೆಗಳು ಸೇರ್ಪಡೆಯಾಗಿವೆ. ನಾವು ದೇಶದಲ್ಲಿ ಸಹಕಾರಿ ಸಂಘಗಳನ್ನು ಉಳಿಸಿದ್ದೇವೆ ಮತ್ತು ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಮುಲ್, ಇಪ್ಕೋ ಮತ್ತು ಕ್ರಿಬ್ಕೋ ಸಂಸ್ಥೆಗಳ ಲಾಭವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದೆ. ಸಹಕಾರ ಸಂಸ್ಥೆಗಳು ಮೊದಲಿನಿಂದಲೂ ಭಾರತೀಯ ಸಂಸ್ಕೃತಿಯ ಆತ್ಮವಾಗಿದ್ದು, ವಿಶ‍್ವಕ್ಕೆ ಭಾರತ ಸಹಕಾರದ ಕಲ್ಪನೆಯನ್ನು ನೀಡಿದೆ. ಜಗತ್ತಿನ 30 ಲಕ್ಷ ಸಹಕಾರಿ ಸಂಸ್ಥೆಗಳಲ್ಲಿ 8.55 ಲಕ್ಷ ಸಂಸ್ಥೆಗಳು ಭಾರತದಲ್ಲಿವೆ ಮತ್ತು 13 ಕೋಟಿ ಜನ ನೇರವಾಗಿ ಇದರೊಂದಿಗೆ ಸಹಭಾಗಿತ್ವ ಹೊಂದಿದ್ದು, ಭಾರತದಲ್ಲಿ ಶೇ 91 ರಷ್ಟು ಹಳ್ಳಿಗಳಲ್ಲಿ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರು ಭಾರತದ ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ಕೇಂದ್ರ ಸಹಕಾರ ಸಚಿವಾಲಯವನ್ನು ರಚಿಸುವ ಮೂಲಕ ಸಹಕಾರ ಚಳವಳಿಗೆ ಹೊಸ ಜೀವ ನೀಡಿದ್ದಾರೆ. ಸಹಕಾರಿಗಳು ದೇಶದ ಹಲವು ವಲಯಗಳಿಗೆ ಕೊಡುಗೆ ನೀಡಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದರೂ ಇದೀಗ ಸಂತೃಪ್ತ ಸ್ಥಿತಿಯಲ್ಲಿಲ್ಲ. ದೇಶದ 70 ಕೋಟಿ ಅವಕಾಶ ವಂಚಿತರಾಗಿದ್ದಾರೆ ಮತ್ತು ದೇಶದ ಅಭಿವೃದ್ಧಿಯೊಂದಿಗೆ ಇವರನ್ನು ಸಂಪರ್ಕಿಸುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಸಹಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 70 ಕೋಟಿ ದೀನದಲಿತರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಸಹಕಾರಕ್ಕಿಂತ ಉತ್ತಮವಾದ ವಲಯ ಮತ್ತೊಂದಿಲ್ಲ, ಹಿಂದಿನ ಸರ್ಕಾರ ಗರೀಬಿ ಹಠವೋ ಘೋಷಣೆ ಬಳಸಿತ್ತು. ಇದರಿಂದಾಗಿ ಜನತೆ ಕಳೆದ 60 ವರ್ಷಗಳಲ್ಲಿ ಅಭಿವೃದ್ಧಿಯ ಕನಸು ಕಾಣುವ ಸ್ಥಿತಿಯಲ್ಲಿರಲಿಲ್ಲ. ಜನರ ಜೀವನಮಟ್ಟ ಸುಧಾರಿಸುವವರೆಗೆ ಜನತೆಯನ್ನು ಅಭಿವೃದ್ಧಿಯ ಫಲದೊಂದಿಗೆ ಸಂಪರ್ಕಿಸಲು ಸಾಧ್ಯವಿಲ್ಲ, ಆದರೆ 2014 ರಲ್ಲಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ನಂತರ ಇವರ ಬದುಕಿನಲ್ಲಿ ಗಣನೀಯ ಬದಲಾವಣೆಯಾಯಿತು ಮತ್ತು ಜನರ ಆಕಾಂಕ್ಷೆಗಳನ್ನು ಸಹಕಾರ ವಲಯ ಮಾತ್ರ ಸಾಕಾರಗೊಳಿಸಬಲ್ಲದು. ಇಂದು ಜನತೆ ವಸತಿ, ವಿದ್ಯುತ್, ಆಹಾರ, ಆರೋಗ್ಯ ಮತ್ತು ಅಡುಗೆ ಅನಿಲದಂತಹ ಮೂಲ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇಂದು ಪ್ರತಿಯೊಬ್ಬರೂ ಆರ್ಥಿಕ ಬೆಳವಣಿಗೆ ಕುರಿತು ಕನಸು ಕಾಣುವಂತಾಗಿದ್ದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನರ ನಿರೀಕ್ಷೆ ಮತ್ತು ಆಕಾಂಕ್ಷೆಗಳನ್ನು ಈಡೇರಿಸುತ್ತಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು.
ಸ್ವಾವಲಂಬಿ ಎಂದರೆ ತಂತ್ರಜ್ಞಾನ, ಇಲ್ಲಿ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದಷ್ಟೇ ಅಲ್ಲದೇ, ಪ್ರತಿಯೊಬ್ಬರೂ ಆರ್ಥಿಕವಾಗಿ ಸ್ವಾವಲಂಬನೆಯಾಗಬೇಕು ಮತ್ತು ಇದು ಸಾಧ್ಯವಾದರೆ ದೇಶ ಸ್ವಯಂಚಾಲಿತವಾಗಿ ಸ್ವಾವಲಂಬನೆತ್ತ ಸಾಗಲಿದೆ. ಸೀಮಿತ ಬಂಡವಾಳದ ಅನೇಕ ಜನ ಒಗ್ಗೂಡಿ ದೊಡ್ಡ ಬಂಡವಾಳದೊಂದಿಗೆ ಹೊಸ ಉದ್ಯಮ ಪ್ರಾರಂಭಿಸಿದಾಗ ಅದು ಕಾರ್ಯರೂಪಕ್ಕೆ ಬರಲಿದೆ. ಇದನ್ನು ಸಾಧಿಸಲು ಸಹಕಾರ ಸಂಘಗಳನ್ನು ಮುನ್ನಡೆಸುವವರ ಮೇಲೆ ಕಟ್ಟುನಿಟ್ಟಿನ ನಿಯಂತ್ರಣದ ಜೊತೆಗೆ ಪ್ರಸ್ತುತ ರೂಪುರೇಷೆಗಳನ್ನು ಬದಲಾಯಿಸುವ ಮೂಲಕ ಹೊಸ ಮಾರ್ಗದಲ್ಲಿ ಮುನ್ನಡೆಸಬೇಕಾಗಿದೆ ಎಂದು ಶ್ರೀ ಅಮಿತ್ ಶಾ ಪ್ರತಿಪಾದಿಸಿದರು.
ಶ್ರೀ ನರೇಂದ್ರ ಮೋದಿ ಸರ್ಕಾರ ಇತ್ತೀಚೆಗೆ 65,000 ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿಗಳು [ಪಿಎಸಿಎಸ್] ಗಳನ್ನು ಗಣಕೀಕರಣಗೊಳಿಸಲು ನಿರ್ಧರಿಸಿದೆ, ಇದು ಪಿಎಸಿಎಸ್, ಜಿಲ್ಲಾ ಸಹಕಾರ ಬ್ಯಾಂಕ್ ಗಳು, ರಾಜ್ಯ ಸಹಕಾರ ಬ್ಯಾಂಕ್ ಗಳು ಮತ್ತು ನಬಾರ್ಡ್ ಸಂಸ್ಥೆಗಳನ್ನು ಕೂಡ ಆನ್ ಲೈನ್ ವ್ಯಾಪ್ತಿಗೆ ಒಳಪಡಿಸಲಿದೆ ಮತ್ತು ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಇದರಿಂದ ಸಹಕಾರಿಯಾಗಲಿದೆ. ಪಿಎಸಿಎಸ್ ಗಳು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ಪಿಎಸಿಎಸ್ ಗಳ ಸುಧಾರಣೆಗಾಗಿ ಕೇಂದ್ರ ಸರ್ಕಾರ ಕಾನೂನು ಮಾದರಿಗಳನ್ನು ರಾಜ್ಯಗಳಿಗೆ ಕಳುಹಿಸಿದೆ, ಇದರಿಂದ ಪಿಎಸಿಎಸ್ ಗಳನ್ನು ಬಹು ಉದ್ದೇಶ ಮತ್ತು ಬಹು ವಿಧದ ಕಾರ್ಯನಿರ್ವಹಣೆ ಸಂಸ್ಥೆಗಳನ್ನಾಗಿ ಮಾಡಬಹುದಾಗಿದೆ. ಶೀಘ್ರದಲ್ಲೇ [ಮಾದರಿ ಬೈ-ಲಾಗಳು] ಇವುಗಳನ್ನು ಸಲಹೆಗಳಿಗಾಗಿ ಸಹಕಾರ ಸಂಸ್ಥೆಗಳಿಗೆ ಕಳುಹಿಸಲಾಗುವುದು. ಪಿಎಸಿಎಸ್ ಗಳೊಂದಿಗೆ ಇದು 25 ವಿವಿಧ ಚಟುವಟಿಕೆಗಳನ್ನು ಸಂಪರ್ಕಿಸಲಿದೆ. ಈ ಕಾನೂನು ಮಾದರಿಗಳು ಹಳ್ಳಿಯಲ್ಲಿ ಪಿಎಸಿಎಸ್ ಗಳನ್ನು ಹಲವು ಕಾರ್ಯಚಟುವಟಿಕೆಗಳು ಮತ್ತು ಸೌಲಭ್ಯ ಕೇಂದ್ರಗಳನ್ನಾಗಿ ಪರಿವರ್ತಿಸಲಿದೆ. ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ 70 ಕೋಟಿ ಜನರಿಗೆ ಸಹಕಾರಿ ಕ್ಷೇತ್ರದ ಸಮಗ್ರ ಆರ್ಥಿಕ ಅಭಿವೃದ್ಧಿಯ ಮಾದರಿಯನ್ನು ಒದಗಿಸುತ್ತದೆ ಎಂಬ ಸಂಪೂರ್ಣ ನಂಬಿಕೆ ಹೊಂದಿದೆ ಎಂದು ಹೇಳಿದರು.
ಸಹಕಾರ ಸಚಿವಾಲಯ ಸಹಕಾರಿ ವಲಯದಲ್ಲಿ ಸಮೃದ್ಧತೆ ಮತ್ತು ಪ್ರಸ್ತುತತೆ ಕುರಿತು ತರುತ್ತಿರುವ ಸಾಧ್ಯತೆಯ ಎಲ್ಲಾ ಸುಧಾರಣೆಗಳು ಪ್ರವರ್ಧಮಾನಕ್ಕೆ ಬರುತ್ತಿವೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಇದೇ ಸಂದರ್ಭದಲ್ಲಿ ಅವರು, ಕಾನೂನುಗಳು ಕೇವಲ ಮೇಲ್ವಿಚಾರಣೆ ಮಾಡಬಹುದು ಎಂದರು. ಆದರೆ ಸಹಕಾರಿ ಕ್ಷೇತ್ರದಂತಹ ವಲಯವನ್ನು ಸುಧಾರಿಸಲು ನಾವು ಸಹಕಾರಿ ವಲಯದ ಮೇಲೆ ಸ್ವಲ್ಪ ನಿಯಂತ್ರಣ ಹೊಂದಬೇಕು. ಹೀಗಾಗಿ ಸರ್ಕಾರ ತರಬೇತಿಗಾಗಿ ರಾಷ್ಟ್ರೀಯ ಸಹಕಾರ ವಿಶ್ವವಿದ್ಯಾಲಯವನ್ನು ಸ್ಥಾಪಿಸುತ್ತಿದ್ದು, ಇದನ್ನು ಅನುಷ್ಠಾನಗೊಳಿಸಲು ಮತ್ತು ಸಹಕಾರ ವಲಯದ ತರಬೇತಿಗಾಗಿ ರಾಷ್ಟ್ರೀಯ ಸಹಕಾರ ಒಕ್ಕೂಟದೊಂದಿಗೆ ಒಡಂಬಡಿಕೆ ಮಾಡಿಕೊಳ‍್ಳಲಾಗುವುದು ಎಂದರು.
ಸಾವಯವ ವಸ್ತುಗಳ ವಿಶ್ವಾಸಾರ್ಹತೆಯನ್ನು ಪರೀಕ್ಷಿಸುವ ಮತ್ತು ಪ್ರಾಮಾಣೀಕರಿಸುವ ಕಾರ್ಯವನ್ನು ಅಮುಲ್ ಸಂಸ್ಥೆಗೆ ನೀಡಲಾಗಿದೆ. ದೇಶದ ಸಾವಯವ ಉತ್ಪನ್ನಗಳನ್ನು ಬ್ರ್ಯಾಂಡ್ ಮಾಡಿ, ಮಾರುಕಟ್ಟೆ ಒದಗಿಸುವ ಹಾಗೂ ಜಾಗತಿಕವಾಗಿ ರೈತರ ಉತ್ಪನ್ನಗಳನ್ನು ಅನುಕೂಲ ಒದಗಿಸಲು ಉದ್ದೇಶಿಸಿದ್ದು, ಇದರಿಂದ ರೈತರಿಗೆ ತಮ್ಮ ಉತ್ಪನ್ನಗಳ ಮೇಲೆ ಶೇ 30 ರಷ್ಟು ಹೆಚ್ಚಿನ ಬೆಲೆ ದೊರೆಯಲಿದೆ. ಸಹಕಾರಿ ಸಂಸ್ಥೆಗಳು ಉತ್ಪಾದಿಸುವ ಉತ್ಪನ್ನಗಳ ಗುಣಮಟ್ಟ ನೋಡಿಕೊಳ್ಳುವ ಎರಡು ದೊಡ್ಡ ಸಹಕಾರಿ ರಫ್ತು ಸಂಸ್ಥೆಗಳನ್ನು ನೋಂದಾಯಿಸಲು ಸಹ ಸರ್ಕಾರ ನಿರ್ಧರಿಸಿದೆ. ಅವುಗಳ ಉತ್ಪಾದನೆ, ರಫ‍್ತು ಮಾರ್ಗವನ್ನು ಜಾಗತಿಕ ಮಾರುಕಟ್ಟೆಗೆ ಸಮನಾಗಿ ಒದಗಿಸಲಾಗುವುದು ಮತ್ತು ಈ ಉತ್ಪನ್ನಗಳ ರಫ್ತಿಗೆ ಈ ಸಂಸ್ಥೆಗಳು ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತವೆ. ಬೀಜ ಸುಧಾರಣೆಗಾಗಿ ಇಪ್ಕೋ ಮತ್ತು ಕ್ರಿಬ್ಕೋ ಸಂಸ್ಥೆಗಳನ್ನು ಸಂಪರ್ಕಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ ಎಂದು ಹೇಳಿದರು. ಇತ್ತೀಚಿನ ನಿರ್ಧಾರಗಳ ಪ್ರಕಾರ ಸರ್ಕಾರ ಸಹಕಾರ ಸಂಘಗಳಿಗೆ ಜಿಇಎಂ ಗಳ ಮೂಲಕ ಖರೀದಿಗೆ ಅವಕಾಶ ನೀಡಿದೆ. ಪಿಎಸಿಎಸ್ ಗಳ ದತ್ತಾಂಶಗಳನ್ನು ಸಹಕಾರ ಸಚಿವಾಲಯ ನಿರ್ವಹಣೆ ಮಾಡಲಿದೆ. ಸಹಕಾರಿ ಆಂದೋಲನಕ್ಕೆ ಸಹಕಾರಿ ತತ್ವಗಳು ಮಾತ್ರ ದೀರ್ಘಾಯುಷ್ಯ ನೀಡಬಲ್ಲವು ಮತ್ತು ಸಹಕಾರಿ ತತ್ವವನ್ನು ತ್ಯಜಿಸಿದ ಕಾರಣದಿಂದ ಕೆಲವು ಪಿಎಸಿಎಸ್ ಗಳು ನಿಷ್ಪ್ರಯೋಜಕವಾಗಲು ಮೂಲ ಕಾರಣವಾಗಿದೆ. ಸಹಕಾರಿ ಕ್ಷೇತ್ರದ ಕಾರ್ಯಕರ್ತರು, ಸಹಕಾರಿ ಸಂಘಗಳಿಗೆ ದೀರ್ಘಾಯುಷ್ಯ ನೀಡಲು, ಅವುಗಳನ್ನು ಪ್ರಸ್ತುತಗೊಳಿಸಲು, ದೇಶದ ಆರ್ಥಿಕತೆಗೆ ಕೊಡುಗೆದಾರರನ್ನಾಗಿ ಮಾಡಲು ಮತ್ತು 70 ಕೋಟಿ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಸಹಕಾರಿ ತತ್ವಗಳನ್ನು ಅಳವಡಿಸಿಕೊಳುವ ಅಗ್ಯವಿದೆ ಎಂದು ಸಚಿವ ಶ್ರೀ ಅಮಿತ್ ಶಾ ಹೇಳಿದರು.
*******
(Release ID: 1839316)
Visitor Counter : 273