ಸಹಕಾರ ಸಚಿವಾಲಯ

100ನೇ ಅಂತಾರಾಷ್ಟ್ರೀಯ ಸಹಕಾರಿ ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ


ಆತ್ಮನಿರ್ಭರ ಭಾರತ ಮತ್ತು ಉತ್ತಮ ಜಗತ್ತನ್ನು ನಿರ್ಮಿಸುವ ಸಹಕಾರಿಗಳು" 100ನೇ ಅಂತಾರಾಷ್ಟ್ರೀಯ ಸಹಕಾರಿ ದಿನದ ಧ್ಯೇಯವಾಕ್ಯವಾಗಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 'ಸಹಕಾರ್ ಸೇ ಸಮೃದ್ಧಿ' ಮಂತ್ರದೊಂದಿಗೆ ಸಹಕಾರಿ ವಲಯವನ್ನು ಸಶಕ್ತಗೊಳಿಸುತ್ತಿರುವ ಕೇಂದ್ರ ಸರ್ಕಾರ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪಿಎಸಿಎಸ್) ಕಂಪ್ಯೂಟರೀಕರಣವನ್ನು ಅನುಮೋದಿಸುವ ಮೂಲಕ ಸಹಕಾರಿ ವಲಯವನ್ನು ಮತ್ತಷ್ಟು ಬಲಪಡಿಸಲು ಇತ್ತೀಚೆಗೆ ಮಹತ್ವದ ನಿರ್ಣಯ ಕೈಗೊಂಡ ಕೇಂದ್ರ ಸಚಿವ ಸಂಪುಟ.

Posted On: 03 JUL 2022 11:10AM by PIB Bengaluru

  ಜುಲೈ 4 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಭಾರತ ಸರ್ಕಾರದ ಸಹಕಾರ ಸಚಿವಾಲಯ ಮತ್ತು ಭಾರತ ರಾಷ್ಟ್ರೀಯ ಸಹಕಾರಿ ಒಕ್ಕೂಟ (ಎನ್.ಸಿ.ಯುಐ) ಜಂಟಿಯಾಗಿ ಆಯೋಜಿಸಿರುವ 100ನೇ ಅಂತಾರಾಷ್ಟ್ರೀಯ ಸಹಕಾರಿ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಭಾಗವಹಿಸಲಿದ್ದಾರೆ. ಎನ್.ಸಿ.ಯು.ಐ. ಭಾರತದಲ್ಲಿ ಸಹಕಾರಿ ಚಳವಳಿಯ ಅತ್ಯುನ್ನತ ಸಂಘಟನೆಯಾಗಿದ್ದು, ಸಹಕಾರಿ ಶಿಕ್ಷಣ ಮತ್ತು ತರಬೇತಿಯ ಮೇಲೆ ಗಮನ ಕೇಂದ್ರೀಕರಿಸಿದೆ.

"ಸಹಕಾರಿಗಳು ಉತ್ತಮ ಜಗತ್ತನ್ನು ನಿರ್ಮಿಸುತ್ತವೆ"100ನೇ ಅಂತಾರಾಷ್ಟ್ರೀಯ ಸಹಕಾರಿ ದಿನದ ಧ್ಯೇಯವಾಕ್ಯವಾಗಿದೆ. ಉತ್ತಮ ಜಗತ್ತನ್ನು ನಿರ್ಮಿಸುವಲ್ಲಿ ಆತ್ಮನಿರ್ಭರ ಭಾರತದ ಪ್ರಾಮುಖ್ಯತೆಯನ್ನು ಪರಿಗಣಿಸಿ, ಸಹಕಾರ ಸಚಿವಾಲಯ ಮತ್ತು ಎನ್.ಸಿ.ಯುಐ "ಸಹಕಾರಿಗಳು ಆತ್ಮನಿರ್ಭರ ಭಾರತ ಮತ್ತು ಉತ್ತಮ ಜಗತ್ತನ್ನು ನಿರ್ಮಿಸುತ್ತವೆ" ಎಂಬ ಧ್ಯೇಯವಾಕ್ಯದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿವೆ. ಆತ್ಮನಿರ್ಭರ ಭಾರತದ ಮೂಲ ಪರಿಕಲ್ಪನೆ ಮತ್ತು ದೃಷ್ಟಿಕೋನವು ಭಾರತೀಯ ಆರ್ಥಿಕತೆಯ ಸ್ವಯಂ-ಸುಸ್ಥಿರ ಬೆಳವಣಿಗೆಯನ್ನು ಆಧರಿಸಿದೆ; ಮತ್ತು ಭಾರತದ ಸಹಕಾರಿ ಮಾದರಿಯು ಆತ್ಮನಿರ್ಭರ ಭಾರತವನ್ನು ನಿರ್ಮಿಸುವ ಭಾರತ ಸರ್ಕಾರ ನೀಡಿರುವ ಆದ್ಯತೆಗೆ ಅನುಗುಣವಾಗಿದೆ.

ಭಾರತದಲ್ಲಿ ಸಹಕಾರಿ ಚಳವಳಿಯು ವಿಶ್ವದಲ್ಲೇ ಅತಿ ದೊಡ್ಡದಾಗಿದೆ. ಪ್ರಸ್ತುತ, 8.5 ಲಕ್ಷಕ್ಕೂ ಹೆಚ್ಚು ಸಹಕಾರಿ ಜಾಲವನ್ನು ಹೊಂದಿರುವ ಭಾರತದಲ್ಲಿ ಸಹಕಾರಿ ಸಂಸ್ಥೆಗಳು ಶೇಕಡಾ 90 ರಷ್ಟು ಗ್ರಾಮಗಳನ್ನು ವ್ಯಾಪಿಸಿವೆ, ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಸಮಗ್ರ ಬೆಳವಣಿಗೆಗಾಗಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ತರಲು ಪ್ರಮುಖ ಸಂಸ್ಥೆಗಳಾಗಿವೆ. ಅಮುಲ್, ಇಫ್ಕೋ, ಕ್ರಿಬ್ಕೋ, ನಫೆಡ್ ಇತ್ಯಾದಿಗಳು ಭಾರತದಲ್ಲಿನ ಸಹಕಾರಿ ಚಳವಳಿಯ ಕೆಲವು ಪ್ರಸಿದ್ಧ ಯಶೋಗಾಥೆಗಳಾಗಿವೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸಹಕಾರಿ ವಲಯಕ್ಕೆ ಸೂಕ್ತ ಉತ್ತೇಜನ ನೀಡುವ ಸಲುವಾಗಿ, ಕೇಂದ್ರ ಸರ್ಕಾರವು ಜುಲೈ 2021 ರಲ್ಲಿ ಸಹಕಾರ ಸಚಿವಾಲಯವನ್ನು ರೂಪಿಸಿತು. ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರಿಗೆ ಹೊಸದಾಗಿ ರಚಿಸಲಾದ ಸಹಕಾರ ಸಚಿವಾಲಯದ ಉಸ್ತುವಾರಿಯನ್ನು ನೀಡಲಾಯಿತು. ಅದರ ರಚನೆಯ ನಂತರ, ಸಚಿವಾಲಯವು ಹೊಸ ಸಹಕಾರಿ ನೀತಿ ಮತ್ತು ಯೋಜನೆಗಳನ್ನು ರೂಪಿಸಲು ಶ್ರಮಿಸುತ್ತಿದೆ ಮತ್ತು ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ನಿರಂತರ ಪ್ರಗತಿ ಸಾಧಿಸುತ್ತಿದೆ.

ಸಹಕಾರಿ ಕ್ಷೇತ್ರದಲ್ಲಿ ದೇಶದ ರೈತರು, ಕೃಷಿ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಮತ್ತು ಸಬಲೀಕರಣಕ್ಕೆ ಅಪಾರ ಸಾಮರ್ಥ್ಯ ಹೊಂದಿವೆ. ಅದಕ್ಕಾಗಿಯೇ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರವು 'ಸಹಕಾರ್ ಸೇ ಸಮೃದ್ಧಿ' ಮಂತ್ರದೊಂದಿಗೆ ಸಹಕಾರಿ ವಲಯವನ್ನು ಸಶಕ್ತಗೊಳಿಸುತ್ತಿದೆ.

ಇತ್ತೀಚೆಗೆ ಕೇಂದ್ರ ಸಚಿವ ಸಂಪುಟವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (ಪಿಎಸಿಎಸ್) ಕಂಪ್ಯೂಟರೀಕರಣವನ್ನು ಅನುಮೋದಿಸುವ ಮೂಲಕ ಸಹಕಾರಿ ವಲಯವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ, ಪಿಎಸಿಎಸ್ ನ ದಕ್ಷತೆಯನ್ನು ಹೆಚ್ಚಿಸುವ, ಅವುಗಳ ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತರುವ; ತಮ್ಮ ವ್ಯವಹಾರವನ್ನು ವೈವಿಧ್ಯಮಯಗೊಳಿಸಲು ಮತ್ತು ಬಹು ಚಟುವಟಿಕೆಗಳು / ಸೇವೆಗಳನ್ನು ಕೈಗೊಳ್ಳಲು ಪಿಎಸಿಎಸ್ ಗೆ ಅನುಕೂಲ ಮಾಡಿಕೊಡುವ ಉದ್ದೇಶವನ್ನು ಇದು ಹೊಂದಿದೆ. ಒಟ್ಟು 2,516 ಕೋಟಿ ರೂ.ಗಳ ಬಜೆಟ್ ಹಂಚಿಕೆಯೊಂದಿಗೆ ಈ ಯೋಜನೆಯು 5 ವರ್ಷಗಳ ಅವಧಿಯಲ್ಲಿ ಸುಮಾರು 63,000 ಕ್ರಿಯಾತ್ಮಕ ಪಿಎಸಿಎಸ್ ಗಳ ಕಂಪ್ಯೂಟರೀಕರಣವನ್ನು ಪ್ರಸ್ತಾಪಿಸಿದೆ.

ಸಹಕಾರ ಸಂಘಗಳು ಜುಲೈ 2 ರಂದು ವಿಶ್ವದಾದ್ಯಂತ 100ನೇ ಅಂತಾರಾಷ್ಟ್ರೀಯ ಸಹಕಾರಿ ದಿನ (ಕೂಪ್ಸ್ ಡೇ) ಅನ್ನು ಆಚರಿಸಲಿವೆ. ಇದು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಸಹಕಾರಿ ವರ್ಷ 2012 ರಿಂದ ಒಂದು ದಶಕವನ್ನು ಗುರುತಿಸುತ್ತದೆ, ಇದು ಸಹಕಾರಿ ತತ್ವಗಳು ಮತ್ತು ಮೌಲ್ಯಗಳಿಂದ ಪ್ರೇರಿತವಾದ ಮಾನವ-ಕೇಂದ್ರಿತ ವ್ಯವಹಾರ ಮಾದರಿಗೆ ಅಂಟಿಕೊಳ್ಳುವ ಮೂಲಕ ವಿಶ್ವ ಸಹಕಾರಿಗಳ ಅನನ್ಯ ಕೊಡುಗೆಯನ್ನು ಪ್ರದರ್ಶಿಸುತ್ತದೆ. ಸಹಕಾರ ಸಂಘಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅಂತಾರಾಷ್ಟ್ರೀಯ ಒಗ್ಗಟ್ಟು, ಆರ್ಥಿಕ ದಕ್ಷತೆ, ಸಮಾನತೆ ಮತ್ತು ವಿಶ್ವಶಾಂತಿಯ ಆಂದೋಲನದ ಆದರ್ಶಗಳನ್ನು ಉತ್ತೇಜಿಸುವುದು ಅಂತಾರಾಷ್ಟ್ರೀಯ ಸಹಕಾರಿ ದಿನದ ಉದ್ದೇಶವಾಗಿದೆ. ಸಹಕಾರಿಗಳು ಉದ್ಯೋಗದಲ್ಲಿರುವ ಜನಸಂಖ್ಯೆಯ ಶೇ.10ರಷ್ಟು ಜನರಿಗೆ ಉದ್ಯೋಗಗಳನ್ನು ಒದಗಿಸುತ್ತವೆ, ಮತ್ತು 300 ಅತಿದೊಡ್ಡ ಸಹಕಾರಿಗಳು ಅಥವಾ ಮ್ಯೂಚುಯಲ್ ಗಳು 2,146 ಶತಕೋಟಿ ಅಮೆರಿಕನ್ ಡಾಲರ್ ವಹಿವಾಟುಗಳನ್ನು ಮಾಡುತ್ತವೆ.

ಕೇಂದ್ರ ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವ ಶ್ರೀ ಪರಷೋತ್ತಮ್ ರೂಪಾಲಾ, ಸಹಕಾರ ಖಾತೆ ರಾಜ್ಯ ಸಚಿವ ಶ್ರೀ ಬಿ.ಎಲ್. ವರ್ಮಾ ಮತ್ತು ಐಸಿಎ-ಎಪಿ ಅಧ್ಯಕ್ಷ ಡಾ. ಚಂದ್ರಪಾಲ್ ಸಿಂಗ್ ಅವರೂ ಈ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಎನ್.ಸಿ.ಯುಐ ಅಧ್ಯಕ್ಷ ದಿಲೀಪ್ ಸಂಗಾನಿ ವಹಿಸಲಿದ್ದಾರೆ.

 

**********



(Release ID: 1838967) Visitor Counter : 579