ಹಣಕಾಸು ಸಚಿವಾಲಯ
2022ರ ಜೂನ್‌ನಲ್ಲಿ ₹ 1,44,616 ಕೋಟಿ ಒಟ್ಟು ಜಿಎಸ್‌ಟಿ ಆದಾಯ ಸಂಗ್ರಹ; ಕಳೆದ ವರ್ಷಕ್ಕಿಂತ ಶೇ.56ರಷ್ಟು ಹೆಚ್ಚಳ
ಜೂನ್ 2022ರಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ಏಪ್ರಿಲ್ 2022ರ ಸಂಗ್ರಹದ ನಂತರ ಎರಡನೇ ಅತ್ಯಧಿಕ ಮೊತ್ತದ ದಾಖಲೆಯಾಗಿದೆ
ಜಿಎಸ್‌ಟಿ ಪ್ರಾರಂಭವಾದಾಗಿನಿಂದ 5ನೇ ಬಾರಿಗೆ; ಮಾರ್ಚ್ 2022 ರಿಂದ ಸತತವಾಗಿ 4 ನೇ ತಿಂಗಳು ಜಿಎಸ್‌ಟಿ ಸಂಗ್ರಹವು ₹ 1.40 ಲಕ್ಷ ಕೋಟಿಯನ್ನು ದಾಟಿದೆ
Posted On:
01 JUL 2022 2:56PM by PIB Bengaluru
ಜೂನ್ 2022ರ ತಿಂಗಳಲ್ಲಿ ಒಟ್ಟು ₹144,616 ಕೋಟಿ ಜಿಎಸ್‌ಟಿ ಆದಾಯವು ಸಂಗ್ರಹವಾಗಿದೆ. ಇದರಲ್ಲಿ ಸಿಜಿಎಸ್‌ಟಿ ₹ 25,306 ಕೋಟಿ, ಎಸ್‌ಜಿಎಸ್‌ಟಿ ₹ 32,406 ಕೋಟಿ, ಐಜಿಎಸ್‌ಟಿ ₹ 75887 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ ₹ 40102 ಕೋಟಿ ಸೇರಿದಂತೆ) ಮತ್ತು ಸೆಸ್ ₹ 11,018 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ₹ 1197 ಕೋಟಿ ಸೇರಿದಂತೆ) ಸೇರಿದೆ. ಜೂನ್ 2022ರಲ್ಲಿ ಒಟ್ಟು ಜಿಎಸ್‌ಟಿ ಸಂಗ್ರಹವು ಏಪ್ರಿಲ್ 2022ರ 1,67,540 ಕೋಟಿ ರೂ. ಸಂಗ್ರಹದ ಬಳಿಕ ಎರಡನೇ ಗರಿಷ್ಠ ಜಿಎಸ್‌ಟಿ ಆದಾಯ ದಾಖಲೆ ಎನಿಸಿದೆ.
ಸರಕಾರವು ಐಜಿಎಸ್‌ಟಿಯಿಂದ ಸಿಜಿಎಸ್‌ಟಿಗೆ ₹ 29,588 ಕೋಟಿ ಮತ್ತು ಎಸ್‌ಜಿಎಸ್‌ಟಿಗೆ ₹ 24,235 ಕೋಟಿ ಪಾವತಿಸಿದೆ. ಇದಲ್ಲದೆ, ಕೇಂದ್ರವು ಈ ತಿಂಗಳಲ್ಲಿ ಕೇಂದ್ರ ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ನಡುವೆ 50:50ರ ಅನುಪಾತದಲ್ಲಿ ತಾತ್ಕಾಲಿಕ ಆಧಾರದ ಮೇಲೆ ₹ 27,000 ಕೋಟಿ ಐಜಿಎಸ್‌ಟಿಯನ್ನು ಇತ್ಯರ್ಥಪಡಿಸಿದೆ. ಜೂನ್ 2022ರ ತಿಂಗಳಲ್ಲಿ ನಿಯಮಿತ ಮತ್ತು ತಾತ್ಕಾಲಿಕ ಇತ್ಯರ್ಥದ ನಂತರ ಕೇಂದ್ರಮತ್ತು ರಾಜ್ಯಗಳ ಒಟ್ಟು ಆದಾಯವು ಕ್ರಮವಾಗಿ ಸಿಜಿಎಸ್‌ಟಿಯಿಂದ ₹ 68,394 ಕೋಟಿ ಮತ್ತು
ಎಸ್‌ಜಿಎಸ್‌ಟಿಯಿಂದ ₹ 70,141 ಕೋಟಿಯಾಗಿದೆ.
ಜೂನ್ 2022ರ ತಿಂಗಳ ಆದಾಯವು ಕಳೆದ ವರ್ಷದ ಇದೇ ತಿಂಗಳಲ್ಲಿನ ಜಿಎಸ್‌ಟಿ ಆದಾಯವಾದ ₹ 92,800 ಕೋಟಿಗೆ ಹೋಲಿಸಿದರೆ 56% ಅಧಿಕವಾಗಿದೆ. ಈ ತಿಂಗಳಲ್ಲಿ, ಸರಕುಗಳ ಆಮದಿನಿಂದ ಬರುವ ಆದಾಯವು 55% ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನ ಆದಾಯವು (ಸೇವೆಗಳ ಆಮದು ಸೇರಿದಂತೆ) ಕಳೆದ ವರ್ಷದ ಇದೇ ತಿಂಗಳಲ್ಲಿ ಈ ಮೂಲಗಳಿಂದ ಬರುವ ಆದಾಯಕ್ಕಿಂತ 56% ಹೆಚ್ಚಾಗಿದೆ.
ಜಿಎಸ್‌ಟಿ ಪ್ರಾರಂಭವಾದಾಗಿನಿಂದ ಮಾಸಿಕ ಜಿಎಸ್‌ಟಿ ಸಂಗ್ರಹವು ಐದನೇ ಬಾರಿ ಮತ್ತು ಮಾರ್ಚ್ 2022 ರಿಂದ ಸತತ ನಾಲ್ಕನೇ ತಿಂಗಳು ₹1.40 ಲಕ್ಷ ಕೋಟಿ ದಾಟಿದೆ. ಜೂನ್ 2022ರಲ್ಲಿ ಆದ ಆದಾಯ ಸಂಗ್ರಹವು ಎರಡು ಕಾರಣಗಳಿಗೆ ವಿಶೇಷವೆನಿಸಿದೆ. ಮೊದಲನೆಯದಾಗಿ ಇದು ಎರಡನೇ ಅತ್ಯಧಿಕ ದಾಖಲೆ ಎನಿಸಿದೆ. ಎರಡನೆಯದಾಗಿ, ಈ ಹಿಂದಿನ ವರ್ಷಗಳಲ್ಲಿ ಕಂಡು ಬರುತ್ತಿದ್ದ ಸಂಗ್ರಹ ಇಳಿಕೆ ತಿಂಗಳೆಂಬ ಪ್ರವೃತ್ತಿಯಿಂದ ಈ ಮಾಸವು ಹೊರಬಂದಿದೆ. 2022ರ ಮೇ ತಿಂಗಳಲ್ಲಿ ಒಟ್ಟು 7.3 ಕೋಟಿ ರೂ.ಗಳ ʻಇ-ವೇ ಬಿಲ್ʼಗಳನ್ನು ಸೃಷ್ಟಿಸಲಾಗಿದ್ದು, ಈ ಪ್ರಮಾಣವು ಏಪ್ರಿಲ್ 2022ರಲ್ಲಿ ಸೃಷ್ಟಿಯಾದ 7.4 ಕೋಟಿ ʻಇ-ವೇ ಬಿಲ್ʼಗಳಿಗಿಂತ 2% ಕಡಿಮೆಯಾಗಿದೆ.
2022-23ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರಾಸರಿ ಮಾಸಿಕ ಒಟ್ಟು ಜಿಎಸ್‌ಟಿ ಸಂಗ್ರಹವು ₹ 1.51 ಲಕ್ಷ ಕೋಟಿಯಷ್ಟಿದ್ದು, ಕಳೆದ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಇದ್ದ ₹ 1.10 ಲಕ್ಷ ಕೋಟಿ ಸರಾಸರಿ ಮಾಸಿಕ ಸಂಗ್ರಹಕ್ಕೆ ಹೋಲಿಸಿದರೆ ಇದು ಶೇ.37ರಷ್ಟು ಹೆಚ್ಚಳವಾಗಿದೆ. ಆರ್ಥಿಕ ಚೇತರಿಕೆಯ ಜೊತೆಗೆ, ವಂಚನೆ-ತಡೆ ಉಪಕ್ರಮಗಳು, ವಿಶೇಷವಾಗಿ ನಕಲಿ ಬಿಲ್ಲರ್‌ಗಳ ವಿರುದ್ಧದ ಕ್ರಮಗಳು ಜಿಎಸ್‌ಟಿ ಹೆಚ್ಚಳಕ್ಕೆ ಕೊಡುಗೆ ನೀಡುತ್ತಿವೆ. ಈ ತಿಂಗಳಲ್ಲಿ ಒಟ್ಟು ಸೆಸ್ ಸಂಗ್ರಹವು, ಜಿಎಸ್‌ಟಿಯನ್ನು ಜಾರಿಗೊಳಿಸಿದ ನಂತರ ಅತ್ಯಧಿಕವೆನಿಸಿದೆ.
2017-18ರಿಂದ ಮಾಸಿಕ ಒಟ್ಟು ಜಿಎಸ್‌ಟಿ ಆದಾಯದಲ್ಲಿನ ಪ್ರವೃತ್ತಿಗಳನ್ನು ಈ ಕೆಳಗಿನ ಕೋಷ್ಟಕವು ತೋರಿಸುತ್ತದೆ. ಜೂನ್ 2021ಕ್ಕೆ ಹೋಲಿಸಿದರೆ 2022ರ ಜೂನ್ ತಿಂಗಳಲ್ಲಿ ಪ್ರತಿ ರಾಜ್ಯದಲ್ಲಿ ಸಂಗ್ರಹಿಸಲಾದ ಜಿಎಸ್‌ಟಿಯ ರಾಜ್ಯವಾರು ಅಂಕಿಅಂಶಗಳನ್ನು ಕೋಷ್ಟಕವು ತೋರಿಸುತ್ತದೆ.
ಒಟ್ಟು ಜಿಎಸ್‌ಟಿ ಸಂಗ್ರಹ ಪ್ರವೃತ್ತಿ (ಲಕ್ಷ ಕೋಟಿ ರೂ.ಗಳಲ್ಲಿ)
2022ರ ಜೂನ್ನಲ್ಲಿ ರಾಜ್ಯವಾರು ಜಿಎಸ್‌ಟಿ ಆದಾಯದ ಹೆಚ್ಚಳ [1] (ಕೋಟಿ ರೂ.ಗಳಲ್ಲಿ)
ರಾಜ್ಯ ಜೂನ್-2021 ಜೂನ್-2022 ಹೆಚ್ಚಳ
State-wise growth of GST Revenues during June 2022
State
|
Jun-21
|
Jun-22
|
Growth
|
Jammu and Kashmir
|
300
|
372
|
24%
|
Himachal Pradesh
|
519
|
693
|
34%
|
Punjab
|
1,111
|
1,683
|
51%
|
Chandigarh
|
120
|
170
|
41%
|
Uttarakhand
|
702
|
1,281
|
82%
|
Haryana
|
3,801
|
6,714
|
77%
|
Delhi
|
2,656
|
4,313
|
62%
|
Rajasthan
|
2,176
|
3,386
|
56%
|
Uttar Pradesh
|
4,588
|
6,835
|
49%
|
Bihar
|
889
|
1,232
|
39%
|
Sikkim
|
212
|
256
|
21%
|
Arunachal Pradesh
|
33
|
59
|
77%
|
Nagaland
|
30
|
34
|
11%
|
Manipur
|
22
|
39
|
78%
|
Mizoram
|
17
|
26
|
49%
|
Tripura
|
43
|
63
|
47%
|
Meghalaya
|
105
|
153
|
46%
|
Assam
|
662
|
972
|
47%
|
West Bengal
|
2,744
|
4,331
|
58%
|
Jharkhand
|
2,032
|
2,315
|
14%
|
Odisha
|
3,000
|
3,965
|
32%
|
Chhattisgarh
|
2,230
|
2,774
|
24%
|
Madhya Pradesh
|
2,098
|
2,837
|
35%
|
Gujarat
|
6,128
|
9,207
|
50%
|
Daman and Diu
|
0
|
0
|
-13%
|
Dadra and Nagar Haveli
|
243
|
350
|
44%
|
Maharashtra
|
13,722
|
22,341
|
63%
|
Karnataka
|
5,103
|
8,845
|
73%
|
Goa
|
256
|
429
|
67%
|
Lakshadweep
|
0
|
1
|
33%
|
Kerala
|
998
|
2,161
|
116%
|
Tamil Nadu
|
4,380
|
8,027
|
83%
|
Puducherry
|
104
|
182
|
75%
|
Andaman and Nicobar Islands
|
12
|
22
|
94%
|
Telangana
|
2,845
|
3,901
|
37%
|
Andhra Pradesh
|
2,051
|
2,987
|
46%
|
Ladakh
|
6
|
13
|
118%
|
Other Territory
|
127
|
205
|
61%
|
Centre Jurisdiction
|
164
|
143
|
-12%
|
Grand Total
|
66,229
|
1,03,317
|
56%
|
[1] ಆಮದು ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಒಳಗೊಂಡಿಲ್ಲ.
******
(Release ID: 1838685)
Visitor Counter : 206