ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜರ್ಮನಿಯ ಮ್ಯೂನಿಚ್‌ ನಲ್ಲಿ ಭಾರತೀಯ ಸಮುದಾಯದೊಂದಿಗೆ ಪ್ರಧಾನ ಮಂತ್ರಿಯವರ ಸಂವಾದ.

प्रविष्टि तिथि: 26 JUN 2022 7:58PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಮ್ಯೂನಿಚ್‌ನ ಆಡಿ ಡೋಮ್ನಲ್ಲಿ ಜರ್ಮನಿಯಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮತ್ತು ಸಂವಾದ ನಡೆಸಿದರು. ಜರ್ಮನಿಯ ಅತ್ಯಂತ ಕ್ರಿಯಾಶೀಲ ಮತ್ತು ಉತ್ಸಾಹಿ ಭಾರತೀಯ ಸಮುದಾಯದ ಸಾವಿರಾರು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

ಪ್ರಧಾನಮಂತ್ರಿ ಶ್ರೀ ಮೋದಿಯವರು ಭಾರತದ ಬೆಳವಣಿಗೆಯ ಕಥೆಯ ಮೇಲೆ ಬೆಳಕು ಚೆಲ್ಲಿದರು ಮತ್ತು ದೇಶದ ಅಭಿವೃದ್ಧಿ ಕಾರ್ಯಸೂಚಿಯನ್ನು ಮತ್ತಷ್ಟು ಯಶಸ್ವಿಯಾಗಿ ಮುನ್ನಡೆಸಲು ಸರ್ಕಾರವು ಕೈಗೊಂಡ ವಿವಿಧ ಉಪಕ್ರಮಗಳನ್ನು ಪ್ರಸ್ತಾಪಿಸಿದರು. ಪ್ರಧಾನಮಂತ್ರಿ ಶ್ರೀ ಮೋದಿ ಅವರು ಭಾರತದ ಯಶಸ್ಸಿನ ಕಥೆಯನ್ನು ಪ್ರಚಾರ ಮಾಡುವಲ್ಲಿ ಮತ್ತು ಭಾರತದ ಯಶಸ್ಸಿನ ಬ್ರಾಂಡ್ ಅಂಬಾಸಿಡರ್ಗಳಾಗಿ ಕಾರ್ಯನಿರ್ವಹಿಸುವಲ್ಲಿ ಅನಿವಾಸಿ ಭಾರತೀಯರ ಅಮೂಲ್ಯ ಕೊಡುಗೆಯನ್ನು ಶ್ಲಾಘಿಸಿದರು.

 

******


(रिलीज़ आईडी: 1837288) आगंतुक पटल : 191
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Manipuri , Assamese , Punjabi , Gujarati , Odia , Tamil , Telugu , Malayalam