ಪ್ರಧಾನ ಮಂತ್ರಿಯವರ ಕಛೇರಿ

ಜೂನ್ 19ರಂದು ʻಪ್ರಗತಿ ಮೈದಾನ್ ಸಮಗ್ರ ಸಾರಿಗೆ ಕಾರಿಡಾರ್ʼ ಯೋಜನೆಯನ್ನು ಲೋಕಾರ್ಪಣೆ ಮಾಡಲಿರುವ ಪ್ರಧಾನಿ.


ಮುಖ್ಯ ಸುರಂಗ ಮತ್ತು ಐದು ಅಂಡರ್‌ಪಾಸ್ ಗಳನ್ನು ಲೋಕಾರ್ಪಣೆ ಮಾಡಲಾಗುವುದು.
ಇದು ʻಪ್ರಗತಿ ಮೈದಾನ ಪುನರಾಭಿವೃದ್ಧಿʼ ಯೋಜನೆಯ ಅವಿಭಾಜ್ಯ ಅಂಗವಾಗಿದೆ.

ಅಡಚಣೆ-ಮುಕ್ತ ವಾಹನ ಸಂಚಾರವನ್ನು ಖಾತರಿಪಡಿಸುತ್ತದೆ ಮತ್ತು ಭೈರೋನ್ ಮಾರ್ಗದ ಸಂಚಾರದ ಹೊರೆಯನ್ನು ಕಡಿಮೆ ಮಾಡಲಿದೆ.

ನಗರ ಮೂಲಸೌಕರ್ಯವನ್ನು ಪರಿವರ್ತಿಸುವ ಮೂಲಕ ಜೀವನವನ್ನು ಸುಲಭಗೊಳಿಸುವ ಕಡೆಗೆ ಈ ಯೋಜನೆಯು ಮತ್ತೊಂದು ಹೆಜ್ಜೆಯಾಗಿದೆ.

Posted On: 17 JUN 2022 10:11AM by PIB Bengaluru

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಜೂನ್ 19ರಂದು ಬೆಳಗ್ಗೆ 10:30ಕ್ಕೆ `ಪ್ರಗತಿ ಮೈದಾನ ಸಮಗ್ರ ಸಾರಿಗೆ ಕಾರಿಡಾರ್ʼ ಯೋಜನೆಯ ಮುಖ್ಯ ಸುರಂಗ ಮತ್ತು ಐದು ಅಂಡರ್‌ಪಾಸ್‌ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಸಮಗ್ರ ಸಂಚಾರ ಕಾರಿಡಾರ್ ಯೋಜನೆಯು ʻಪ್ರಗತಿ ಮೈದಾನ್ ಪುನರಾಭಿವೃದ್ಧಿʼ ಯೋಜನೆಯ ಅವಿಭಾಜ್ಯ ಅಂಗವಾಗಿದೆ.
ʻಪ್ರಗತಿ ಮೈದಾನ್‌ ಸಮಗ್ರ ಸಾರಿಗೆ ಕಾರಿಡಾರ್ʼ ಯೋಜನೆಯನ್ನು 920 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಅನುಷ್ಠಾನಗೊಳಿಸಾಗಿದು, ಇದು ಸಂಪೂರ್ಣವಾಗಿ ಕೇಂದ್ರ ಸರಕಾರದ ಧನಸಹಾಯವನ್ನು ಪಡೆದಿದೆ. ʻಪ್ರಗತಿ ಮೈದಾನ್‌ʼದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಹೊಸ ವಿಶ್ವದರ್ಜೆಯ ವಸ್ತುಪ್ರದರ್ಶನ ಮತ್ತು ಸಮಾವೇಶ ಕೇಂದ್ರಕ್ಕೆ ಅಡಚನೆ ಮುಕ್ತ ಮತ್ತು ಸುಗಮ ಸಂಚಾರವನ್ನು ಒದಗಿಸುವುದು ಇದರ ಉದ್ದೇಶವಾಗಿದೆ, ಆ ಮೂಲಕ ʻಪ್ರಗತಿ ಮೈದಾನ್‌ʼದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಲ್ಲಿ ಪ್ರದರ್ಶಕರು ಮತ್ತು ಸಂದರ್ಶಕರ ಸುಲಭ ಪಾಲ್ಗೊಳ್ಳುವಿಕೆಗೆ ಇದು ಅನುವು ಮಾಡಿಕೊಡಲಿದೆ.
ಆದಾಗ್ಯೂ, ಈ ಯೋಜನೆಯ ಪರಿಣಾಮವು ಪ್ರಗತಿ ಮೈದಾನವನ್ನು ಮೀರಿ ವಿಸ್ತರಿಸಲಿದೆ. ಏಕೆಂದರೆ ಇದು ಅಡಚಣೆ ಮುಕ್ತ ವಾಹನ ಸಂಚಾರವನ್ನು ಖಾತರಿಪಡಿಸುತ್ತದೆ. ಆ ಮೂಲಕ ಪ್ರಯಾಣಿಕರ ಸಮಯ ಮತ್ತು ವೆಚ್ಚವನ್ನು ದೊಡ್ಡ ಮಟ್ಟದಲ್ಲಿ ಉಳಿಸಲು ಸಹಾಯ ಮಾಡುತ್ತದೆ. ಇದು ನಗರ ಮೂಲಸೌಕರ್ಯಗಳನ್ನು ಪರಿವರ್ತಿಸುವ ಮೂಲಕ ಜನರ ಸುಗಮ ಜೀವನ ಖಾತರಿಪಡಿಸುವ ಸರಕಾರದ ವಿಶಾಲ ದೃಷ್ಟಿಕೋನದ ಒಂದು ಭಾಗವಾಗಿದೆ.
ಮುಖ್ಯ ಸುರಂಗವು ʻಪ್ರಗತಿ ಮೈದಾನʼದ ಮೂಲಕ ಹಾದುಹೋಗುವ ʻಪುರಾಣ ಕಿಲಾʼ ರಸ್ತೆಯ ಮೂಲಕ ರಿಂಗ್ ರಸ್ತೆಯನ್ನು ʻಇಂಡಿಯಾ ಗೇಟ್ʼನೊಂದಿಗೆ ಸಂಪರ್ಕಿಸುತ್ತದೆ. ಆರು ಪಥಗಳ ವಿಭಜಿತ ಸುರಂಗವು ʻಪ್ರಗತಿ ಮೈದಾನʼದ ಬೃಹತ್ ನೆಲಮಾಳಿಗೆ ಪಾರ್ಕಿಂಗ್‌ಗೆ ಪ್ರವೇಶ ಸೇರಿದಂತೆ ಅನೇಕ ಉದ್ದೇಶಗಳನ್ನು ಹೊಂದಿದೆ. ಸುರಂಗದ ಒಂದು ವಿಶಿಷ್ಟ ಅಂಶವೆಂದರೆ, ಪಾರ್ಕಿಂಗ್ ಸ್ಥಳದ ಎರಡೂ ಬದಿಗಳಿಂದ ಸಂಚಾರವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಮುಖ್ಯ ಸುರಂಗ ರಸ್ತೆಯ ಕೆಳಗೆ ಎರಡು ಅಡ್ಡ ಸುರಂಗಗಳನ್ನು ನಿರ್ಮಿಸಲಾಗಿದೆ. ಇದು ಸ್ಮಾರ್ಟ್ ಅಗ್ನಿ ನಿರ್ವಹಣೆ ವ್ಯವಸ್ಥೆ, ಆಧುನಿಕ ಮಾದರಿಯ ಗಾಳಿ-ಬೆಳಕಿನ ವ್ಯವಸ್ಥೆ, ಸ್ವಯಂಚಾಲಿತ ಒಳಚರಂಡಿ, ಡಿಜಿಟಲ್ ನಿಯಂತ್ರಿತ ಸಿಸಿಟಿವಿ ಮತ್ತು ಸುರಂಗದೊಳಗೆ ಸಾರ್ವಜನಿಕ ಪ್ರಕಟಣೆ ವ್ಯವಸ್ಥೆಯಂತಹ ಸುಗಮ ಸಂಚಾರಕ್ಕಾಗಿ ಇತ್ತೀಚಿನ ಜಾಗತಿಕ ಗುಣಮಟ್ಟದ ಸೌಲಭ್ಯಗಳನ್ನು ಹೊಂದಿದೆ. ಈ ಬಹುನಿರೀಕ್ಷಿತ ಸುರಂಗವು, ಪ್ರಸ್ತುತ ತನ್ನ ಸಾಮರ್ಥ್ಯವನ್ನೂ ಮೀರಿರುವ ಭೈರೋನ್ ಮಾರ್ಗಕ್ಕೆ ಪರ್ಯಾಯ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಭೈರೋನ್ ಮಾರ್ಗದ ಸಂಚಾರ ಹೊರೆಯನ್ನು ಸುಮಾರು 50 ಪ್ರತಿಶತ ಕಡಿಮೆ ಮಾಡಲಿದೆ. 
ಸುರಂಗದ ಜೊತೆಗೆ, ಮಥುರಾ ರಸ್ತೆಯಲ್ಲಿ ನಾಲ್ಕು; ಭೈರೋನ್ ಮಾರ್ಗದಲ್ಲಿ ಒಂದು; ಮತ್ತು ರಿಂಗ್ ರಸ್ತೆ ಹಾಗೂ ಭೈರೋನ್ ಮಾರ್ಗದ ಕೂಡುವಿಕೆ ಬಳಿ ಒಂದು ಸೇರಿದಂತೆ ಆರು ಅಂಡರ್‌ಪಾಸ್‌ಗಳು ಇರಲಿವೆ.

****



(Release ID: 1834730) Visitor Counter : 159