ಸಂಪುಟ

ಶ್ರೀಲಂಕಾದ ಕೊಲಂಬೊದಲ್ಲಿ ಬಿಮ್‌ಸ್ಟೆಕ್‌ ತಂತ್ರಜ್ಞಾನ ವರ್ಗಾವಣೆ ಕೇಂದ್ರ ಸ್ಥಾಪನೆಗಾಗಿ ಭಾರತ ಸಂಘದ ಜ್ಞಾಪಕ ಪತ್ರಕ್ಕೆ (ಎಂಒಎ) ಸಂಪುಟದ ಅನುಮೋದನೆ.

Posted On: 14 JUN 2022 4:08PM by PIB Bengaluru

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷ ತೆಯಲ್ಲಿಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2022ರ ಮಾರ್ಚ್‌ 30ರಂದು ಶ್ರೀಲಂಕಾದ ಕೊಲಂಬೋದಲ್ಲಿ ನಡೆದ 5ನೇ ಬಿಮ್‌ಸ್ಟೆಕ್‌ ಶೃಂಗಸಭೆಯಲ್ಲಿ ಬಿಮ್‌ಸ್ಟೆಕ್‌ ಸದಸ್ಯ ರಾಷ್ಟ್ರಗಳು ಬಹು ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳಕೊಲ್ಲಿಉಪಕ್ರಮ (ಬಿಮ್‌ಸ್ಟೆಕ್‌) ತಂತ್ರಜ್ಞಾನ ವರ್ಗಾವಣೆ ಸೌಲಭ್ಯ (ಟಿಟಿಎಫ್‌) ಸ್ಥಾಪನೆಗಾಗಿ ಭಾರತದಿಂದ ಒಡಂಬಡಿಕೆಗೆ (ಎಂಒಎ) ತನ್ನ ಅನುಮೋದನೆ ನೀಡಿದೆ .
ತಂತ್ರಜ್ಞಾನಗಳ ವರ್ಗಾವಣೆ, ಅನುಭವಗಳ ಹಂಚಿಕೆ ಮತ್ತು ಸಾಮರ್ಥ್ಯ‌ ವರ್ಧನೆಯನ್ನು ಉತ್ತೇಜಿಸುವ ಮೂಲಕ ಬಿಮ್‌ಸ್ಟೆಕ್‌ ಸದಸ್ಯ ರಾಷ್ಟ್ರಗಳ ನಡುವೆ ತಂತ್ರಜ್ಞಾನ ವರ್ಗಾವಣೆಯಲ್ಲಿ ಸಹಕಾರವನ್ನು ಸಂಯೋಜಿಸುವುದು, ಸುಗಮಗೊಳಿಸುವುದು ಮತ್ತು ಬಲಪಡಿಸುವುದು ಬಿಮ್‌ಸ್ಟೆಕ್‌ ಟಿಟಿಎಫ್‌ನ ಮುಖ್ಯ ಉದ್ದೇಶಗಳಾಗಿವೆ.
ಜೈವಿಕ ತಂತ್ರಜ್ಞಾನ, ನ್ಯಾನೊತಂತ್ರಜ್ಞಾನ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ ಅಪ್ಲಿಕೇಶನ್‌ಗಳು, ಕೃಷಿ ತಂತ್ರಜ್ಞಾನ, ಆಹಾರ ಸಂಸ್ಕರಣಾ ತಂತ್ರಜ್ಞಾನ, ಔಷಧೀಯ ತಂತ್ರಜ್ಞಾನ  ಆಟೋಮೇಷನ್‌, ಹೊಸ ಮತ್ತು ನವೀಕರಿಸಬಹುದಾದ ಇಂಧನ ಮುಂತಾದ ಆದ್ಯತೆಯ ಕ್ಷೇತ್ರಗಳಲ್ಲಿಬಿಮ್‌ಸ್ಟೆಕ್‌ ಸದಸ್ಯ ರಾಷ್ಟ್ರಗಳ ನಡುವೆ ತಂತ್ರಜ್ಞಾನಗಳ ವರ್ಗಾವಣೆಯನ್ನು ಟಿಟಿಎಫ್‌ ಸುಗಮಗೊಳಿಸುತ್ತದೆ. ತಂತ್ರಜ್ಞಾನ ಆಟೋಮೇಷನ್‌, ಹೊಸ ಮತ್ತು ನವೀಕರಿಸಬಹುದಾದ ಇಂಧನ ತಂತ್ರಜ್ಞಾನ, ಸಾಗರಶಾಸ್ತ್ರ, ಪರಮಾಣು ತಂತ್ರಜ್ಞಾನ ಅಪ್ಲಿಕೇಶನ್‌ಗಳು, ಇ-ತ್ಯಾಜ್ಯ ಮತ್ತು ಘನ ತ್ಯಾಜ್ಯ ನಿರ್ವಹಣೆ ತಂತ್ರಜ್ಞಾನ, ಆರೋಗ್ಯ ತಂತ್ರಜ್ಞಾನಗಳು, ವಿಪತ್ತು ಅಪಾಯ ಕಡಿತ ಮತ್ತು ಹವಾಮಾನ ಬದಲಾವಣೆಯ ಅಳವಡಿಕೆಗೆ ಸಂಬಂಧಿಸಿದ ತಂತ್ರಜ್ಞಾನಗಳಾಗಿವೆ.
ಟಿಟಿಎಫ್‌ ಆಡಳಿತ ಮಂಡಳಿಯನ್ನು ಹೊಂದಿರುತ್ತದೆ ಮತ್ತು ಟಿಟಿಎಫ್‌ನ ಚಟುವಟಿಕೆಗಳ ಒಟ್ಟಾರೆ ನಿಯಂತ್ರಣವನ್ನು ಆಡಳಿತ ಮಂಡಳಿಗೆ ವಹಿಸಲಾಗುತ್ತದೆ. ಆಡಳಿತ ಮಂಡಳಿಯು ಪ್ರತಿ ಸದಸ್ಯ ರಾಜ್ಯದಿಂದ ಒಬ್ಬ ನಾಮನಿರ್ದೇಶಿತರನ್ನು ಒಳಗೊಂಡಿರುತ್ತದೆ.

ಬಿಮ್‌ಸ್ಟೆಕ್‌ ಟಿಟಿಎಫ್‌ ನ ನಿರೀಕ್ಷಿತ ಫಲಿತಾಂಶಗಳು ಹೀಗಿವೆ:

1. ಬಿಮ್‌ಸ್ಟೆಕ್‌ ದೇಶಗಳಲ್ಲಿ ಲಭ್ಯವಿರುವ ತಂತ್ರಜ್ಞಾನಗಳ ಡೇಟಾ ಬ್ಯಾಂಕ್‌,

2. ತಂತ್ರಜ್ಞಾನ ವರ್ಗಾವಣೆ ನಿರ್ವಹಣೆ, ಮಾನದಂಡಗಳು, ಮಾನ್ಯತೆ, ಮಾಪನಶಾಸ್ತ್ರ, ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಸೌಲಭ್ಯಗಳ ಕ್ಷೇತ್ರಗಳಲ್ಲಿನ ಉತ್ತಮ ಅಭ್ಯಾಸಗಳ ಬಗ್ಗೆ ಮಾಹಿತಿಯ ಭಂಡಾರ,

3. ಸಾಮರ್ಥ್ಯ‌ ವರ್ಧನೆ, ಅನುಭವಗಳ ಹಂಚಿಕೆ ಮತ್ತು ಅಭಿವೃದ್ಧಿಯಲ್ಲಿಉತ್ತಮ ಅಭ್ಯಾಸಗಳು, ಮತ್ತು

4.ಬಿಮ್‌ಸ್ಟೆಕ್‌ ರಾಷ್ಟ್ರಗಳ ನಡುವೆ ತಂತ್ರಜ್ಞಾನಗಳ ವರ್ಗಾವಣೆ ಮತ್ತು ಬಳಕೆ.

 

***



(Release ID: 1834108) Visitor Counter : 170