ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿಯವರು ಜೂನ್ 5 ರಂದು ಜಾಗತಿಕ ಉಪಕ್ರಮ ‘ಲೈಫ್ ಮೂವ್‌ಮೆಂಟ್’ ಅನ್ನು ಪ್ರಾರಂಭಿಸಲಿದ್ದಾರೆ
ಪರಿಸರ ಪ್ರಜ್ಞೆಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಆಲೋಚನೆಗಳನ್ನು ಆಹ್ವಾನಿಸುವ 'ಲೈಫ್ ಗ್ಲೋಬಲ್ ಕಾಲ್ ಫಾರ್ ಪೇಪರ್ಸ್' ಅನ್ನು ಪ್ರಾರಂಭಿಸಲು ಚಾಲನೆ ನೀಡಲಾಗುವುದು
ಗ್ಲಾಸ್ಗೋದಲ್ಲಿ ಸಿಒಪಿ26 ಸಮಯದಲ್ಲಿ ಲೈಫ್ ಕಲ್ಪನೆಯನ್ನು ಪ್ರಧಾನಮಂತ್ರಿಯವರು ಪರಿಚಯಿಸಿದರು
ಇದು 'ಅಸಡ್ಡೆಯ ಮತ್ತು ವಿನಾಶಕಾರಿ ಬಳಕೆ' ಬದಲಿಗೆ 'ಬುದ್ಧಿಪೂರ್ವಕ ಮತ್ತು ಜಾಗರೂಕತೆಯ ಬಳಕೆ' ಮೇಲೆ ಕೇಂದ್ರೀಕರಿಸುತ್ತದೆ
Posted On:
04 JUN 2022 1:48PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 5 ಜೂನ್ 2022 ರಂದು ಸಂಜೆ 6 ಗಂಟೆಗೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ 'ಪರಿಸರಕ್ಕಾಗಿ ಜೀವನಶೈಲಿ (ಲೈಫ್) ಆಂದೋಲನ' ಎಂಬ ಜಾಗತಿಕ ಉಪಕ್ರಮವನ್ನು ಪ್ರಾರಂಭಿಸಲಿದ್ದಾರೆ. ಈ ಕಾರ್ಯಕ್ರಮವು ಪರಿಸರ ಪ್ರಜ್ಞೆಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಪ್ರಪಂಚದಾದ್ಯಂತದ ವ್ಯಕ್ತಿಗಳು, ಸಮುದಾಯಗಳು ಮತ್ತು ಸಂಸ್ಥೆಗಳನ್ನು ಪ್ರಭಾವಿಸಲು ಮತ್ತು ಮನವೊಲಿಸಲು ಶಿಕ್ಷಣ ತಜ್ಞರು, ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳಿಂದ ಆಲೋಚನೆಗಳು ಮತ್ತು ಸಲಹೆಗಳನ್ನು ಆಹ್ವಾನಿಸುವ 'ಲೈಫ್ ಗ್ಲೋಬಲ್ ಕಾಲ್ ಫಾರ್ ಪೇಪರ್ಸ್' ಅನ್ನು ಪ್ರಾರಂಭಿಸುತ್ತದೆ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಮುಖ್ಯ ಭಾಷಣವನ್ನೂ ಮಾಡಲಿದ್ದಾರೆ.
ಕಾರ್ಯಕ್ರಮವು ಶ್ರೀ ಬಿಲ್ ಗೇಟ್ಸ್, ಸಹ-ಅಧ್ಯಕ್ಷ ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್; ಲಾರ್ಡ್ ನಿಕೋಲಸ್ ಸ್ಟರ್ನ್, ಹವಾಮಾನ ಅರ್ಥಶಾಸ್ತ್ರಜ್ಞ; ಪ್ರೊ. ಕ್ಯಾಸ್ ಸನ್‌ಸ್ಟೈನ್, ನಡ್ಜ್ ಥಿಯರಿ ಲೇಖಕ; ಶ್ರೀ ಅನಿರುದ್ಧ ದಾಸ್‌ಗುಪ್ತ, ಸಿಇಒ ಮತ್ತು ಅಧ್ಯಕ್ಷ ವಿಶ್ವ ಸಂಪನ್ಮೂಲ ಸಂಸ್ಥೆ; ಶ್ರೀಮತಿ. ಇಂಗರ್ ಆಂಡರ್ಸನ್, ಯುಎನ್‍ಇಪಿ ಗ್ಲೋಬಲ್ ಹೆಡ್; ಶ್ರೀ ಅಚಿಮ್ ಸ್ಟೈನರ್, ಯುಎನ್‍ಡಿಪಿ ಗ್ಲೋಬಲ್ ಹೆಡ್ ಮತ್ತು ಶ್ರೀ ಡೇವಿಡ್ ಮಾಲ್ಪಾಸ್, ವಿಶ್ವ ಬ್ಯಾಂಕ್ ಅಧ್ಯಕ್ಷರು, ಇತರರ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ
ಕಳೆದ ವರ್ಷ ಗ್ಲಾಸ್ಗೋದಲ್ಲಿ ನಡೆದ 26 ನೇ ಯುನೈಟೆಡ್ ನೇಷನ್ಸ್ ಕ್ಲೈಮೇಟ್ ಚೇಂಜ್ ಕಾನ್ಫರೆನ್ಸ್ ಆಫ್ ದಿ ಪಾಟೀಸ್ (ಸಿಒಪಿ26) ಸಮಯದಲ್ಲಿ ಲೈಫ್ ಕಲ್ಪನೆಯನ್ನು ಪ್ರಧಾನಮಂತ್ರಿಯವರು ಪರಿಚಯಿಸಿದರು. ಈ ಕಾರ್ಯಕ್ರಮವು ಪರಿಸರ ಪ್ರಜ್ಞೆಯ ಜೀವನಶೈಲಿಯನ್ನು ಉತ್ತೇಜಿಸುತ್ತದೆ, ಅದು 'ಅಸಡ್ಡೆಯ ಮತ್ತು ವಿನಾಶಕಾರಿ ಬಳಕೆ' ಬದಲಿಗೆ 'ಬುದ್ಧಿಪೂರ್ವಕ ಮತ್ತು ಜಾಗರೂಕತೆಯ ಬಳಕೆ' ಮೇಲೆ ಕೇಂದ್ರೀಕರಿಸುತ್ತದೆ.
*****
(Release ID: 1831185)
Visitor Counter : 267
Read this release in:
Telugu
,
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Malayalam