ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಪುಣೆಯ ವಿಮಾನ್ ನಗರದಲ್ಲಿ ತಕ್ಷ ಶಿಲಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಉದ್ಘಾಟಿಸಿದ ಕೇಂದ್ರ ಸಚಿವ ಅನುರಾಗ್ ಠಾಕೂರ್
ತಮ್ಮ ಸಿಎಸ್‌ಆರ್ ನಿಧಿಗಳ ಮೂಲಕ ಕ್ರೀಡಾ ಮೂಲಸೌಕರ್ಯ ಯೋಜನೆಗಳಿಗೆ ಧನಸಹಾಯ ನೀಡುವಂತೆ ಪುಣೆಯ ಕಾರ್ಪೊರೇಟ್‌ಗಳಿಗೆ ಮನವಿ
Posted On:
29 MAY 2022 1:19PM by PIB Bengaluru
ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಶನಿವಾರ ಸಂಜೆ ವಿಮನ್ ನಗರದಲ್ಲಿಪುಣೆ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ನಿರ್ಮಿಸಿದ ತಕ್ಷ ಶಿಲಾ ಕ್ರೀಡಾ ಸಂಕೀರ್ಣವನ್ನು ಉದ್ಘಾಟಿಸಿದರು. ತಳಮಟ್ಟದಲ್ಲಿ ಕ್ರೀಡಾ ಮೂಲಸೌಕರ್ಯಗಳನ್ನು ಸೃಷ್ಟಿಸುವ ಮಹತ್ವವನ್ನು ಪ್ರತಿಪಾದಿಸಿದ ಶ್ರೀ ಠಾಕೂರ್, ಪುಣೆಯ ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಸಿಎಸ್‌ಆರ್ (ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ) ನಿಧಿಗಳ ಮೂಲಕ ಕ್ರೀಡಾ ಸೌಲಭ್ಯಗಳಿಗೆ ಧನಸಹಾಯ ಮಾಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಯುವಕರು ಕ್ರೀಡೆ ಮತ್ತು ಫಿಟ್ನೆಸ್‌ಅನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರ ಮಾತುಗಳನ್ನು ನೆನಪಿಸಿಕೊಂಡರು, ‘‘ಖೇಲೋಜ್ ತೋ ಖಿಲೋಗೆ! ಮತ್ತು ಕ್ರೀಡೆಗಳು ಪರಿಶ್ರಮವನ್ನು ಕಲಿಸುತ್ತವೆ, ಆತ್ಮವಿಶ್ವಾಸವನ್ನು ತುಂಬುತ್ತವೆ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುತ್ತವೆ,’’ ಎಂದು ಹೇಳಿದರು. ಭಾರತವು ಅತಿ ಹೆಚ್ಚು ಸ್ಥೂಲಕಾಯದ ಜನರನ್ನು ಹೊಂದಿದೆ ಮತ್ತು ಜಡ ಜೀವನ ಶೈಲಿಯು ಜನರನ್ನು ಬದಲಾಯಿಸಿದೆ ಎಂದು ಅವರು ಉಲ್ಲೇಖಿಸಿದರು. ಆದ್ದರಿಂದ, ಫಿಟ್ನೆಸ್ ಪ್ರತಿಯೊಬ್ಬರಿಗೂ ಮುಖ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಈ ಕ್ರೀಡಾ ಸಂಕೀರ್ಣವನ್ನು ಈ ಪ್ರದೇಶದ ಯುವಕರು ಮತ್ತು ಸಾಮಾನ್ಯ ಜನರಿಗಾಗಿ ನಿರ್ಮಿಸಲಾಗಿದೆ ಎಂದು ಹೇಳಿದ ಸಚಿವರು, ‘‘ನಿಮ್ಮ ಎಸಿ ಕೊಠಡಿಗಳಿಂದ ಹೊರಗೆ ಬನ್ನಿ, ಇಲ್ಲಿಅರ್ಧ ಗಂಟೆಗಳ ಕಾಲ ಆಟಗಳನ್ನು ಅಭ್ಯಾಸ ಮಾಡಿ. ಆಗ ನೀವು ಫಿಟ್ ಆಗುತ್ತೀರಿ, ಆರೋಗ್ಯ ಮತ್ತು ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುತ್ತೀರಿ, ಕ್ರೀಡೆಗಳ ಬಗ್ಗೆ ಒಲವು ಬೆಳೆಸಿಕೊಳ್ಳುತ್ತೀರಿ,’’ ಎಂದರು.
ದೇಶದಲ್ಲಿಕ್ರೀಡಾ ಸಂಸ್ಕೃತಿಯನ್ನು ಬೆಳೆಸುವ ಬಗ್ಗೆ ಮಾತನಾಡಿದ ಶ್ರೀ ಠಾಕೂರ್, ‘‘ನಮ್ಮ ಮಕ್ಕಳಿಗೆ ಆಟವಾಡಲು ಅವಕಾಶ ದೊರೆತಾಗ, ಅವರು ಕ್ರೀಡೆಯ ಬಗ್ಗೆ ಒಲವು ಬೆಳೆಸಿಕೊಳ್ಳುತ್ತಾರೆ. ನಂತರ ಅವರು ದೇಶ ಮತ್ತು ವಿದೇಶಗಳಲ್ಲಿಪಂದ್ಯಗಳನ್ನು ಗೆಲ್ಲಲು ತಮ್ಮದೇ ಆದ ರೀತಿಯಲ್ಲಿಮುಂದುವರಿಯುತ್ತಾರೆ,’’ ಕ್ರೀಡಾ ಪಂದ್ಯಾವಳಿಯು ನರಗಳ ಯುದ್ಧವಾಗಿದ್ದು, ಇದು ಒಬ್ಬ ವ್ಯಕ್ತಿಯು ಮಾನಸಿಕವಾಗಿ ಎಷ್ಟು ಬಲಶಾಲಿಯಾಗಬಹುದು ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ಸರ್ಕಾರವು ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಮತ್ತು ದೇಶಾದ್ಯಂತ ತಳಮಟ್ಟದ ಮೂಲಸೌಕರ್ಯಗಳನ್ನು ನಿರ್ಮಿಸಲು ಕೇಂದ್ರವು ರಾಜ್ಯಗಳೊಂದಿಗೆ ಬಹಳ ನಿಕಟವಾಗಿ ಕೆಲಸ ಮಾಡುತ್ತಿದೆ ಎಂದು ಶ್ರೀ ಠಾಕೂರ್ ಹೇಳಿದರು. ಈ ಹಿಂದೆ ಸುಮಾರು 1,200 ಕೋಟಿ ರೂ.ಗಳಷ್ಟಿದ್ದ ಕ್ರೀಡಾ ಬಜೆಟ್‌ಅನ್ನು 3,000 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ, ಇದರಿಂದ ಕ್ರೀಡಾಪಟುಗಳಿಗೆ ಖರ್ಚು ಮಾಡಲು ಹೆಚ್ಚಿನ ಹಣವಿದೆ ಎಂದು ಅವರು ಹೇಳಿದರು.
ಇದಲ್ಲದೆ, ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (ಟಾಫ್ಸ್) ಅಡಿಯಲ್ಲಿ, ಭಾರತ ಸರ್ಕಾರವು ಗಣ್ಯ ಕ್ರೀಡಾಪಟುಗಳಿಗೆ ವಿದೇಶಿ ತರಬೇತಿಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ, ಇದರಲ್ಲಿಅವರ ವಸತಿ, ಪೌಷ್ಟಿಕಾಂಶ, ಸಲಕರಣೆಗಳು, ವಿದೇಶಗಳಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆಗಳು ಮತ್ತು ಪ್ರತಿ ಕ್ರೀಡಾಪಟುವಿಗೆ ಮಾಸಿಕ ರೂ. 50,000/- ಸ್ಟೈಫಂಡ್ ಸಹ ಸೇರಿದೆ. ಈಗ ಆಟಗಾರರು ಆಡಬೇಕು ಮತ್ತು ಬೇರೆ ಯಾವುದರ ಬಗ್ಗೆಯೂ ಚಿಂತಿಸಬಾರದು. ಅದಕ್ಕಾಗಿಯೇ ಅವರು ತಮ್ಮದೇ ಆದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಮತ್ತು ದೇಶಕ್ಕಾಗಿ ಪದಕಗಳನ್ನು ಗೆಲ್ಲುತ್ತಿದ್ದಾರೆ ಎಂದು ಸಚಿವರು ಹೇಳಿದರು.
ಇದಕ್ಕೂ ಮುನ್ನ ಕೇಂದ್ರ ಸಚಿವರು ಪುಣೆಯ ಪ್ರಸಿದ್ಧ ಗುಲ್ಶಾಚಿ ತಾಲಿಮ್ ಅಖಾಡಕ್ಕೆ ಭೇಟಿ ನೀಡಿದರು, ಅಲ್ಲಿಅವರು ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ…) ಕೇಂದ್ರವನ್ನು ಉದ್ಘಾಟಿಸಿದರು ಮತ್ತು ತರಬೇತಿ ಕುಸ್ತಿಪಟುಗಳೊಂದಿಗೆ ಸಂವಾದ ನಡೆಸಿದರು. ಮಹಾರಾಷ್ಟ್ರದಲ್ಲಿ ಸಾಯ್ ಗರಿಷ್ಠ ಸಂಖ್ಯೆಯ ಕುಸ್ತಿ ಅಖಾಡಗಳನ್ನು ಅಳವಡಿಸಿಕೊಂಡಿದೆ. ಧೋಲ್-ತಾಶಾ ಆಟಗಾರರಿಗೆ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿಆಡಲು ಅವಕಾಶ ನೀಡುವುದಾಗಿ ಶ್ರೀ ಠಾಕೂರ್ ಭರವಸೆ ನೀಡಿದರು.
ತಕ್ಷ ಶಿಲಾ ಕ್ರೀಡಾ ಸಂಕೀರ್ಣದ ಬಗ್ಗೆ.
ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಸೃಷ್ಟಿಸುವ ಉದ್ದೇಶದಿಂದ ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಸುಮಾರು 2.1 ಕೋಟಿ ರೂ.ಗಳ ಹೂಡಿಕೆಯೊಂದಿಗೆ ವಿಮನ್ ನಗರದಲ್ಲಿ ತಕ್ಷ ಶಿಲಾ ಕ್ರೀಡಾ ಸಂಕೀರ್ಣವನ್ನು ಅಭಿವೃದ್ಧಿಪಡಿಸಿದೆ.
ಕ್ರೀಡಾ ಸಂಕೀರ್ಣದಲ್ಲಿ ಬಾಸ್ಕೆಟ್‌ಬಾಲ್, ವಾಲಿಬಾಲ್ ಮತ್ತು ಕಬಡ್ಡಿಗಾಗಿ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ.
ಕ್ರೀಡಾಪಟುಗಳಿಗೆ ಅತ್ಯಾಧುನಿಕ ಸೌಲಭ್ಯಗಳಲ್ಲದೆ ಸಂಕೀರ್ಣದಲ್ಲಿಒಂದು ತೆರೆದ-ಗಾಳಿಯ ವ್ಯಾಯಾಮಶಾಲೆ ಇದೆ. ಅಂತೆಯೇ, ಮಿನಿ ಫುಟ್ಬಾಲ್ ಮೈದಾನವನ್ನು ಸಹ ಅಭಿವೃದ್ಧಿಪಡಿಸಲಾಗಿದೆ.
ಕ್ರೀಡಾ ಸಂಕೀರ್ಣ ಮತ್ತು ನೆರೆಯ ಅಂತಾರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಅಖಾಢವನ್ನು ಸಂಪರ್ಕಿಸುವ ಹೈಟೆಕ್ ಸೇತುವೆ ಇದೆ.
ಸುಮಾರು ಒಂದು ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಕ್ರೀಡಾ ಸಂಕೀರ್ಣದಲ್ಲಿ1500 ಆಸನಗಳ ಸಾಮರ್ಥ್ಯದ ಪ್ರೇಕ್ಷ ಕರ ಗ್ಯಾಲರಿಯನ್ನು ಶೀಘ್ರದಲ್ಲೇ ಅಭಿವೃದ್ಧಿ ಪಡಿಸಲಾಗುವುದು .
ಮುಂದಿನ ದಿನಗಳಲ್ಲಿ400 ಕ್ರೀಡಾಪಟುಗಳಿಗೆ ತರಬೇತಿ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ.
***
(Release ID: 1829319)
Visitor Counter : 150