ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಯುಐಡಿಎಐನಿಂದ ಆಧಾರ್ ವಿವರ ಹಂಚಿಕೆ ಕುರಿತಂತೆ ಸ್ಪಷ್ಟೀಕರಣ
Posted On:
29 MAY 2022 2:07PM by PIB Bengaluru
ಯುಐಡಿಎಐನ ಬೆಂಗಳೂರಿನ ಪ್ರಾದೇಶಿಕ ಕಚೇರಿ 2022ರ ಮೇ 27ರಂದು ಹೊರಡಿಸಿದ್ದ ಮಾಧ್ಯಮ ಪ್ರಕಟಣೆಯ ಮುಂದುವರಿದ ಭಾಗವಾಗಿ ಇದನ್ನು ಬಿಡುಗಡೆ ಮಾಡಲಾಗುತ್ತಿದೆ.
ಫೋಟೋಶಾಪ್ ಮಾಡಲಾದ ಆಧಾರ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳುವ ಯತ್ನದ ಹಿನ್ನೆಲೆಯಲ್ಲಿ ಅವರು ಈ ಪ್ರಕಟಣೆಯನ್ನು ನೀಡಿದ್ದಾರೆಂದು ತಿಳಿದುಬಂದಿದೆ. ಜನರು ತಮ್ಮ ಆಧಾರ್‌ನ ನಕಲು ಪ್ರತಿ (ಫೋಟೊಕಾಪಿ)ಯನ್ನು ಯಾವುದೇ ಸಂಸ್ಥೆಯೊಂದಿಗೆ ಹಂಚಿಕೊಳ್ಳಬೇಡಿ ಎಂದು ಪ್ರಕಟಣೆಯು ಸಲಹೆ ನೀಡಿದೆ, ಏಕೆಂದರೆ ಅದು ದುರುಪಯೋಗ ಆಗುವ ಸಾಧ್ಯತೆಗಳಿವೆ ಎಂದು. ಅದಕ್ಕೆ ಪರ್ಯಾಯವಾಗಿ ಆಧಾರ್ ಸಂಖ್ಯೆಯ ಕೇವಲ ಕೊನೆಯ ನಾಲ್ಕು ಅಂಕಿಗಳು ಕಾಣುವ ಅರೆಮುಚ್ಚಿದ (ಮಾಸ್ಕಡ್ ) ಆಧಾರ್ ಅನ್ನು ಬಳಸಬಹುದು.
ಆದರೆ ಆ ಪತ್ರಿಕಾ ಹೇಳಿಕೆಯನ್ನು ತಪ್ಪಾಗಿ ಅರ್ಥೈಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಅದನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಾಪಸ್ ಪಡೆಯಲಾಗಿದೆ.
ಯುಐಡಿಎಐ ನೀಡಿದ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಯುಐಡಿಎಐ ಆಧಾರ್ ಸಂಖ್ಯೆಗಳನ್ನು ಬಳಕೆ ಮಾಡುವಾಗ ಮತ್ತು ಹಂಚಿಕೊಳ್ಳುವಾಗ ಸಾಮಾನ್ಯ ಜ್ಞಾನವನ್ನು ಬಳಕೆ ಮಾಡಲು ಮಾತ್ರ ಸಲಹೆ ನೀಡಲಾಗುತ್ತದೆ.
ಆಧಾರ್ ಗುರುತಿನ ದೃಢೀಕರಣ ಪೂರಕ ವ್ಯವಸ್ಥೆಯು, ಆಧಾರ್ ಹೊಂದಿರುವವರ ಗುರುತು ಮತ್ತು ಗೋಪ್ಯತೆಯನ್ನು ರಕ್ಷಿಸಲು ಮತ್ತು ಸಾಕಷ್ಟು ಮುಂಜಾಗ್ರತಾ ವೈಶಿಷ್ಟ್ಯ ಕ್ರಮಗಳನ್ನು ಹೊಂದಿದೆ.
****
(Release ID: 1829310)
Visitor Counter : 379