ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಭಾರತದ ವಿಷಯಗಳು ಜಾಗತಿಕ ಪ್ರೇಕ್ಷಕರ ಮನಸ್ಸು ಮತ್ತು ಹೃದಯಗಳನ್ನು ಆಳುತ್ತಿವೆ : ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್


ಭಾರತಕ್ಕಾಗಿ ಸ್ವಂತ ಒಟಿಟಿ ಸ್ಥಾಪಿಸಲು ಪ್ರಸಾರಕರು ಮತ್ತು ದೂರಸಂಪರ್ಕ ವಲಯದಲ್ಲಿ ತೀವ್ರ ಪೈಪೋಟಿ

ಜಗತ್ತಿನಾದ್ಯಂತ ಸಹ ನಿರ್ಮಾಣ ಪಾಲುದಾರಿಕೆಯನ್ನು ವೇಗಗೊಳಿಸಲು ಎಲ್ಲಾ ರೀತಿಯ ಕ್ರಮ : ಶ್ರೀ ಅನುರಾಗ್ ಸಿಂಗ್ ಠಾಕೂರ್

ಮುಂದಿನ ಐದು ವರ್ಷಗಳಲ್ಲಿ ಜಗತ್ತಿನಲ್ಲಿ ಗುಣಮಟ್ಟದ ವಿಷಯವನ್ನು ಒಳಗೊಂಡ ಚಿತ್ರಗಳ ನಿರ್ಮಾಣದಲ್ಲಿ ಭಾರತ ಅಗ್ರಪಂಕ್ತಿಗೆ

ಬರುವ 2025 ರ ವೇಳೆಗೆ ಮಾಧ್ಯಮ ಮತ್ತು ಮನೋರಂಜನಾ ಕ್ಷೇತ್ರದ ಪರಿಸರ ವ್ಯವಸ್ಥೆಯಲ್ಲಿ ವಾರ್ಷಿಕ 53 ಶತಕೋಟಿ ಡಾಲರ್ ವಹಿವಾಟು ನಡೆಸುವಂತಾಗಲು ಸರ್ಕಾರದ ನೀತಿ ಸಹಕಾರಿ

ಭಾರತ ವಿಶ್ವದ ಅತಿ ದೊಡ್ಡ ‘ಪ್ರಭಾವ ಬೀರುವ ಆರ್ಥಿಕತೆ’ಯ ರಾಷ್ಟ್ರವಾಗಲಿದೆ : ಶ್ರೀ ಶೇಖರ್ ಕಪೂರ್

Posted On: 19 MAY 2022 4:31PM by PIB Bengaluru

“ಹೈ ಪ್ರೀತ್ ಜಹಾನ್ ಕಿ ರೀತ್ ಸದಾ. ಮೇ ಗೀತ್ ವಹಾಕೆ ಗಾತಾಹು, ಭಾರತ್ ಕಾ ರೆಹನೆವಾಲಾ ಹು, ಭಾರತ್ ಕಿ ಬಾತ್ ಸುನಾತಾ ಹು” ಭಾರತದ ಕಥೆಗಳ ಮಹತ್ವವನ್ನು ಪ್ರಸ್ತಾಪಿಸುವ ಮೂಲಕ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಠಾಕೂರ್ ಇಂದು ಕಾನ್ ನ ಪ್ರಸಿದ್ಧ ಪಲೈಸ್ ಡೆಸ್ ಫೆಸ್ಟಿವಲ್ ನಲ್ಲಿ ಭಾರತದ ವೇದಿಕೆ ಉದ್ದೇಶಿಸಿ ಮಾತನಾಡಿದರು. 6000 ವರ್ಷಗಳ ಪುರಾತನ ಸಂಸ್ಕೃತಿ ಮತ್ತು 1.3 ಶತಕೋಟಿ ಜನರನ್ನು ಪ್ರತಿನಿಧಿಸಿದ ಸಚಿವರು, ವಿದೇಶಿ, ದೇಶೀಯ ಚಿತ್ರ ನಿರ್ಮಾಣಗಾರರು, ಪ್ರತಿನಿಧಿಗಳು ಪತ್ರಕರ್ತರ ಸಮ್ಮುಖದಲ್ಲಿ ಪ್ರಧಾನ ಭಾಷಣ ಮಾಡಿದರು.  
ಶ್ರೀಮತಿ ವಾಣಿ ತ್ರಿಪಾಠಿ ಅವರು ಕಾರ್ಯಕ್ರಮದಲ್ಲಿ ನಿರೂಪಣೆ ನಿರ್ವಹಿಸಿದರು. ವೇದಿಕೆಯಲ್ಲಿ ಭಾರತದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ, ಸಾಹಿತಿ, ಕವಿ ಮತ್ತು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಅಧ್ಯಕ್ಷ ಶ್ರೀ ಪ್ರಸೂನ್ ಜೋಶಿ, ಭಾರತದ ನಟ, ಬರಹಗಾರ, ನಿರ್ದೇಶಕ ಶ್ರೀ ಆರ್. ಮಹದೇವನ್, ಕಿರುತೆರೆ ನಿರೂಪಕ, ಭಾರತದ ಚಿತ್ರ ನಿರ್ಮಾಪಕ, ಶ್ರೀ ಶೇಖರ್ ಕಪೂರ್, ಫಿಲ್ಮ್ ಅಂಡ್ ಟೆಲಿವಿಷನ್ ಆಫ್ ಇಂಡಿಯಾದ ಅಧ್ಯಕ್ಷ ಮತ್ತು ಉದ್ಯಮಿ ಶ್ರೀ ಸ್ಕಾಟ್ ಸಾಕ್ಸ್ಬರೋ, ನಿರ್ಮಾಪಕ ಶ್ರೀ ಫಿಲಿಪ್ ಅವ್ರಿಲ್ ಉಪಸ್ಥಿತರಿದ್ದರು.

ಈ ವರ್ಷ ಭಾರತ – ಫ್ರಾನ್ಸ್ ನಡುವಿನ ರಾಜತಾಂತ್ರಿಕ ಬಾಂಧವ್ಯ ಮತ್ತು ಕಾನ್ ಚಲನಚಿತ್ರೋತ್ಸವಕ್ಕೆ 75 ವರ್ಷ ತುಂಬಿದೆ. ಕಾನ್ ಚಿತ್ರೋತ್ಸವದ ಮಹತ್ವ ಕುರಿತು ಮಾತನಾಡಿದ ಸಚಿವರು, ಹಲವಾರು ವರ್ಷಗಳಿಂದ ಕಾನ್ ಚಿತ್ರೋತ್ಸವ ಭಾರತ – ಫ್ರಾನ್ಸ್ ಬಾಂಧವ್ಯ ಬಲಗೊಳಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ. ಭಾರತೀಯ ಸಿನೆಮಾದ ಐತಿಹಾಸಿಕ ಮಹತ್ವವನ್ನು ಉಲ್ಲೇಖಿಸಿದರು ಮತ್ತು ಭಾರತದ ವಿಷಯ ಜಾಗತಿಕ ಪ್ರೇಕ್ಷಕರ ಹೃದಯ ಮತ್ತು ಮನಸ್ಸನ್ನು ಆಳುತ್ತಿದೆ ಹಾಗೂ 1946 ರಲ್ಲಿ ಸಮೃದ್ಧ ಭಾರತೀಯ ಚಲನಚಿತ್ರ ನಿರ್ಮಾಪಕ ಚೇತನ್ ಆನಂದ್ ಅವರ ಚಿತ್ರ ‘ನೀಚ ನಗರ’ಕ್ಕೆ ಪಾಮ್ ಡಿ ಓರ್ ಗೌರವ ನೀಡುವ ಮೂಲಕ ಅಡಿಪಾಯ ಹಾಕಲಾಯಿತು ಮತ್ತು ಒಂದು ದಶಕದ ನಂತರ 1956 ರಲ್ಲಿ ಸತ್ಯಜಿತ್ ರೇ ಅವರ ಪಥೇರ್ ಪಾಂಚಾಲಿ ‘ಪಾಮ್ ಡಿ ಒರ್’ ಪ್ರಶಸ್ತಿ ಗಳಿಸಿತು. ಇಂದು ಪ್ರಪಂಚದಾದ್ಯಂತ ನಮ್ಮ ಸಿನೆಮಾದ ಶ್ರೇಷ್ಠತೆಯಿಂದಾಗಿ ಭಾರತ ವಿಶ್ವದ ಶ್ರೇಷ್ಠ ವಿಷಯ ಕೇಂದ್ರವಾಗಿ ಘೋಷಿಸಲು ಸನ್ನದ್ಧವಾಗಿದೆ ಎಂದರು.  

ಭಾರತೀಯ ಸಿನೆಮಾದ ಪ್ರಸ್ತುತತೆ ಕುರಿತಂತೆ ಮಾತನಾಡಿದ ಸಚಿವರು, “ಜಾಗತಿಕ ಪ್ರೇಕ್ಷಕರಿಗೆ ದೇಶದ ಸಿನೆಮಾದ ಶ್ರೇಷ್ಠತೆ, ತಂತ್ರಜ್ಞಾನದ ಶಕ್ತಿ, ಶ್ರೀಮಂತ ಸಂಸ್ಕೃತಿ ಮತ್ತು ಪ್ರಸಿದ್ಧ ಪರಂಪರೆಯ ಪರಿಮಳವನ್ನು ನೀಡಲು ಉದ್ದೇಶಿಸಿದೆ. “ಭಾರತದ ವಿವಿಧ ಭಾಷೆಗಳು ಮತ್ತು ಪ್ರದೇಶಗಳ ನಟರು, ಚಲನಚಿತ್ರ ತಯಾರಕರ ಪ್ರಾತಿನಿಧ್ಯದ ವಿಷಯದಲ್ಲಿ ಮಾತ್ರವಲ್ಲದೇ ಒಟಿಟಿ ವೇದಿಕೆಗಳಲ್ಲಿಯೂ ನಮ್ಮ ಸಿನೆಮಾ ವಿವಿಧತೆಯಿಂದ ಕೂಡಿದೆ. ಸಂಗೀತ ಸಂಯೋಜನೆ, ಜಾನಪದ ಕಲಾವಿದರ ಉಪಸ್ಥಿತಿಯೊಂದಿಗೆ ಯುವಕರು, ಹಿರಿಯ ಪ್ರೇಕ್ಷಕರನ್ನು ಆಕರ್ಷಿಸಿದೆ ಎಂದರು.   

ಸಿನೆಮಾ ವಲಯದಲ್ಲಿ ಭಾರತೀಯ ನವೋದ್ಯಮಗಳ ಕುರಿತು ಪ್ರೇಕ್ಷಕರಿಗೆ ಮಾಹಿತಿ ನೀಡಿದ ಸಚಿವರು, ಮಾಧ್ಯಮ ಮತ್ತು ಮನೋರಂಜನಾ ಕ್ಷೇತ್ರಗಳ ನವೋದ್ಯಮಗಳು ತಮ್ಮ ತಾಂತ್ರಿಕ ಶಕ್ತಿಯನ್ನು ನಿರೂಪಿಸಿವೆ. ಅನಿಮೇಷನ್ ವೃತ್ತಿಪರರ ಪ್ರಬಲ ನಿಯೋಗದೊಂದಿಗೆ ಎ.ವಿ.ಜಿ.ಸಿ ಯಲ್ಲಿ ಪ್ರಪಂಚದ ಅತ್ಯುತ್ತಮ ವಲಯವಾಗಿ ರೂಪುಗೊಂಡಿದೆ ಎಂದರು.

ಕಳೆದ 8 ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಕ್ರಮಗಳ ಕುರಿತು ನೆರೆದಿದ್ದವರಿಗೆ ಮಾಹಿತಿ ನೀಡಿದ ಸಚಿವರು, ಭಾರತದಲ್ಲಿ ಸಹ ನಿರ್ಮಾಣ ಪಾಲುದಾರಿಕೆ, ಚಲನಚಿತ್ರ ಚಿತ್ರೀಕರಣ ಮತ್ತು ಚಲನಚಿತ್ರ ಸೌಲಭ್ಯಗಳನ್ನು ಹೆಚ್ಚಿಸಲು ಪ್ರಮುಖ ಉಪಕ್ರಮಗಳನ್ನು ತೆಗೆದುಕೊಂಡಿದೆ. ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ರಾಜ್ಯಗಳು ತಮ್ಮದೇ ಆದ ಸುಗಮವಾದ ಚಲನಚಿತ್ರ ನೀತಿಗಳನ್ನು ರೂಪಿಸಿವೆ ಮತ್ತು ಸಹ ನಿರ್ಮಾಣಕ್ಕೆ ಅವಕಾಶಗಳನ್ನು ಒದಗಿಸಿದೆ. ಬರುವ 2025 ರ ವೇಳೆಗೆ ಮಾಧ್ಯಮ ಮತ್ತು ಮನೋರಂಜನಾ ಕ್ಷೇತ್ರದ ಪರಿಸರ ವ್ಯವಸ್ಥೆಯಲ್ಲಿ ವಾರ್ಷಿಕ 53 ಶತಕೋಟಿ ಡಾಲರ್ ವಹಿವಾಟು ನಡೆಸುವಂತಾಗಲು ಸರ್ಕಾರದ ನೀತಿ ಸಹಕಾರಿಯಾಗಲಿದೆ ಎಂದರು.
“ಭಾರತ ಸರ್ಕಾರ 12 ಪ್ರಮುಖ ಸೇವಾ ವಲಯಗಳಲ್ಲಿ ಶ್ರವ್ಯದೃಶ್ಯ ಸೇವೆಗಳನ್ನು ಸಹ ಅಧಿಕೃತವಾಗಿ ಸೇರ್ಪಡೆ ಮಾಡಿರುವುದು ಇಂತಹ ಉಪಕ್ರಮಗಳಲ್ಲಿ ಒಂದಾಗಿದೆ ಮತ್ತು ಈ ವಲಯದಲ್ಲಿ “ವಿಶ್ವದ ಪೂರ್ವ ನಿರ್ಮಾಣ ತಾಣ”ವನ್ನಾಗಿ ಬಾರತವನ್ನು ರೂಪಿಸಲು ಇತ್ತೀಚೆಗೆ ಉದ್ಯಮದ ಪ್ರಮುಖರನ್ನೊಳಗೊಂಡ ಎ.ವಿ.ಜಿ.ಸಿ ಕಾರ್ಯಪಡೆಯನ್ನು ರಚಿಸಲಾಗಿದೆ.  ಒಂದು ಕಡೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್, ವರ್ಚುವಲ್ ರಿಯಾಲಿಟಿ, ಮೆಟಾವರ್ಸ್ ನಂತಹ ಮಂತ್ರಮುಗ್ದಗೊಳಿಸುವ ತಂತ್ರಜ್ಞಾನಗಳಿಂದಾಗಿ ಭಾರತದ ನುರಿತ ಐಟಿ ಮಾರುಕಟ್ಟೆಯು ವಾರ್ಷಿಕ ಶೇ 21 ರಷ್ಟು ಬೆಳವಣಿಗೆಯಾಗುವ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ಮಾಧ್ಯಮ ಮತ್ತು ಮನೋರಂಜನಾ ಕ್ಷೇತ್ರದಲ್ಲಿ ಭಾರತಕ್ಕೆ ಉಜ್ವಲ ಭವಿಷ್ಯವಿದೆ. 2024 ರ ವೇಳೆಗೆ ವಾರ್ಷಿಕ ವಹಿವಾಟು ಸುಮಾರು 2 ಶತಕೋಟಿ ಡಾಲರ್ ಗಳಿಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದರು.  

ಮನೋರಂಜನಾ ವಲಯದಲ್ಲಿ ಭಾರತವನ್ನು ಜಾಗತಿಕ ವಿಷಯ ಕೇಂದ್ರವನ್ನಾಗಿ ಮಾಡಲು ಸರ್ಕಾರದಿಂದ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಎ.ವಿ.ಜಿ.ಸಿ ವಲಯದಲ್ಲಿ ನಮ್ಮ ಯುವ ಶಕ್ತಿಯನ್ನು ಬಳಸಿಕೊಂಡು ಪೂರ್ವ ನಿರ್ಮಾಣ ತಾಣವನ್ನಾಗಿ ರೂಪಿಸಲಾಗುವುದು. ಚಿತ್ರೀಕರಣದಲ್ಲಿ ಜಗತ್ತಿನಾದ್ಯಂತ ಸಹ ನಿರ್ಮಾಣ ಪಾಲುದಾರಿಕೆ ವ್ಯವಸ್ಥೆ ಜಾರಿಗೆ ಸರ್ಕಾರ ತ್ವರಿತ ಕ್ರಮಗಳನ್ನು ಕೈಗೊಳ್ಳಲಿದೆ. ಈ ಕ್ರಮಗಳಿಂದ ಮುಂದಿನ ಐದು ವರ್ಷಗಳಲ್ಲಿ ಜಗತ್ತಿನಾದ್ಯಂತ ಪ್ರಮುಖ ಗುಣಮಟ್ಟದ ವಿಷಯಗಳನ್ನು ಉತ್ಪಾದಿಸುವ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರ್ಪಡೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  

ವಿದೇಶಿ ಚಿತ್ರನಿರ್ಮಾಣ ವಲಯದ ಪ್ರಮುಖರು ಭಾರತದಲ್ಲಿ ಚಿತ್ರೀಕರಣ ಮಾಡುವಂತೆ ಪ್ರೀತಿಪೂರ್ವಕ ಸ್ವಾಗತ ಕೋರಿದ ಶ್ರೀ ಠಾಕೂರ್, ಇಲ್ಲಿನ ಆದರ, ಆತಿಥ್ಯವನ್ನು ಸ್ವೀಕರಿಸಿ, ರೋಮಾಂಚಕ ಭೂ ದೃಶ್ಯವನ್ನು ಆನಂದಿಸಿ ಎಂದು ಹೇಳಿ ತಮ್ಮ ಭಾಷಣಕ್ಕೆ ತೆರೆ ಎಳೆದರು.

ಶ್ರೀ ಶೇಖರ್ ಕಪೂರ್ ಮಾತನಾಡಿ, ಅತ್ಯಂತ ಸುಲಭ ದರದಲ್ಲಿ ದೊರೆಯುವ ಬ್ರಾಡ್ ಬ್ಯಾಂಡ್ ಮತ್ತು ಮೊಬೈಲ್ ಸಾಧನಗಳಿಂದ ಚಿತ್ರೋದ್ಯಮ ವಲಯಕ್ಕೆ ತೊಡಕಾಗಿದೆ ಮತ್ತು ಭಾರತ ವಿಶ್ವದ ಅತಿ ದೊಡ್ಡ ‘ಪ್ರಭಾವ ಬೀರುವ ಆರ್ಥಿಕತೆ’ಯ ರಾಷ್ಟ್ರವಾಗಲಿದೆ ಮತ್ತು ಯುವ ಚಿತ್ರ ತಯಾರಕರಿಂದಾಗಿ ಶೀಘ್ರದಲ್ಲಿ ಸಿನೆಮಾ ಮರು ವ್ಯಾಖ್ಯಾನಕ್ಕೆ ಒಳಪಡಲಿದೆ ಎಂದರು.

ಶ್ರೀ ಶೇಖರ್ ಕಪೂರ್ ಅವರ ಹೇಳಿಕೆಗೆ ತಮ್ಮ ಅಭಿಪ್ರಾಯ ದಾಖಲಿಸಿದ ಶ್ರೀ ಪ್ರಸೂನ್ ಜೋಶಿ, ಭಾರತ ಚಂಚಲ ಕನಸುಗಳ ಕೊಳವಾಗಿದೆ. ಅದನ್ನು ಹಿಗ್ಗಿಸಲು ಚಂಚಲವಾಗಿರುವ ಕನಸುಗಳು ಎದುರುನೋಡುತ್ತಿವೆ ಎಂದು ವ್ಯಾಖ್ಯಾನಿಸಿದರು.  

ಫಿಲ್ಮ್ ಅಂಡ್ ಟೆಲಿವಿಷನ್ ಆಫ್ ಇಂಡಿಯಾ ಅಧ್ಯಕ್ಷ ಶ್ರೀ ಸ್ಕಾಟ್ ಸಾಕ್ಸ್ಬರೋ, ಭಾರತೀಯ ಕಥಾ ನಿರೂಪಣೆಯ ಶೈಲಿ ವಿಶ್ವ ಮಾರುಕಟ್ಟೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಆಕರ್ಷಿಸಬೇಕು ಎಂದರು.  

ಶ್ರೀ ಅಪೂರ್ವ ಚಂದ್ರ ಅವರು ಲಂಚ್ ಬಾಕ್ಸ್, ಮಿಸ್ಟರ್ ಅಂಡ್ ಮಿಸ್ಸೆಸ್ ಅಯ್ಯರ್ ಮತ್ತು ರಾಕೆಟ್ರಿಯಂತಹ ಚಲನಚಿತ್ರಗಳನ್ನು ಉದಾಹರಿಸಿ ಶ್ರೀ ಸ್ಕಾಟ್ ಸಾಕ್ಸ್ಬರೋ ಹೇಳಿಕೆಗೆ ಪ್ರತಿರೋಧ ತೋರಿದರು ಮತ್ತು ಈ ಚಿತ್ರಗಳ ಕಥೆಗಳು ವಿಶಿಷ್ಟವಾಗಿ ಭಾರತೀಯವಾಗಿವೆ ಮತ್ತು ಪ್ರಪಂಚದಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸಿವೆ ಎಂದರು. ಭಾರತ ಸರ್ಕಾರ ನಿನ್ನೆ ಘೋಷಿಸಿದ ಪ್ರೋತ್ಸಾಹ ಯೋಜನೆಯನ್ನು ಶ್ರೀ ಅಪೂರ್ವ ಚಂದ್ರ ಅವರು ಪುನರುಚ್ಚರಿಸಿದರು.

ಶ್ರೀ ಆರ್. ಮಹದೇವನ್ ಅವರು ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತಿಗೆ ಸಾಕಷ್ಟು ಹೇಳಬೇಕಿದೆ ಮತ್ತು ತಂತ್ರಜ್ಞಾನ ಮತ್ತು ಸಿನೆಮಾ ಜಗತ್ತು ಈ ಚಿಂತನೆಯನ್ನು ಪರಿಶೋಧಿಸಬೇಕು. ಆರ್ಯಭಟ್ಟನಿಂದ ಹಿಡಿದು ಸುಂದರ್ ಪಿಚ್ಚೈವರೆಗೆ ಭಾರತ ಸಾಕಷ್ಟು ಅಸಾಮಾನ್ಯ ಕಥೆಗಳನ್ನು ಹೊಂದಿದ್ದು, ಇವು ಪ್ರಪಂಚದಾದ್ಯಂತ ಯುವ ಸಮೂಹದ ಆಕಾಂಕ್ಷೆಗಳನ್ನು ಬಿಂಬಿಸುತ್ತವೆ ಎಂದರು.

 

 

***



(Release ID: 1826891) Visitor Counter : 408